Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಕೂದಲನ್ನು ಲಕಲಕ ಹೊಳೆಯುವಂತೆ ಮಾಡಲು 5 ಟಿಪ್ಸ್
ಕೂದಲಿನ ಸಮಸ್ಯೆ ಎಲ್ಲಾ ವಯಸ್ಸಿನವರಿಗೂ ಕಾಡುವಂಥದ್ದೇ. ಘನವಾದ ಮಿರಮಿರನೇ ಹೊಳೆಯುವ ಕಪ್ಪು ಕೂದಲಿನ ಒಡತಿ ನಾವಾಗಬೇಕು ಎಂಬ ಬಯಕೆ ಎಲ್ಲಾ ಹೆಂಗಳೆಯರದಾಗಿರುತ್ತದೆ. ಸಮಯದ ಅಭಾವ ಇಲ್ಲವೇ ನಗರದ ಪ್ರದೂಷಿತ ವಾತಾವರಣ ಸುಂದರ ಕೂದಲಿಗೆ ಶತ್ರುವಾಗಿ ಪರಿಣಮಿಸಿ ಅವುಗಳಿಗೆ ಧಕ್ಕೆಯನ್ನುಂಟು ಮಾಡುತ್ತವೆ. ನಾನು ಸಣ್ಣವಳಿದ್ದಾಗ ಸೊಂಟದವರೆಗಿನ ಕಪ್ಪು ದಪ್ಪನೆಯ ಕೂದಲಿನ ಒಡತಿ ನಾನಾಗಿದ್ದೆ ಆದರೆ ಈಗ ನಗರದ ಜೀವನ ಧೂಳಿನ ವಾತಾವರಣದಿಂದ ಕೂದಲು ಉದುರಿ ತೆಳ್ಳಗಾಗಿದೆ ಎಂಬುದಾಗಿ ಹೆಚ್ಚಿನ ಮಹಿಳೆಯರು ಅಲವತ್ತುಕೊಳ್ಳುತ್ತಿರುತ್ತಾರೆ. ಸ್ವಲ್ಪ ಕೇಳಿ, ಕೂದಲು ಉದುರುತ್ತಿದೆ ಎಂದು ಚಿಂತಿಸಬೇಡಿ
ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ನೀವೇ ಕಂಡುಕೊಳ್ಳಬೇಕು ಎಂಬಂತೆ ನಿಮ್ಮ ತಲೆಗೂದಲಿನ ಸಮಸ್ಯೆಗೆ ಪರಿಹಾರ ಕೂಡ ನಿಮ್ಮಲ್ಲೇ ಇದೆ. ನೀವು ಕೊಂಚ ಶ್ರಮ ಮತ್ತು ಸಮಯವನ್ನು ಕೇಶದ ಆರೈಕೆಗಾಗಿ ವ್ಯಯಿಸಿದಿರಿ ಎಂದಾದಲ್ಲಿ ಲಕಲಕನೇ ಹೊಳೆಯುವ ಮಿರಮಿರ ಮಿಂಚುವ ದಪ್ಪನೆಯ ಕೂದಲನ್ನು ನಿಮಗೂ ಹೊಂದಬಹುದು. ಆಧುನಿಕ ವಿಧಾನಗಳಿಗೆ ಅಂತ್ಯ ಹಾಡಿ ನೈಸರ್ಗಿಕ ವಿಧಾನದಲ್ಲಿ ಕೂದಲಿನ ಪರಿಪಾಲನೆಯನ್ನು ನೀವು ಮಾಡಿದಲ್ಲಿ ಫಲ ಖಂಡಿತ ಇರುತ್ತದೆ. ಬನ್ನಿ ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ...

ಹುಳಿ ಮೊಸರು ಹಾಗೂ ಮೊಟ್ಟೆಯ ಬಿಳಿಭಾಗ
ಹುಳಿ ಮೊಸರಿಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ, ಅರ್ಧ ತಾಸಿನ ನಂತರ ಉಗುರು ಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಕೂದಲು ಲಕಲಕನೇ ಹೊಳೆಯುತ್ತಿರುತ್ತದೆ.

ಮೊಟ್ಟೆ, ಕಡ್ಲೆಹಿಟ್ಟು+ಆಲಿವ್ ಎಣ್ಣೆ
ಮೊಟ್ಟೆ ಹಾಗೂ ಕಡ್ಲೆಹಿಟ್ಟುಗಳೆರಡೂ ಪ್ರೋಟೀನ್‌ನ ಆಗರಗಳಾಗಿದ್ದು, ನಿಮ್ಮ ಕೇಶರಾಶಿಗೆ ಬಲವನ್ನು ನೀಡುವುದಕ್ಕಾಗಿ ಮಾತ್ರವಲ್ಲದೇ ನೈಸರ್ಗಿಕವಾದ ಕ೦ಡಿಶನಿ೦ಗ್ ಅನ್ನೂ ಸಹ ಒದಗಿಸುವುದಕ್ಕಾಗಿ ಈ ಎರಡು ಸಾಮಗ್ರಿಗಳು ಈ ಹೇರ್ ಪ್ಯಾಕ್ ನಲ್ಲಿ ಜೊತೆಗೂಡಿವೆ. ಒ೦ದು ಮೊಟ್ಟೆ, ಒ೦ದು ಟೇಬಲ್ ಚಮಚದಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆ - ಸಮರೂಪದಲ್ಲಿ ಕಾಣಿಸುವ೦ತಹ ಪ್ಯಾಕ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳುವುದಕ್ಕಾಗಿ ಈ ಮೂರನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಮಿಶ್ರಣವನ್ನು ಸಮಾನವಾಗಿ ಕೂದಲು ಹಾಗೂ ನೆತ್ತಿಯ ಭಾಗಕ್ಕೆ ಲೇಪಿಸಿಕೊ೦ಡ ಬಳಿಕ ಅದನ್ನು ಹಾಗೆಯೇ ಒಣಗಲು ಬಿಡಿರಿ. ತದನಂತರ ಸುಮಾರು ಅರ್ಧ ಗಂಟೆಯ ನಂತರ ಉಗುರು ಬೆಚ್ಚನೆಯ ನೀರಿನಿಂದ ಚೆನ್ನಾಗಿ ತೊಳೆಯರಿ.

ಲಿಂಬೆಹಣ್ಣಿನ ರಸ ಹಾಗೂ ತೆಂಗಿನ ಎಣ್ಣೆ
ಒಂದು ಚಮಚ ಲಿಂಬೆಹಣ್ಣಿನ ರಸಕ್ಕೆ 5 ಚಮಚ ತೆಂಗಿನ ಎಣ್ಣೆಯನ್ನು ಬೆರೆಸಿ ಮಿಶ್ರಣ ಮಾಡಿಕೊಂಡು, ನಿಮ್ಮ ಕೂದಲಿಗೆ ಹಚ್ಚಿ. - 20- 30 ನಿಮಿಷಗಳ ಕಾಲ ಬಿಡಿ. ನಂತರ ಒಂದು ಉತ್ತಮ ಶಾಂಪೂವನ್ನು ಹಾಕಿಕೊಂಡು, ಚೆನ್ನಾಗಿ ತಿಕ್ಕಿ ತೊಳೆಯಿರಿ. ಇದು ನಿಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡುವುದರ ಜೊತೆಗೆ, ತಲೆಹೊಟ್ಟಿನ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುತ್ತದೆ.

ಬೆಳ್ಳುಳ್ಳಿ-ಲಿಂಬೆ ಪೇಸ್ಟ್
ಎರಡು ಚಮಚದಷ್ಟು ಬೆಳ್ಳುಳ್ಳಿ ಪೇಸ್ಟ್‌ಗೆ ಒಂದು ಚಮಚ ಲಿಂಬೆರಸವನ್ನು ಬೆರೆಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ, 30 ರಿಂದ 40 ನಿಮಿಷಗಳಷ್ಟು ಕಾಲ ಬಿಡಿ. ನಂತರ ನೈಸರ್ಗಿಕ ಶಾಂಪೂ ಮತ್ತು ತಣ್ಣೀರನ್ನು ಬಳಸಿ, ಚೆನ್ನಾಗಿ ತೊಳೆಯಿರಿ. ಇದು ಕೂದಲಿನ ಸೌಂದರ್ಯವನ್ನು ಇಮ್ಮಡಿಗೊಳಿಸುವುದರ ಜೊತೆಗ ತಲೆಹೊಟ್ಟು ಹಾಗೂ ಕೂದಲುದುರುವ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡುತ್ತದೆ.

ಆಮ್ಲ ಹಾಗೂ ಬಿಸಿಎಣ್ಣೆ
ತಾಜಾ ಆಗಿರುವ ಆಮ್ಲಾ ಹಣ್ಣುಗಳನ್ನು ಬಿಸಿಲಿನಲ್ಲಿ ಒಣಗಿಸಿ. ಒಣಗಿದ ಆಮ್ಲಾ ಹಣ್ಣುಗಳನ್ನು ಪುಡಿ ಮಾಡಿಕೊಳ್ಳಿ. ತದನಂತರ ಒಂದು ಟೇಬಲ್ ಚಮಚ ಆಮ್ಲಾ ಪುಡಿಗೆ ಎರಡು ಟೇಬಲ್ ಚಮಚ ಬಿಸಿಯಾಗಿರುವ ತೆಂಗಿನ ಎಣ್ಣೆಯನ್ನು ಬೆರೆಸಿಕೊಂಡು, ಪ್ರತಿನಿತ್ಯ ನಿಮ್ಮ ಕೂದಲ ಬುಡಕ್ಕೆ ಲೇಪಿಸಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ. ಎರಡು ಗಂಟೆ ಬಿಟ್ಟು ನಂತರ ಮೈಲ್ಡ್ ಶಾಂಪೂವಿನಿಂದ ತೊಳೆಯಿರಿ.



Click it and Unblock the Notifications











