Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬಾಳೆಹಣ್ಣು: ಆರೋಗ್ಯಕ್ಕೂ ಸೈ, ಕೂದಲಿನ ಸೌಂದರ್ಯಕ್ಕೂ ಜೈ
ಬಾಳೆಹಣ್ಣು ಆರೋಗ್ಯಕ್ಕೆ ಹೇಗೆ ಉತ್ತಮವೋ ಅಂತೆಯೇ ಕೂದಲ ಆರೈಕೆಗೂ ಪೂರಕವೆಂಬುದನ್ನು ಕೇಳಿ ನಿಮಗೆಲ್ಲಾ ಅಚ್ಚರಿವಾಗಬಹುದು ಅಲ್ಲವೇ ? ಹೌದು, ಬಾಳೆಹಣ್ಣನ್ನು ನಿತ್ಯವೂ ಸೇವಿಸುವ ಮೂಲಕ ದೇಹದ ಇತರ ಅಂಗಗಳ ಜೊತೆಗೇ ಕೂದಲಿಗೂ ಉತ್ತಮ ಆರೈಕೆ ದೊರಕುತ್ತದೆ.
ಏಕೆಂದರೆ ಬಾಳೆಹಣ್ಣಿನಲ್ಲಿ ಆರೋಗ್ಯಕ್ಕೆ ಪೂರಕವಾದ ಹಲವು ಪೋಷಕಾಂಶಗಳು, ಕರಗುವ ಮತ್ತು ಕರಗದ ನಾರು ಹಾಗೂ ಉತ್ತಮ ಪ್ರಮಾಣದ ಸಕ್ಕರೆ ಖನಿಜಗಳೂ, ಕೂದಲಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ, ಬನ್ನಿ ಕೂದಲ ಆರೈಕೆಯಲ್ಲಿ ಬಾಳೆಹಣ್ಣು ಯಾವ ರೀತಿಯಲ್ಲಿ ಪೂರಕವಾಗಿದೆ ಎಂಬ ಮಾಹಿತಿಯನ್ನು ನೋಡೋಣ

ವಿಟಮಿನ್‍ಗಳ ಸಮಗ್ರ ಭಂಡಾರ
ಬಾಳೆಹಣ್ಣಿನಲ್ಲಿರುವ ವಿಟಮಿನ್ ಸತ್ವಗಳ ಪಟ್ಟಿಯನ್ನು ಒಮ್ಮೆ ಅವಲೋಕಿಸಿ ನೀವೇ ಊಹಿಸಿ. ಬಾಳೆಹಣ್ಣಿನಲ್ಲಿ ಬಿ3, ಬಿ5, ಬಿ6 ಮತ್ತು ಸಿ ವಿಟಮಿನ್ ಗಳು ಬಾಳೆಹಣ್ಣಿನಲ್ಲಿ ಹೇರಳವಾಗಿದೆ. ಈ ವಿಟಮಿನ್ ಯುಕ್ತ ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ನಿಮ್ಮ ಕೇಶವು ನಿಜಕ್ಕೂ ಫಳಫಳನೆ ಮಿಂಚುವಂತೆ ಮಾಡಿ ಹೆಚ್ಚು ಕಾಂತಿಯುತಗೊಳಿಸುತ್ತದೆ.
ಪೊಟಾಷಿಯಂ ಸತ್ವ ಹೊಂದಿದೆ
ಪೊಟಾಷಿಯಂ ಸತ್ವದ ಕೊರತೆಯಿಂದ ಕೂದಲುಗಳು ಹೆಚ್ಚು ಉದುರಲು ಪ್ರಾರಂಭಿಸುತ್ತವೆ. ಬಾಳೆಹಣ್ಣಿನಲ್ಲಿರುವ ಪೊಟಾಷಿಯಂ ಅಂಶದಿಂದ ಕೂದಲ ಆರೋಗ್ಯವನ್ನು ಹೆಚ್ಚಿಸಲು ಬಳಸಬಹುದಾದ ಉತ್ತಮ ಆಯ್ಕೆಯಾಗಿದ್ದು, ಕೂದಲ ಬೇರನ್ನು ಸದೃಢಗೊಳಿಸಲು ನೆರವಾಗುತ್ತದೆ.
ಮಾಯಿಶ್ಚರೈಸರ್ ಬಳಕೆ
ಬಾಳೆಹಣ್ಣಿನ ರಸವನ್ನು ನೆತ್ತಿಯ ಚರ್ಮಕ್ಕೆ ಮತ್ತು ಕೂದಲಿಗೆ ನಯವಾಗಿ ಹಚ್ಚಿದರೆ, ಕೂದಲಿನ ಒಳಗಿಂದ ತೇವಾಂಶ ಹೆಚ್ಚಿಸಿ ಕೂದಲನ್ನು ಹೆಚ್ಚು ಆರೋಗ್ಯಕರವಾಗಿಸಿ ಹೆಚ್ಚು ಕಾಂತಿಯುತಗೊಳಿಸುತ್ತದೆ.
ಕೂದಲ ಕಂಡೀಶನರ್ ಬಳಕೆ
ಕೂದಲುಗಳು ದೃಢವಾಗಿದ್ದರೆ ಹೆಚ್ಚು ಆರೋಗ್ಯಯುತವಾಗಿರುತ್ತದೆ ಹಾಗೂ ಮುಖದ ಅಂದವನ್ನೂ ಹೆಚ್ಚಿಸುತ್ತದೆ. ಈ ಗುಣವನ್ನು ಬಾಳೆಹಣ್ಣಿನ ರಸ ಹೊಂದಿದೆ. ಇದು ನಿಮ್ಮ ಕೂದಲಿನ ಉತ್ತಮ ಕಂಡೀಶನರ್ ಆಗಿದ್ದು, ಇದಕ್ಕಿಂತ ಉತ್ತಮ ಆಯ್ಕೆ ಬೇರೊಂದಿಲ್ಲ.ಮೊಟ್ಟೆ ಹಾಗೂ ಬಾಳೆಹಣ್ಣು ಮೊಟ್ಟೆಯು ಕೂದಲಿನ ಅಂದವನ್ನು ಹೆಚ್ಚಿಸುವ ಕ್ರಮವಾದ ಸತ್ವವಾಗಿದೆ.
ಇದಕ್ಕೆ ಬಾಳೆಹಣ್ಣನ್ನು ಜಜ್ಜಿ ಅಥವಾ ಅದರ ರಸವನ್ನು ಮೊಟ್ಟೆಗೆ ಬೆರೆಸಿ ಕೂದಲಿಗೆ ಹಚ್ಚಿ. ಈ ಮಿಶ್ರಣದಲ್ಲಿ ಹೆಚ್ಚು ಪೌಷ್ಠಿಕಾಂಶವಿದ್ದು, ನಿಮ್ಮ ಕೂದಲಿಗೆ ಹಾಗೂ ನೆತ್ತಿಯ ಚರ್ಮಕ್ಕೆ ಉತ್ತಮವಾದ ಆಹಾರವಾಗಿದ್ದು, ಕೂದಲ ಅಂದವನ್ನು ಹೆಚ್ಚಿಸುವುದಲ್ಲದೆ ಮುಖವನ್ನು ಸಹ ಚೆಂದಗೊಳಿಸುತ್ತದೆ.



Click it and Unblock the Notifications


