Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕೂದಲಿನ ಆರೈಕೆಗಾಗಿ ಇಗೋ ಬಂದಿದೆ ಬೇವಿನ ಬಾಚಣಿಗೆ!
ಬೇವಿನ ಅನುಕೂಲಗಳು ವಿಶೇಷವಾಗಿ ಚರ್ಮ ಮತ್ತು ಕೂದಲ ಆರೈಕೆಯಲ್ಲಿ ಬಹು ಜನಪ್ರಿಯವಾಗಿದೆ. ಹೇರ್‌ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ಈಗ ಪ್ಲಾಸ್ಟಿಕ್ ಬಾಚಣಿಗೆಗಳಿಗೆ ಆರೋಗ್ಯಕರ ಪರ್ಯಾಯವಾಗಿ ಪರಿಚಯಿಸುತ್ತಿದೆ ಬೇವಿನ ಮರದ ಬಾಚಣಿಗೆಗಳು. ಈ ಬಾಚಣಿಗೆಗಳು ವಿನ್ಯಾಸ ಹಾಗೂ ಬಾಚಣಿಗೆಗಳ ಸಮಗ್ರ ಪ್ಯಾಕ್‍ನ ರೀತಿಯಲ್ಲಿ ಬಹು ವಿಧಗಳಲ್ಲಿ ಲಭ್ಯ ಇವೆ.
ಬೇವಿನ ಮರವು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಅದನ್ನು ದಿನಾ ಉಪಯೋಗಿಸಿದರೆ ನಿಮ್ಮ ಕೂದಲು ಮತ್ತು ತಲೆಗೆ ವರ್ಗಾಯಿಸುತ್ತದೆ. ದೇಶದ ಅನೇಕ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ. ಕೆಲವು ಪ್ರಮುಖ ಅನುಕೂಲಗಳೆಂದರೆ:

⦁ತಲೆ ಕೂದಲ ಉದುರುವಿಕೆ ತಗ್ಗಿಸುತ್ತದೆ ಮತ್ತು ತಲೆಕೂದಲ ಬೆಳವಣಿಗೆ ವರ್ಧಿಸುತ್ತದೆ
⦁ಬಾಚಣಿಗೆಯ ಬ್ಯಾಕ್ಟೀರಿಯಾ ನಿರೋಧಕ ಮತ್ತು ರೋಗಾಣುಹರ ಗುಣಗಳಿಂದಾಗಿ ತಲೆಹೊಟ್ಟು ಮತ್ತು ಶಿರ ಸಂಬಂಧಿ ಕಾಯಿಲೆಗಳನ್ನು ತಗ್ಗಿಸುತ್ತದೆ
⦁ಪರೋಪಜೀವಿಗಳ ಸೋಂಕನ್ನು ಕನಿಷ್ಠಗೊಳಿಸುತ್ತದೆ
⦁ಮೊಂಡಾದ ಹಲ್ಲಿನ ಬಾಚಣಿಗೆಯನ್ನು ನಿಯಮಿತವಾಗಿ ಬಳಸುವುದರಿಂದ ತಲೆಬುರುಡೆಯನ್ನು ಚೆನ್ನಾಗಿ ಉದ್ದೀಪನಗೊಳಿಸಬಹುದು
⦁ಬಾಚಣಿಗೆಯ ಹಲ್ಲಿನ ಸರಂಧ್ರ ಗುಣದಿಂದಾಗಿ ನಿಮ್ಮ ಕೂದಲುದ್ದಕ್ಕೂ ಸಮವಾಗಿ ತೈಲ ವಿತರಣೆಯಾಗುತ್ತದೆ
ಬೇವಿನ ಬಾಚಣಿಗೆಯ ಬಿಡುಗಡೆ ಕುರಿತು ಮಾತನಾಡಿದ ಬನಿ ಆನಂದ್, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಹೇರ್‌ಲೈನ್ ಇಂಟರ್‌ನ್ಯಾಷನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್, "ಈ ಸಾವಯವ ಉತ್ಪನ್ನವು ನೈಸರ್ಗಿಕ ತಲೆಕೂದಲ ಆರೈಕೆಯನ್ನು ಒದಗಿಸುತ್ತದೆ. ಪ್ಲಾಸ್ಟಿಕ್, ಸಿಕ್ಕುಗಳನ್ನು ಬಿಡಿಸುವುದರ ಹೊರತಾಗಿ ನಿಮ್ಮ ಕೂದಲಿಗೆ ಬೇರೇನನ್ನೂ ಮಾಡುವುದಿಲ್ಲ.
ಈ ಉತ್ಪನ್ನವು ನಿಮ್ಮ ಕೂದಲಿನ ಪೋಷಣೆ ಹಾಗೂ ಅದರ ಬೆಳವಣಿಗೆ ವರ್ಧನೆಗೆ ನೆರವಾಗುತ್ತದೆ. ನೈಸರ್ಗಿಕ ಲುಕ್‍ನ ಈ ಸಲಕರಣೆಯು ನಿಮ್ಮ ಡ್ರೆಸಿಂಗ್ ಟೇಬಲ್‍ನ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಬೇರೆ ಹೇಳಬೇಕಿಲ್ಲ'' ಎಂದು ಹೇಳಿದರು. ಈ ಬೇವಿನ ಬಾಚಣಿಗೆ (ನೀಮ್ ಕೂಂಬ್) ನ ಬೆಲೆ 500 ರೂ. ನಿಂದ ಆರಂಭಗೊಳ್ಳುತ್ತದೆ.
ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಬಗ್ಗೆ
ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್, ಇದೊಂದು ಪುರುಷ ಹಾಗೂ ಮಹಿಳೆಯರಿಬ್ಬರ ಕೂದಲು ಚರ್ಮ ಮತ್ತು ಸೌಂದರ್ಯ ಕುರಿತ ವಿಷಯಗಳನ್ನು ನಿರ್ವಹಿಸುವ ಅಂತಾರಾಷ್ಟ್ರೀಯ ದರ್ಜೆಯ ಕಾರ್ಯವಿಧಾನಗಳು, ಯಂತ್ರಗಳು ಮತ್ತು ಚಿಕಿತ್ಸಾ ಪ್ಯಾಕೇಜ್‍ಗಳನ್ನು ತಂದಿದೆ. ಬೆಂಗಳೂರಿನ ಎಲ್ಲಾ 6 ಕೇಂದ್ರಗಳಾದ ಇಂದಿರಾನಗರ, ಆರ್ ಟಿ ನಗರ, ವೈಟ್ ಫೀಲ್ಡ್, ರಿಚ್ಮಂಡ್ ರೋಡ್, ಮಾರತ್ ಹಳ್ಳಿ ಮತ್ತು ಜಯನಗರಗಳಲ್ಲಿ ಎಲ್ಲಾ ಕಾರ್ಯವಿಧಾನಗಳನ್ನು ನಡೆಸಲು ಹೇರ್ ಲೈನ್ ವೈದ್ಯಕೀಯ ಹಾಗೂ ಸೌಂದರ್ಯ ತಜ್ಞರನ್ನು ಹೊಂದಿದೆ.



Click it and Unblock the Notifications
