Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಕೂದಲಿಗೆ ಹಚ್ಚಿದ್ದ ಬಣ್ಣವನ್ನು ತ್ವರಿತವಾಗಿ ನಿವಾರಿಸಬೇಕೇ?
ಯಾವುದೋ ಸೆಳೆತದಲ್ಲಿ ಕೂದಲ ಬಣ್ಣವನ್ನು ಬದಲಿಸಿಕೊಳ್ಳಬೇಕೆಂಬ ಹಂಬಲವುಂಟಾಗಿ ಬಣ್ಣ ಬದಲಿಸಿಕೊಂಡ ಬಳಿಕ ತಮಗೆ ಒಪ್ಪುತ್ತಿಲ್ಲ ಎಂಬ ಭಾವನೆಯಿಂದ ಮನ ಮುದುಡಿದೆಯೇ? ಈಗ ಚಿಂತೆ ಬೇಡ. ಬದಲಾದ ಕೂದಲ ಬಣ್ಣವನ್ನು ಸಹಜ ಬಣ್ಣ ಬರುವಂತೆ ಮಾಡಲು ನಮ್ಮ ಬಳಿ ಅತ್ಯಂತ ಸೂಕ್ತವಾದ ವಿಧಾನವಿದೆ. ಇದಕ್ಕೇನೂ ಮಾರುಕಟ್ಟೆ ಅಲೆಯಬೇಕಾಗಿಲ್ಲ. ನಿಮ್ಮ ಮನೆಯಲ್ಲಿರುವ ಕೊಂಚ ಅಡುಗೆ ಸೋಡಾ ಸಾಕು. ಚರ್ಮ ಮತ್ತು ಕೂದಲ ಆರೈಕೆಗೆ ಅಡುಗೆ ಸೋಡಾ ಒಂದು ಸುಲಭವಾದ, ಅಗ್ಗವಾದ ಮತ್ತು ಸುರಕ್ಷಿತವಾದ ಸಾಮಾಗ್ರಿಯಾಗಿದ್ದು ಹಲವು ತೊಂದರೆಗಳನ್ನು ನಿವಾರಿಸುತ್ತದೆ.
ಇತ್ತೀಚಿನ ಸಂಶೋಧನೆಗಳ ಪ್ರಕಾರ ಇದು ಕೂದಲಿಗೆ ಹಚ್ಚಿದ್ದ ಕೃತಕ ಬಣ್ಣವನ್ನೂ ನಿವಾರಿಸುತ್ತದೆ. ಇದಕ್ಕಾಗಿ ಮೊದಲು ಕೊಂಚ ಉಗುರುಬೆಚ್ಚನೆಯ ನೀರಿನಲ್ಲಿ ಅಡುಗೆ ಸೋಡಾ ಹಾಕಿ ನುಣ್ಣನೆಯ ಲೇಪನ ತಯಾರಿಸಿಕೊಂಡರೆ ಸಾಕು. ಈ ಲೇಪನವನ್ನು ಶಾಂಪೂವಿನಂತೆ ಉಪಯೋಗಿಸಿ ಬಣ್ಣ ಹಚ್ಚಿದ್ದ ಕೂದಲನ್ನು ಇನ್ನಷ್ಟು ಉಗುರುಬೆಚ್ಚನೆಯ ನೀರಿನೊಂದಿಗೆ ತೊಳೆದುಕೊಳ್ಳಬೇಕು. ಬಳಿಕ ಮನೆಯಲ್ಲಿಯೇ ತಯಾರಿಸಿದ ಸೌಮ್ಯ ಶಾಂಪೂವಿನಿಂದ ತಲೆಯನ್ನು ಚೆನ್ನಾಗಿ ತೊಳೆದುಕೊಳ್ಳುವುದು ಅಗತ್ಯ. ಬಳಿಕ ಸೌಮ್ಯ ಕಂಡೀಶನರ್ ಉಪಯೋಗಿಸಿ ಸ್ನಾನ ಮುಗಿಸಬೇಕು.
ಇದು ಕೂದಲ ಬಣ್ಣವನ್ನು ನಿವಾರಿಸಿ ಸಹಜ ಬಣ್ಣವನ್ನು ಪಡೆಯುವ ಜೊತೆಗೇ ಕೂದಲನ್ನು ಮೃದುವಾಗಿಯೂ ಕಾಂತಿಯುಕ್ತವಾಗಿಯೂ ಇರಿಸುತ್ತದೆ. ಆದರೆ ಈ ಬಣ್ಣ ಒಂದೇ ಬಾರಿಗೆ ಪೂರ್ತಿಯಾಗಿ ಹೋಗುವುದಿಲ್ಲ, ಇದಕ್ಕಾಗಿ ಬಣ್ಣ ಹಚ್ಚಿಕೊಂಡ ಒಂದು ತಿಂಗಳ ಒಳಗಾಗಿ ಮೂರು ಬಾರಿ ಪುನರಾವರ್ತಿಸಬೇಕು. ಬನ್ನಿ, ಇದನ್ನು ಉಪಯೋಗಿಸುವ ಬಗೆಯನ್ನು ಕ್ರಮಾನುಸಾರವಾಗಿ ನೋಡೋಣ:

ಕ್ರಮ 1:
ಮೊದಲು ಸೌಮ್ಯವಾದ ಆಂಟಿ-ಡಾಂಡ್ರಫ್ (ತಲೆಹೊಟ್ಟುನಿವಾರಕ) ಶ್ಯಾಂಪೂ ಉಪಯೋಗಿಸಿ ತಲೆಯನ್ನು ತೊಳೆದುಕೊಳ್ಳಿ. ನಿಮ್ಮ ಆಯ್ಕೆಯ ಮನೆಯಲ್ಲಿಯೇ ತಯಾರಿಸಿದ ತಲೆಹೊಟ್ಟು ನಿವಾರಿಸುವ ಯಾವುದೇ ಲೇಪನವನ್ನೂ ಉಪಯೋಗಿಸಬಹುದು. ಆದರೆ ಈ ಶಾಂಪೂ ಕೊಂಚ ಕ್ಷಾರೀಯವಾಗಿರಬೇಕು, ಅಂದರೆ ಇದರ ಪಿಎಚ್ ಮಟ್ಟ ಕೊಂಚ ಹೆಚ್ಚಿರಬೇಕು. ಶಾಂಪೂ ಹಚ್ಚಿದ ಬಳಿಕ ತಲೆಯನ್ನು ಎರಡು ಬಾರಿಯಾದರೂ ತೊಳೆದುಕೊಳ್ಳಬೇಕು.

ಕ್ರಮ 2:
ಸಮಪ್ರಮಾಣದಲ್ಲಿ ಉಗುರುಬೆಚ್ಚನೆಯ ನೀರು ಮತ್ತು ಅಡುಗೆ ಸೋಡಾ ಬೆರೆಸಿ ಲೇಪನ ತಯಾರಿಸಿ. ಒಂದು ಚಮಚದಲ್ಲಿ ಚೆನ್ನಾಗಿ ಗೊಟಾಯಿಸಿ ಒಂದಿನಿತೂ ಗಂಟುಗಳಿಲ್ಲದಂತೆ ಕಲಸಿ.

ಕ್ರಮ 3
ಈ ಲೇಪನವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿ. ಬಳಿಕ ಕೂದಲ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳುತ್ತಾ ಹೋಗಿ.

ಕ್ರಮ 4
ಈ ಲೇಪನ ಕೊಂಚ ಒಣಗಲು ಕಾಲಾವಕಾಶ ನೀಡಿ. ಇದಕ್ಕೆ ಸುಮಾರು ಹದಿನೈದು ನಿಮಿಷ ಬೇಕಾಗಬಹುದು. ಒಂದು ವೇಳೆ ಈ ಲೇಪನ ಹಚ್ಚಿದಾಕ್ಷಣ ತುರಿಕೆ ಅಥವಾ ಉರಿಯ ಅನುಭವವಾದರೆ ಈ ಕ್ರಮವನ್ನು ತಕ್ಷಣ ನಿಲ್ಲಿಸಿ ತಣ್ಣೀರಿನಿಂದ ತೊಳೆದುಕೊಂಡು ಮುಕ್ತಾಯ ಮಾಡಿ. ಏಕೆಂದರೆ ಕೆಲವರಿಗೆ ಅಡುಗೆ ಸೋಡಾ ಅಲರ್ಜಿಯಾಗಿರುತ್ತದೆ.

ಕ್ರಮ 5
ಹದಿನೈದು ನಿಮಿಷಗಳ ಬಳಿಕ ನಲ್ಲಿಯ ಅಥವಾ ಶವರ್‌ನ ನೀರು ನೇರವಾಗಿ ಬೀಳುವಂತೆ ಮಾಡಿ ಈ ಪದರ ಕರಗಿ ಹೋಗುವಂತೆ ಮಾಡಿ. ಬಳಿಕ ಮೊದಲು ಉಪಯೋಗಿಸಿದ ಸೌಮ್ಯ ಶಾಂಪೂವಿನಿಂದ ಮತ್ತೊಮ್ಮೆ ತೊಳೆದುಕೊಳ್ಳಿ.

ಕ್ರಮ 6
ಈಗ ಸೌಮ್ಯ ಕಂಡೀಶನರ್ ಉಪಯೋಗಿಸಿ ಕೂದಲ ಬುಡದಿಂದ ತುದಿಯವರೆಗೂ ತೊಳೆಯಿರಿ. ಆದರೆ ಕೂದಲ ಬುಡಕ್ಕೆ ಮಸಾಜ್ ಮಾಡಬೇಡಿ. ಕೇವಲ ಏಳು ಸೆಕೆಂಡ್ ಬಿಟ್ಟು ನೀರಿನಿಂದ ತೊಳೆದುಕೊಳ್ಳಿ.

ಎಚ್ಚರಿಕೆ
* ಈ ಬಗ್ಗೆ ತಜ್ಞರು ಕೂದಲಿಗೆ ಬಣ್ಣ ಹಚ್ಚಿದ ಬಳಿಕ ನಿವಾರಿಸಲು ಕನಿಷ್ಠ ಮೂರು ದಿನಗಳಾದರೂ ಕಾಯುವಂತೆ ಸಲಹೆ ನೀಡುತ್ತಾರೆ. ಏಕೆಂದರೆ ಕೂದಲ ಬಣ್ಣದ ರಾಸಾಯನಿಕದ ಪ್ರಭಾವ ಪೂರ್ಣವಾಗಿ ಅಳಿದ ಬಳಿಕವೇ ಅಡುಗೆ ಸೋಡಾ ಹಚ್ಚುವುದು ಉತ್ತಮ. ಪೂರ್ಣವಾಗಿ ಒಣಗದ ಬಣ್ಣದ ಮೇಲೆ ಅಡುಗೆ ಸೋಡಾ ಪ್ರಭಾವ ಬೀರಿ ಕೂದಲಿಗೆ ಹಾನಿಯುಂಟುಮಾಡಬಹುದು.
* ಅಡುಗೆ ಸೋಡಾ ಉಪಯೋಗಿಸಿದ ಬಳಿಕ ಶಾಂಪೂ ಮತ್ತು ಕಂಡೀಶನರ್ ಉಪಯೋಗಿಸುವುದು ಅಗತ್ಯ. ಇಲ್ಲದಿದ್ದರೆ ಸೋಡಾ ಪ್ರಭಾವದಿಂದ ಕೂದಲು ತೀರಾ ಒಣಗಿ ಒರಟಾಗುತ್ತದೆ. ಆದ್ದರಿಂದ ಶ್ಯಾಂಪೂ ಮತ್ತು ಕಂಡೀಶನರ್ ಇಲ್ಲದೇ ಅಡುಗೆ ಸೋಡಾ ಹಚ್ಚಲು ಹೋಗಲೇಬೇಡಿ.



Click it and Unblock the Notifications