Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೂದಲು ಹಾಳಾಗುವುದನ್ನು ತಡೆಯಬೇಕೇ? ಇಲ್ಲಿದೆ ಸೂಕ್ತ ಸಲಹೆ
ಸುಂದರವಾದ ಹೊಳೆಯುವ ಕೂದಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ? ನಮ್ಮ ಕೂದಲೂ ಸುಂದರವಾಗಿ ಆರೋಗ್ಯವಾಗಿರಬೇಕೆಂದು ನಾವು ಹಲವಾರು ಕಸರತ್ತುಗಳನ್ನು ಮಾಡುತ್ತೇವೆ. ಆಯುರ್ವೇದದಿಂದ ಹಿಡಿದು ಆಧುನಿಕ ಕೂದಲಿನ ರಹಸ್ಯ ವಿಧಾನವನ್ನು ಅನುಸರಿಸುತ್ತೇವೆ ಆದರೆ ಫಲ ಮಾತ್ರ ಸೊನ್ನೆ.
ಕೂದಲು ಹೊಳೆಯುವಂತಾಗಲು ಮೊಟ್ಟೆಯ ಪಾತ್ರವೇನು ಗೊತ್ತೇ?
ಹಿಂದೆಲ್ಲ ಕೇವಲ ಹರಳೆಣ್ಣೆ ಹಾಕಿ ಅಥವಾ ಏನನ್ನು ಬಳಸದೆ ಇದ್ದರೂ ಸದೃಢವಾದ ಕೂದಲನ್ನು ಸಾಮಾನ್ಯವಾಗಿ ಎಲ್ಲರೂ ಹೊಂದಿರುತ್ತಿದ್ದರು. ಆದರೆ ಇಂದಿನ ಮಾತೇ ಬೇರೆ ಬಿಡಿ. ನಮ್ಮ ದೇಶದ ವಾತಾವರಣ, ಮಾಲಿನ್ಯ, ಮತ್ತು ಹವಾನಿಯಂತ್ರಿತ ಕೊಠಡಿಯಲ್ಲೇ ದಿನದ ಬಹುಪಾಲು ಕೆಲಸ ಮಾಡುವುದರಿಂದ ನಿಮ್ಮ ಕೂದಲು ಹಾಳಾಗುತ್ತಿದೆ. ಆದರೆ ನಿಮ್ಮ ಕೂದಲಿಗೀಗ ವಿಶ್ರಾಂತಿ ನೀಡಿ! ನಿಮ್ಮ ಕೂದಲನ್ನು ಮರಳಿ ಸದೃಢವಾಗಲೂ ಹಾಗೂ ಹೊಳಪನ್ನು ಪಡೆಯಲು ಈ ಲೇಖನದ ಮೂಲಕ ನಾವೊಂದಿಷ್ಟು ಸಲಹೆಯನ್ನು ನೀಡುತ್ತಿದ್ದೇವೆ.

ಒದ್ದೆ ಕೂದಲನ್ನು ಬಾಚಬೇಡಿ
ಕೂದಲು ಒದ್ದೆಯಾಗಿದ್ದಾಗ ಕೂದಲು ದುರ್ಭಲವಾಗಿರುವುದರಿಂದ ಕೂದಲುದುರುವಿಕೆ ಉಂಟಾಗುವುದು ಸಹಜ. ಆದ್ದರಿಂದ ತಲೆ ಸ್ನಾನದ ನಂತರ ಕೂದಲನ್ನು ಬಾಚುವಲ್ಲಿ ಮುಂಜಾಗ್ರತೆವಹಿಸಿ.

ಸ್ಕಾರ್ಫ್ ಬಳಸಿ
ದೂಳು ಮತ್ತು ಬೆವರಿನಿಂದ ಕೂದಲಿನ ರಕ್ಷಣೆ ಮಾಡಿ ಇಂದಿನ ಮಾಲಿನ್ಯದಿಂದಾಗಿ ನಿಮ್ಮ ಕೂದಲಿನ ವಿನ್ಯಾಸ, ಸೌಂದರ್ಯ ಹಾಳಾಗುತ್ತದೆ. ರಾಸಾಯನಿಕ ಪದಾರ್ಥಗಳು ಮತ್ತು ಧೂಳಿನಿಂದಾಗಿ ಕೂದಲು ಹಾನಿಗೊಳಗಾಗುತ್ತದೆ. ಇವುಗಳನ್ನು ತಡೆಯಲು ಮಹಿಳೆಯರು ಸ್ಕಾರ್ಫ್ ಗಳನ್ನು ಬಳಸುತ್ತಾರೆ. ಆದರೆ ಬೇಸಿಗೆ ಕಾಲದಲ್ಲಿ ತಲೆಗೆ ಸ್ಕಾರ್ಫ್ ಕಟ್ಟಿದರೆ ಅತಿಯಾದ ಬೆವರುವಿಕೆಯಿಂದಾಗಿ ಕೂದಲು ಎಣ್ಣೆಯುಕ್ತವಾಗುತ್ತದೆ.

ವಾತಾವರಣದ ಏರುಪೇರು
ವಾತಾವರಣದ ಏರುಪೇರಿನಲ್ಲಿ ಕೂದಲಿನ ರಕ್ಷಣೆ ಅತೀಯಾದ ಉಷ್ಣ ಅಥವಾ ಅತೀವ ತಂಪಾದ ವಾತಾವರಣ ಕೂಡ ಕೂದಲಿಗೆ ಅತ್ಯಂತ ಹಾನಿಕರ.

ಮಾನಸಿಕ ಒತ್ತಡ
ಮಾನಸಿಕ ಒತ್ತಡ ಒಳ್ಳೆಯದಲ್ಲ ಅತೀಯಾದ ಒತ್ತಡದಿಂದ ಕೂದಲು ಹಾನಿಗೊಳಗಾಗುತ್ತದೆ ಮತ್ತು ಕೂದಲಿನ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ.

ಕೂದಲಿನ ಸೌಂದರ್ಯ ಸದೃಢತೆಯನ್ನು ಕಾಯ್ದುಕೊಳ್ಳಿ:
ಸೋಡಿಯಮ್ ಲಾರ್ಯಲ್ ಸಲ್ಫೇಟ್ (SLS) ಮತ್ತು ಸೋಡಿಯಂ ಸಲ್ಫೇಟ್, ಡೈಯೇಥನೋಲಮೈನ್(diethanolamine), ಮೋನೋಎಥನೋಲಮೈನ್ (momoethanolamine), ಟ್ರೈಯೇಥನೋಲಮೈನ್ (triethanolamine), ಫಾರ್ಮಾಲ್ಡಿಹೈಡ್ (Formaldehyde) ಇತ್ಯಾದಿ ರಾಸಾಯನಿಕಗಳು ನಿಮ್ಮ ಕೂದಲನ್ನು ಹಾನಿಗೊಳಿಸುತ್ತವೆ. ಕೂದಲು ನೈಸರ್ಗಿಕವಾಗಿ ಅಥವಾ ಸಹಜವಾಗಿ ಒಣಗಲು ಬಿಡಿ. ಇಲ್ಲವಾದರೆ ಕೂದಲು ಶುಷ್ಕವಾಗಿ ಕೂದಲುದುರುವಿಕೆ ಪ್ರಾರಂಭವಾಗುತ್ತದೆ. ನಿಮ್ಮ ಕೂದಲಿನ ಸೌಂದರ್ಯ ಸದೃಢತೆಯನ್ನು ಕಾಯ್ದುಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ಆದ್ದರಿಂದ ಮುಂಜಾಗ್ರತೆಯನ್ನು ವಹಿಸಿ ಕೂದಲಿನ ರಕ್ಷಣೆಯನ್ನು ಮಾಡಿ.

ರಾಸಾಯನಿಕಗಳಿರುವ ಶಾಂಪೂವನ್ನು ಬಳಸದಿರಿ
ಈ ರಾಸಾಯನಿಕಗಳಿರುವ ಶಾಂಪೂವನ್ನು ಬಳಸದಿರಿ, ಇದು ನಿಮ್ಮ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಅಲ್ಲದೆ ನಿಮ್ಮ ಕೂದಲು ಹೊಳಪನ್ನು ಕಳೆದುಕೊಳ್ಳಬಹುದು

ಕಂಡೀಷನರ್ ಬಳಸಿ
ಶ್ಯಾಂಪೂವಿನಿಂದ ಕೂದಲನ್ನು ತೊಳೆದ ನಂತರ ಕೂದಲಿನ ತೇವಾಂಶವನ್ನು ಕಾಯ್ದುಕೊಳ್ಳಲು ತಣ್ಣೀರಿನಲ್ಲಿಯೇ ಕೂದಲನ್ನು ತೊಳೆಯಿರಿ. ಕಂಡೀಷನರ್ ನ್ನು ಬಳಸಲು ಮರೆಯಬೇಡಿ. ಇದು ಕೂದಲಿಗೆ ಅಗತ್ಯ ಖನಿಜಗಳನ್ನು ಜೀವಸತ್ವಗಳನ್ನು ಒದಗಿಸುತ್ತದೆ.

ನೈಸರ್ಗಿಕವಾದ ಶ್ಯಾಂಪೂ, ಸೋಪ್‌ಗಳನ್ನೇ ಬಳಸಿ
ಶ್ಯಾಂಪೂವನ್ನು ಆಯ್ಕೆಮಾಡುವ ಮುನ್ನ ಚೆನ್ನಾಗಿ ಯೋಚಿಸಿ. ಅತ್ಯಂತ ಪ್ರಭಲವಾದ ಶ್ಯಾಂಪೂ ನಿಮ್ಮ ಕೂದಲನ್ನು ಒರಟು, ಶುಷ್ಕ ಹಾಗೂ ತುಂಡಾಗಿಸಬಹುದು. ಇಂದು ನೈಸರ್ಗಿಕವಾದ ಹಲವಾರು ಶಾಂಪೂ ಉತ್ಪನ್ನಗಳು ಲಭ್ಯ. ಆದ್ದರಿಂದ ನೈಸರ್ಗಿಕವಾದ ಶ್ಯಾಂಪೂ, ಸೋಪ್ ಗಳನ್ನೇ ಬಳಸಿ.

ಕೂದಲಿಗೆ ಬ್ಲೀಚ್ ಮಾಡಿಸಬೇಡಿ
ಬೇಸಿಗೆಯಲ್ಲಿ ಕೂದಲಿಗೆ ನೇರವಾಗಿ ರಾಸಾಯನಿಕ ಚಿಕಿತ್ಸೆ, ಬ್ಲೀಚ್ ಮಾಡಿಸುವುದನ್ನು ತಪ್ಪಿಸಿ. ಇದು ಕೂದಲನ್ನು ಶುಷ್ಕವನ್ನಾಗಿಸುತ್ತದೆ. ನಿಮ್ಮ ಕೂದಲನ್ನು ಹೊಳೆಯುವಂತಾಗಲು ಮತ್ತು ಕೂದಲು ಹಾನಿಯನ್ನು ಸರಿಪಡಿಸಲು ಕೆಲವು ಸಮಯದ ವರೆಗೆ ಸಹಜವಾಗಿ ಕೂದಲು ಬೆಳೆಯಲು ಅವಕಾಶ ನೀಡಿ.

ಬಿಗಿಯಾದ ಜಡೆ ಹಾಕಬೇಡಿ
ಸಾಮಾನ್ಯವಾಗಿ ಸಾಕಷ್ಟು ಮಹಿಳೆಯರು ಮಲಗುವ ಮೊದಲು ಜಡೆ ಹೆಣೆದು ಮಲಗುತ್ತಾರೆ. ಇದು ಕೂದಲು ಉದುರಲು ಪ್ರಮುಖ ಕಾರಣ. ಮಲಗುವ ಮುನ್ನ ಕೂದಲನ್ನು ಹಾಗೆಯೇ ಸಡಿಲವಾಗಿ ಬಿಡಿಸಿ ಮಲಗಿ. ಇದು ಕೂದಲು ಬೆಳೆಯಲು ಸಹಾಯವಾಗುತ್ತದೆ.

ಬಿಗಿಯಾದ ಕೂದಲು
ಕೂದಲಿಗೆ ಹಾಕಿದ ಬ್ಯಾಂಡ್ ಅಥವಾ ಪಿನ್ ಗಳನ್ನು ಆದಷ್ಟು ಬೇಗ ತೆಗೆದು ಕೂದಲನ್ನು ಸಡಿಲವಾಗಿ ಬಿಡಿ. ದೀರ್ಘ ಸಮಯದ ವರೆಗೆ ಕೂದಲನ್ನು ಬಿಗಿಯಾಗಿ ಕಟ್ಟಿದರೆ ಕೂದಲಿನ ಬೇರುಗಳಿಗೆ ಹಾನಿಯಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಹೇರ್ ಪ್ರಾಡಕ್ಟ್
ಕೂದಲು ಹಾನಿಗೊಳಗಾಗುವುದನ್ನು ತಪ್ಪಿಸಲು, ನಿಮ್ಮ ಕೂದಲಿಗೆ ಬಳಸುವ ಉತ್ವನ್ನಗಳನ್ನು ಶೀರ್ಘವಾಗಿ ತೊಳೆಯಿರಿ. ಜೆಲ್ ಮತ್ತು ಮೌಸ್ಸ್ ನ್ನು ಮೇಕಪ್ ತೊಳೆಯುವ ಹಾಗೆ ಮನೆಗೆ ಒಂದ ತಕ್ಷಣವೇ ಸಂಪೂರ್ಣವಾಗಿ ತೊಳೆಯಿರಿ.

ಫ್ಲಾಟ್ ಐರನ್ ಮತ್ತು ಬ್ಲೋ- ಡ್ರೈಯಿಂಗ್
ಫ್ಲಾಟ್ ಐರನ್ ಮತ್ತು ಬ್ಲೋ- ಡ್ರೈಯಿಂಗ್ ಗಳು, ನಿಮ್ಮ ಕೂದಲನ್ನು ಹಾನಿ ಗೊಳಿಸಬಲ್ಲ ಇತರ ರೂಪಗಳು! ಈ ವಸ್ತುಗಳು ಒಟ್ಟಿಗೆ ಕೂದಲಿನಲ್ಲಿ ಜಲಜನಕ ಬಂಧಗಳಿಂದ ತಾತ್ಕಾಲಿಕ ಬದಲಾವಣೆಗಳನ್ನು ಉಂಟು ಮಾಡಲು ರಚಿಸಲ್ಪಟ್ಟ ಅತಿಯಾದ ಶಾಖವಾಗಿದೆ. ಆದ್ದರಿಂದ ವಿದ್ಯುನ್ಮಾನ ಶೈಲಿಯ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಿ ಮತ್ತು ಅತ್ಯಂತ ಅಗತ್ಯವಾಗಿದ್ದಾಗ ಮಾತ್ರ ಬಳಸಿ ಆದರೆ ಇದನ್ನು ದೈನಂದಿನ ಬಳಕೆಗೆ ಖಂಡಿತವಾಗಿಯೂ ಬಳಸಬೇಡಿ.



Click it and Unblock the Notifications