Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲಿನ ಸರ್ವ ರೋಗಕ್ಕೆ-ಬೀಟ್‌ರೂಟ್ ಹೇರ್ ಪ್ಯಾಕ್
ಯಾವಾಗಲೋ ಅಪರೂಪಕ್ಕೊಮ್ಮೆ ಎಂಬಂತೆ ಅಸಹನೀಯವಾದ ಕೇಶರಾಶಿಯನ್ನು ಹೊಂದಿದ್ದರೆ ಅದನ್ನು ಹೇಗೋ ಸಹಿಸಿಕೊಳ್ಳಬಹುದು. ಆದರೆ, ವರ್ಷವಿಡೀ ಇಂತಹ ಕೆಟ್ಟ ಕೇಶರಾಶಿಯನ್ನು ಹೊಂದಿರುವ ಶಿಕ್ಷೆಯಂತೂ ಖಂಡಿತವಾಗಿಯೂ ಯಾರಿಗೂ ಬೇಡ. ಆರೋಗ್ಯಯುತವಾದ ಮತ್ತು ಸುಂದರವಾದ ಕೇಶರಾಶಿಯು ನಿಮ್ಮ ಒಟ್ಟಾರೆ ಸೌಂದರ್ಯಕ್ಕೆ ಹೊಸ ಮೆರುಗನ್ನು ನೀಡುತ್ತದೆ.
ಮಾದಕವಾದ ಮೈಮಾಟವಿದ್ದು, ಸುಂದರವಾದ ಮುಖಚರ್ಯೆವುಳ್ಳ ಆದರೆ ಕೆಟ್ಟದಾದ ಕೇಶರಾಶಿಯುಳ್ಳ ಮಹಿಳೆಯೋರ್ವಳ ಚಿತ್ರವನ್ನು ಹಾಗೆಯೇ ಸುಮ್ಮನೆ ಮನದಲ್ಲಿ ಕಲ್ಪಿಸಿಕೊಳ್ಳಿ..! ಸ್ವಾರಸ್ಯವೇನೆಂದರೆ, ಆಕೆಯು ಅಷ್ಟೆಲ್ಲಾ ಸೌಂದರ್ಯವನ್ನು ಹೊಂದಿದ್ದರೂ ಸಹ, ಬಹುತೇಕ ಮಂದಿಯ ಗಮನವು ಆಕೆಯ ಕೆಟ್ಟ ಕೇಶರಾಶಿಯತ್ತ ಹೊರಳುತ್ತದೆ ಎಂಬುದು ಕೇಳಲು ಕಟುವಾಗಿದ್ದರೂ ಸಹ ಅಷ್ಟೇ ಸತ್ಯವಾದ ವಿಷಯವೂ ಕೂಡ ಆಗಿದೆ.

ಹಣವಿರುವವರು ದುಬಾರಿ ಬೆಲೆಯ ಚಿಕಿತ್ಸೆಯ ಮೂಲಕವೋ, ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕ ಮದ್ದುಗಳ ಮೂಲಕ ತಮ್ಮ ಸಮಸ್ಯೆಗೆ ತಾತ್ಕಾಲಿಕ ಅಥವಾ ಶಾಶ್ವತ ಪರಿಹಾರ ಮಾರ್ಗವನ್ನು ಕಂಡುಕೊಳ್ಳಬಹುದು, ಆದರೆ ಹಣವಿಲ್ಲದೆ ಇರುವವರು ಏನು ಮಾಡಬೇಕು. ಅದಕ್ಕಾಗಿ ಇರುವ ಮನೆ ಮದ್ದುಗಳನ್ನು ಬಳಸಿ, ಅದರ ಮೂಲಕ ತಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಬೇಕು. ಅಂತಹ ಒಂದು ಮನೆ ಮದ್ದು ಬೀಟ್‌ರೂಟ್‌ನಿಂದ ತಯಾರಿಸಿಕೊಳ್ಳಬಹುದು. ಹೌದು ಬೀಟ್‌ರೂಟ್ ಕೇವಲ ಕಾಯಿ ಪಲ್ಯವಾಗಿ ಮಾತ್ರ ಪ್ರಯೋಜನಕಾರಿಯಲ್ಲ, ಕೂದಲು ಉದುರುವುದನ್ನು ತಡೆಗಟ್ಟಲು ಇರುವ ಅತ್ಯುತ್ತಮ ಮನೆ ಮದ್ದು ಸಹ ಹೌದು. ಬನ್ನಿ ಇದರಿಂದ ಕೂದಲು ಉದುರುವಿಕೆಗೆ ಯಾವ ಪರಿಹಾರವನ್ನು ಮಾಡಿಕೊಳ್ಳಬಹುದು ಎಂದು ನೋಡೋಣ.
ಹೇರ್ ಪ್ಯಾಕ್ ಮಾಡುವ ವಿಧಾನ
*ಆಮೇಲೆ ಅವುಗಳನ್ನು ಶೋಧಿಸಿ, ಎಲೆಗಳನ್ನು ತೆಗೆದುಕೊಂಡು ಪೇಸ್ಟ್ ರೀತಿ ರುಬ್ಬಿಕೊಳ್ಳಿ.
*ಇನ್ನು ಇದಕ್ಕೆ ಒಂದು ಟೇಬಲ್ ಸ್ಪೂನ್ ಮೆಹಂದಿಯನ್ನು ಬೆರೆಸಿಕೊಂಡು ನಿಮ್ಮ ಕೂದಲ ಬುಡಕ್ಕೆ ಚೆನ್ನಾಗಿ ಲೇಪಿಸಿಕೊಳ್ಳಿ, ತದನಂತರ ಮೃದುವಾಗಿ ಮಸಾಜ್ ಮಾಡಿ.
*ಇಷ್ಟೆಲ್ಲಾ ಆದ ನಂತರ ಸುಮಾರು 20-25 ನಿಮಿಷ ಬಿಟ್ಟು ಮೆದುವಾದ ಶಾಂಪೂವಿನಿಂದ ತಲೆಗೆ ಸ್ನಾನ ಮಾಡಿ.
*ಶೀಘ್ರವಾಗಿ ಇದರ ಫಲಿತಾಂಶವನ್ನು ನೋಡಲು 3-4 ಬಾರಿ ಇದನ್ನು ಪ್ರಯತ್ನಿಸಿ ನೋಡಿ.
ದಿನನಿತ್ಯ ಆಹಾರಕ್ರಮದಲ್ಲಿ ಬೀಟ್ ರೂಟ್ ಸೇವಿಸಿ
ಬೀಟ್‌ರೂಟಿನಲ್ಲಿ ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳಿದ್ದು, ಕೂದಲಿಗೆ ಸ್ವಾಭಾವಿಕ ಹೊಳಪನ್ನು ನೀಡುತ್ತವೆ, ಅಲ್ಲದೆ ಕೂದಲಿನ ಬುಡದಲ್ಲಿರುವ ರಂಧ್ರಗಳನ್ನು ಬಿಗಿಗೊಳಿಸುವ ಮೂಲಕ ಕೂದಲು ಉದುರದಂತೆ ಕಾಪಾಡುತ್ತದೆ.



Click it and Unblock the Notifications


