Latest Updates
-
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ?
ಹೇರ್ಲೈನ್ ಇಂಟರ್‌ನ್ಯಾಷನಲ್: ದಾಖಲೆಯ ಬೈಫಾಲಿಕ್ಯುಲರ್ ಕೂದಲ ಕಸಿ
ಹೇರ್‌ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ 23ನೇ ಜುಲೈನಂದು 16,000 ಏಕ ಕೂದಲ ಕುಳಿಗಳಿಂದ ಬೈಫಾಲಿಕ್ಯುಲರ್ ಕೂದಲ ಕಸಿಯನ್ನು ನಡೆಸಿತು. ಸಂಪೂರ್ಣ ಕಾರ್ಯವಿಧಾನವು 7 ಗಂಟೆಗಳಿಗೂ ದೀರ್ಘವಾಗಿತ್ತು. ಅದನ್ನು ದೇಶಾದ್ಯಂತದ ವೈದ್ಯಕೀಯ ವೃತ್ತಿಪರರು, ಡರ್ಮಟಾಲಜಿಸ್ಟ್ ಮತ್ತು ಸಂಭಾವ್ಯ ಕೂದಲ ಕಸಿ ರೋಗಿಗಗಳು ವೆಬಿನಾರ್ ಮೂಲಕ ನೇರವಾಗಿ ವೀಕ್ಷಿಸಿದರು.
ಎಫ್‍ಯುಇ ಮತ್ತು ಎಫ್‍ಯುಟಿ ಎರಡೂ ವಿಧಾನಗಳನ್ನು ಜೋಡಿಸಿಕೊಂಡು ರೋಗಿಯದ್ದೇ ನೆತ್ತಿ ಮತ್ತು ಗಡ್ಡದಿಂದ ಕೂದಲನ್ನು ಉಪಯೋಗಿಸಿಕೊಂಡು ಮಾಡಿದಂತಹ ಮೊದಲ ಕಸಿ ಇದಾಗಿತ್ತು. ಈ ವಿಧಾನಗಳ ಜೋಡಣೆಯು ಸಾಂದ್ರ ನೋಟವನ್ನು ಸಾಧಿಸಲು ನೆರವಾಗುತ್ತದೆ. ಈ ಕಾರ್ಯವಿಧಾನವನ್ನು ಡಾ.ದಿನೇಶ್ ಗೌಡ, ಡರ್ಮಟೋ-ಸರ್ಜನ್, ಹೇರ್‌ಲೈನ್ ಇಂಟರ್‌ನ್ಯಾಷನಲ್ ಅವರು ನಡೆಸಿದರು. ಮುಂದುಗಡೆಯ ಕೂದಲಿನ ಹಿಂಭಾಗದ ಎರಡು ಸಾಲುಗಳಲ್ಲಿ ಒಂದೇ ಕುಟುಂಬದ ಎರಡು ಫಾಲಿಕ್ಯುಲರ್ ಘಟಕಗಳನ್ನು ಕಸಿ ಮಾಡಲು ಬೈಫಾಲಿಕ್ಯುಲರ್ ಘಟಕವನ್ನು ಉಪಯೋಗಿಸಿದರು.
ಇದನ್ನು ಸಾಂದ್ರ ನೋಟಕ್ಕಾಗಿ ನಡು ನೆತ್ತಿಯಲ್ಲೂ ಕಸಿ ಮಾಡಲಾಯಿತು. ಸಾಮಾನ್ಯವಾಗಿ ಒಂದು ಎಫ್‍ಯುಇ ಸೆಶನ್‍ನಲ್ಲಿ 6,000 ಕೂದಲ ಕುಳಿಗಳನ್ನಷ್ಟೇ ಕಸಿ ಮಾಡಲಾಗುತ್ತದೆ. ಆದರೆ ಇದನ್ನೇ ನೆತ್ತಿ ಮತ್ತು ಗಡ್ಡದ ಎಫ್‍ಯುಇ ವಿಧಾನದೊಂದಿಗೆ ಜೋಡಿಸುವ ಮೂಲಕ 16,000 ಏಕ ಫಾಲಿಕ್ಯುಲರ್ ಕಸಿಗಳನ್ನು ಮಾಡಲು ಸಾಧ್ಯವಾಯಿತು. ಹೇರ್‌ಲೈನ್ ಇಂಟರ್‌ನ್ಯಾಷನಲ್: ಕೇಶ ಕಸಿಯಲ್ಲೇ ಒಂದು ವಿನೂತನ ಪ್ರಯೋಗ
ಈ ಕಾರ್ಯವಿಧಾನವನ್ನು ನೇರವಾಗಿ ಟೆಲಿಕ್ಯಾಸ್ಟ್ ಮಾಡಲಾಗಿದ್ದು, 2,000ದಷ್ಟು ಸಂಖ್ಯೆಯ ಜನರು ಲಾಗ್ ಆಗಿ ಈ ಕಾರ್ಯವಿಧಾನವನ್ನು ನೋಡಿದರು. ವೆಬಿನಾರ್‍ನಲ್ಲಿ ನೋಡಿದ ವೈದ್ಯಕೀಯ ವೃತ್ತಿಪರರಾದ ರಾಮಕೃಷ್ಣ ಎಂಬುವವರು, "ಈ ಕಾರ್ಯವಿಧಾನ ನಡೆಯುತ್ತಿರುವಾಗಲೇ ಸಾಕ್ಷಿಯಾಗಲು ದೊರೆತಿದ್ದು ಇದು ನಿಜವಾಗಿಯೂ ಒಂದು ಅದ್ಭುತವಾದ ಶೈಕ್ಷಣಿಕ ಅವಕಾಶವಾಗಿತ್ತು. ವಿನೂತನ ವಿಧಾನ ಎಂಬುದರ ಹೊರತಾಗಿ, ಎರಡು ಸ್ವತಂತ್ರ ವಿಧಾನಗಳನ್ನು ಒಟ್ಟುಗೂಡಿಸಿಕೊಂಡು ಕೆಲಸ ಮಾಡಿದರೆ ಹೇಗೆ ಪರಿಣಾಮಕಾರಿಯಾಗಿದ್ದನ್ನು ನೀಡಬಹುದು ಎಂಬುದಾಗಿ ಅರ್ಥ ಮಾಡಿಕೊಳ್ಳಲು ಇದು ನೆರವಾಯಿತು'' ಎಂದರು.

ಈ ವಿಧಾನದ ಕುರಿತು ಮಾತನಾಡಿದ, ಡಾ.ದಿನೇಶ್, "ಪರಿಣಾಮಕಾರಿ ಕಸಿಗಾಗಿ ಆದರೆ ತೀರಾ ಆಕ್ರಮಣಶೀಲವಲ್ಲದ, ಗರಿಷ್ಠ ಅನುಕೂಲ ಒದಗಿಸುವ ವಿಧಾನಗಳ ಬಗ್ಗೆ ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿದೆ. ಎಫ್‍ಯುಇ ಮತ್ತು ಎಫ್‍ಯುಟಿಯ ಜೋಡಣೆಯ ಬಗ್ಗೆ ನಮಗೆ ನಂಬಿಕೆಯಿದ್ದು, ಇದು ಕೂದಲ ಕಸಿ ರೋಗಿಗಳಿಗೆ ಅವರ ಅಗತ್ಯವನ್ನು ಪೂರೈಸುವ ವಿಶ್ವಾಸವಿದೆ'' ಎಂದರು.
"ಹೇರ್‌ಲೈನ್‌ನಲ್ಲಿ, ನಾವು, ಬೇಗನೆ ಫಲಿತಾಂಶ ನೀಡುವ ಸಮಗ್ರ ಸೇವೆಗಳೊಂದಿಗೆ ನಿಯಮಿತವಾಗಿ ವಿನೂತನ ನೆರವನ್ನು ಗ್ರಾಹಕರಿಗೆ ಒದಗಿಸುವಲ್ಲಿ ನಂಬಿಕೆ ಇಟ್ಟಿದ್ದೇವೆ. ಇದನ್ನು ಲೈವ್ ವೆಬಿನಾರ್ ಆಗಿ ಪ್ರಸಾರ ಮಾಡಲು, ಆ ಮೂಲಕ ವೃತ್ತಿಯಲ್ಲಿರುವ ಜನರಿಗೂ ಅದನ್ನು ತೆರೆದಿಡಲು, ಅದರಿಂದ ಅನೇಕ ಸಾಧ್ಯತೆಗಳಿಗೆ ಅವಕಾಶ ಕಲ್ಪಿಸಲು ನಾವು ನಿರ್ಧರಿಸಿದೆವು'' ಎಂದು ಆನಂದ್, ಸಂಸ್ಥಾಪಕರು, ಹೇರ್‌ಲೈನ್ ಇಂಟರ್‌ನ್ಯಾಷನಲ್ ಅವರು ಹೇಳಿದರು. ಹೇರ್‍ಲೈನ್ ವತಿಯಿಂದ ಬಿಳಿ ಕೂದಲು ತಡೆಗೆ ಆ್ಯಂಟಿ ಗ್ರೇ- ಹರ್ಬಲ್ ಕ್ಯಾಪ್ಸೂಲ್
ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಬಗ್ಗೆ
ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್, ಪುರುಷರು ಮತ್ತು ಮಹಿಳೆಯರ ಕೂದಲು, ಚರ್ಮ ಮತ್ತು ಸೌಂದರ್ಯ ಸಮಸ್ಯೆಗಳನ್ನು ನೀಗಿಸಲು ಸುಸಜ್ಜಿತವಾದ ಅಂತಾರಾಷ್ಟ್ರೀಯ ಕಾರ್ಯವಿಧಾನಗಳು, ಯಂತ್ರಗಳು, ಮತ್ತು ಚಿಕಿತ್ಸಾ ಪ್ಯಾಕೇಜ್‌ಗಳನ್ನು ತಂದಿದೆ. ಕೂದಲು ಮತ್ತು ಚರ್ಮದ ಸಮಸ್ಯೆಗಳನ್ನು ಆರೋಗ್ಯಪೂರ್ಣವಾಗಿ ನಿಭಾಯಿಸುವ ಸಲುವಾಗಿ ಹೇರ್‌ಲೈನ್ ಡರ್ಮಟಾಲಜಿಸ್ಟ್‍ಗಳು, ಡರ್ಮಟೋಸರ್ಜನ್‍ಗಳು, ಡಯಾಬಿಟಿಸ್ ತಜ್ಞರು, ಸ್ತ್ರೀರೋಗ ತಜ್ಞರು, ಸಾಮಾನ್ಯ ವೈದ್ಯರು, ಮತ್ತು ತಜ್ಞರನ್ನೊಳಗೊಂಡ ತಂಡವನ್ನು ಹೊಂದಿದೆ. ಇಂದಿರಾನಗರ, ವೈಟ್‍ಫೀಲ್ಡ್, ಮಾರತ್ ಹಳ್ಳಿ, ಜಯನಗರ, ರಿಚ್‍ಮಂಡ್ ರಸ್ತೆ, ಮತ್ತು ಆರ್‍ಟಿ ನಗರ ಹೀಗೆ 6 ಕೇಂದ್ರಗಳನ್ನು ಹೇರ್‌ಲೈನ್ ಹೊಂದಿದೆ.



Click it and Unblock the Notifications
