Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮದುವೆ ದಿನ ಹತ್ತಿರವಿದೆ ಆದರೆ ಕೂದಲಿನದ್ದೇ ದೊಡ್ಡ ಸಮಸ್ಯೆ!
ಮದುವೆಯ ದಿನ ಹತ್ತಿರ ಬಂದಂತೆ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಕನ್ಯೆಯ ಆಸೆ. ಸುಂದರವಾಗಿ ಕಾಣಿಸಿಕೊಳ್ಳಲು ಕೇಶ ಸೌಂದರ್ಯವೂ ಅಷ್ಟೇ ಮುಖ್ಯ. ಬ್ಯೂಟಿಪಾರ್ಲರ್‌ಗಳಿಗೆ ಹೋಗಿ ದುಡ್ಡು ಸುರಿದರೆ ಕೂದಲು ಸುಂದರಾವಾಗುವುದೇನೋ ನಿಜ, ಆದರೆ ರಾಸಾಯನಿಕ ವಸ್ತುಗಳ ಅತಿಯಾದ ಬಳಕೆಯಿಂದ ಕೂದಲು ಹಾನಿಗೊಳಗಾಗುತ್ತದೆ. ಕೂದಲು ಸಮಸ್ಯೆಯ ಕಿರಿಕಿರಿ-ಮನೆಮದ್ದೇ ಸರಿ
ಹಾಗಾಗಿ ಕೂದಲ ಹೊಳಪನ್ನು ಹೆಚ್ಚಿಸಿಕೊಳ್ಳಲು ಬೇರೆ ವಿಧಾನವಿದೆಯೇ ಎಂದು ಯೋಚಿಸುತ್ತಿದ್ದೀರಾದರೆ, ಹೌದು ಸ್ವಲ್ಪ ಸಮಯ ಮತ್ತು ತಾಳ್ಮೆ ಇಟ್ಟು ಮನೆಮದ್ದನ್ನು ಮಾಡುವುದರ ಮೂಲಕ ಕೂದಲನ್ನು ಸೊಗಸಾಗಿಸಿಕೊಳ್ಳಬಹುದು. ನಿಮ್ಮ ಮದುವೆಗೆ ಸುಂದರ ಕೇಶರಾಶಿಯನ್ನು ಪಡೆಯಲು ಈ ಕೆಳಗೆ ನೀಡಿರುವ ಕೆಲವು ಟಿಪ್ಸ್ ಅನ್ನು ಮಾಡಿನೋಡಿ..

ಮಾನಸಿಕ ತಯಾರಿ
ಮನೆಮದ್ದನ್ನು ಮಾಡಿ ಕೇಶ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾನಸಿಕವಾಗಿ ತಯಾರಾಗಿರಿ. ಮದುವೆಗೆ ಆರು ತಿಂಗಳ ಮೊದಲೇ ಮನೆಮದ್ದನ್ನು ಪ್ರಾರಂಭಿಸುವುದು ಸೂಕ್ತ. ನಿಮ್ಮ ಮದುವೆ ದಿನ ನಿಗಧಿಯಾದ ತಕ್ಷಣ ಸಮಯ ವ್ಯರ್ಥ ಮಾಡಬೇಡಿ. ಮನೆಮದ್ದು ಮಾಡಿ ಕೇಶವನ್ನು ಅಂದಗೊಳಿಸಿಕೊಳ್ಳುವುದು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಮನೆಮದ್ದಿನಲ್ಲಿ ರಾಸಾಯನಿಕ ವಸ್ತುಗಳಿಂದ ಕೂದಲು ಹಾನಿಗೊಳಗಾಗುವುದನ್ನು ತಡೆಯಲು ನೈಸರ್ಗಿಕ ಮತ್ತು ಗಿಡಮೂಲಿಕೆ ವಸ್ತುಗಳನ್ನು ಬಳಸಲಾಗುತ್ತದೆ.

ಡೀಪ್ ಕಂಡೀಷನಿಂಗ್
ಕೂದಲಿನ ಡೀಪ್ ಕಂಡೀಷನಿಂಗ್‌ಗೆ ಮೊಟ್ಟೆಯನ್ನು ಮೊಸರಿಗೆ ಮಿಶ್ರ ಮಾಡಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. ಎರಡುವಾರಕ್ಕೆ ಒಮ್ಮೆಯಾದರೂ ಈ ರೀತಿ ಮಾಡಿ ಇದರಲ್ಲಿರುವ ಪ್ರೋಟೀನ್ ಅಂಶ ಸಂಪೂರ್ಣವಾಗಿ ಹೀರಿಕೊಳ್ಳಲುಬಿಡಿ. ವಾರದಲ್ಲಿ ಒಂದು ಬಾರಿ ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಮತ್ತು ಆಲೀವ್ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚಿ ಮಾಲಿಶ್ ಮಾಡಿಕೊಳ್ಳಿ. ನಂತರ ತಲೆಗೆ ಪೇಟದ ರೀತಿಯಲ್ಲಿ ಕಟ್ಟಿಕೊಂಡು ಕೂದಲನ್ನು ಒಣಗಲು ಬಿಡಿ.

ಕೂದಲ ಸಮಸ್ಯೆ ಹೋಗಲಾಡಿಸಿಕೊಳ್ಳಿ
ಕೂದಲ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಬಗೆಹರಿಸಿಕೊಂಡರೆ ಸುಲಭವಾಗುತ್ತದೆ. ತಲೆಹೊಟ್ಟಿನ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಕೂದಲಿಗೆ ಕೊಬ್ಬರಿ ಎಣ್ಣೆ ಮತ್ತು ಲಿಂಬೆ ರಸವನ್ನು ಹಚ್ಚುವುದರ ಮೂಲಕ ತಲೆಹೊಟ್ಟು ಹೋಗಲಾಡಿಸಬಹುದು. ಕೂದಲು ಹೆಚ್ಚು ಉದುರುತ್ತಿದ್ದರೆ ತಲೆಗೆ ಈರುಳ್ಳಿ ರಸವನ್ನು ಹಚ್ಚಿ ಇದರಿಂದ ಕೂದಲು ಉದುರುವುದನ್ನು ತಪ್ಪಿಸಬಹುದು. ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುವವರೆಗೆ ಇದನ್ನು ನಿರಂತರವಾಗಿ ಮಾಡಬೇಕಾಗುತ್ತದೆ.

ರಾಸಾಯನಿಕ ವಸ್ತುಗಳನ್ನು ಬಳಸಬೇಡಿ
ರಾಸಾಯನಿಕ ವಸ್ತುಗಳನ್ನು ಬಳಸಿದ ಉತ್ಪನ್ನಗಳನ್ನು ಕೂದಲಿಗೆ ಬಳಸಬೇಡಿ. ಅದರ ಬದಲು ಕೂದಲಿಗೆ ರೀತಾ ಅಥವಾ ಸೀಗೆಕಾಯಿ ಶಾಂಪೂಗಳನ್ನು ಬಳಸಿ ತೊಳೆಯಿರಿ. ಜೊತೆಗೆ ಬೇಕಿಂಗ್ ಸೋಡಾ ಮತ್ತು ನೀರನ್ನು ಬಳಸಿ ಕೂಡ ಕೂದಲನ್ನು ತೊಳೆಯಬಹುದು.

ಕೂದಲಿಗೆ ಬಣ್ಣಗಳನ್ನು ಬಳಸಬೇಡಿ
ನಿಮ್ಮ ಕೂದಲಿಗೆ ಬೇರೆಬೇರೆ ರೀತಿಯ ಬಣ್ಣಗಳನ್ನು ಬಳಸಬೇಡಿ. ಅದರ ಬದಲು ಹೆನ್ನಾವನ್ನು ಕೂದಲಿಗೆ ಹಚ್ಚಿಕೊಳ್ಳಿ.ಮೊದಲು ಕೂದಲಿಗೆ ಸೀಗೆಕಾಯಿ ಶಾಂಪೂ ಹಾಕಿ ತೊಳೆಯಿರಿ, ನಿಮ್ಮದು ಎಣ್ಣೆಯುತ ಕೂದಲಾಗಿದ್ದರೆ ಆಪಲ್ ಸೈಡರ್ ನಲ್ಲಿ ಕೂದಲನ್ನು ನೆನೆಸಿಕೊಳ್ಳಿ, ಒಣ ಕೂದಲಾಗಿದ್ದರೆ ಜೇನುತುಪ್ಪವನ್ನು ಬಳಸಿ. ಹೆನ್ನಾವನ್ನು ಟೀ ಅಥವಾ ಕಾಫಿ ಪುಡಿಯೊಂದಿಗೆ ನೆನೆಸಿ ತಲೆಗೆ ಹಚ್ಚಿಕೊಳ್ಳಿ. ನಿರಂತರವಾಗಿ ಇದನ್ನು ಮಾಡುವುದರಿಂದ ಬಿಳಿ ಕೂದಲನ್ನು ಹೋಗಲಾಡಿಸಬಹುದು.



Click it and Unblock the Notifications
