Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಇಳಿವಯಸ್ಸಿನಲ್ಲಿ ಕಾಡುವ ಕೂದಲಿನ ಸಮಸ್ಯೆಗೆ ಫಲಪ್ರದ ಮನೆಮದ್ದು
ವಯಸ್ಸು ಇಪ್ಪತ್ತಾಯಿದೆಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತದೆ! ತಲೆ ಕೂದಲು ಉದುರುವುದು ಇಂದು ವಿಶ್ವವನ್ನೇ ಕಾಡುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ಆಹಾರ ಪದ್ಧತಿ, ಖನಿಜಾಂಶದ ಕೊರತೆ, ಔಷಧಿಗಳ ಅಡ್ಡ ಪರಿಣಾಮ, ಒತ್ತಡ, ಮಾಲಿನ್ಯ ಮತ್ತು ವಂಶವಾಹಿಗಳು ಕಾರಣವಾಗಿರುತ್ತವೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಹಾಗಾಗಿ ಇಂತಹ ಸಮಸ್ಯೆಯನ್ನು ನಿವಾರಿಸಲು ನಾವು ನಿಮಗಾಗಿ ಪರಿಹಾರಗಳನ್ನು ಸೂಚಿಸುತ್ತಿದ್ದೇವೆ
ಕೂದಲಿನ ಶೈಲಿ ಬದಲಾಯಿಸಿ
ಕೂದಲನ್ನು ಕತ್ತರಿಸುವ ಶೈಲಿ ಬದಲಾಯಿಸಿ ನಿಮ್ಮ ಕೂದಲು ನಿಧಾನವಾಗಿ ಉದುರುತ್ತಿದ್ದರೆ, ನೀವು ಕೂದಲನ್ನು ಉದ್ದ ಬಿಡುವುದು ಒಳ್ಳೆಯದು. ಏಕೆಂದರೆ ಸಣ್ಣ ಮಟ್ಟದಲ್ಲಿ ಕೂದಲು ಕತ್ತರಿಸುತ್ತಿದ್ದರೆ ಕಾಲಾನುಕ್ರಮದಲ್ಲಿ ಬೊಕ್ಕ ತಲೆಯುಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಉದ್ದ ಕೂದಲು ಬಿಡಿ. ಅಬ್ಬಬ್ಬಾ..! ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

ಔಷಧಗಳ ಬಗ್ಗೆ ಎಚ್ಚರಿಕೆಯಿಂದಿರಿ
ಕೆಲವು ಔಷಧಗಳು ನಿಮ್ಮ ಕೂದಲಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಕೆಲವು ಕೂದಲು ಉದುರುವುದನ್ನು ಸಹ ಪ್ರಚೋದಿಸುತ್ತವೆ. ಹಾಗಾಗಿ ಈ ಕುರಿತು ನಿಮ್ಮ ವೈದ್ಯರ ಬಳಿ ಮಾತನಾಡಿ.
ಒತ್ತಡವನ್ನು
ಒತ್ತಡವನ್ನು ನಿವಾರಿಸಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಹಾಗಾಗಿ ನಿಮ್ಮನ್ನು ನೀವು ಧ್ಯಾನ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬನ್ನಿ. ಕೂದಲಿನ ಸಮಸ್ಯೆ: ಮನೆಯಲ್ಲೇ ಸಿದ್ಧಗೊಳಿಸಿರುವ ಅದ್ಭುತ ತೈಲಗಳು
ಗ್ರೀನ್ ಟೀ
ನಿಮ್ಮ ಕೂದಲಿಗೆ ಗ್ರೀನ್ ಟೀಯನ್ನು ಲೇಪಿಸಿ ಅಧ್ಯಯನಗಳ ಪ್ರಕಾರ ನಿಮ್ಮ ಕೂದಲಿಗೆ ಗ್ರೀನ ಟೀಯನ್ನು ಲೇಪಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಎರಡು ಟೀ ಬ್ಯಾಗ್‍ಗಳನ್ನು ತೆಗೆದುಕೊಂಡು, ಅದನ್ನು ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ತಣ್ಣಗಾದ ಬ್ಯಾಗ್‍ಗಳನ್ನು ಕೂದಲಿಗೆ ಲೇಪಿಸಿ. ಒಂದು ಗಂಟೆಯ ನಂತರ ಸ್ನಾನಮಾಡಿ. ಇದರ ಫಲಿತಾಂಶವನ್ನು ನೋಡಲು ಒಂದು ವಾರ ಹೀಗೆ ಮಾಡಿ. ಹತ್ತು ದಿನಗಳಲ್ಲಿ ನೀವು ಬದಲಾವಣೆಯನ್ನು ಗಮನಿಸುವಿರಿ.
ಆಲ್ಕೋಹಾಲ್ ದೂರವಿಡಿ
ನಿಮಗೆ ಕೂದಲು ಉದುರುತ್ತಿದ್ದರೆ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಆಲ್ಕೋಹಾಲ್ ಕೂದಲು ಬೆಳೆಯುವುದನ್ನು ತಡೆಗಟ್ಟುತ್ತದೆ. ಹಾಗಾಗಿ ಆಲ್ಕೋಹಾಲ್ ಅಂಶಗಳನ್ನು ಸೇವಿಸುವುದನ್ನು ಬಿಡಿ.
ಸರಿಯಾಗಿ ನೀರು ಸೇವಿಸಿ
ಕೂದಲಿನ ಬುಡಗಳು ನಮ್ಮ ದೇಹದಲ್ಲಿರುವ ನಾಲ್ಕನೇ ಒಂದು ಭಾಗ ನೀರನ್ನು ಎಳೆದುಕೊಳ್ಳುತ್ತವೆ. ಹಾಗಾಗಿ ದಿನಕ್ಕೆ ಎಂಟು ಕಪ್ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ.



Click it and Unblock the Notifications
