Latest Updates
-
ಮಳೆಗಾಲದ ತೇವಾಂಶಕ್ಕೆ ಗುಡ್ ಬೈ: ₹1,499 ರೊಳಗೆ ಸಿಗುವ ಬೆಸ್ಟ್ ಡಿಹ್ಯೂಮಿಡಿಫೈಯರ್ ಮತ್ತು ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ?
ನಿಮ್ಮ ಅಡುಗೆಮನೆಯಲ್ಲಿದೆ ಕೂದಲಿನ ಸೌಂದರ್ಯವರ್ಧಕಗಳು!
ಆರೋಗ್ಯಕರ ಕೂದಲು ನಿಮ್ಮದಾಗಬೇಕೆ? ನಿಮ್ಮ ಕೂದಲೂ ಹೊಳಪನ್ನು ಪಡೆಯಬೇಕೆ? ಹಾಗಾದರೆ ಮಾರುಕಟ್ಟೆಯಲ್ಲಿ ಕೂದಲಿಗೆ ಬಳಸುವ ಉತ್ಪನ್ನಗಳನ್ನು ಹುಡುಕುವುದನ್ನು ಇಂದೇ ನಿಲ್ಲಿಸಿ. ನಿಮ್ಮ ಕೂದಲಿಗೆ ಅತ್ಯುತ್ತಮ ಮಾಯಿಶ್ಚರೈಸರ್ ಹಾಗೂ ಅವುಗಳ ಪುನಶ್ಚೇತನಗೊಳಿಸಲು ಅತ್ಯುತ್ತಮ ಕಂಡಿಷನರ್ ನಿಮ್ಮ ಅಡಿಗೆ ಮನೆಯಲ್ಲಿಯೇ ಇದೆ ನೋಡಿ!
ನೀವು ಸುಲಭವಾಗಿ, ನಿಮ್ಮ ಅಡುಗೆ ಮನೆಯ ರೆಫ್ರಿಜಿರೇಟರ್ ನಲ್ಲಿರುವ ಎಲ್ಲಾ ನೈಸರ್ಗಿಕ ಪದಾರ್ಥಗಳ ಬಳಸಿಕೊಂಡು ನಿಮಿಷಗಳಲ್ಲಿ ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸಬಹುದು!

ಮಹಿಳೆಯರೇ ನಿಮ್ಮ ಕೂದಲು ಉದುರುವಿಕೆಗೆ ಕಾರಣ ಏನು ಗೊತ್ತೇ?
ಶುಷ್ಕ ಕೂದಲು - ಆಲಿವ್ ತೈಲ ಮತ್ತು ಮೊಟ್ಟೆ
ಎರಡು ಮೊಟ್ಟೆಗಳು ಮತ್ತು ಮೂರು ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತು ನಿಮ್ಮ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ. ನಂತರ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ನಾನ ಮಾಡಿ. ಆಲಿವ್ ಎಣ್ಣೆ ನೆತ್ತಿಯಲ್ಲಿ ತೇವಾಂಶವಿರಲು ನೆರವಾದರೆ ಮೊಟ್ಟೆಗಳಲ್ಲಿರುವ ಪ್ರೋಟೀನ್ ಆರೋಗ್ಯಕರ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಎಲ್ಲಾ ಬಗೆಯ ಕೂದಲಿಗೆ - ಆವಕಾಡೊ ಮತ್ತು ಜೇನು
ಒಂದು ಬಲಿತ ಆವಕಾಡೊ ಮತ್ತು ಒಂದು ಚಮಚ ಸಾವಯವ ಜೇನನ್ನು ಮಿಶ್ರಣ ಮಾಡಿ ತಲೆಗೆ ಲೇಪಿಸಿ, ಸ್ನಾನ ಮಾಡುವುದಕ್ಕೂ ಮೊದಲು 20 ನಿಮಿಷಗಳ ಹಾಗೆಯೇ ಬಿಡಿ. ನಿಮ್ಮ ಕೂದಲು ಮೃದು ಮತ್ತು ಆರೋಗ್ಯಕರವಾಗಿರಲು ಅಗತ್ಯವಾಗಿರುವ ವಿಟಮಿನ್ ಇ ಮತ್ತು ಪ್ರೋಟೀನ್ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ಅವಕಾಡೊ ಹೇರಳವಾಗಿ ಹೊಂದಿದೆ. ಜೊತೆಗೆ ಜೇನು, ನೈಸರ್ಗಿಕ ಬ್ಯಾಕೀರಿಯಾ ವಿರೋಧಿ (ಜೀವಿರೋಧಿ) ಯಾಗಿ ಕೆಲಸ ಮಾಡುತ್ತದೆ.
ಎಣ್ಣೆಯುಕ್ತ ಕೂದಲು - ಆಪಲ್ ಸಿಡರ್ ವಿನೆಗರ್ (ಸೇಬುಮದ್ಯ) ಮತ್ತು ನಿಂಬೆ
ಇಡೀ ನಿಂಬೆ ಹಣ್ಣಿನ ರಸ ಮತ್ತು 1 /4 ಲೋಟ ಆಪಲ್ ಸೀಡರ್ ವಿನೆಗರ್ ಸೇರಿಸಿ ಮತ್ತು ನಿಮ್ಮ ನೆತ್ತಿಯ ಎಣ್ಣೆ ಅಂಶವನ್ನು ಹೋರಿಕೊಳ್ಳುವವರೆಗೂ ಅಂದರೆ ಸುಮಾರು 15 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತಾ ಸ್ವಚ್ಛವಾಗಿ ಕೂದಲನ್ನು ತೊಳೆಯಿರಿ. ಆಪಲ್ ಸೀಡರ್ ವಿನೆಗರ್, ಕೂದಲನ್ನು ಹೊಳೆಯಲು, ಸ್ಟೈಲಿಂಗ್ ಮತ್ತು ಕಂಡಿಷನರ್ ಗಾಗಿ ಬಳಸುವ ಉತ್ಪನ್ನಗಳಿಂದ ಕೂದಲಿಗೆ ಉಂಟಾಗಿರುವ ತೊಂದರೆಯನ್ನು ನಿವಾರಿಸುತ್ತದೆ. ಜೊತೆಗೆ, ಇದು ಕೂದಲಿನ ಪಿಹೆಚ್ (pH) ಮಟ್ಟ ಸಮತೋಲನ ಮಾಡುತ್ತದೆ. ಹಾಗೂ ಬ್ಯಾಕ್ಟೀರಿಯಾವನ್ನು ಸಾಯಿಸಲು ಮತ್ತು ತಲೆಹೊಟ್ಟು ನಿವಾರಿಸಲೂ ಔಷಧಿಯಂತೆ ಕೆಲಸ ಮಾಡುತ್ತದೆ.
ನಿಮ್ಮ ಕೂದಲೂ ಪ್ರೋಟೀನ್ ಬೇಕೆಂದು ಹೇಳುತ್ತೆ ಗೊತ್ತಾ?
ಬಾಳೆಹಣ್ಣು, ಜೇನು ತುಪ್ಪ ಮತ್ತು ಬಾದಾಮಿ
1 / 2 ಕಳಿತ ಬಾಳೆ ಹಣ್ಣು ಎರಡು ಚಮಚ ಜೇನು ತುಪ್ಪ ಮತ್ತು ಬಾದಾಮಿ ತೈಲವನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನೂ ಕೂಡ ನೆತ್ತಿಗೆ ಹಚ್ಚಿ 20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ನಾನ ಮಾಡಿ. ಬಾಳೆಹಣ್ಣು ನಿಮ್ಮ ಕೂದಲಿನ ತೇವಾಂಶ ಕಾಯ್ದುಕೊಳ್ಳಲು, ನಯವಾದ ಕೂದಲನ್ನು ನೀಡಲು ಮತ್ತು ನಿಮ್ಮ ನೆತ್ತಿಯ ಹೊಟ್ಟನ್ನು ಶಮನಗೊಳಿಸಲು ಅತ್ಯಗತ್ಯ.
ಇವುಗಳಲ್ಲಿ ನಿಮ್ಮ ಕೂದಲಿಗೆ ಸರಿ ಹೊಂದುವ ಮತ್ತು ನಿಮ್ಮ ಕೂದಲಿನ ಹೊಳಪನ್ನು ನೀಡುವ ಮನೆಮದ್ದುಗಳನ್ನು ಆಯ್ದುಕೊಳ್ಳಿ ! ಆದ್ದರಿಂದ ನಿಮ್ಮ ಕೂದಲಿನ ಮಾಯಿಶ್ಚರೈಸರ್ ಮತ್ತು ಕೂದಲನ್ನು ಪುನಶ್ಚೇತನಗೊಳಿಸಲು ಮಾರುಕಟ್ಟೆಯಲ್ಲಿ ಸಿಗುವ ಕಂಡಿಷನರ್ ನ್ನು ಇನ್ನುಮುಂದೆ ಖರೀದಿಸುವ ಅಗತ್ಯವಿಲ್ಲ!



Click it and Unblock the Notifications