Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಹುಡುಗ ನೋಡೋಕೆ ಬಂದಾಗ ತಯಾರಾಗಿರೋದು ಹೇಗೆ?
ನಿಮ್ಮದು ಅರೇಂಜ್ಡ್ ಮ್ಯಾರೇಜ್ ಆಗಿದ್ರೆ ಖಂಡಿತ ಮೊದಲ ಸಲ ನಿಮ್ಮ ಹುಡುಗಗನ್ನು ನೋಡುವ ತವಕ ಸಹಜವಾಗೇ ಹೆಚ್ಚಿರುತ್ತೆ. ಆ ದಿನ ಹೇಗೆ ರೆಡಿ ಆಗ್ಬೇಕು ಅನ್ನೋ ಆತಂಕ ಬೇರೆ.
ಅದರಲ್ಲೂ ಹುಡುಗನ ಕಡೆಯವ್ರು ಬರುವ ಕ್ಷಣ ಹತ್ತಿರವಾಗ್ತಾ ಇದ್ದಂತೆ ಟೆನ್ಷನ್ ಅಧಿಕಗೊಳ್ಳುತ್ತೆ ಅದಕ್ಕಾಗಿ ಸಿಂಪಲ್ ಸಲಹೆಗಳೊಂದಿಷ್ಟು ನಾವ್ ನಿಮ್ಗೆ ಕೊಡ್ತಾ ಇದ್ದೀವಿ ಮುಂದೆ ಓದಿ...

ಉಡುಗೆ ಹೇಗಿರಬೇಕು ಗೊತ್ತಾ?
ಮೊದಲನೆಯದಾಗಿ ನೀವು ಧರಿಸುವ ಉಡುಗೆಯಲ್ಲಿ ನೀವು ಮೋಸ್ಟ್ ಬ್ಯೂಟಿಫುಲ್ ಆಗಿ ಕಾಣಿಸ್ಬೇಕು. ಬೇಕಾದ್ರೆ ಇದಕ್ಕೆ ನಿಮ್ಮ ಆಪ್ತ ಮಿತ್ರರ ಸಲಹೆಗಳನ್ನು ಪಡೆದುಕೊಳ್ಳಿ. ಕನ್ನಡಿಯಲ್ಲಿ ನಿಮ್ಮನ್ನ ನೀವು ನೋಡಿಕೊಳ್ಳಿ. ನಿಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವ ಉಡುಗೆಗಳನ್ನು ತೊಡುವುದನ್ನು ಮರೀಬೇಡಿ.. ಸ್ವಚ್ಛವಾದ ಉಡುಗೆ ಧರಿಸಿ, ಕ್ಯಾಷುವಲ್ ಉಡುಗೆಗಳನ್ನು ತೊಡೋದೆ ಸೂಕ್ತ. ನೀವು ಧರಿಸುವ ಉಡುಗೆ ಸಾಂದರ್ಭಿಕವಾಗಿರಬೇಕು. ನಿಮ್ಮ ವ್ಯಕ್ತಿತ್ವ ನೀವು ಧರಿಸುವ ಕಾಸ್ಟ್ಯೂಮ್ನಲ್ಲೂ ಕಂಗೊಳಿಸ್ಬೇಕು. ತೀರಾ ಟೈಟ್ ಆದ ಅಥ್ವಾ ತೀರಾ ಸಡಿಲವೆನ್ನಿಸುವ ಉಡುಗೆಗಳನ್ನು ಫ್ರಿಫರ್ ಮಾಡ್ಬೇಡಿ.

ಮೇಕಪ್ ಹೇಗಿದ್ದರೆ ಚೆನ್ನ
ಇನ್ನು ಮೇಕಪ್ ನಿಮ್ಮ ತ್ವಚೆಗೆ ಸರಿಹೊಂದುವಂತಿರಲಿ,ಸಾಧ್ಯವಾದಷ್ಟು ಕಡಿಮೆ ಮೇಕಪ್ ಮಾಡಿ. ನಿಮ್ಮ ಎತ್ತರ ಕಡಿಮೆ ಇದ್ರೆ ಕೂದಲು ಇಳಿಬಿಡಿ. ಎತ್ತರ ಸಾಕಷ್ಟಿದ್ದರೆ ಬೇರೆಬೇರೆ ಹೇರ್ಸ್ಟೈಲ್ ಟ್ರೈ ಮಾಡ್ಬಹುದು. ಬಟ್ ಸಿಂಪಲ್ ಹೇರ್ಸ್ಟೈಲ್ ಮಾಡಿಸ್ಕೊಳ್ಳಿ..

ಸಾಂಪ್ರದಾಯಿಕ ಉಡುಗೆ ಬೆಸ್ಟಾ?
ನೀವು ಭೇಟಿಯಾಗುವ ಸ್ಥಳಕ್ಕೆ ನಿಮ್ಮ ಉಡುಗೆ ಹೊಂದುವಂತಿರಲಿ. ಸಪೋಸ್ ನೀವು ಮನೆಯಲ್ಲಿ ಹುಡುಗಗನ್ನು ಮೊದಲ ಬಾರಿಗೆ ಭೇಟಿ ಮಾಡ್ತಾ ಇದ್ರೆ ಸಾಂಪ್ರದಾಯಿಕ ಉಡುಗೆಗೆ ಆದ್ಯತೆ ನೀಡಿ. ನಿಮ್ಮನ್ನು ನೋಡಲು ಬರುತ್ತಿರುವ ವ್ಯಕ್ತಿಯ ಅಭಿರುಚಿ ಮತ್ತು ಆಯ್ಕೆಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ರೆ ಒಳಿತು.
ಸಾಧ್ಯವಾದಷ್ಟು ಸಿಂಪಲ್ ಆಗಿ ಕಾಣಲು ಪ್ರಯತ್ನಿಸಿ. ನೀವು ತೀರಾ ಕಾಸ್ಟ್ಲೀ ಅಥ್ವಾ ಎಕ್ಸ್ಪೆನ್ಸಿಸೀವ್ ಅಂತ ಅನ್ನಿಸಿದ್ರೆ ನಿಮ್ಮ ಮೊದಲ ಭೇಟಿ ಕೊನೆಯ ಭೇಟಿಯಾಗ್ಬಹುದು ಕೇರ್ಫುಲ್.. ನಿಮ್ಮ ಉಡುಗೆಗೆ ಸರಿಹೊಂದುವಂತ ಆಕ್ಸಸರೀಸ್ ಮತ್ತು ಟೇಸ್ಟ್ ನಿಮ್ಮದಾಗಿರಲಿ..

ಮಾರ್ಡನ್ ಡ್ರೆಸ್ ಧರಿಸಿದ್ರೆ ಹೇಗೆ?
ಮೊದಲ ಭೇಟಿ ಮನೆಯಲ್ಲಿ ಆಗಲು ನಿರ್ಧರಿಸದೇ ಇತರೆ ಯಾವುದೇ ಸ್ಥಳದಲ್ಲಿ ನಿರ್ಧರಿಸಿದ್ದಲ್ಲಿ ಆ ಸ್ಥಳದ ಬಗ್ಗೆ ಸರಿಯಾದ ಮಾಹಿತಿಯನ್ನು ಮೊದಲೇ ಪಡೆದುಕೊಳ್ಳಿ. ಯಾವ ಸ್ಥಳಕ್ಕೆ ಎಂತಹ ಡ್ರೆಸ್ ಸರಿ ಅನ್ನುವ ಕಲ್ಪನೆ ನಿಮ್ಗಿರಬೇಕು..ದೇವಸ್ಥಾನದಲ್ಲಿ ಮೀಟ್ ಮಾಡುವ ಯೋಜನೆ ಇದ್ರೆ ಸೀರೆಯೇ ಉಳಿತು. ಕಾಫಿ ಡೇ, ಮಾಲ್ಗಳಲ್ಲಿ ಭೇಟಿಯಾಗುವ ಪ್ಲಾನ್ ಇದ್ರೆ ಮಾರ್ಡನ್ ಡ್ರೆಸ್ ಧರಿಸಿದ್ರೆ ಸೂಕ್ತ. ಆದ್ರೆ ಆತನ ಅಭಿರುಚಿಯ ಬಗ್ಗೆ ತಿಳಿದು ಡ್ರೆಸ್ ಮಾಡ್ಕೊಂಡ್ರೆ ತುಂಬಾ ಒಳ್ಳೇದು.

ಸುಗಂಧ ಭರಿತವಾಗಿರಲಿ ಮೊದಲ ಭೇಟಿ
ಮೊದಲ ಭೇಟಿಯ ಸಂದರ್ಬದಲ್ಲಿ ಬಾಡಿ ಆಡರ್ ಚೆನ್ನಾಗಿರುವಂತೆ ನೋಡಿಕೊಳ್ಳಿ. ನೀವು ಫ್ರೆಷ್ ಆಗಿರುವಂತೆ ಕಾಣಬೇಕೇ ವಿನಃ ತೀರಾ ಬಳಲಿದವರಂತೆ ಕಾಣಬಾರದು..ಹಾಗಾಗಿ ಉತ್ತಮವಾದ ಯಾವುದಾದ್ರು ಬಾಡಿ ಸ್ಪ್ರೇ ಬಳಸಿದ್ರೆ ಅದ್ರಲ್ಲಿ ತಪ್ಪೇನಿಲ್ಲ. ಸಾಂಪ್ರದಾಯಿಕ ಉಡುಗೆಯಲ್ಲಿದ್ದಲ್ಲಿ ಸುವಾಸಿತ ಮಲ್ಲಿಗೆ ಹೂವು ಮುಡಿಯಬಹುದು.
ಒಟ್ಟಿನಲ್ಲಿ ಬಾಳಸಂಗಾತಿಯಾಗುವ ವ್ಯಕ್ತಿಯನ್ನು ಮೊದಲ ಬಾರಿಗೆ ಮೀಟ್ ಮಾಡ್ತಿದ್ದೀರಾದ್ರೆ ಖಂಡಿತ ಒಂದಷ್ಟು ಆತಂಕ, ಭಯ ಮತ್ತೊಂದಿಷ್ಟು ಕ್ಯೂರಿಯಾಸಿಟಿ ಸಹಜವಾಗಿ ಇದ್ದೇ ಇರುತ್ತೆ. ಆದ್ರೆ ಅದರಿಂದ ಹೊರಬಂದು ಕ್ಯಾಷುವಲ್ ಆಗಿರಿ. ಒಂದು ವೇಳೆ ಆ ವ್ಯಕ್ತಿಯನ್ನು ನೋಡಿದ ಮೇಲೆ ಇಷ್ಟವಾಗಿಲ್ಲವೆಂದ್ರೆ ಡೈರೆಕ್ಟ್ ಆಗಿ ಆ ವಿಚಾರವನ್ನು ಪೋಷಕರಿಗೆ ತಿಳಿಸಿ.. ಒತ್ತಾಯಕ್ಕಾಗಿ ಯಾರನ್ನೂ ಸ್ವೀಕರಿಸಬೇಕಿಲ್ಲ. ಒಟ್ಟಿನಲ್ಲಿ ಮದುವೆ ಅನ್ನೋ ಜೀವನದ ಟರ್ನಿಂಗ್ ಪಾಯಿಂಟ್ನಲ್ಲಿ ನೀವಿದ್ದು ಇಂತಹ ಸಂದರ್ಭವನ್ನು ಎದುರಿಸೋ ನಿರೀಕ್ಷೆಯಲ್ಲಿದ್ರೆ.. ಈ ಟಿಪ್ಸ್ಗಳನ್ನು ಮರೀಬೇಡಿ..ಯಾಕಂದ್ರೆ ಮೊದಲ ನೋಟವೇ ಯಾವಾಗಲೂ ಅತ್ಯತ್ತುಮ ನೋಟ.



Click it and Unblock the Notifications