Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ರೇಷ್ಮೆಯಂತಹ ಕೂದಲಿಗಾಗಿ ಇಲ್ಲಿದೆ ನೋಡಿ ಸರಳ ಟಿಪ್ಸ್
ಹುಡುಗಿಯರ ಮನಸ್ಸೇ ಇಷ್ಟು, ನಮಗೆ ಗುಂಗುರು ಕೂದಲು ಇದ್ದರೆ, ನೀಳವಾದ ಕೇಶವನ್ನು ಕೇಳುತ್ತೇವೆ. ನೀಳವಾದ ಕೂದಲು ಇದ್ದರೆ, ಗುಂಗುರು ಕೂದಲನ್ನು ಕೇಳುತ್ತೇವೆ. ನಮಗೆ ಇಷ್ಟವಾಗುವ ಕೂದಲಿಗಾಗಿ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಸಹ ಹಿಂದೇಟು ಹಾಕುವುದಿಲ್ಲ. ಇದಕ್ಕಾಗಿ ಮನೆಯಲ್ಲಿಯೇ ಅಲ್ಲದೆ, ಸಲೂನ್‌ನಲ್ಲಿ ಸಹ ಧಾರಾಳವಾಗಿ ಖರ್ಚು ಮಾಡಲು ನಾವು ಬಯಸುತ್ತೇವೆ.
ಈ ಅಂಕಣದಲ್ಲಿ ನಾವು ರೇಷ್ಮೆಯಂತಹ ಕೇಶಕ್ಕಾಗಿ ಶೀಘ್ರ ಸಲಹೆಗಳನ್ನು ನೀಡಿದ್ದೇವೆ. ಇದನ್ನು ಬಳಸುವುದರಿಂದ ಪ್ರತಿಯೊಬ್ಬ ಹುಡುಗಿಯ ಕನಸಿನ ಕೂದಲನ್ನು ನಾವು ಪಡೆಯಬಹುದು. ಈ ಸರಳವಾದ ಸಲಹೆಗಳು ಕೆಲವೇ ಹಂತಗಳಲ್ಲಿ ನಿಮ್ಮ ಮನಸ್ಸಿಗೊಪ್ಪುವ ಕೂದಲನ್ನು ನೀಡುತ್ತದೆ. ರೇಷ್ಮೆಯಂತಹ ಕೂದಲಿಗಾಗಿ ನೈಸರ್ಗಿಕ ಕಂಡೀಷನರ್
ನಿಮಗೆ ತಿಳಿದಿರುವ ಹಾಗೆ ಹೇರ್ ಸ್ಟ್ರೈಟೆನಿಂಗ್ ಅನ್ನು ಸರಿಯಾಗಿ ಮಾಡಲಿಲ್ಲವಾದಲ್ಲಿ, ಅದರಿಂದ ಕೂದಲಿಗೆ ಹಾನಿಯಾಗುವುದು ಖಂಡಿತ. ಒಳ್ಳೆಯ ತಂತ್ರಗಳಿಂದ ಮತ್ತು ಉತ್ತಮ ಸಾಧನಗಳಿಮ್ದ ನೀವು ಒಳ್ಳೆಯ ಲುಕ್ ಅನ್ನು ಪಡೆಯಬಹುದು. ಬನ್ನಿ ಇನ್ನು ತಡಮಾಡದೆ ರೇಷ್ಮೆಯಂತಹ ಕೇಶಕ್ಕಾಗಿ ಇರುವ ಶೀಘ್ರ ಸಲಹೆಗಳನ್ನು ತಿಳಿದುಕೊಂಡು ಬರೋಣ ಬನ್ನಿ...

ಗುಣಮಟ್ಟದಿಂದ ಕೂಡಿದ ಬ್ರಿಸಲ್ ಬ್ರಷ್
ಕಡಿಮೆ ದರದ ಗುಣಮಟ್ಟ ರಹಿತ ಬ್ರಷ್‌ಗಳನ್ನು ಬಳಸಲು ಹೋಗಬೇಡಿ. ಒಳ್ಳೆಯ ಬ್ರಷ್ ಬಳಸುವುದರಿಂದ ಕೂದಲಿನ ಬುಡವು ಸದೃಢಗೊಳ್ಳುತ್ತದೆ. ಜೊತೆಗೆ ಕೂದಲಿನಲ್ಲಿರುವ ಸೆಬಮ್ ಸಮರೂಪದಲ್ಲಿ ಎಲ್ಲಾ ಕಡೆ ವಿತರಣೆಯಾಗುತ್ತದೆ. ಇದು ಕೂದಲನ್ನು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ ಮತ್ತು ಸಿಕ್ಕು ರಹಿತವನ್ನಾಗಿಸುತ್ತದೆ.

ಹೀಟ್ ಸೆರಮ್
ನಿಮ್ಮ ಒದ್ದೆ ಕೂದಲಿನ ಮೇಲೆ ಸ್ವಲ್ಪ ಪ್ರಮಾಣದ ಸೆರಮ್ ಲೇಪಿಸಿ. ಇದರಿಂದ ನಿಮ್ಮ ಕೂದಲಿಗೆ ಒಳ್ಳೆಯ ಲುಕ್ ಬರುವ ಜೊತೆಗೆ ಅದು ತುಂಡಾಗುವಿಕೆಯನ್ನು ಸಹ ತಡೆಯಬಹುದು.

ಕೂದಲನ್ನು ವರ್ಗೀಕರಿಸಿ
ನಿಮ್ಮ ಕೂದಲುಉ ಒದ್ದೆಯಾಗಿದ್ದಾಗ, ಅದನ್ನು ಸಣ್ಣ ಸಣ್ಣ ಭಾಗವನ್ನಾಗಿಸಿಕೊಂಡು, ಪ್ರತಿ ಭಾಗವನ್ನು ಬ್ಲೋ ಮಾಡಿ. ಇದರಿಂದ ಕೂದಲು ಎಲ್ಲಾ ಕಡೆ ಸರಿಯಾಗಿ ಒಣಗಲು ಸಹಾಯ ಮಾಡುತ್ತದೆ. ಅಧಿಕ ಉಷ್ಣಾಂಶವನ್ನು ಇಟ್ಟುಕೊಳ್ಳದೆ ಡ್ರೈಯರ್‌ನಲ್ಲಿ ಮಧ್ಯಮ ಪ್ರಮಾಣದ ಉಷ್ಣಾಂಶದಲ್ಲಿ ಕೂದಲನ್ನು ಒಣಗಿಸಿ.

ಸ್ಟ್ರೈಟನರ್ ಅನ್ನು ಬಳಸಿ
ನಿಮ್ಮ ಕೂದಲಿಗೆ ಸ್ಟ್ರೈಟೆನರ್ ಬಳಸುವ ಮುನ್ನ, ಕೂದಲು ಸಂಪೂರ್ಣವಾಗಿ ಒಣಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಒಣ ಕೂದಲು ಸಮಸ್ಯೆಯನ್ನು ತಡೆಯಬಹುದು. ಇದಕ್ಕೂ ಸಹ ಕೂದಲನ್ನು ವರ್ಗೀಕರಣ ಮಾಡಿಕೊಂಡು, ಬುಡದಿಂದ ಸ್ಟ್ರೈಟನರ್ ಅನ್ನು ಬಳಸಿ.

ಹೇರ್ ಸೆರಮ್
ನಿಮ್ಮ ಅಂಗೈಗೆ ಸ್ವಲ್ಪ ಪ್ರಮಾಣದ ಸೆರಮ್ ಅನ್ನು ಹಾಕಿಕೊಳ್ಳಿ ತದನಂತರ ಅದನ್ನು ನೀವು ಸ್ಟ್ರೈಟೆನ್ ಮಾಡಿದ ಕೂದಲ ಮೇಲೆ ಲೇಪಿಸಿ. ಇದರಿಂದ ನಿಮ್ಮ ಕುದಲು ಹೊಳಪಿನಿಂದ ಕಂಗೊಳಿಸುತ್ತದೆ ಮತ್ತು ಕೂದಲು ಮೊಯಿಶ್ಚರೈಸ್ ಆಗಿರುತ್ತದೆ.



Click it and Unblock the Notifications
