Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಆಕರ್ಷಕ ಕೂದಲು ಬರಿ 5 ನಿಮಿಷಗಳಲ್ಲಿ
ದೇವರೇ ಇವತ್ತೇ ಹೀಗೆಲ್ಲಾ ಆಗಬೇಕಿತ್ತೇ ಎಂದು ಯಾವತ್ತಾದರೂ ನಿಮ್ಮ ಕೂದಲಿನ ಬಗ್ಗೆ ನೀವು ಯೊಚಿಸಿದ್ದಿದೆಯೇ? ಕೂದಲು ನಿಮ್ಮ ಅತ್ಯಂತ ದೊಡ್ಡ ಶತ್ರುವೇ? ಬೇಸರಿಸದಿರಿ ಇದು ಕೇವಲ ನಿಮಗಷ್ಟೇ ಆಗುವುದಲ್ಲ. ಎಲ್ಲರ ಸಮಸ್ಯೆಯೂ ಆಗಿದೆ. ಹಾಗೂ ನಿಮ್ಮ ಅತಿ ಪ್ರಮುಖ ಕೆಲಸದ ದಿನಗಳಲ್ಲೇ ಹೀಗೆ ನಡೆಯುತ್ತದೆ.
ಇದಕ್ಕಾಗಿ ನೀವು ಮೊದಲು ಕಲಿಯಬೇಕಾಗಿರುವ ವಿಷಯವೆಂದರೆ ಇಂತಹ ಕೂದಲಿನ ಸಮಸ್ಯೆ ಬಂದ ದಿನ ಅದನ್ನು ಹೇಗೆ ನಿಯಂತ್ರಣದಲ್ಲಿಡಬೇಕೆಂಬುದು. ನೀವಿದನ್ನು ಕಲಿತಿದ್ದೇ ಆದಲ್ಲಿ ನಿಮ್ಮ ಸಮಸ್ಯೆ ಪರಿಹಾರವಾದಂತೆಯೆ. ಹೀಗೆ ಕಲಿತಿತಿರೆಂದರೆ ನೀವು ಇಂಟರ್ ವ್ಯೂ ಗೆ ಬೇಗನೆ ಸಿದ್ಧರಾಗಿ ಹೋಗಬಹುದು ಅಥವಾ ನಿಮ್ಮ ಅಗತ್ಯ ಕೆಲಸಗಳಿಗೆ ಸರಿಯಾದ ಸಮಯದಲಿ ತಲುಪಬಹುದು.

ಇದನ್ನು ಕಲಿಯುವುದು ಎಷ್ಟು ಅಗತ್ಯವೋ ಹಾಗೆಯೇ ಅಷ್ಟೇನು ಸುಲಭವಲ್ಲ. ಆದರೆ ಈ ಕೆಳಗಿನ ಅಂಶಗಳನ್ನು ಓದಿದ ಬಳಿಕ ನಿಮ್ಮ ಸಮಸ್ಯೆ ಪರಿಹಾರವಾದಂತೆ.
ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಚಳಿಗಾಲದಲ್ಲಿ ಕೇಶ ರಕ್ಷಣೆ: ಮಾಡಲೇಬಾರದ ತಪ್ಪುಗಳು
1.ಸ್ಪ್ರೇ : ನಿಮ್ಮ ಕೂದಲು ಗುಂಗುರು ಕೂದಲಾಗಿದ್ದರೆ ನೀವು ಎಷ್ಟೇ ಸರಿಯಾಗಿ ಕೂದಲನ್ನು ಬಾಚಿ ಮಲಗಿದರೂ ಮರುದಿನಕ್ಕೆ ಸಮಸ್ಯೆಯಾಗುತ್ತದೆ. ಇಂತಹ ಕೂದಲು ಮತ್ತು ಅಗತ್ಯ ಸಂದರ್ಭಗಳಿಗೆ ಸ್ಪ್ರೇ ಬಹಳ ಸಹಕಾರಿ. ಹೀಗಾಗಿ ಗುಂಗುರು ಕೂದಲಿರುವವರೆಲ್ಲರೂ ಕಂಡೀಷನರ್ ಸ್ಪ್ರೆ ಯನ್ನು ಜೊತೆಗೊಯ್ಯುವುದು ಅತೀ ಅಗತ್ಯ.
2.ಮಡಿಕೆಗಳಾಗಿ ಮಾಡಿ: ನಿಮ್ಮ ಕೂದಲು ಎಣ್ಣೆಯಂತಾಗಿದ್ದು ಅಗತ್ಯ ದಿನದಲ್ಲಿ ನಿದ್ರಾದೇವಿ ನಿಮ್ಮನ್ನು ಹೊರಡುವ ಸಮಯದಲ್ಲಿ ಎಬ್ಬಿಸಿದರೆ ಹೇಗಿರುತ್ತದೆ? ಯೋಚಿಸದರಿ. ಕೂದಲನ್ನು ಮಡಿಕೆಗಳಾಗಿ ಮಾಡುವುದು ನಿಮ್ಮ ಎಣ್ಣೆಗೂದಲನ್ನು ಸರಿಮಾಡುತ್ತದೆ. ಇದು ನಿಮ್ಮನ್ನು ಆಕರ್ಷಕವನ್ನಾಗಿಯೂ ಕಾಣಿಸುತ್ತದೆ.
3.ಕೂದಲು ಬಾಚುವ ಉಪಾಯಗಳು: ನೀವು ಆಕರ್ಷಕ ನೊಟವನ್ನು ಹೊಂದಬೇಕಾದರೆ ಕೂದಲನ್ನು ನಿಮ್ಮ ಮುಖದಿಂದ ದೂರಕ್ಕೆ ಬಾಚಿ. ಇದು ಬೆಳಗ್ಗೆ ಬೇಗನೆ ಹೊರಡುವ ದಿನಗಳಂದೂ ಮಾಡಬಹುದಾದ ಕೆಲಸ. ಕೂದಲನ್ನು ಹಿಂದಕ್ಕೆ ಬಾಚುವುದು ಬೇಗನೆ ಹೊರಡುವ ದಿನಗಳಲ್ಲಿ ಮಾಡಲೇಬೇಕಾದ ಕೆಲಸ.
4.ಕೂದಲಿನ ನೋಟ ಬದಲಾಯಿಸಿ: ನಿಮ್ಮ ಕೂದಲಿನ ನೋಟವನ್ನು ಬದಲಾಯಿಸಿ ಆಕರ್ಷಕವಾಗಿ ಕಾಣಬೇಕೆಂದರೆ ಅದಕ್ಕೂ ಮೂರು ದಾರಿಗಳಿವೆ. ಮೊದಲನೆಯದು ಸ್ಕಾರ್ಫ್ ಬಳಸಬಹುದು, ಇದು ನಿಮಗೆ ಹೊಸ ನೋಟವನ್ನು ನೀಡುವ ಜೊತೆಗೆ ಕೂದಲು ಸರಿಯಿಲ್ಲದಿರುವುದನ್ನೂ ಮರೆಮಾಚುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲೇಖನಗಳನ್ನು ಓದಿ: ಮೊಟ್ಟೆ ಬಳಸಿ ಕೂದಲನ್ನು ರಕ್ಷಿಸಿಕೊಳ್ಳಿ!
5.ದೊಡ್ಡ ಕೂದಲಿನ ಸಿಂಬಿ: ಹುಡುಗಿಯರಿಗೆ ಕೂದಲಿನ ಆರೈಕೆ ಮಾಡಬೇಕಾದರೆ ಬಹಳ ಕಷ್ಟ. ಇದಕ್ಕಾಗಿ ಕೂದಲಿನ ಸಿಂಬಿಯೂ ಒಂದೆ ಒಳ್ಳೆಯ ಯೋಚನೆ. ಇದು ನಿಮ್ಮ ಬಾಚದ ಕೂದಲನ್ನು ಮರೆಮಾಡುತ್ತದೆ. ಇದು ನಿಮಗೆ ಆಕರ್ಷಕ ನೋಟವನ್ನು ಕೆಲವೇ ನಿಮಿಷಗಳಲ್ಲಿ ನೀಡುತ್ತದೆ. ಇಷ್ಟೆಲ್ಲಾ ಗೊತ್ತಾದ ಬಳಿಕ ಕೂದಲಿನ ಬಗ್ಗೆ ಹೆಚ್ಚು ಯೋಚಿಸಬೇಡಿ. ಕೂದಲಿನ ಸಮಸ್ಯೆಯನ್ನು ಮರೆತುಬಿಡಿ.



Click it and Unblock the Notifications