ಕೂದಲಿನ ಸಕಲ ಸಮಸ್ಯೆಗೂ ಪರಿಣಾಮಕಾರಿ ಮನೆಮದ್ದು

By Manu

ಇತ್ತೀಚಿನ ದಿನಗಳಲ್ಲಿ ನಗರದ ಧೂಳು, ವಾತಾವರಣದಿಂದಾಗಿ ಆರೋಗ್ಯದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಕೂದಲುದುರುವಿಕೆಯಂತೂ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ! ವಯಸ್ಸು ಇಪ್ಪತ್ತೈದು ಎಂದರೆ ಸಾಕು, ಪುರುಷ ಹಾಗೂ ಮಹಿಳೆಯರಲ್ಲಿ ಸೊಂಪಾಗಿ ಬೆಳೆಯಬೇಕಿದ್ದ ಕೂದಲು ಸಂಕುಚಿತವಾಗಿ ಉದುರಲು ಪ್ರಾರಂಭವಾಗುತ್ತದೆ!

ಹಿಂದಿನ ದಿನಗಳಲ್ಲಿ ವಯಸ್ಸಾಗುತ್ತಿದ್ದಂತೆ ಕೂದಲು ಉದುರುತ್ತಿತ್ತು. ಆದರೆ ಇಂದು ಹಾಗಲ್ಲ, ಹದಿಹರೆಯದವರ ಕೂದಲು ಉದುರಲು ಆರಂಭವಾಗಿದ್ದು, ಇದು ದಿನೇ ದಿನೇ ಹೆಚ್ಚುತ್ತಿದೆ. ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಮಾಲಿನ್ಯವನ್ನು ಇದಕ್ಕೆ ದೂಷಿಸಬಹುದು. ಈ ಕಾರಣಗಳು ಮಾತ್ರವಲ್ಲದೆ ಕ್ರಮಬದ್ಧವಲ್ಲದ ಆಹಾರಕ್ರಮ, ಕಲವು ಔಷಧಿಗಳ ಅಡ್ಡ ಪರಿಣಾಮ, ವಿಟಮಿನ್ ಮತ್ತು ಖನಿಜಾಂಶ ಕೊರತೆಯಿಂದ ಕೂಡ ಕೂದಲು ಉದುರುತ್ತದೆ. ಹಾಗಾದರೆ ಇಂತಹ ಸಮಸ್ಯೆಗಳಿಗೆ ಪರಿಹಾರಗಳಿಲ್ಲವೇ...? ಖಂಡಿತವಾಗಿಯೂ ಇದೆ, ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ಕೆಲವೊಂದು ನೈಸರ್ಗಿಕ ಮನೆಮದ್ದನ್ನು ಸೂಚಿಸಿದ್ದು ಅವು ಕೂದಲಿಗೆ ಸ೦ಬ೦ಧಿಸಿದ, ಹತ್ತಾರು ಬಗೆಯ ಸಮಸ್ಯೆಗಳಿಗೆ ಅತೀ ಸುಲಭವಾಗಿ ಹಾಗೂ ಅತ್ಯ೦ತ ತ್ವರಿತಗತಿಯಲ್ಲಿ ಪರಿಹರಿಸಬಲ್ಲ ಶಕ್ತಿ ತನ್ನಲ್ಲಿ ಅಡಗಿಸಿಕೊಂಡಿದೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ..

How to prevent hair loss naturally at home

ಹಾಗಲಕಾಯಿ
ಹಾಗಲಕಾಯಿಯೊ೦ದನ್ನು ಹಾಗೆಯೇ ಸುಮ್ಮನೆ ಕತ್ತರಿಸಿ, ತದನಂತರ ಹೋಳುಗಳು ಕ೦ದುಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕರಿಯಿರಿ. ಇದಾದ ಬಳಿಕ, ಆ ಹೋಳುಗಳನ್ನು ಹೊರತೆಗೆದು, ಅವುಗಳ ಸಾರವನ್ನು ಹಿ೦ಡಿ ಪಡೆದು, ಅದನ್ನು ನೆತ್ತಿಯ ಮೇಲೆ ಹಚ್ಚಿಕೊಳ್ಳಬೇಕು. ಅದನ್ನು ನೆತ್ತಿಯ ಮೇಲೆ ಮೂವತ್ತು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ನೆತ್ತಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪುನರಾವರ್ತಿಸಿರಿ. ಹೀಗೆ ಮಾಡುವುದರಿ೦ದ ನಿಮ್ಮ ಕೇಶರಾಶಿಯು ತನ್ನ ಬಣ್ಣ ಹಾಗೂ ವಿನ್ಯಾಸವನ್ನು ಹಿ೦ಪಡೆದುಕೊಳ್ಳುವುದಷ್ಟೇ ಅಲ್ಲ, ಜೊತೆಗೆ ನಿಮ್ಮ ಕೇಶರಾಶಿಯು ಸಾಕಷ್ಟು ಕೋಮಲವಾಗುತ್ತದೆ. ಕೂದಲುದುರುವ ಸಮಸ್ಯೆಗೆ ಒಂದಿಷ್ಟು ಸರಳ ಟಿಪ್ಸ್

ಸೀಗೆಕಾಯಿಯ ಕೋಡು

ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜ (soap nut seeds) ಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಟ್ಟು. ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಟ್ಟಿಕೊಳ್ಳಿ. ತದನಂತರ ಪ್ರತಿದಿನ ತಲೆ ಕೂದಲಿಗೆ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಿಕೊಳ್ಳಿ. ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ, ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.

ಮೂಸ೦ಬಿ ಹಣ್ಣಿನ ಹೇರ್ ಪ್ಯಾಕ್
ಮೂಸ೦ಬಿ ಹಣ್ಣಿನ ಹೇರ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಲು, ನೀವು ಹಣ್ಣಿನಿ೦ದ ರಸವನ್ನು ಹಿ೦ಡಿ ತೆಗೆದು ಅದನ್ನು ಮೊಸರು ಅಥವಾ ಕೆನೆಯೊ೦ದಿಗೆ ಮಿಶ್ರಗೊಳಿಸಿ, ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಬೇಕು. ಮೂಸ೦ಬಿ ಹಣ್ಣಿನ ರಸವು ನಿಮ್ಮ ತಲೆಗೂದಲು ಮತ್ತಷ್ಟು ನಯವಾಗಿರಲು ಸಹಕರಿಸುತ್ತದೆ. ಮಾತ್ರವಲ್ಲದೇ, ನಿಮ್ಮ ಕೇಶರಾಶಿಗೆ ಸಹಜವಾದ ಕಾ೦ತಿಯನ್ನೂ ಕೂಡ ನೀಡುತ್ತದೆ. ನೀವು ಈ ಹೇರ್ ಪ್ಯಾಕ್ ಅನ್ನು ನಿಮ್ಮ ತಲೆಗೆ ಹಚ್ಚಿಕೊ೦ಡು ಅದನ್ನು ಅರ್ಧ ಘ೦ಟೆಯ ಕಾಲ ಹಾಗೆಯೇ ಬಿಟ್ಟುಬಿಡಿ. ಅನ೦ತರ ನಿಮ್ಮ ಕೂದಲನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ವಾರಕ್ಕೊ೦ದು ಬಾರಿ ಪುನರಾವರ್ತಿಸಿರಿ. ಈ ಹಣ್ಣಿನ ಪ್ಯಾಕ್‌ನ ನಿಯಮಿತವಾದ ಬಳಕೆಯು ಉತ್ತಮ ಫಲಿತಾ೦ಶಗಳನ್ನು ನೀಡುತ್ತದೆ. ಕೂದಲುದುರುವ ಸಮಸ್ಯೆಯೇ? ಒಮ್ಮೆ ಮನೆಮದ್ದು ಪ್ರಯತ್ನಿಸಿ

ಕರಿಬೇವಿನ ಎಲೆ
ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಜಜ್ಜಿ ತೆಗೆದ ರಸವನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಶಾ೦ಪೂವಿನಿ೦ದ ಇದನ್ನು ತೊಳೆದು ಸ್ವಚ್ಛಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಬೇವಿನ ಎಣ್ಣೆ
ಬೇವಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಹಲವು ನೈಸರ್ಗಿಕ ರಾಸಾಯನಿಕಗಳಿದ್ದು ಕೂದಲಿನ ಸಮೃದ್ಧ ಪೋಷಣೆಗೆ ನೆರವಾಗುವುದರ ಜೊತೆಗೆ ಸೀರು ಮೊದಲಾದ ಇತರ ತೊಂದರೆಗಳಿಂದಲೂ ಮುಕ್ತಿ ದೊರಕುತ್ತದೆ. ನೀವು ಮಾಡಬೇಕಾದದು ಇಷ್ಟೇ
*ಮೊದಲು ಬೇವಿನ ಎಣ್ಣೆಯನ್ನು ಸ್ವಲ್ಪ ಉಗುರು ಬೆಚ್ಚಗೆ ಮಾಡಿ


* ಈ ಎಣ್ಣೆಯಿಂದ ನಿಮ್ಮ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ
* ಕನಿಷ್ಠ ಒಂದು ಗಂಟೆ ಅಥವಾ ರಾತ್ರಿ ಪೂರ್ತಿ ಇದನ್ನು ಹಾಗೆಯೇ ಬಿಡಿ
*ನಂತರ ನಿಮ್ಮ ಕೂದಲನ್ನು ಶಾಂಪೂವಿನಿಂದ ತೊಳೆಯಿರಿ
* ಇದನ್ನು ವಾರಕ್ಕೊಮ್ಮೆ ಮಾಡಿ, ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ

ಕೊಬ್ಬರಿ ಎಣ್ಣೆ
ಚರ್ಮದ ಆರೈಕೆಗೆ ಅತ್ಯುತ್ತಮ ಎಂದು ವರ್ಷಗಳಿಂದ ಸಾಬೀತುಪಡಿಸಿರುವ ಕೊಬ್ಬರಿ ಎಣ್ಣೆ ಕೂದಲಿನ ಸಮಸ್ಯೆಗೂ ನೆರವಿಗೆ ಬರಬಲ್ಲುದು. ಕೊಬ್ಬರಿ ಎಣ್ಣೆ ಮತ್ತು ಲಿಂಬೆ ಹಣ್ಣಿನ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಕೂದಲ ಬುಡದಲ್ಲಿ ನಯವಾಗಿ ಮಸಾಜ್ ಮಾಡುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ.

ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು
ಕಡ್ಲೆಹಿಟ್ಟು ಮತ್ತು ಬಾಳೆಹಣ್ಣು ಒಂದು ವೇಳೆ ಕೂದಲು ಗಿಡ್ಡವಾಗಿದ್ದು ಇದು ತುಂಬಾ ಉದ್ದವಾಗಿ ಬೆಳೆಯುವಂತೆ ಮಾಡಬೇಕಾದರೆ ಕಡ್ಲೆಹಿಟ್ಟು ಮತ್ತು ಬಾಳೆಹಣ್ಣಿನ ಸಂಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಸಂಯೋಜನೆಯಲ್ಲಿ ಕೂದಲಿಗೆ ಅಗತ್ಯವಿರುವ ಪ್ರೋಟೀನು ಮತ್ತು ವಿಟಮಿನ್‌ಗಳಿದ್ದು ಕೂದಲಿಗೆ ಒದಗಿಸಲು ಸಮರ್ಥವಾಗಿವೆ.
ಇದಕ್ಕಾಗಿ ಸಮಪ್ರಮಾಣದಲ್ಲಿ ಕಡ್ಲೆಹಿಟ್ಟು ಮತ್ತು ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿಕೊಂಡು ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಬಾಳೆಹಣ್ಣಿನ ವಿಟಮಿನ್ ಮತು ಕಡ್ಲೆಹಿಟ್ಟಿನ ಪ್ರೋಟೀನ್ ಜೋಡಿ ಕೂದಲಿಗೆ ಪೋಷಣೆ ಮತ್ತು ದೃಢತೆಗಳನ್ನು ನೀಡುವ ಮೂಲಕ ಸೊಂಪಾದ ಮತ್ತು ದೃಢವಾದ ಕೂದಲನ್ನು ಪಡೆಯಲು ಸಹಕರಿಸುತ್ತವೆ.

Story first published: Thursday, November 5, 2015, 23:25 [IST]
X
Desktop Bottom Promotion