Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆರೋಗ್ಯಕಾರಿ ಕೂದಲಿಗಾಗಿ ಪೋಷಕಾಂಶಭರಿತ ಆಹಾರ ಪದ್ಧತಿಗಳು
ಭುಜದ ಮೇಲೆ ಹಾರಾಡುವಂಥ ಹೊಳಪಿನ ಕೂದಲು ಬೇಕು ಅಂತಾನೇ ಆಸೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಸಿಕ್ಕುಸಿಕ್ಕಾಗುವ ಕೂದಲ ಮೇಲೆ ವಿಪರೀತ ಸಿಟ್ಟಾಗುತ್ತೀರ. ಒರಟಾದ ಹಾಗೂ ಕಳೆಗುಂದಿದ ಕೂದಲ ಬಗ್ಗೆ ಬೇಸರಿಸಬೇಡಿ. ನಿಮ್ಮ ಕೂದಲನ್ನು ಕೂಡ ಹೊಳಪಾಗಿಸಿಕೊಳ್ಳಬಹುದು. ಹಾಗಾದರೆ ಇಂತಹ ಸಮಸ್ಯೆಯಿಂದ ಹೊರಬರುವುದು ಹೇಗೆ? ಚಿಂತಿಸಬೇಡಿ ಇಂದು ಬೋಲ್ಡ್ ಸ್ಕೈ ಆರೋಗ್ಯಕರ ಕೂದಲು ಬೆಳೆಯಲು ನಿಮಗೆ ಸಹಾಯಕವಾಗುವ ಪೋಷಕಾಂಶಭರಿತ ಆಹಾರಗಳನ್ನು ಪರಿಚಯಿಸುತ್ತಿದೆ
ಕಬ್ಬಿಣ ಮತ್ತು ಸತು (ಜಿಂಕ್) ಸೇರಿರುವ ಆಹಾರಗಳು

ಕಬ್ಬಿಣ ಮತ್ತು ಸತುವಿನ ಅಂಶಗಳು ಕೂದಲ ಕೋಶಕವನ್ನು ಬೆಳೆಯಲು ಸಹಾಯಮಾಡುತ್ತವೆ ಎಂದು ಕ್ಲೀವ್ಲ್ಯಾಂಡ್ ಕ್ಲಿನಿಕ್ ಚರ್ಮರೋಗ ವೈದ್ಯ ವಿಲ್ಮಾ ಬರ್ಗ್‌ಫೆಲ್ಡ್ ಹೇಳುತ್ತಾಳೆ. ವಾರದಲ್ಲಿ ಎರಡುಬಾರಿ ಎರಡೂ ಪೋಷಕಾಂಶಗಳಿರುವ ನೇರ ಕೆಂಪು ಮಾಂಸವನ್ನು ಸೇವಿಸಬೇಕೆಂದು ಅವಳು ಹೇಳುತ್ತಾಳೆ. ಕಬ್ಬಿಣಾಂಶದ ಪ್ರಭಾವವನ್ನು ಹೆಚ್ಚಿಸಲು ಮಾಂಸರಹಿತ ಮೂಲಗಳಾದ ಸೋಯಬೀನ್ಸ್ ಅಥವ ಬೇಳೆ ಮತ್ತು ವಿಟಮಿನ್ ಸಿ ಭರಿತ ಕಿತ್ತಲೆ ಹಣ್ಣು ಇವರಡನ್ನು ಜೊತೆ ಮಾಡಿ ಸೇವಿಸಿ. ಆಲೂಗಡ್ಡೆಯ ಕರಾಮತ್ತಿನಲ್ಲಿದೆ ಕೇಶ ಸಮಸ್ಯೆಗೆ ಪರಿಹಾರ
ವಿಟಮಿನ್ ಡಿ
ಹಲವಾರು ಅಧ್ಯಯನಗಳ ಪ್ರಕಾರ ವಿಟಮಿನ್ ಡಿ ಕೂದಲು ಬೆಳವಣಿಗೆ ಸಕ್ರಿಯಗೊಳಿಸಲು ಸಹಾಯಾಮಾಡಬಹುದು ಎಂಬುದನ್ನು ಕಂಡುಹಿಡಿದಿದ್ದಾರೆ. ಆದಾಗ್ಯೂ ವಿಟಮಿನ್ ಡಿ ನಲ್ಲಿ ಸ್ವಲ್ಪ ಸಮಸ್ಯೆಯಿದೆ. ಕೆಲವು ಆಹಾರಗಳಲ್ಲಿ ಅದು ನೈಸರ್ಗಿಕವಾಗಿ ಇರುತ್ತದೆ ಮತ್ತು ಬಿಸಿಲಿಗೆ ಮೈಯೊಡ್ಡಿ ಕೆಲವು ನಿಮಿಷಗಳ ಕಾಲ ಕುಳಿತರೆ ನಿಮ್ಮ ದೇಹಕ್ಕೆ ಹೆಚ್ಚು ವಿಟಮಿನ್ ಡಿ ಉತ್ಪಾದಿಸಲು ಸಹಾಯಮಾಡಬಹುದಾದರೂ ಹೆಚ್ಚಿನ ಸಮಯ ಮೈಯೊಡ್ಡುವುದರಿಂದ ಸೂರ್ಯನ ಕಿರಣದಲ್ಲಿರುವ ಯು.ವಿ ಕಿರಣಗಳಿಂದ ಅಪಾಯವಾಗುವುದೆಂದು ಅನೇಕ ತಜ್ಞರು ಅದನ್ನು ವಿರೋಧಿಸಲು ಸಲಹೆಕೊಟ್ಟಿರುತ್ತಾರೆ.
ಪ್ರೋಟೀನ್
ಪ್ರೋಟೀನ್ ನಮ್ಮ ಜೀವಕೋಶಗಳ ಬೆಳವಣಿಗೆಗೆ ಉತ್ತೇಜನ ಕೊಡುತ್ತದೆ ಮತ್ತು ಅದರ ದುರಸ್ತಿಯನ್ನೂ ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯರು ದಿನವೊಂದಕ್ಕೆ ಕನಿಷ್ಟ ಪಕ್ಷ 46 ಗ್ರಾಮ್ಸ್ (3 ಔನ್ಸ್ ಕೋಳಿಮಾಂಸದಲ್ಲಿ 23 ಔನ್ಸ್ ಇರುತ್ತವೆ) ಪೋಷಕಾಂಶವನ್ನು ತೆಗೆದುಕೊಳ್ಳಬೇಕು. ನೀವು ನಿಖರವಾಗಿ ಎಷ್ಟು ಪ್ರಮಾಣದ ಪ್ರೋಟೀನ್ ತೆಗೆದುಕೊಳ್ಳಬೇಕೆಂಬುದನ್ನು ಈ ಮಾರ್ಗದರ್ಶಿಯನ್ನು ಅನುಸರಿಸಿ. ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು
ಒಮೇಗಾ-3 ಫ್ಯಾಟಿ ಆಸಿಡ್ಸ್
ಒಣ ಕೂದಲು (ಹೈಡ್ರೇಟೆಡ್) ಬೇಕಿದ್ದಲ್ಲಿ ವಾರಕ್ಕೆಅಡು ಬಾರಿ ಫ್ಯಾಟಿ ಮೀನು (ಸಾಲ್ಮನ್ ತರಹ) ಸೇವಿಸಿ ಅಥವಾ ಒಂದು ಗ್ರಾಮಿನಷ್ಟು ಡಿ.ಹೆಚ್.ಎ. (docosahexaenoic acid) ಮತ್ತು ಇ.ಪಿ.ಎ. (eicosapentaenoic acid) ಸಹಾಯಕ ಪೋಷಕಾಂಶವನ್ನು ತೆಗೆದುಕೊಳ್ಳಿ. ರೇಷ್ಮೆಯಂತಹ ಕೂದಲಿನ ಜೊತೆಗೆ ಒಮೇಗಾ-3 ಖಿನ್ನತೆ ನಿವಾರಣೆಗೆ ಮತ್ತು ಹೃದಯ ಕಾರ್ಯಕ್ಕೆ ಸಹಾಯಮಾಡುವುದೆಂದು ಸಾಬೀತಾಗಿದೆ.
ಬಯೋಟಿನ್
ಕೋಳಿ ಮೊಟ್ಟೆಗಳಲ್ಲಿ ವಿಟಮಿನ್ ಬಿ ಅಧಿಕವಾಗಿದ್ದು ಕೂದಲಿನ ಬೆಳವಣಿಗೆಗೆ ಅಗತ್ಯವಾಗಿದೆ. (ಪ್ರೋಟೀನ್, ಕೋಲೀನ್ ಮತ್ತು ವಿಟಮಿನ್ ಡಿ ಇವುಗಳಿಗೂ ಇದು ಒಂದು ಉತ್ತಮ ಮೂಲವಾಗಿದೆ). ನಿಮಗೆ ಮೊಟ್ಟೆ ಇಷ್ಟವಿಲ್ಲವೇ? ಹಾಗಿದ್ದಲ್ಲಿ ಪ್ರತಿದಿನ 30 ಎಮ್.ಸಿ. ಜಿ.(mcg) ಸಹಾಯಕ ಔಷಧವನ್ನು ತೆಗೆದುಕೊಳ್ಳಿ.



Click it and Unblock the Notifications




