Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಫಟಾಫಟ್ ತಯಾರಿಸಿ ಸ್ವಾದಿಷ್ಟವಾದ ಚಿಕನ್ ವಿಂಗ್ಸ್ ರೆಸಿಪಿ
ನೀವು ಫಾಸ್ಟ್ ಫುಡ್ ಜಾಯಿಂಟ್‍ಗೆ ಹೋದಾಗ ಒಮ್ಮೆಯಾದರು ಆ ಬಾಯಿಯಲ್ಲಿ ನೀರೂರಿಸುವ ಚಿಕನ್ ವಿಂಗ್ಸ್ ಆರ್ಡರ್ ಮಾಡಿರಿ. ಈ ಚಿಕನ್ ವಿಂಗ್ಸ್ ಮನೆಯಲ್ಲಿ ತಯಾರಿಸಿಕೊಳ್ಳಲು ಕೇವಲ ಕೆಲವು ಪದಾರ್ಥಗಳು ಸಾಕು. ಈ ರೆಸಿಪಿಗಾಗಿ, ಸಾಸ್ ಅತ್ಯಂತ ಮುಖ್ಯ. ಫ್ರೈ ಮಾಡಿದ ಚಿಕನ್ ಸರಿಯಾಗಿ ಬಂದಿಲ್ಲವಾದರು ಸಾಸ್ ಹಾಕಲು ಮರೆಯಬೇಡಿ. ಇದನ್ನು ಸ್ಟಾರ್ಟರ್ ಆಗಿ ಬಡಿಸಿ.
ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಅತಿಥಿಗಳಿಗಾಗಿ ಏನಾದರು ತಯಾರು ಮಾಡಬೇಕು ಎಂದುಕೊಂಡಲ್ಲಿ, ಈ ಖಾರವಾದ ಚಿಕನ್ ವಿಂಗ್ಸ್ ರೆಸಿಪಿಯನ್ನು ತಯಾರಿಸಿ. ಅದರಲ್ಲಿಯೂ ಭಾರತೀಯ ಮಸಾಲೆಗಳ ಜೊತೆಯಲ್ಲಿ ಇದನ್ನು ತಯಾರಿಸಿದರೆ ಇದರ ರುಚಿ ಇಮ್ಮಡಿಗೊಳ್ಳುತ್ತದೆ. ಬನ್ನಿ ಅದನ್ನು ಹೇಗೆ ತಯಾರಿಸುವುದು ಎಂದು ತಿಳಿದುಕೊಂಡು ಬರೋಣ ಮ೦ಗಳೂರು ಶೈಲಿಯ ತುಪ್ಪದಲ್ಲಿ ಕರಿದ ಚಿಕನ್ ರೆಸಿಪಿ!

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 25 ನಿಮಿಷಗಳು
ಅಗತ್ಯವಾದ ಪದಾರ್ಥಗಳು
*ಚಿಕನ್ ವಿಂಗ್ಸ್ -- ½ ಕೆಜಿ
*ರುಚಿಗೆ ತಕ್ಕಷ್ಟು ಉಪ್ಪು
*ಸೋಯಾ ಸಾಸ್ - 1 ಟೀ. ಚಮಚ
*ಬೆಳ್ಳುಳ್ಳಿ - 1 ಟೀ. ಚಮಚ (ಕತ್ತರಿಸಿದಂತಹುದು)
ಒರಿಗಾನೊ - 1 ಟೀ. ಚಮಚ
*ಲಿಂಬೆರಸ - 1
*ಕಾಳು ಮೆಣಸು (ಪೆಪ್ಪರ್) - 2 ಟೀ. ಚಮಚ
*ಹಿಟ್ಟು - 2 ಕಪ್
*ಎಣ್ಣೆ - 2 ಟೀ.ಚಮಚ
ಸಾಸ್‌ಗಾಗಿ
*ಈರುಳ್ಳಿ - 2 (ಕತ್ತರಿಸಿದಂತಹುದು)
*ವಿನೀಗರ್ - 1 ಟೀ.ಚಮಚ
*ಬ್ರೌನ್ ಶುಗರ್- 2 ಟೀ.ಚಮಚ
*ಟೊಮೇಟೊ ಕೆಚಪ್ - 2 ಟೀ.ಚಮಚ
*ಚಿಲ್ಲಿ ಸಾಸ್ - 2 ಟೀ.ಚಮಚ ಕೇರಳದ ಮಲಬಾರ್ ಶೈಲಿಯ ಚಿಕನ್ ಕರಿ ರೆಸಿಪಿ
ತಯಾರಿಸುವ ವಿಧಾನ
*ಒಂದು ಬಟ್ಟಲಿನಲ್ಲಿ, ಉಪ್ಪನ್ನು, ಸೋಯಾ ಸಾಸ್, ಕತ್ತರಿಸಿದ ಬೆಳ್ಳುಳ್ಳಿ, ಒರಿಗಾನೊ, ಕರಿ ಮೆಣಸು ಮತ್ತು ಲಿಂಬೆರಸವನ್ನು ಹಾಕಿಕೊಳ್ಳಿ. ಈ ಪದಾರ್ಥಗಳನ್ನು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಚಿಕನ್ ವಿಂಗ್ಸ್ ಹಾಕಿ, ಅದಕ್ಕೆ ಚೆನ್ನಾಗಿ ಕೋಟ್ ಮಾಡಿ.
*ಇನ್ನು ಚಿಕನ್ ಮೇಲೆ ಸ್ವಲ್ಪ ಹಿಟ್ಟನ್ನು ಚಿಮುಕಿಸಿ ಮತ್ತು ಅದನ್ನು 5 ನಿಮಿಷ ಹಾಗೆ ಬಿಡಿ.
*ಈಗ ಚಿಕನ್ ಅನ್ನು ಸ್ವಲ್ಪ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ಹೆಚ್ಚುವರಿ ಎಣ್ಣೆಯನ್ನು ತೆಗೆದು ಬಿಡಿ.
*ನಾವು ಸೂಚಿಸಿರುವ ಪದಾರ್ಥಗಳ ಸಹಾಯದಿಂದ ಸಾಸ್ ತಯಾರಿಸಿಕೊಳ್ಳಿ.
*ಎಣ್ಣೆಯಲ್ಲಿ ಚಿಕನ್ ಚೆನ್ನಾಗಿ ಕರಿಯಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
*ಇದು ಮುಗಿದ ಮೇಲೆ, ಚಿಕನ್ ಮೇಲೆ ಸಾಸ್ ಕೋಟ್ ಮಾಡಿ.
*ಈಗ ಚಿಕನ್ ಅನ್ನು 5 ನಿಮಿಷಗಳ ಕಾಲ ಮೈಕ್ರೋವೇವ್ ಓವೆನ್‌ನಲ್ಲಿ ಕಾಯಿಸಿ.
ಪೋಷಕಾಂಶದ ಸಲಹೆ
ಕೋಳಿ ಮಾಂಸವು ತೆಳುವಾದ ಮಾಂಸವಾಗಿದ್ದು, ತೂಕವನ್ನು ಕಳೆದುಕೊಳ್ಳಲು ಬಯಸುವವರಿಗಾಗಿ ಒಂದು ಒಳ್ಳೆಯ ಮಾಂಸವಾಗಿರುತ್ತದೆ.
ಸಲಹೆ
ಈ ಖಾರವಾದ ಚಿಕನ್ ವಿಂಗ್ಸ್ ಅನ್ನು ನೀವು ಈ ಮೊದಲೆ ತಯಾರಿಸಿಕೊಂಡಿರುವ ಸಾಸ್ ಜೊತೆಗೆ ಬಡಿಸಬಹುದು.



Click it and Unblock the Notifications
