Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮೊಸರಿನಿಂದ ನಿಮ್ಮ ಕೂದಲ ಹೊಳಪು ಹೆಚ್ಚಿಸಿ!
ಮೊಸರನ್ನು ಅನೇಕ ವಿಧವಾಗಿ ಬೇರೆ ಬೇರೆ ಸಾಮಾಗ್ರಿಗಳೊಂದಿಗೆ ಬಳಸಬಹುದು. ಮೊಡವೆ, ಸನ್ ಟ್ಯಾನ್ ಮೊದಲಾದ ತೊಂದರೆಗಳನ್ನು ನಿವಾರಿಸುವ ಮೊಸರು ನಿಮ್ಮ ಕೂದಲಿನ ಹೊಳಪಿಗೂ ಸೌಂದರ್ಯಕ್ಕೂ ಸಹಕಾರಿಯಾಗಿದೆ.
ಹೊಟ್ಟನ್ನು ನಿವಾರಿಸಿ ಕೂದಲನ್ನು ಸ್ವಾಭಾವಿಕವಾಗಿ ಕಂಡೀಷನ್ ಮಾಡುವ ಗುಣ ಮೊಸರಿಗಿದೆ. ಮೊಸರನ್ನು ಹಲವಾರು ಸಾಮಾಗ್ರಿಗಳೊಂದಿಗೆ ಮಿಶ್ರ ಮಾಡಿ ಕೂದಲಿನ ಹಲವಾರು ಸಮಸ್ಯೆಗಳನ್ನು ದೂರೀಕರಿಸಬಹುದು.
ನೈಸರ್ಗಿವಾಗಿ ಮೊಸರನ್ನು ಬಳಸಿಕೊಂಡು ಹೇರ್ ಪ್ಯಾಕ್ ಅನ್ನು ಮಾಡುವ ವಿಧಾನವನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗಿದೆ. ಬನ್ನಿ ಹಾಗಿದ್ದರೆ ಆ ಹೇರ್ ಪ್ಯಾಕ್‌ಗಳು ಯಾವುವು ಅವುಗಳನ್ನು ಬಳಸುವ ವಿಧಾನಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪುರುಷರ ಕೂದಲಿನ ಸುರಕ್ಷತೆಗೆ 20 ಮನೆಮದ್ದುಗಳು
ಮೊಸರು ಹಾಗೂ ಲಿಂಬೆ ರಸ:
ದೊಡ್ಡ ಪಾತ್ರೆಯಲ್ಲಿ ಮೊಸರನ್ನು ಕರಗಿಸಿಕೊಳ್ಳಿ. ಅದಕ್ಕೆ ಲಿಂಬೆ ರಸವನ್ನು ಸೇರಿಸಿ ಮಿಶ್ರ ಮಾಡಿ. ನಿಮ್ಮ ಕೂದಲು ಮತ್ತು ತಲೆಬುಡಕ್ಕೆ ಈ ಪ್ಯಾಕ್ ಅನ್ನು ಹಾಕಿ. ನಿಮ್ಮ ತಲೆಬುಡಕ್ಕೆ ಈ ಮಿಶ್ರಣವನ್ನು ಹಾಕಿ. 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಉಗುರು ಬೆಚ್ಚನೆಯ ನೀರಿನಲ್ಲಿ ಮತ್ತು ಹಾಲು ಮಿಶ್ರಿತ ಆಂಟಿ ಡಾಂಡ್ರಫ್ ಶ್ಯಾಂಪೂವನ್ನು ಬಳಸಿ. ಡ್ಯಾಂಡ್ರಫ್ ಅನ್ನು ನಿವಾರಿಸಲು ಇದು ಒಂದು ನೈಸರ್ಗಿಕ ವಿಧಾನವಾಗಿದೆ.
ಮೊಸರು ಮತ್ತು ಈರುಳ್ಳಿ ರಸ:
ಈರುಳ್ಳಿಯನ್ನು ಗ್ರೈಂಡ್ ಮಾಡಿಕೊಳ್ಳಿ. ಚೆನ್ನಾಗಿ ಈರುಳ್ಳಿಯ ರಸ ಹಿಂಡಿಕೊಳ್ಳಿ. ಒಂದು ಬೌಲ್‌ನಷ್ಟು ಮೊಸರಿಗೆ ಈ ರಸವನ್ನು ಬೆರೆಸಿಕೊಳ್ಳಿ. ಈಗ ಮೊಸರು ಮಿಶ್ರಣವನ್ನು 10 ನಿಮಿಷಗಳ ಕಾಲ ಹಚ್ಚಿಕೊಳ್ಳಿ. ನಂತರ
ಮೈಲ್ಡ್ ಶ್ಯಾಂಪೂ ಬಳಸಿ ಕೂದಲನ್ನು ತೊಳೆದುಕೊಳ್ಳಿ:
ಮೊಸರು ಮೆಂತೆ ಸೊಪ್ಪು ಮೆಂತೆ ಸೊಪ್ಪನ್ನು ನುಣ್ಣಗೆ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ನಂತರ ಮೊಸರಿಗೆ ಈ ಪೇಸ್ಟ್ ಅನ್ನು ಮಿಶ್ರ ಮಾಡಿ ತಲೆಗೆ ಹಚ್ಚಿಕೊಳ್ಳಿ. ಹೊಟ್ಟನ್ನು ನಿವಾರಿಸಿ ಕೂದಲನ್ನು ಗಟ್ಟಿ ಮಾಡುವ ಸಾಮರ್ಥ್ಯ ಮೊಸರು ಮತ್ತು ಮೆಂತೆ ಸೊಪ್ಪಿಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: 10 ದಿನಗಳಲ್ಲಿ ಸುಂದರ ತ್ವಚೆ ಪಡೆಯಿರಿ!
ಮೊಸರು ಮತ್ತು ಮೆಹೆಂದಿ:
ಮೊಸರು ನಿಮ್ಮ ಕೂದಲಿಗೆ ಒಳ್ಳೆಯ ಕಂಡೀಷನರ್ ಆಗಿ ಕಾರ್ಯನಿರ್ವಹಿಸುತ್ತದೆ. ನೆನೆಸಿದ ಮೆಹೆಂದಿ ಎಲೆಗಳನ್ನು ರುಬ್ಬಿಕೊಂಡು ಅದನ್ನು ಮೊಸರಿನೊಂದಿಗೆ ಮಿಶ್ರ ಮಾಡಿ ತಲೆಗೆ ಹಚ್ಚಿಕೊಳ್ಳಿ. ನಿಮ್ಮ ಕೂದಲು ಸಿಲ್ಕಿ ಮತ್ತು ಹೊಳಪಿನಿಂದ ಕೂಡಿರುವುದು ಖಂಡಿತ.
ನಿಮ್ಮ ಕೂದಲಿನಲ್ಲಿ ಮೊಸರು ಹೇರ್ ಪ್ಯಾಕ್ ಅನ್ನು ತುಂಬಾ ಹೊತ್ತು ಇಟ್ಟುಕೊಳ್ಳಬೇಡಿ. ಇದು ತಣ್ಣನೆಯ ಗುಣವನ್ನು ಹೊಂದಿರುವುದರಿಂದ ಮೊಸರು ಹೆಚ್ಚು ಸಮಯ ನಿಮ್ಮ ತಲೆಯಲ್ಲಿ ಇದ್ದರೆ ನಿಮಗೆ ನೆಗಡಿ ಉಂಟಾಗಬಹುದು.



Click it and Unblock the Notifications
