Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲಿನ ಪೋಷಣೆಗಾಗಿ ಮರದ ಬಾಚಣಿಗೆ ಒಮ್ಮೆ ಟ್ರೈ ಮಾಡಿ...
ಹೆಂಗಳೆಯರಲ್ಲಿ ತಲೆಗೂದಲು ಉದುರುವಿಕೆಯ ಸಮಸ್ಯೆ ತೀರದ ಗೋಳಾಗಿದೆ. ಟಿವಿಯಲ್ಲಿ ಬರುವ ತರೇಹವಾರಿ ಜಾಹೀರಾತುಗಳನ್ನು ನೋಡಿ ಹಲವಾರು ಎಣ್ಣೆ ಮತ್ತು ಶಾಂಪೂಗಳ ಬಳಕೆಯನ್ನು ತಮ್ಮ ಕೂದಲಿಗೆ ಮಾಡಿ ಇನ್ನಷ್ಟು ನಷ್ಟವನ್ನು ಅನುಭವಿಸುತ್ತಾರೆ. ಹಾಗಾದರೆ ಕೂದಲಿನ ಸಮೃದ್ಧತೆಗಾಗಿ ಅನುಸರಿಸಬೇಕಾದ ಮಾರ್ಗವಾದರೂ ಏನು ಎಂಬುದು ನಿಮ್ಮ ತಲೆ ಕೊರೆಯುತ್ತಿದ್ದರೆ ಇಂದಿನ ನಮ್ಮ ಲೇಖನದಿಂದ ನಿಮಗೆ ಪ್ರಯೋಜನ ಖಂಡಿತ.
ಇಲ್ಲಿ ನಾವು ಯಾವುದೇ ಎಣ್ಣೆ, ಹೇರ್ ಪ್ಯಾಕ್ ಇಲ್ಲವೇ ಶಾಂಪೂವಿನ ಮಾಹಿತಿಯನ್ನು ನೀಡುತ್ತಿಲ್ಲ. ಬರೀ ಒಂದು ಬಾಚಣಿಗೆ ನಿಮ್ಮ ಕೇಶವನ್ನು ಬಲಶಾಲಿಯನ್ನಾಗಿಸಿ ಸಮೃದ್ಧ ಪೋಷಣೆಯನ್ನು ನೀಡಿ ಸೊಂಪಾದ ಕೂದಲನ್ನು ನಿಮಗೆ ನೀಡಲಿದೆ. ಮರದ ಬಾಚಣಿಗೆಯ ಜಾದೂವನ್ನು ನಿಮ್ಮ ಕೂದಲಿಗೆ ಉಂಟುಮಾಡಿ ಅದ್ಭುತ ಪ್ರಯೋಜವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.
ಕೂದಲಿನ ಬುಡದ ರಕ್ತ ಸಂಚಾರವನ್ನು ಈ ಬಾಚಣಿಗೆ ಮಾಡಲಿದ್ದು ಇದು ಬಜೆಟ್ ಬೆಲೆಯಲ್ಲಿ ಖರೀದಿ ಮಾಡುವಂತಹ ಸೌಂದರ್ಯ ಪರಿಕರವಾಗಿದೆ. ಹಾಗಿದ್ದರೆ ಬನ್ನಿ ಮರದ ಬಾಚಣಿಗೆ ನಿಮ್ಮ ಕೂದಲನ್ನು ಸೊಗಸಾಗಿಸುವಲ್ಲಿ ನಡೆಸುವ ಅದ್ಭುತಗಳನ್ನು ತಿಳಿದುಕೊಳ್ಳೋಣ..

ತಲೆಬುರುಡೆಗೆ ಉತ್ತಮ
ನೀವು ಮರದ ಬಾಚಣಿಗೆಲ್ಲಿ ಕೂದಲನ್ನು ಬಾಚುವಾಗ ಇವುಗಳು ಶಾಖವನ್ನು ಉತ್ಪತ್ತಿ ಮಾಡುತ್ತವೆ. ಇದು ನಿಮ್ಮ ತಲೆಬುರುಡೆಯ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಅಂತೆಯೇ ತಲೆಬುರುಡೆಗೆ ರಕ್ತಸಂಚಾರವನ್ನು ಮಾಡುತ್ತದೆ ಮತ್ತು ಆರೋಗ್ಯಕರವಾಗಿ ಇರಿಸುತ್ತದೆ.
ಕೂದಲಿನ ಬೆಳವಣಿಗೆಗೆ
ತಲೆಬುರುಡೆಗೆ ರಕ್ತಸಂಚಾರವನ್ನುಂಟು ಮಾಡುವುದಲ್ಲದೆ ಕೂದಲಿನ ಪೋಷಣೆಯನ್ನು ಮಾಡುತ್ತದೆ. ಮತ್ತು ತಲೆಹೊಟ್ಟಿನ ನಿವಾರಣೆಯನ್ನು ಮಾಡಿ ಕೂದಲಿನ ಸ್ವಾಸ್ಥ್ಯಕ್ಕೆ ಕಾರಣವಾಗಿದೆ.
ಕೂದಲಿಗೆ ಹಾನಿಯನ್ನುಂಟು ಮಾಡುವುದಿಲ್ಲ
ಪರಿಣಿತರ ಪ್ರಕಾರ ಮರದ ಬಾಚಣಿಗೆ ಕೂದಲಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಒದ್ದೆ ಕೂದಲಿಗೂ ಈ ಬಾಚಣಿಗೆಯ ಬಳಕೆಯನ್ನು ಮಾಡಬಹುದಾಗಿದ್ದು ಕೂದಲು ತುಂಡಾಗುವ ಸಮಸ್ಯೆ ಇರುವುದಿಲ್ಲ.
ತಲೆಹೊಟ್ಟು ನಿವಾರಣೆ
ತಲೆಬುರುಡೆಯಲ್ಲಿ ತಲೆಹೊಟ್ಟು ಇದೆಯೇ? ಹಾಗಿದ್ದರೆ ತಡ ಮಾಡದೇ ಮರದ ಬಾಚಣಿಗೆಯ ಬಳಕೆಯನ್ನು ಮಾಡಿ. ತಲೆಹೊಟ್ಟಿನ ಉತ್ಪಾದನೆಯನ್ನು ಕಡಿಮೆ ಮಾಡಿ ಬುಡದಿಂದಲೇ ಕೂದಲಿನ ಪೋಷಣೆಯನ್ನು ಮರದ ಬಾಚಣಿಗೆ ಮಾಡುತ್ತದೆ.
ಕೂದಲು ಬೆಳೆಯಲು ಸಹಕಾರಿ
ಕೂದಲು ಉದುರುವುದನ್ನು ಮರದ ಬಾಚಣಿಗೆ ತಡೆಯುವುದರ ಜೊತೆಗೆ ಹೆಚ್ಚುವರಿ ಕೂದಲು ಬೆಳೆಯಲು ಇದು ಸಹಕಾರಿ ಎಂದೆನಿಸಿದೆ. ಆದ್ದರಿಂದ ಕೂದಲಿನ ಪೋಷಣೆಗೆ ಮರದ ಬಾಚಣಿಗೆಯನ್ನು ಬಳಸುವುದರಲ್ಲಿ ಯಾವುದೇ ತೊಂದರೆಯಿಲ್ಲ.
ಕೂದಲಿನ ಕಂಡೀಷನಿಂಗ್
ಮರದ ಬಾಚಣಿಗೆಯು ಕೂದಲಿಗೆ ಉತ್ತಮ ಕಂಡೀಷನಿಂಗ್ ಮಾಡುವುದರ ಜೊತೆಗೆ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಸಂಪೂರ್ಣವಾಗಿ ಕೇಶಕ್ಕೆ ಹರಡುವಂತೆ ಮಾಡುತ್ತದೆ.



Click it and Unblock the Notifications

