Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೂದಲು ಉದುರುವಿಕೆ ಸಮಸ್ಯೆಯನ್ನು ತಡೆಯುವುದು ಹೇಗೆ?
ಕೂದಲು ಉದುರುವಿಕೆ ಸಾಮಾನ್ಯವಾದ ಮತ್ತು ಕಿರಿಕಿರಿ ಉಂಟುಮಾಡುವ ಪ್ರಕ್ರಿಯೆ. ನಮ್ಮಲ್ಲಿ ಹೆಚ್ಚು ಜನ ಕೂದಲು ಉದುರುವಿಕೆ ತಡೆಯಲು ತಕ್ಷಣ ವೈದ್ಯಕೀಯ ವಿಧಾನ ಬಳಸಲು ಮುಂದಾಗುತ್ತಾರೆ. ಆದರೆ ನಿಮ್ಮ ದಿನನಿತ್ಯದ ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಸರಿಯಾದ ಪೋಷಕಾಂಶ ದೊರೆತಲ್ಲಿ ಕೂದಲು ಉದುರುವುದು ಕಡಿಮೆಯಾಗುತ್ತದೆ, ಅಧಿಕವಾಗಿ ಬೆಳೆಯುತ್ತದೆ ಮತ್ತು ಕೂದಲು ಹೇರಳವಾಗುತ್ತದೆ.
ಕೂದಲು ಉದುರುವಿಕೆ ಸಮಸ್ಯೆ ಕಂಡು ಬಂದರೆ ನಾವು ಬ್ಯೂಟಿಷಿಯನ್ ಹತ್ತಿರ ಸಲಹೆ ಕೇಳಲು ಹೋದರೆ ತುಂಬಾ ಬೆಲೆ ಬಾಳುವ ಶ್ಯಾಂಪೂ, ಕಂಡೀಷನರ್ ಹೆಸರು ಹೇಳುತ್ತಾರೆ. ಅವರು ಹೇಳಿದ ಸಲಹೆಯನ್ನು ಪಾಲಿಸಿದಾಗ ಈ ಸಮಸ್ಯೆ ಸ್ವಲ್ಪ ಸಮಯ ಕಡಿಮೆಯಾದಂತೆ ಕಂಡರೂ ಸ್ವಲ್ಪ ದಿನದಲ್ಲಿ ಮತ್ತೆ ಅದೇ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಕೂದಲು ಉದುರುವ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾಗಿ ಕೂದಲು ಉದುರುವಿಕೆ ತಡೆಯಲು ಈ ಕೆಳಗೆ ಸಲಹೆಗಳನ್ನು ನೀಡಲಾಗಿದೆ. ಪಾಲಿಸಿ ನೋಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.

ಸಾಲ್ಮನ್ ಮೀನು
ಈ ಮೀನಿನಲ್ಲಿ ಪೋಷಕಾಂಶ, ವಿಟಮಿನ್ ಮತ್ತು ಕೂದಲ ಬೆಳವಣಿಗೆಗೆ ಬೇಕಾಗುವ ಕೊಬ್ಬಿನ ಅಂಶಗಳಿರುತ್ತವೆ. ನಮ್ಮ ಕೂದಲಿಗೆ ಅಗತ್ಯವಾಗಿ ಬೇಕಾಗುವ ಕೊಬ್ಬಿನ ಅಂಶವನ್ನು ಈ ಮೀನಿನಿಂದ ಪಡೆದುಕೊಳ್ಳಬಹುದು. ಸಾಲ್ಮನ್ ಮತ್ತಿತರ ಸಮುದ್ರಾಹಾರದಲ್ಲಿ ಸತುವಿನ ಅಂಶವಿರುತ್ತದೆ ಇದು ಕೂದಲಿನ ಇತರ ಸಮಸ್ಯೆಗಳಾದ ಒಣ ನೆತ್ತಿ, ತಲೆಹೊಟ್ಟು, ಕೂದಲು ಉದುರುವಿಕೆಯನ್ನು ತಡೆದು ತೇವಾಂಶ ಕಾಪಾಡುತ್ತದೆ.

ಸೋಯಾ
ಸೋಯಾ ಬಳಕೆಯಿಂದ ಇದರಲ್ಲಿರುವ ತಾಮ್ರದ ಅಂಶ ಹಿಮೊಗ್ಲೋಬಿನ್ ಅಗತ್ಯತೆ ಪೂರೈಸಿ ಕೂದಲು ಸೀಳುವಿಕೆ ಮತ್ತು ಉದುರುವಿಕೆಯನ್ನು ತಡೆಯುತ್ತದೆ. ನೀವು ಪ್ರತಿದಿನ ಸೋಯಾ ಹಾಲು ಅಥವಾ ಸೋಯಾ ಪ್ರೋಟೀನ್ ಬಾರ್ ಅನ್ನು ಕೂಡ ಬಳಸಬಹುದು.

ಬ್ಲೂ ಬೆರ್ರಿ
ಕೂದಲು ಆರೋಗ್ಯಯುತವಾಗಿರಲು ವಿಟಮಿನ್ ಸಿ ಅಗತ್ಯವಿರುತ್ತದೆ. ಈ ವಿಟಮಿನ್ ನ ಕೊರತೆಯಿಂದಾಗಿ ಕೂದಲು ಸೀಳುವುದು, ಉದುರುವುದು ಸಂಭವಿಸುತ್ತದೆ. ಬ್ಲೂ ಬೆರ್ರಿಯಲ್ಲಿ ಕೇವಲ ವಿಟಮಿನ್ ಸಿ ಮಾತ್ರವಲ್ಲ ಉತ್ಕರ್ಷಣ ನಿರೋಧಕ ಶಕ್ತಿ ಕೂಡ ಹೇರಳವಾಗಿ ದೊರೆಯುತ್ತದೆ.

ಕಾಳುಗಳು
ಆರೋಗ್ಯಕರ ಕೂದಲಿಗೆ ಬೇಕಾಗುವ ವಿಟಮಿನ್, ಬಯೋಟಿನ್, ಒಮೇಗಾ 3, ಕೊಬ್ಬಿನ ಆಮ್ಲ ಮತ್ತು ತಾಮ್ರದ ಅಂಶಗಳು ಈ ಕಾಳುಗಲ್ಲಿ ದೊರೆಯುತ್ತದೆ. ಇದರಲ್ಲಿರುವ ಪೋಷಕಾಂಶಗಳು ಕೂದಲ ಬಣ್ಣವನ್ನು ಕಾಪಾಡುತ್ತದೆ, ಅಲ್ಲದೆ ಸೂರ್ಯನ ಕಿರಣಗಳಿಂದ ಹಾನಿಗೆ ಒಳಗಾಗುವುದನ್ನು ತಡೆಯುತ್ತದೆ ಮತ್ತು ಹೊಳೆಯುವಂತೆ ನೋಡಿಕೊಳ್ಳುತ್ತದೆ.

ಮೊಟ್ಟೆ
ಮೊಟ್ಟೆ ಪ್ರೋಟೀನ್ ಅನ್ನು ಹೇರಳವಾಗಿ ಹೊಂದಿದ್ದು ಇದನ್ನು ಬಳಸುವುದರಿಂದ ಕೂದಲ ಸಮಸ್ಯೆ ಕಡಿಮೆಯಾಗುತ್ತದೆ. ಪ್ರೋಟೀನ್ ನೆತ್ತಿಯನ್ನು ಗಟ್ಟಿ ಮಾಡಿ ಕೂದಲು ಉದುರುವಿಕೆಯನ್ನು ತಡೆಯುತ್ತದೆ.ಪ್ರಾಣಿಗಳಿಂದ ದೊರೆಯುವ ಪ್ರೋಟೀನ್ ಒಳ್ಳೆಯದು ಅದು ಕೋಳಿ,ಮೀನು,ಮಾಂಸ ಅಥವಾ ಚೀಸ್ ಯಾವುದೇ ಆಗಿರಬಹುದು.

ಗೆಣಸು
ಗೆಣಸಿನಲ್ಲಿರುವ ಬೀಟಾ ಕೆರೋಟಿನ್ ಅಂಶ ದೇಹಕ್ಕೆ ವಿಟಮಿನ್ ಎ ನೀಡುತ್ತದೆ. ಇದು ನೆತ್ತಿಯಲ್ಲಿ ಅಗತ್ಯವಿರುವ ಎಣ್ಣೆ ಅಂಶವನ್ನು ಉತ್ಪತ್ತಿ ಮಾಡಲು ಸಹಾಯಕವಾಗುತ್ತದೆ. ಈ ಎಣ್ಣೆ ಅಂಶ ಕಡಿಮೆಯಾದರೆ ತುರಿಕೆ ಮತ್ತು ಕಿರಿಕಿರಿ ಪ್ರಾರಂಭವಾಗುತ್ತದೆ. ಗೆಣಸನ್ನು ಬೇಯಿಸಿಕೊಂಡು ಬೇಕಿದ್ದಲ್ಲಿ ನಿಂಬು ಬೆರಸಿ ಹಾಗೆಯೇ ತಿನ್ನಬಹುದು.
ನಮ್ಮ ಚರ್ಮದಂತೆಯೇ ಕೂದಲು ಕೂಡ ಆರೋಗ್ಯದ ಕುರುಹನ್ನು ನೀಡುತ್ತದೆ. ಕೂದಲ ಬೆಳವಣಿಗೆಗೆ ಅಗತ್ಯ ಪೋಷಕಾಂಶ ನೀಡುವುದು ಕೂಡ ಅಷ್ಟೇ ಮುಖ್ಯ.



Click it and Unblock the Notifications
