Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಚಳಿಗಾಲದಲ್ಲಿ ಕೇಶ ರಕ್ಷಣೆ: ಮಾಡಲೇಬಾರದ ತಪ್ಪುಗಳು
ಚಳಿಗಾಲದಲ್ಲಿ, ನಮ್ಮ ಸೌಂದರ್ಯದ ಕಡೆಗೆ ಹೆಚ್ಚು ಗಮನ ನೀಡುತ್ತೇವೆ. ಚಳಿಗಾಲದಲ್ಲಿ ತಮ್ಮ ಸೌಂದರ್ಯದ ಪ್ರಜ್ಞೆಯ ಕಡೆಗೆ ಹೆಚ್ಚು ಗಮನ ನೀಡುವವರು ಹೆಂಗಳೆಯರು. ಈ ಕಾಲದಲ್ಲಿ ಪ್ರತಿಯೊಂದೂ ಚಳಿಯಿಂದ ಕೂಡಿದ್ದು ಒಂದು ರೀತಿಯ ಸೋಮಾರಿತನ ಆವರಿಸುತ್ತದೆ. ಸ್ನಾನ ಮಾಡುವುದನ್ನು ತಪ್ಪಿಸುವುದು ಮಾತ್ರ ಚಳಿಗಾಲದಲ್ಲಿ ಜನರು ಮಾಡುವ ಕೆಲಸವಲ್ಲ. ಬೇರೆ ರೀತಿಯ ಕೆಲಸ ಕಾರ್ಯಗಳನ್ನು ಚಳಿಗಾಲದಲ್ಲಿ ಅವರು ತಿರಸ್ಕರಿಸುತ್ತಾರೆ.
ಉದಾಹರಣೆಗೆ, ಹೆಚ್ಚಿನ ಮಹಿಳೆಯರು ಚಳಿಗಾಲದಲ್ಲಿ ತಲೆಗೆ ಸ್ನಾನ ಮಾಡುವುದಿಲ್ಲ ಕೂದಲು ಒಣಗದೇ ಇರುವ ಕಾರಣವು ಅವರಿಗೆ ತಲೆಗೆ ಸ್ನಾನ ಮಾಡದಂತೆ ಪ್ರೇರೇಪಿಸುತ್ತದೆ. ಸರಿಯಾದ ಕಾಳಜಿ ಇಲ್ಲದೆ ನಿಮ್ಮ ಕೂದಲು ಉದುರತೊಡಗುತ್ತದೆ. ನೀವು ಚಳಿಗಾಲದಲ್ಲಿ ಮಾಡಲೇಬಾರದ ಕೆಲವು ತಪ್ಪುಗಳನ್ನು ಇಲ್ಲಿ ನೀಡಿದ್ದೇವೆ.
ಇನ್ನಷ್ಟು ಮಾಹಿತಿಗಾಗಿ ಈ ಮಾಹಿತಿಯನ್ನು ಕ್ಲಿಕ್ ಮಾಡಿ - ಚಳಿಗಾಲದಲ್ಲಿ ತಲೆಕೂದಲಿನ ಸಮಸ್ಯೆ: ಕೆಲವೊಂದು ಸುರಕ್ಷತೆಯ ಸಲಹೆಗಳು

ತಲೆಗೆ ಸ್ನಾನ ಮಾಡುವುದನ್ನು ತಪ್ಪಿಸುವುದು:
ಅಗತ್ಯವಿದ್ದಾಗಲೆಲ್ಲಾ ತಲೆಗೆ ಸ್ನಾನ ಮಾಡಬೇಕು. ದಿನ ಬಿಟ್ಟು ದಿನ ಸ್ನಾನ ಮಾಡುವಂತೆ ನಾವು ನಿಮಗೆ ಹೇಳುತ್ತಿಲ್ಲ. ನಿಮ್ಮ ಕೂದಲು ಕೊಳೆ ಮತ್ತು ಎಣ್ಣೆಯಿಂದ ಕೂಡಿದ್ದರೆ ನೀವು ಕೂದಲು ತೊಳೆದುಕೊಳ್ಳಬೇಕು. ನೀರಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಲೆಗೆ ಸ್ನಾನ ಮಾಡದಿರುವುದು ತಪ್ಪು ಸಲಹೆಯಾಗಿದೆ!
ಅತಿಯಾದ ಬಿಸಿ ನೀರಿನ ಬಳಕೆ:
ಚಳಿಗಾಲದಲ್ಲಿ ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪು ಇದಾಗಿದೆ. ಬಿಸಿ ನಿರಿನ ಸ್ನಾನವು ದೇಹಕ್ಕೆ ಆರಾಮವನ್ನುಂಟು ಮಾಡಿ ನೋವು ನಿವಾರಿಸುತ್ತದೆ. ಬಿಸಿ ನೀರಿನ ಸ್ನಾನವು ಕೂದಲನ್ನು ಒಣಗಿಸಿ ತುದಿಯನ್ನು ಸೀಳು ಮಾಡುತ್ತದೆ.
ಒಣ ತಲೆಬುರುಡೆ:
ಚಳಿಗಾಲದಲ್ಲಿ ವಾತಾವರಣವು ಒಣಗಿದಂತಿರುತ್ತದೆ. ತ್ವಚೆ ಮಾತ್ರವಲ್ಲದೆ ಕೂದಲೂ ಈ ಪರಿಣಾಮವನ್ನು ಎದುರಿಸುತ್ತದೆ. ಆದ್ದರಿಂದ ನಿಮ್ಮ ಕೂದಲು ಮತ್ತು ತಲೆಬುರುಡೆ ಒಣಗಿ ಹೋಗುವುದನ್ನು ನೀವು ತಪ್ಪಿಸಬೇಕು. ಒಣಗುವಿಕೆಯು ತಲೆಬುರುಡೆಯಲ್ಲಿ ತುರಿಕೆಯನ್ನುಂಟು ಮಾಡಿ ಹೊಟ್ಟಿಗೆ ಆಹ್ವಾನವನ್ನು ನೀಡುತ್ತದೆ. ಆದ್ದರಿಂದ ಈ ರೀತಿಯ ತೊಂದರೆಗೆ ಪರಿಹಾರವೆಂದರೆ ಕೂದಲಿಗೆ ಮತ್ತು ಬುರುಡೆಗೆ ಎಣ್ಣೆ ಹಚ್ಚಿ 4 ಗಂಟೆಯ ನಂತರ ಶ್ಯಾಂಪೂ ಹಚ್ಚಿ ಸ್ನಾನ ಮಾಡುವುದಾಗಿದೆ.
ಒದ್ದೆಗೂದಲನ್ನು ಕಟ್ಟುವುದು:
ಚಳಿಗಾಲದ ತಂಪು ವಾತಾವರಣದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಚ್ಚಿನ ಮಹಿಳೆಯರು ತಮ್ಮ ನೀಳಕೂದಲನ್ನು ಕಟ್ಟುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಕೂದಲಿನ ಬುಡ ತೆಳ್ಳಗಾಗ ತೊಡಗುತ್ತದೆ. ಇದು ಬಕ್ಕತಲೆಯನ್ನುಂಟು ಮಾಡಬಹುದು, ತಲೆಹೊಟ್ಟನ್ನು ಉಂಟು ಮಾಡಿ ಕೂದಲಿಗೆ ದುಷ್ಪರಿಣಾಮವನ್ನುಂಟು ಮಾಡುತ್ತದೆ. ಒದ್ದೆಕೂದಲನ್ನು ಎಂದಿಗೂ ಕಟ್ಟಬೇಡಿ.
ಈ ರೀತಿಯ ತಪ್ಪುಗಳನ್ನು ಜನರು ಚಳಿಗಾಲದಲ್ಲಿ ಮಾಡುತ್ತಾರೆ. ಚಳಿಗಾಲದಲ್ಲಿ ಕೇಶ ರಕ್ಷಣೆ ಅತೀ ಅವಶ್ಯಕ ಮತ್ತು ಇದಕ್ಕೆ ಬೇಕಾದ ಆರೈಕೆಯನ್ನು ಮಾಡಲು ಮರೆಯದಿರಿ.



Click it and Unblock the Notifications
