Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲುದುರುವ ಸಮಸ್ಯೆಗೆ ಧೂಮಪಾನ ಕೂಡ ಮೂಲ ಕಾರಣ!
ಸ್ನೇಹಿತರೊಂದಿಗೆ ಮೋಜಿಗಾಗಿ ಆರಂಭವಾಗುವಂತಹ ಧೂಮಪಾನದ ಅಭ್ಯಾಸ ಮುಂದೊಂದು ದಿನ ತನ್ನ ಜೀವಕ್ಕೆ ಅಪಾಯವನ್ನೊಡ್ಡಬಲ್ಲದು ಎಂದು ಯಾವ ಧೂಮಪಾನಿಯೂ ಯೋಚಿಸುವುದಿಲ್ಲ. ಸಿಗರೇಟಿಗೆ ಬೆಂಕಿ ಹಚ್ಚಿ ಆಗಸದತ್ತ ಹೊಗೆ ಹಾರಿಸುವುದೇ ಕೆಲವರಿಗೆ ಸಂತೋಷ ಕೊಡುತ್ತದೆ. ಕೆಲವರು ಒತ್ತಡ ಕಡಿಮೆ ಮಾಡಿಕೊಳ್ಳಲು ಸಿಗರೇಟ್ ಮೊರೆ ಹೋಗುವುದಿದೆ. ಆದರೆ ಒಮ್ಮೆ ಈ ಕೆಟ್ಟ ಅಭ್ಯಾಸದ ಚಟಕ್ಕೆ ಬಿದ್ದರೆ ಅದರಿಂದ ಹೊರಬರುವುದು ತುಂಬಾ ಕಷ್ಟ.
ಧೂಮಪಾನದಿಂದ ಆ ಕ್ಷಣ ಸ್ವಲ್ಪ ನಿರಾಳವೆನಿಸಿದರೂ ಅದರಿಂದ ಯಾವುದೇ ಧನಾತ್ಮಕ ಲಾಭಗಳಿಲ್ಲ. ಧೂಮಪಾನದಿಂದಾಗಿ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವು ಯೋಚಿಸಿರಲಿಕ್ಕೂ ಸಾಧ್ಯವಿಲ್ಲ. ಧೂಮಪಾನದಿಂದ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಬರುತ್ತದೆ ಎಂದು ನೀವು ಈಗಾಗಲೇ ತಿಳಿದಿರಬಹುದು. ಆದರೆ ಧೂಮಪಾನವು ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯಾ? ನಿಮ್ಮ ತುಟಿಗಳು ಕಪ್ಪು ಬಣ್ಣಕ್ಕೆ ತಿರುಗುವುದು ಮತ್ತು ಕೈಬೆರಳುಗಳು ಅಸಹನೀಯವಾಗಿ ಕಾಣಿಸುತ್ತದೆ.

ಆದರೆ ಧೂಮಪಾನದಿಂದ ಉಂಟಾಗುವಂತಹ ಕೆಲವೊಂದು ಇತರ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಲಿಕ್ಕಿಲ್ಲ. ತಲೆ ಕೂದಲು ಉದುರುವ ಸಮಸ್ಯೆಯಿಂದ ಚಿಂತಿತರಾಗಿದ್ದೀರಾ? ಧೂಮಪಾನ ಇದರ ಹಿಂದಿರುವ ಶತ್ರುವೆಂದು ನಿಮಗೆ ತಿಳಿದಿದೆಯಾ? ಹೌದು, ಅತಿಯಾದ ಧೂಮಪಾನದಿಂದ ನಿಮ್ಮ ಕೂದಲು ಸೊರಗಿ ಉದುರುವಿಕೆಗೆ ಕಾರಣವಾಗಬಹುದು. ಕೂದಲಿಗೆ ಇತರ ಕೆಲವು ವಿಧಾನಗಳಿಂದಲೂ ಧೂಮಪಾನವು ಹಾನಿಯನ್ನುಂಟು ಮಾಡುತ್ತದೆ.
ಧೂಮಪಾನವು ಕೂದಲಿಗೆ ಹೇಗೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದೆಯಾ? ಧೂಮಪಾನದಿಂದ ಉಂಟಾಗುವ ಈ ಸಮಸ್ಯೆ ಬಗ್ಗೆ ನಿಮಗೆ ಅರಿವಿಲ್ಲದೆ ಇರಬಹುದು. ಧೂಮಪಾನವು ಯಾವ ರೀತಿಯಲ್ಲಿ ಕೂದಲಿಗೆ ಹಾನಿ ಉಂಟು ಮಾಡುತ್ತದೆ ಎನ್ನುವುದನ್ನು ತಿಳಿಯಲು ಮುಂದೆ ಓದುತ್ತಾ ಹೋಗಿ....
ಕೂದಲು ವಾಸನೆ
ಧೂಮಪಾನವು ನಿಮ್ಮ ಕೂದಲಿಗೆ ಯಾವ ರೀತಿಯಲ್ಲಿ ಹಾನಿಯುಂಟು ಮಾಡುತ್ತದೆ ಎಂದು ನಿಮಗೆ ಸ್ವಲ್ಪವೂ ತಿಳಿದಿರಲಿಕ್ಕಿಲ್ಲ. ಮೊದಲನೇಯದಾಗಿ ಇದು ಕೂದಲಿನಲ್ಲಿ ಒಂದು ಸುಟ್ಟ ವಾಸನೆಯನ್ನು ಉಂಟು ಮಾಡುತ್ತದೆ. ಇದನ್ನು ಶಾಂಪೂ ಅಥವಾ ಕಂಡೀಷನರ್ ಹಾಕಿ ತೆಗೆಯುವುದು ಕಷ್ಟ. ಮುಂದಿನ ಸಲ ಸಿಗರೇಟಿಗೆ ಬೆಂಕಿ ಹಚ್ಚುವಾಗ ಇದನ್ನೊಮ್ಮೆ ನೆನಪಿಸಿಕೊಳ್ಳಿ.
ಕೂದಲು ಸೊರಗಿ, ಬಣ್ಣವಿಲ್ಲದಂತೆ ಕಾಣಿಸುವುದು
ಅತಿಯಾಗಿ ಧೂಮಪಾನ ಮಾಡುವುದರಿಂದ ಕೂದಲಿಗೆ ರಕ್ತ ಪರಿಚಲನೆ ನಿಂತು ಹೋಗುತ್ತದೆ ಮತ್ತು ತಲೆಬುರುಡೆಗೆ ಆಮ್ಲಜನಕ ಹೋಗುವುದು ತಡೆಯುತ್ತದೆ. ಇದರಿಂದಾಗಿ ನಿಮ್ಮ ತಲೆಕೂದಲು ಮತ್ತು ತಲೆಬುರುಡೆಗೆ ಸರಿಯಾದ ಪೌಷ್ಠಿಕಾಂಶಗಳು ಸಿಗದೆ ಕೂದಲು ಜೀವವಿಲ್ಲದಂತಾಗುತ್ತದೆ.
ಬೋಳು ತಲೆ
ನಿಮ್ಮ ಕೂದಲು ತೆಳುವಾಗಿ ಅಂತಿಮವಾಗಿ ತಲೆ ಬೋಳಾಗಲು ಮೊದಲ ಕಾರಣವೆಂದರೆ ಅದು ಧೂಮಪಾನ. ಧೂಮಪಾನದಿಂದಾಗಿ ನಿಮ್ಮ ಕೂದಲಿನ ಬುಡಕ್ಕೆ ವಿಟಮಿನ್ ಮತ್ತು ಖನಿಜಾಂಶಗಳು ತಲುಪದೇ ಇರುವುದರಿಂದ ಕೂದಲು ಅಪೌಷ್ಠಿಕತೆಯಿಂದ ಕೊರಗುತ್ತದೆ. ಧೂಮಪಾನವು ಕೂದಲಿನ ಕೋಶಗಳಿಗೆ ಹಾನಿಯುಂಟು ಮಾಡಿ ಕೂದಲಿನ ಬೆಳವಣಿಗೆಯನ್ನು ತಡೆಯುತ್ತದೆ.
ರೋಗಗಳನ್ನು ಉಂಟು ಮಾಡುತ್ತದೆ
ಧೂಮಪಾನದಿಂದಾಗಿ ನಿಮ್ಮ ಆರೋಗ್ಯದ ಮೇಲೆ ಹಲವಾರು ರೀತಿಯ ಋಣಾತ್ಮಕ ಪರಿಣಾಮ ಉಂಟಾಗುವುದಲ್ಲದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಸಿಯುವಂತೆ ಮಾಡುತ್ತದೆ. ಇದರಿಂದ ಹಲವಾರು ರೀತಿಯ ರೋಗಗಳು ಬರುವುದು. ಈ ಎಲ್ಲಾ ರೋಗಗಳು ಅತಿಯಾದ ಕೂದಲು ಉದುರುವಿಕೆಗೆ ಕಾರಣವಾಗುತ್ತದ ಮತ್ತು ಕೂದಲಿನ ಇತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ.



Click it and Unblock the Notifications



