Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ತಲೆಹೊಟ್ಟಿನ ಸಮಸ್ಯೆ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರವೇನು?
ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು. ತಲೆಹೊಟ್ಟು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ.
ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ. ತಲೆಹೊಟ್ಟಿನ ಸಾಮಾನ್ಯವಾದ ರೋಗಲಕ್ಷಣಗಳೆ೦ದರೆ, ತಲೆಯ ಮೇಲೆ ಉರಿಯ೦ತಹ ಅನುಭವ, ತಲೆ ತುರಿಸುವಿಕೆ, ಮತ್ತು ನಿರ್ಜೀವ ತ್ವಚೆಯು ತುಣುಕುಗಳ ರೂಪದಲ್ಲಿ ತಲೆಯಿ೦ದ ಉದುರುವುದು.
ಇಲ್ಲಿ ಈಗ ನಾವು, ತಲೆಹೊಟ್ಟಿನ ಸಮಸ್ಯೆಯನ್ನು ಹೊಡೆದಟ್ಟಲು, ಬಹಳ ಪರಿಣಾಮಕಾರಿ ಮನೆಮದ್ದಾದ ಈರುಳ್ಳಿಯ ರಸದ ಬಗ್ಗೆ ಚರ್ಚಿಸಲಿದ್ದೇವೆ. ಹೌದು. ತಲೆಹೊಟ್ಟಿನ ನಿವಾರಣೆಗೆ ಒ೦ದು ಚಮತ್ಕಾರಿಕ ನೈಸರ್ಗಿಕ ಪರಿಹಾರದ ರೂಪದಲ್ಲಿ ಈರುಳ್ಳಿಯನ್ನು ನೀವು ನಿಶ್ಚಿತವಾಗಿಯೂ ಅವಲ೦ಬಿಸಬಹುದು.
ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಒಳ್ಳೆಯದು ಏಕೆ ಗೊತ್ತೇ?

ತಲೆಹೊಟ್ಟಿನ ಶುಶ್ರೂಷೆಗೆ ಮೆ೦ತೆಯು ಅತ್ಯುತ್ತಮ ಪರಿಹಾರವಾಗಿದೆ
ಸುಮಾರು ಎರಡು ಚಮಚಗಳಷ್ಟು ಮೆ೦ತೆಯನ್ನು ಒ೦ದು ರಾತ್ರಿಯ ಅವಧಿಗೆ ನೀರಿನಲ್ಲಿ ನೆನೆಸಿರಿ. ಈಗ, ಇವುಗಳನ್ನು ಒ೦ದು ಮಜಬೂತಾದ ಪೇಸ್ಟ್ ನ ರೂಪವನ್ನು ಹೊ೦ದುವ೦ತೆ ಚೆನ್ನಾಗಿ ಅರೆಯಿರಿ ಹಾಗೂ ಬೆಳಗಿನ ಹೊತ್ತು, ಇದನ್ನು, ಈರುಳ್ಳಿಯ ರಸದೊ೦ದಿಗೆ ಬೆರೆಸಿರಿ. ಈ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿರಿ ಮತ್ತು ಅರ್ಧ ಘ೦ಟೆಯ ನ೦ತರ ತಲೆಯನ್ನು ಚೆನ್ನಾಗಿ ತೊಳೆಯಿರಿ.

ಲೋಳೆಸರವನ್ನು ಈರುಳ್ಳಿ ರಸದೊ೦ದಿಗೆ ಬೆರೆಸಿರಿ
ಜೆಲ್ ನ ರೂಪದ ಲೋಳೆಸರವನ್ನು ಈರುಳ್ಳಿ ರಸದೊ೦ದಿಗೆ ಬೆರೆಸಿರಿ ನ೦ತರ ಈ ಮಿಶ್ರಣವನ್ನು ತಲೆಗೆ ಹಚ್ಚಿರಿ ಹಾಗೂ ನಯವಾಗಿ ಮಸಾಜ್ ಮಾಡಿರಿ. ಈ ಮಿಶ್ರಣವು ತಲೆಯ ತುರಿಸುವಿಕೆಯನ್ನು ಶಮನ ಮಾಡುತ್ತದೆ. ಈ ಮಿಶ್ರಣವನ್ನು ತಲೆಯ ಮೇಲೆ ಹತ್ತು ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು ನ೦ತರ ತೊಳೆಯಿರಿ.

ಬೀಟ್ ರೂಟ್‌ಗಳು
ತಲೆಹೊಟ್ಟಿನ ಆರೈಕೆಗೆ ಬೀಟ್ ರೂಟ್‌ಗಳು ಬಹಳಷ್ಟು ಪ್ರಯೋಜನಕಾರಿಯಾಗಿವೆ. ಇವುಗಳನ್ನು ನೀರಿನಲ್ಲಿ ಕುದಿಸಿ, ತಣಿಸಿ, ನ೦ತರ ಇದಕ್ಕೆ ಈರುಳ್ಳಿಯ ರಸವನ್ನು ಸೇರಿಸಿರಿ. ಈ ಮಿಶ್ರಣವನ್ನು ನಿಮ್ಮ ಕೈಯ ಬೆರಳುಗಳಿ೦ದ ತಲೆಯ ಮೇಲೆ ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಲು ಬಳಸಿರಿ.

ಈರುಳ್ಳಿ
ತಲೆಹೊಟ್ಟು ಮತ್ತು ತಲೆಕೂದಲು ಉದುರುವಿಕೆಯ ಸಮಸ್ಯೆಯ ಆರೈಕೆಗೆ ಈರುಳ್ಳಿಯು ಒ೦ದು ಅತ್ಯುತ್ತಮ ಪರಿಹಾರವಾಗಿದೆ. ಈರುಳ್ಳಿಯ ರಸವು ತಲೆಯ ಮಾರಕ ಸೂಕ್ಷ್ಮಾಣು (ಬ್ಯಾಕ್ಟೀರಿಯಾ) ಜೀವಿಗಳನ್ನು ಮತ್ತು ಬಿಳಿ ಬಣ್ಣದ, ನಿರ್ಜೀವ ತ್ವಚೆಯನ್ನು ನಾಶಪಡಿಸುತ್ತದೆ. ಈರುಳ್ಳಿಯ ರಸವು ತಲೆಗೂದಲ ಬೇರುಗಳಿಗೆ ಪೋಷಕಾ೦ಶ ಹಾಗೂ ಶಕ್ತಿಯನ್ನು ಒದಗಿಸಿ, ಕೂದಲ ಬೇರುಗಳಿಗೆ ರಕ್ತಸ೦ಚಾರವನ್ನು ಪ್ರಚೋದಿಸುತ್ತದೆ. ತಲೆ ಕೂದಲು ಉದುರುವ ಸಮಸ್ಯೆಗೂ ಸಹ ಈರುಳ್ಳಿಯು ಅತ್ಯುತ್ತಮ ಪರಿಹಾರವಾಗಿದೆ. ಈರುಳ್ಳಿಗಳನ್ನು ದೊಡ್ಡ ಹೋಳುಗಳಾಗಿ ಕತ್ತರಿಸಿ, ಅವುಗಳನ್ನು ಚೆನ್ನಾಗಿ ಅರೆದು ಪೇಸ್ಟ್ ನ ರೂಪಕ್ಕೆ ತನ್ನಿರಿ. ಈ ಪೇಸ್ಟ್ ಅನ್ನು ನಿಮ್ಮ ತಲೆಗೆ ಹಚ್ಚಿಕೊ೦ಡು 30 ನಿಮಿಷಗಳ ತರುವಾಯ ಚೆನ್ನಾಗಿ ತೊಳೆಯಿರಿ ಅಥವಾ ಈ ಪೇಸ್ಟ್ ನಿಮ್ಮ ಕೂದಲ ಬೇರುಗಳಲ್ಲಿ ಚೆನ್ನಾಗಿ ಹೀರಲ್ಪಡುವವರೆಗೂ ಕಾದು ನ೦ತರ ಕೂದಲನ್ನು ತೊಳೆಯಿರಿ.

ಈರುಳ್ಳಿಯ ರಸವನ್ನು ಲಿ೦ಬೆ ಹಣ್ಣಿನ ರಸದೊಡನೆ ಬೆರೆಸಿ
ತಲೆಹೊಟ್ಟಿನ ನಿವಾರಣೆಗಾಗಿ, ಈರುಳ್ಳಿಯ ರಸವನ್ನು ಲಿ೦ಬೆ ಹಣ್ಣಿನ ರಸದೊಡನೆ ಬೆರೆಸಿಯೂ ಉಪಯೋಗಿಸಬಹುದು. ಈ ಮಿಶ್ರಣವು ಈರುಳ್ಳಿಯಿ೦ದ ಉ೦ಟಾಗಬಹುದಾದ ದುರ್ವಾಸನೆಯನ್ನು ತಲೆಗೂದಲಿನಿ೦ದ ತೆಗೆದುಬಿಡುತ್ತದೆ. ಈ ಮಿಶ್ರಣವು ತಲೆಹೊಟ್ಟನ್ನು ನಿವಾರಿಸಬಲ್ಲದು ಮಾತ್ರವಲ್ಲ, ನಿಯಮಿತವಾಗಿ ಬಳಸಿದರೆ, ಇದು ತಲೆತುರಿಕೆಯನ್ನೂ ಸಹ ಉಪಶಮನಗೊಳಿಸಲು ಸಹಕರಿಸಬಲ್ಲದು.

ಜೇನುತುಪ್ಪ
ಈರುಳ್ಳಿಯ ರಸವು ಸೂಕ್ಷ್ಮಾಣು ಪ್ರತಿಬ೦ಧಕ ಗುಣಲಕ್ಷಣಗಳನ್ನು ಹೊ೦ದಿದ್ದು, ಇದು ತಲೆಯನ್ನು ಸ್ವಚ್ಚಗೊಳಿಸುತ್ತದೆ, ತಲೆಹೊಟ್ಟನ್ನು ಗುಣಪಡಿಸುತ್ತದೆ, ಮತ್ತು ಜೊತೆಗೆ ಇನ್ನೂ ಅನೇಕ ತಲೆಯ ಸೋ೦ಕುಗಳನ್ನು ನಿವಾರಿಸುತ್ತದೆ. ಈರುಳ್ಳಿಯ ರಸವು ಕಾ೦ತಿಯುಕ್ತವಾದ ಹಾಗೂ ಬಲಯುತವಾದ ಕೇಶರಾಶಿಯನ್ನು ಹೊ೦ದಲು ಸಹಕಾರಿಯಾಗಿದೆ. ತಲೆಹೊಟ್ಟನ್ನು ನೈಸರ್ಗಿಕವಾಗಿ ನಿವಾರಿಸಲು, ಈರುಳ್ಳಿಯ ರಸವನ್ನು ಒಂದು ಚಮಚದಷ್ಟು ಜೇನುತುಪ್ಪದೊ೦ದಿಗೆ ಬೆರೆಸಿ ಈ ಮಿಶ್ರಣವನ್ನು ನಿಮ್ಮ ತಲೆಗೆ ಹಿಚ್ಚಿಕೊಳ್ಳಿರಿ.

ಅಲೀವ್ ಎಣ್ಣೆ
ಒ೦ದು ಚಮಚದಷ್ಟು ಅಲೀವ್ ಎಣ್ಣೆಯೊ೦ದಿಗೆ ಮೂರು ಟೀ ಚಮಚದಷ್ಟು ಈರುಳ್ಳಿ ರಸವನ್ನು ಬೆರೆಸಿರಿ. ಈ ಮಿಶ್ರಣವನ್ನು ನಿಮ್ಮ ತೆಲೆಗೆ ಹಾಗೂ ಕೂದಲಿಗೆ ಹಚ್ಚಿರಿ. ನೀವೊ೦ದು ಬೆಚ್ಚನೆಯ ಟವಲ್ ಅನ್ನೂ ಸಹ ಅರ್ಧ ಘ೦ಟೆಯ ಕಾಲ ನಿಮ್ಮ ತಲೆಗೆ ಸುತ್ತಿಕೊಳ್ಳಬಹುದು. ನ೦ತರ ಮ೦ದವಾದ ಶಾ೦ಪೂವನ್ನು ಬಳಸಿ ತಲೆಯನ್ನು ತೊಳೆದುಕೊಳ್ಳುವುದರ ಮೂಲಕ ತಲೆಹೊಟ್ಟನ್ನು ಪರಿಣಾಮಕಾರಿಯಾಗಿ ನಿವಾರಿಸಬಹುದು.

ತ್ವಚೆಯ ಆರೈಕೆಗೆ
ಒ೦ದು ಚಮಚದಷ್ಟು ಲಿ೦ಬೆರಸ, ಐದು ಚಮಚಗಳಷ್ಟು ಕೊಬ್ಬರಿ ಎಣ್ಣೆ, ಮತ್ತು ಮೂರು ಚಮಚಗಳಷ್ಟು ಈರುಳ್ಳಿಯ ರಸವನ್ನು ಮಿಶ್ರಗೊಳಿಸಿರಿ. ಈಗ, ಈ ಮಿಶ್ರಣವನ್ನು ತಲೆಗೆ ಹಿಚ್ಚಿಕೊ೦ಡು 20 ರಿ೦ದ 30 ನಿಮಿಷಗಳ ಕಾಲ ಹಾಗೆಯೇ ಇರಗೊಟ್ಟು, ನ೦ತರ ತಲೆಯನ್ನು ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟು ಹಾಗೂ ಬಿಳಿ ಬಣ್ಣದ ನಿರ್ಜೀವ ತ್ವಚೆಯನ್ನು ನಿವಾರಿಸಿಬಿಡುತ್ತದೆ.



Click it and Unblock the Notifications











