Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಪ್ರತ್ಯಕ್ಷ ತಲೆಕೂದಲ ಕಸಿ ಶಸ್ತ್ರಚಿಕಿತ್ಸೆಯ ಯಶಸ್ವಿ ಪ್ರಯೋಗ
ಬೆಂಗಳೂರಿನ ಆರ್. ಟಿ.ನಗರದಲ್ಲಿರುವ ಹೇರ್‌ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನಲ್ಲಿ ಗುರುವಾರ ನಡೆದ ಪ್ರತ್ಯಕ್ಷ ತಲೆಕೂದಲ ಕಸಿಗೆ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು, ಭವಿಷ್ಯದ ತಲೆಕೂದಲ ಕಸಿ ರೋಗಿಗಳು ಸಾಕ್ಷಿಯಾದರು.
ಅಗ್ರಗಣ್ಯ ಡೆರ್ಮೆಟೋಸರ್ಜನ್ ಡಾ.ಕವೀಶ್ ಚೌಹಾಣ್ ಅವರು ಬೆಂಗಳೂರಿನ ಪ್ರಮುಖ ಸಾಫ್ಟ್ ವೇರ್ ಕಂಪನಿಯೊಂದರ ಟೆಕಿ ಮೇಲೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದರು. ವೈದ್ಯಕೀಯ ಸಹೋದ್ಯೋಗಿಗಳಿಗೆ ಇದೊಂದು ಅತ್ಯಂತ ಮಾಹಿತಿಯುಕ್ತ ಮತ್ತು ಶಿಕ್ಷಣ ನೀಡುವಂತಹ ಸೆಶನ್ ಆಗಿತ್ತು.

ಈ ಸೆಶನ್ ಬೆಳಗ್ಗೆ 11.30ಕ್ಕೆ ಆರಂಭಗೊಂಡಿತ್ತು ಮತ್ತು ರಾತ್ರಿ 10.00 ಗಂಟೆ ತನಕ ಮುಂದುವರಿದಿತ್ತು. ಈ ಸೆಶನ್‍ನಲ್ಲಿ ಎಫ್‍ಯುಇ (ಫಾಲಿಕ್ಯುಲರ್ ಯುನಿಟ್ ಎಕ್ಸ್‍ಟ್ರಾಕ್ಷನ್) ವಿಧಾನದ ಮೂಲಕ 10,000ಕ್ಕೂ ಕುಳಿಗಳನ್ನು ಕಸಿ ಮಾಡಲಾಯಿತು.
ಈ ಸೆಶನ್‍ನ ನೇರ ಪ್ರಸಾರವನ್ನು ಭಾರತದಾದ್ಯಂತ ಅನೇಕ ಮಂದಿ ಹೇರ್‌ಲೈನ್ ವೆಬ್‍ಸೈಟ್‍ಗೆ ಲಾಗ್ ಇನ್ ಆಗಿ ಪೂರ್ತಿ ತಲೆಕೂದಲ ಕಸಿ ವಿಧಾನವನ್ನು ವೀಕ್ಷಿಸಿದರು. ಇಂತಹ ವೆಬಿನಾರ್ ಭಾರತದಲ್ಲೇ ಪ್ರಪ್ರಥಮವಾಗಿದೆ.
ಪ್ರತ್ಯಕ್ಷ ತಲೆಕೂದಲ ಕಸಿ ಕುರಿತು ಮಾತನಾಡಿದ ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬನಿ ಆನಂದ್, ಈ ಕಾರ್ಯಕ್ರಮವು ಚರ್ಚೆಯನ್ನು ಹುಟ್ಟುಹಾಕಲಿದೆ ಮತ್ತು ಬೆಳೆಯುತ್ತಲೇ ಇರುವ ತಲೆಕೂದಲ ಕಸಿ ವಿಧಾನಗಳ ಕ್ಷೇತ್ರದಲ್ಲಿ ಆಸಕ್ತಿಕರ ಒಳನೋಟಗಳನ್ನು ಬೀರುತ್ತದೆ ಎಂದು ನಾವು ನಂಬಿದ್ದೇವೆ. ಇದನ್ನು ಮಾಹಿತಿಯುಕ್ತವಾಗಿಸುವುದು ಹಾಗೂ ಇದರೊಳಗೆ ಚರ್ಚೆಯ ಅಂಶಗಳನ್ನು ಹುಡುಕುವುದೇ ಇದರ ಉದ್ದೇಶವಾಗಿದೆ''ಎಂದು ಹೇಳಿದರು.
ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್:
ಹೇರ್‌ಲೈನ್ ಇಂಟರ್‌ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್, ಇದೊಂದು ಅಂತಾರಾಷ್ಟ್ರೀಯ ವಿಧಾನಗಳು, ಸಲಕರಣೆಗಳು ಹಾಗೂ ಚಿಕಿತ್ಸಾ ಪ್ಯಾಕೇಜ್‍ಗಳನ್ನು ಹೊಂದಿರುವ, ತಲೆಕೂಲದು, ಚರ್ಮ ಹಾಗೂ ಸೌಂದರ್ಯ ಕುರಿತು ಚಿಕಿತ್ಸೆಗಳನ್ನು ಪುರುಷ ಹಾಗೂ ಮಹಿಳೆಯರಿಬ್ಬರಿಗೂ ನೀಡುವ ಸುಸುಜ್ಜಿತ ಕ್ಲಿನಿಕ್ ಆಗಿದೆ. ಹೇರ್‌ಲೈನ್, ಬೆಂಗಳೂರಿನ ತನ್ನ ನಾಲ್ಕು ಕೇಂದ್ರಗಳಲ್ಲಿ ಎಲ್ಲಾ ವಿಧಾನಗಳನ್ನು ನಡೆಸಲು ಮೆಡಿಕಲ್ ಹಾಗೂ ಸೌಂದರ್ಯ ತಜ್ಞರನ್ನೂ ಹೊಂದಿದೆ.



Click it and Unblock the Notifications
