Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಆರೋಗ್ಯಕಾರಿ ಕೂದಲ ಬೆಳವಣಿಗೆಗೆ ಇಲ್ಲಿದೆ ಸೂಕ್ತ ಪರಿಹಾರ
ವಿಶ್ವ ಪರಿಸರ ದಿನದಂದು, ಹೇರ್ ಲೈನ್ ಇಂಟರ್‌ನ್ಯಾಶನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ಪರಿಸರ ಸ್ನೇಹಿಯಾಗಿರುವ ಹಸಿರು ಚರ್ಮ ಹಾಗೂ ಹಸಿರು ಕೂದಲು ಚಿಕಿತ್ಸೆಯನ್ನು ಉತ್ತೇಜಿಸುವ ಮೂಲಕ ತನ್ನ ಕಾಣಿಕೆಯನ್ನು ನೀಡಿದೆ.
ಹೇರ್‌ಲೈನ್ ಯಾವತ್ತೂ ಅಂತಾರಾಷ್ಟ್ರೀಯವಾಗಿ ಪ್ರಮಾಣೀಕೃತಗೊಂಡ ಸಸ್ಯದ ಅಂಶಗಳನ್ನು ಒಳಗೊಂಡಿರುವ ನೈಸರ್ಗಿಕ ಚರ್ಮ ಹಾಗೂ ಕೇಶ ಆರೈಕೆಯ ಉತ್ಪನ್ನಗಳು ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ಉತ್ತೇಜಿಸುತ್ತಾ ಬಂದಿದೆ.
ಈ ಅಂಶಗಳು ನಿಮ್ಮ ಚರ್ಮ ಹಾಗೂ ಕೂದಲಿಗೆ ಅಗತ್ಯವಿರುವ ಶ್ರೇಣಿಯ ವಿಟಮಿನ್‍ಗಳು ಹಾಗೂ ಖನಿಜಗಳು, ಅಗತ್ಯ ಕೊಬ್ಬು ಹಾಗೂ ಅಮಿನೋ ಆಸಿಡ್‍ಗಳು, ಫೈಟೋ ಸ್ಟಿರೋಲ್‍ಗಳು, ಎನ್‍ಝೈನ್‍ಗಳನ್ನು ಒದಗಿಸುತ್ತವೆ ಹಾಗೂ ಆರೋಗ್ಯ ಹಾಗೂ ಕಾಂತಿಯನ್ನು ನೈಸರ್ಗಿಕ ವಿಧಾನದಲ್ಲಿ ಖಾತ್ರಿಗೊಳಿಸುತ್ತವೆ.

ಪ್ರತಿ ಚಿಕಿತ್ಸೆಗಳು ಸ್ವಚ್ಛತೆ, ಶುದ್ಧೀಕರಣ, ಜತೆಗೆ ವಿಷಕಾರಿ ಅಂಶಗಳ ನಿವಾರಣೆ, ಜಲ ಸಂಚಯನ ಹಾಗೂ ಆರೋಗ್ಯಕರ ಕೂದಲು ಹಾಗೂ ನಯವಾದ ಚರ್ಮದ ಬೆಳವಣಿಗೆಯನ್ನು ಉತ್ತೇಜಿಸುವ ಗುರಿ ಹೊಂದಿರುತ್ತವೆ. ಹೇರ್‌ಲೈನ್ , ಅಂತಾರಾಷ್ಟ್ರೀಯವಾಗಿ ಪ್ರಸಿದ್ಧವಾಗಿರುವ, ಅಮೋನಿಯಾ, ಪೆರಾಕ್ಸೈಡ್‍ನಿಂದ ಮುಕ್ತವಾಗಿರುವ, ಕನಿಷ್ಠ ಪಿಪಿಡಿ ಹಾಗೂ ಕೋಲ್ ಟಾರ್ ಅಂಶಗಳನ್ನು ಒಳಗೊಂಡಿರುವ ವೆಜಿಟೇಬಲ್ ಹೇರ್‌ಲೈನ್‌ಗಳು ಹಾಗೂ ಬಣ್ಣದ ಉತ್ಪನ್ನಗಳು ಬಳಸುತ್ತದೆ.
ಇಲ್ಲಿ ಚಿಕಿತ್ಸೆಗಳಲ್ಲಿ ಬಳಸುವ ಚರ್ಮ ಆರೈಕೆಯ ಉತ್ಪನ್ನಗಳು ಕನಿಷ್ಠವೆಂದರೂ ಶೇ.95ರಷ್ಟು ಸಾವಯವ ಅಂಶಗಳಿಂದಲೇ ತಯಾರಿಸಿದ್ದಾಗಿರುತ್ತದೆ- ಇವು ಸಸ್ಯ ಹಾಗೂ ಮೂಲಿಕೆ ಜನ್ಯವಾಗಿರುತ್ತವೆ. ಸೂಕ್ತ ಸ್ಥಳದಿಂದಲೇ ಘಟಕ ಅಂಶಗಳನ್ನು ಆಯ್ದುಕೊಳ್ಳಲಾಗಿದೆ ಹಾಗೂ ಅಂತಿಮ ಉತ್ಪನ್ನದ ತಯಾರಿಕೆ ವೇಳೆ ಕನಿಷ್ಠ ಸಂಸ್ಕರಣೆಯನ್ನು ಉಪಯೋಗಿಸಲಾಗಿದೆ ಎಂಬುದನ್ನು ಹೇರ್‌ಲೈನ್ ಖಾತ್ರಿಗೊಳಿಸುತ್ತದೆ.
ತಲೆಕೂದಲ ಬೆಳವಣಿಗೆಗಾಗಿ ಅಡ್ವಾನ್ಸ್ ಫ್ಯಾಬ್ರಿನ್ ಮ್ಯಾಟ್ರಿಕ್ಸ್ ಚಿಕಿತ್ಸೆ
ಸಾಮಾನ್ಯ ವ್ಯಕ್ತಿಯು ತಾನು ನಿತ್ಯ ಉಪಯೋಗಿಸುವ ಚರ್ಮ ಹಾಗೂ ಕೂದಲು ಆರೈಕೆಯ ಉತ್ಪನ್ನಗಳ ಶ್ರೇಣಿಯಿಂದಾಗಿ ಸುಮಾರು 130 ರಾಸಾಯನಿಕಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುತ್ತಾನೆ'' ಎನ್ನುತ್ತಾರೆ ಹೇರ್‌ಲೈನ್ ಇಂಟರ್ ನ್ಯಾಶನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್‍ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಬಾನಿ ಆನಂದ್.
ಸಲ್ಫೇಟ್‍ಗಳು ಹಾಗೂ ಪ್ಯಾರಾ ಬೀನ್ಸ್ ಸಾಮಾನ್ಯವಾಗಿ ಸೋಪ್‍ಗಳು, ಶಾಂಪೂಗಳು, ಮಾಯಿಶ್ಚರೈಸರ್ಸ್ ಹಾಗೂ ಸನ್‍ಸ್ಕ್ರೀನ್‍ಗಳಲ್ಲಿ ಕಂಡುಬರುತ್ತವೆ. ರಾಸಾಯನಿಕಗಳು ನಿಮ್ಮ ನೆತ್ತಿ, ಚರ್ಮದಿಂದ ನೇರವಾಗಿ ಹೀರಲ್ಪಡುತ್ತವೆ ಹಾಗೂ ಯಾವುದೇ ಫಿಲ್ಟರ್ ಪ್ರಕ್ರಿಯೆಗಳಿಲ್ಲದೆ ನಿಮ್ಮ ಅಂಗಗಳಿಗೆ ರವಾನೆಯಾಗುತ್ತವೆ. ದೀರ್ಘಕಾಲಿಕವಾಗಿ ಉಂಟಾಗುವ ಹಾನಿಯನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಹೇರ್‌ಲೈನ್ ನೈಸರ್ಗಿಕ ಉತ್ಪನ್ನಗಳನ್ನು ಹಾಗೂ ಚಿಕಿತ್ಸಾ ವ್ಯವಸ್ಥೆಯನ್ನು ಬಳಸುವತ್ತ ಗಮನ ಹರಿಸುತ್ತಿದೆ
ಇಂತಹ ನೈಸರ್ಗಿಕ ಉತ್ಪನ್ನಗಳು ಅದ್ಭುತವಾದ ಪರಿಣಾಮಗಳನ್ನು ಖಾತ್ರಿಗೊಳಿಸುತ್ತವೆ. ಯಾಕೆಂದರೆ, ನಿಮ್ಮ ದೇಹವು ನಿಸರ್ಗದೊಂದಿಗೆ ಸುಲಭವಾಗಿ ಕೆಲಸ ಮಾಡುತ್ತದೆ- ಕಾರಣ ನಮ್ಮ ಜೀವ ವ್ಯವಸ್ಥೆ ಮೂಲತಃ ಅದಕ್ಕೇ ಹೊಂದಿಕೊಂಡಿರುತ್ತದೆ. ಫಲಿತಾಂಶಗಳು ಸಣ್ಣ ಅವಧಿಯಲ್ಲೇ ಕಾಣುತ್ತವೆ.
ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಬಗ್ಗೆ
ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್, ಇದೊಂದು ಅಂತಾರಾಷ್ಟ್ರೀಯ ವಿಧಾನಗಳು, ಸಲಕರಣೆಗಳು ಹಾಗೂ ಚಿಕಿತ್ಸಾ ಪ್ಯಾಕೇಜ್‍ಗಳನ್ನು ಹೊಂದಿರುವ, ತಲೆಕೂಲದು, ಚರ್ಮ ಹಾಗೂ ಸೌಂದರ್ಯ ಕುರಿತು ಚಿಕಿತ್ಸೆಗಳನ್ನು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ನೀಡುವ ಸುಸಜ್ಜಿತ ಕ್ಲಿನಿಕ್ ಆಗಿದೆ. ಹೇರ್‌ಲೈನ್ ಬೆಂಗಳೂರಿನ ನಾಲ್ಕು ಕೇಂದ್ರಗಳಾದ ಇಂದಿರಾ ನಗರ, ವೈಟ್ ಫೀಲ್ಡ್, ಜಯನಗರ ಹಾಗೂ ಆರ್.ಟಿ.ನಗರದಲ್ಲಿ ಎಲ್ಲಾ ವಿಧಾನಗಳನ್ನು ನಡೆಸಲು ಮೆಡಿಕಲ್ ಹಾಗೂ ಸೌಂದರ್ಯ ತಜ್ಞರನ್ನೂ ಹೊಂದಿದೆ.



Click it and Unblock the Notifications