Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿರಿಕಿರಿಯನ್ನು೦ಟು ಮಾಡುವ ತಲೆಹೊಟ್ಟು ಸಮಸ್ಯೆಗೆ ಪರಿಹಾರವೇನು?
ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು. ತಲೆಹೊಟ್ಟು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ.
ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ.

ತಲೆಹೊಟ್ಟಿನ ಸಾಮಾನ್ಯವಾದ ರೋಗಲಕ್ಷಣಗಳೆ೦ದರೆ, ತಲೆಯ ಮೇಲೆ ಉರಿಯ೦ತಹ ಅನುಭವ, ತಲೆ ತುರಿಸುವಿಕೆ, ಮತ್ತು ನಿರ್ಜೀವ ತ್ವಚೆಯು ತುಣುಕುಗಳ ರೂಪದಲ್ಲಿ ತಲೆಯಿ೦ದ ಉದುರುವುದು. ಇಲ್ಲಿ ನಾವು, ತಲೆಹೊಟ್ಟಿನ ಸಮಸ್ಯೆಯನ್ನು ಹೊಡೆದಟ್ಟಲು, ಬಹಳ ಪರಿಣಾಮಕಾರಿ ಮನೆ ಮದ್ದಿನ ಕುರಿತು ಚರ್ಚಿಸಲಿದ್ದೇವೆ. ಬನ್ನಿ ಮುಂದೆ ಓದಿ
ಪುದೀನಾ ಎಣ್ಣೆ
ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚಿದಾಗ ತುಂಬಾ ತಣ್ಣನೆಯ ಅನುಭವ ಉಂಟಾಗುತ್ತದೆ. ಇದು ತಲೆ ತುರಿಕೆಯನ್ನು ಕಮ್ಮಿ ಮಾಡುವುದರ ಜೊತೆಗೆ ತಲೆಗೆ ತಂಪಾದ ಹಿತಾನುಭವವನ್ನು ನೀಡುತ್ತದೆ ಹಾಗೂ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿಯನ್ನು ನೀಡುವುದು.
ಬೀಟ್ ರೂಟ್
ತಲೆಹೊಟ್ಟಿನ ಆರೈಕೆಗೆ ಬೀಟ್ ರೂಟ್‌ಗಳು ಬಹಳಷ್ಟು ಪ್ರಯೋಜನಕಾರಿಯಾಗಿವೆ. ಇವುಗಳನ್ನು ನೀರಿನಲ್ಲಿ ಕುದಿಸಿ, ತಣಿಸಿ, ನ೦ತರ ಇದಕ್ಕೆ ಈರುಳ್ಳಿಯ ರಸವನ್ನು ಸೇರಿಸಿರಿ. ಈ ಮಿಶ್ರಣವನ್ನು ನಿಮ್ಮ ಕೈಯ ಬೆರಳುಗಳಿ೦ದ ತಲೆಯ ಮೇಲೆ ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಲು ಬಳಸಿರಿ.
ಅಲೀವ್ ಎಣ್ಣೆ
ಒ೦ದು ಚಮಚದಷ್ಟು ಅಲೀವ್ ಎಣ್ಣೆಯೊ೦ದಿಗೆ ಮೂರು ಟೀ ಚಮಚದಷ್ಟು ಈರುಳ್ಳಿ ರಸವನ್ನು ಬೆರೆಸಿರಿ. ಈ ಮಿಶ್ರಣವನ್ನು ನಿಮ್ಮ ತೆಲೆಗೆ ಹಾಗೂ ಕೂದಲಿಗೆ ಹಚ್ಚಿರಿ. ನೀವೊ೦ದು ಬೆಚ್ಚನೆಯ ಟವಲ್ ಅನ್ನೂ ಸಹ ಅರ್ಧ ಗಂಟೆಯ ಕಾಲ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ನ೦ತರ ಮ೦ದವಾದ ಶಾ೦ಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳುವುದರ ಮೂಲಕ ತಲೆಹೊಟ್ಟನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.
ಕೊಬ್ಬರಿ ಎಣ್ಣೆ ಹಾಗೂ ಲಿಂಬೆ ರಸ
ಒ೦ದು ಚಮಚದಷ್ಟು ಲಿ೦ಬೆರಸ, ಐದು ಚಮಚಗಳಷ್ಟು ಕೊಬ್ಬರಿ ಎಣ್ಣೆಯನ್ನು ಮಿಶ್ರಗೊಳಿಸಿರಿ. ಈಗ, ಈ ಮಿಶ್ರಣವನ್ನು ತಲೆಗೆ ಹಿಚ್ಚಿಕೊ೦ಡು 20 ರಿ೦ದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನ೦ತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟು ನಿವಾರಿಸುವಲ್ಲಿ ಪರಿಣಾಮಕಾರಿ ಮನೆಮದ್ದಾಗಿದೆ.
ಮೊಸರು ಮತ್ತು ನಿಂಬೆಹಣ್ಣು
ನಿಂಬೆ ಹಣ್ಣು ಮತ್ತು ಮೊಸರು ತಲೆ ಹೊಟ್ಟಿಗೆ ಉತ್ತಮ ಮನೆಮದ್ದು. ಮೊಸರಿಗೆ ಒಂದೆರಡು ಹನಿ ನಿಂಬೆ ರಸ ಹಾಕಿ ನೆತ್ತಿಗೆ ಹಚ್ಚಿ.ಅರ್ಧ ಗಂಟೆ ಬಿಟ್ಟು ನಂತರ ಸಾಕಷ್ಟು ನೀರು ಹಾಕಿ ಸಂಪೂರ್ಣವಾಗಿ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಇದನ್ನೇ ಮುಂದುವರೆಸಿ.



Click it and Unblock the Notifications



