Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ತಲೆ ಕೂದಲಿನ ಕುರಿತ ಒಂದಿಷ್ಟು ಇಂಟರೆಸ್ಟಿಂಗ್ ಸಂಗತಿ
ಇತ್ತೀಚಿನ ದಿನಗಳಲ್ಲಿ ಕೇಶ ಸೌಂದರ್ಯ ನಿಜಕ್ಕೂ ಪ್ರತಿಯೊಬ್ಬರ ನೈಸರ್ಗಿಕ ಆಭರಣವೆನಿಸಿದೆ. ಕೂದಲು ನಮ್ಮ ದೇಹದ ಬಹು ಮುಖ್ಯ ಅಂಗಗಳಲ್ಲೊಂದಾದ್ದು, ಅದನ್ನು ಕಳೆದುಕೊಳ್ಳಲು ಯಾರೊಬ್ಬರೂ ಇಚ್ಛಿಸುವುದಿಲ್ಲ. ಕೆಲವು ಕೂದಲೆಳೆಗಳು ಉದುರಿದರೂ ಸಹ ಜನರು ಹೆಚ್ಚು ಚಿಂತಿಸುವ ಕಾಲವಿದು. ಕೇಶದ ಅಂದವನ್ನು ಹೆಚ್ಚಿಸಲು ನಾವು ಸಾಕಷ್ಟು ಹಣ ಮತ್ತು ಸಮಯವನ್ನು ವ್ಯಯಿಸುತ್ತಿದ್ದೇವೆ. ಈ ಲೇಖನದಲ್ಲಿ ನೀಡಿರುವ ವಿಶಿಷ್ಟ ಸಂಗತಿಗಳು ನಿಮ್ಮ ಕೂದಲಿನ ಸಮಸ್ಯೆಯನ್ನು ಪರಿಹಾರ ಮಾಡುವಲ್ಲಿ ಸಹಕಾರಿಯಾಗಲಿದ್ದು, ಭಯಪಡದೇ ನಿಶ್ಚಿಂತರಾಗಿರಿ.
ಒಂದು ಕೂದಲೆಳೆಯಲ್ಲಿ ಇಷ್ಟೆಲ್ಲಾ ಶಕ್ತಿ ಅಡಗಿದೆಯೇ ಎಂಬ ಮಾಹಿತಿಯನ್ನು ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು..!ಹೌದು, ಅದರ ಆಯಸ್ಸು ಸುಮಾರು 5 ರಿಂದ 7 ವರ್ಷಗಳ ಅವಧಿಗಿಂತ ಹೆಚ್ಚಿದ್ದು, ಅದು ಅಷ್ಟು ಸುಲಭವಾಗಿ ತುಂಡಾಗುವುದಿಲ್ಲ. ನಮ್ಮ ಅಂಗೈಯ ಭಾಗ, ಪಾದ, ಕಣ್ಣುರೆಪ್ಪೆಯ ಭಾಗ, ತುಟಿಗಳು ಮತ್ತು ಕೆಲವು ಒಳಚರ್ಮದ ಭಾಗಗಳನ್ನು ಹೊರತುಪಡಿಸಿ ದೇಹದ ಎಲ್ಲ ಭಾಗಗಳಲ್ಲೂ ಕೇಶ ಬೆಳವಣಿಗೆಯಾಗುತ್ತದೆ. ನಾವು ತೋರುವ ಆರೈಕೆಯ ಮೇಲೆ ಅದರ ಬೆಳವಣಿಗೆ ಅವಲಂಬಿತವಾಗಿರುತ್ತದೆ.
ಕೂದಲು ಬೇಗನೆ ಉದುರುವಿಕೆ ಮತ್ತು ಹಾಳಾಗುವುದಕ್ಕೆ ಮುಖ್ಯ ಕಾರಣವೆಂದರೆ ರಾಸಾಯನಿಕ ಪದ್ಧತಿಯ ಬಳಕೆ, ತಾಪ ನೀಡುವಿಕೆ ಮತ್ತು ಅಸಮರ್ಪಕ ಆರೈಕೆ. ಈ ಬಿಡುವಿಲ್ಲದ ವೇಗದ ಬದುಕಿನಲ್ಲಿ ಕೇಶ ಸೌಂದರ್ಯದ ಬಗ್ಗೆ ಹೆಚ್ಚು ಗಮನಹರಿಸಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೂದಲಿನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಆಸಕ್ತಿಕರ ಸಂಗತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ವಿವರ ತಿಳಿಯಲು ಮುಂದೆ ಓದಿ..

ಕೂದಲಿನ ಬೆಳವಣಿಗೆಯ ಆಯಸ್ಸು
ನಿಮ್ಮ ಕೂದಲು ಪ್ರತಿ ವರ್ಷ ಸುಮಾರು 6 ಇಂಚು ಬೆಳೆಯುತ್ತದೆ ಅಂದರೆ ಪ್ರತಿ ದಿನ 0.33ಮಿಮೀ.ನಷ್ಟು. ಆದರೆ ನೀವು ಬಳಸುವ ರಾಸಾಯನಿಕ ಮತ್ತು ತಾಪಗೊಳಿಸುವ ಉಪಕರಣಗಳಿಂದ ಕೇಶದ ಬೆಳವಣೆಗೆಯು ನಿಧಾನಗೊಳ್ಳುತ್ತದೆ. ಇದು ನಿಜಕ್ಕೂ ಆಸಕ್ತಿಕರ ಸಂಗತಿ.

ಸುಮಾರು 100 ಕೂದಲೆಳೆಗಳನ್ನು ಪ್ರತಿದಿನ ಕಳೆದುಕೊಳ್ಳುವಿರೇ?
ನಿಮ್ಮ ಬಾಚಣಿಗೆಯಲ್ಲಿ ಕೆಲವು ಕೂದಲು ಇರುವುದನ್ನು ಗಮನಿಸಿದರೆ ಚಿಂತಿಸದಿರಿ, ಇದು ಸ್ವಾಭಾವಿಕ ಪ್ರಕ್ರಿಯೆ. ಹೊಸ ಕೂದಲು ಬೆಳೆಯಲು ಆರಂಭಿಸಿದಾಗ ಅದೇ ಜಾಗದಲ್ಲಿ ಹಳೆಯ ಕೂದಲುಗಳು ತಾನಾಗೇ ಉದುರುತ್ತವೆ. ಇದರಿಂದ ಗಾಬರಿ ಪಡುವ ಅವಶ್ಯಕತೆಯಿಲ್ಲ.

ನಮ್ಮ ಕೂದಲು ಎಂತಹ ಭಾರವನ್ನಾದರೂ ತಡೆದುಕೊಳ್ಳುತ್ತದೆ!
ನಮ್ಮ ಒಂದು ಕೂದಲೆಳೆ ಸುಮಾರು 100 ಗ್ರಾಂನಷ್ಟು ಭಾರವನ್ನು ತಡೆದುಕೊಳ್ಳುತ್ತದೆ. ನಮ್ಮ ಒಟ್ಟಾರೆ ಕೇಶಕ್ಕೆ ಸುಮಾರು ಎರಡು ಆನೆಯ ಭಾರವನ್ನು ತಡೆದುಕೊಳ್ಳುವ ಶಕ್ತಿಯಿದೆ. ಇದು ನಿಜಕ್ಕೂ ಅದ್ಭುತ, ಆದರೆ ಇದಕ್ಕೆ ನಮ್ಮ ನೆತ್ತಿಯ ಚರ್ಮದ ಭಾಗ ಅವಕಾಶ ನೀಡುವುದಿಲ್ಲ.

ಒಂದು ಕೂದಲೆಳೆಯ ಆಯಸ್ಸೆಷ್ಟು ಗೊತ್ತೇ?
ನಾವು ಕೂದಲನ್ನು ಸರಿಯಾದ ರೀತಿಯಲ್ಲಿ ಆರೈಕೆ ಮಾಡಿದರೆ, ಸುಮಾರು 4 ರಿಂದ 7 ವರ್ಷದ ಅವಧಿಯವರೆಗೆ ಅದರ ಆಯಸ್ಸು ಇರುತ್ತದೆ. ಅದು ತಾನಾಗೇ ಉದುರಿದಾಗ ಹೆಚ್ಚು ಚಿಂತಿಸದಿರಿ, ಏಕೆಂದರೆ ಅದರ ಆಯಸ್ಸು ಪೂರ್ಣವಾಗಿರುತ್ತದೆ ಅಷ್ಟೆ.

ಬೇಸಿಗೆಯಲ್ಲಿ ನಿಮ್ಮ ಕೇಶವು ಹೆಚ್ಚು ಬೆಳವಣಿಗೆಯಾಗುತ್ತದೆ
ಬೇಸಿಗೆಯಲ್ಲಿ ಕೂದಲ ಬೆಳವಣಿಗೆ ಹೆಚ್ಚಿದ್ದು, ಬೇಸಿಗೆಯ ತಾಪಕ್ಕೆ ಕೇಶವು ಹೆಚ್ಚು ಬೆಳವಣಿಗೆಯಾಗುತ್ತದೆ. ನಿಮ್ಮ ಕೂದಲು ಇನ್ನೂ ಬೆಳೆಯಬೇಕೆಂದರೆ ಬಿಸಿಲಿಗೆ ಒಡ್ಡಿ ಮತ್ತು ಚಳಿಗಾಲದಲ್ಲಿ ತಾಪ ಹೆಚ್ಚಿಸುವ ಸಾಧನವನ್ನು ಉಪಯೋಗಿಸಿ.

ಕೂದಲು ಹಿಗ್ಗುತ್ತದೆ
ಇದೊಂದು ಅಚ್ಚರಿಯ ಸಂಗತಿ. ಹೌದು, ಪ್ರತಿ ಕೂದಲಿಗೆ ಹಿಗ್ಗುವ ಗುಣವಿದೆ. ಒಣ ಕೂದಲಿಗಿಂತ ಒದ್ದೆಯಾದ ಕೂದಲು ಹೆಚ್ಚು ಹಿಗ್ಗಲಿದ್ದು, ಶೇಖಡಾ 30ರಷ್ಟು ಅನಾಯಾಸವಾಗಿ ಹಿಗ್ಗುತ್ತದೆ. ಆದರೆ ಒದ್ದೆ ಕೂದಲು ಮಾತ್ರ ಒಣ ಕೂದಲಿಗಿಂತ ಅಶಕ್ತವಾಗಿದ್ದು ಸುಲಭವಾಗಿ ತುಂಡಾಗುತ್ತದೆ.



Click it and Unblock the Notifications