Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಆರೋಗ್ಯಕರ ಕೂದಲಿಗೆ ಮನೆಮದ್ದುಗಳು
ದುಬಾರಿಯಾಗಿರುವ ಸಲೂನ್ ಗಳಿಗೆ ಭೇಟಿ ನೀಡಿ ದುಬಾರಿ ಚಿಕಿತ್ಸೆ ಮತ್ತು ಹಲವಾರು ರೀತಿಯ ಕಂಡೀಷನರ್ ಹಾಗೂ ಶಾಂಪೂ ಪ್ರಯತ್ನಿಸುವ ಹೊರತಾಗಿಯೂ ಕೂದಲು ತುಂಬಾ ಆರೋಗ್ಯವಾಗಿ ಕಾಣುವಂತೆ ಮಾಡಬಹುದು.
ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿಕೊಂಡು ಆರೋಗ್ಯಕರ ಕೂದಲಿಗೆ ಮನೆಮದ್ದು ಮಾಡಬಹುದು. ಬಿಯರ್ ನಿಂದ ಬಾಳೆಹಣ್ಣಿನ ತನಕ ಯಾವುದಾದರೂ ಮನೆಮದ್ದು ಬಳಸಿ ಹೊಳೆಯುವ ಆರೋಗ್ಯಕರ ಕೂದಲನ್ನು ಸುಲಭವಾಗಿ ಪಡೆಯಬಹುದು. ಇದರ ಬಗ್ಗೆ ವಿವರ ಪಡೆಯುವ..
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಟ್ಟೆ ಬಳಸಿ ಕೂದಲನ್ನು ರಕ್ಷಿಸಿಕೊಳ್ಳಿ!

ಆರೋಗ್ಯಕರ ಕೂದಲಿಗೆ ಬಾಳೆಹಣ್ಣು
ಬಾಳೆಹಣ್ಣಿನಲ್ಲಿರುವ ಉನ್ನತ ಮಟ್ಟದ ಪೊಟಾಶಿಯಂ ಕೂದಲಿನ ಆರೋಗ್ಯ ಮತ್ತು ನೈಸರ್ಗಿಕ ಸ್ಥಿತಿಸ್ಥಾಪಕತ್ವ ಸುಧಾರಿಸಲು ನೆರವಾಗುತ್ತದೆ. ಬಾಳೆಹಣ್ಣನ್ನು ಒಂದು ಬೌಲ್ ಗೆ ಹಾಕಿ ಮಿಶ್ರ ಮಾಡಿ. ಇದನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. 15 ನಿಮಿಷ ತನಕ ಹಾಗೆ ಬಿಡಿ ಮತ್ತು ಶಾಂಪೂ ಹಾಕಿ ತೊಳೆಯಿರಿ. ಇದು ಒಣ ಹಾಗೂ ಕೂದಲಿಗೆ ಹಾನಿಯಾಗುವುದನ್ನು ತಡೆಯುತ್ತದೆ.

ಮೊಟ್ಟೆಯ ಹಳದಿ ಲೋಳೆ
ಮೊಟ್ಟೆಯ ಹಳದಿ ಲೋಳೆಯನ್ನು ನಿಮ್ಮ ತಲೆ ಬುರುಡೆಗೆ ಮಸಾಜ್ ಮಾಡಿ ಅಥವಾ ಮೂರು ಮೊಟ್ಟೆಗಳ ಹಳದಿ ಲೋಳೆ, ಒಂದು ಸಣ್ಣ ಚಮಚ ಆಲಿವ್ ಎಣ್ಣೆ ಮತ್ತು ಮೂರು ಹನಿ ವಿಟಮಿನ್ ಇ ನಿಮ್ಮ ಕೂದಲಿಗೆ ಅದ್ಭುತವನ್ನು ಮಾಡಬಹುದು. ಇದನ್ನು ಹತ್ತು ನಿಮಿಷಗಳ ಕಾಲ ಹಾಗೆ ಬಿಟ್ಟ ಬಳಿಕ ತೊಳೆದು ಶಾಂಪೂ ಹಾಕಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲವಾದರೂ ಹೀಗೆ ಮಾಡಿ. ಈ ವಿಧಾನದಿಂದ ಕೂದಲನ್ನು ನಯ ಮಾಡಿ ತೇವಾಂಶ ನೀಡಬಹುದು.

ಬಿಯರ್ ಚಿಕಿತ್ಸೆ
ಅತ್ಯಂತ ಜನಪ್ರಿಯ ಚಿಕಿತ್ಸೆಯೆಂದರೆ ಕೂದಲನ್ನು ಸ್ವಲ್ಪ ಬಿಯರ್ ಹಾಕಿ ತೊಳೆಯುವುದು. ಒಂದು ಸ್ಪ್ರೇ ಬಾಟಲಿಗೆ ಬಿಯರ್ ಹಾಕಿ. ಶಾಂಪೂ ಹಾಕಿ ಮತ್ತು ಒಣ ಕೂದಲನ್ನು ಟವೆಲ್ ನಿಂದ ಒರೆಸಿ. ಕೂದಲಿಗೆ ಬಿಯರ್ ಸ್ಪ್ರೇ ಮಾಡಿ. ಈ ಮನೆಮದ್ದನ್ನು ನಂಬಿರುವವರ ಪ್ರಕಾರ ಇದು ಕೂದಲಿಗೆ ಒಳ್ಳೆಯ ಕಾಂತಿ ನೀಡುತ್ತದೆ.

ಎಣ್ಣೆ ಮಸಾಜ್
ಬಿಸಿ ಎಣ್ಣೆಯಿಂದ ತಲೆ ಬುರುಡೆಗೆ ಮಸಾಜ್ ಮಾಡುವುದು ಭಾರತದಲ್ಲಿರುವ ಅತ್ಯಂತ ಜನಪ್ರಿಯ ಮದ್ದು. ಇದಕ್ಕೆ ನೀವು ತೆಂಗಿನ ಅಥವಾ ಆಲಿವ್ ಎಣ್ಣೆ ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದು ಒಂದು ಗಂಟೆ ಕಾಲ ಹಾಗೆ ಇರಲಿ. ಇದೇ ರೀತಿ ವಿನೇಗರ್ ಜತೆಗೆ ನಿಂಬೆರಸ ಮಿಶ್ರಣ ಮಾಡಿದರೆ ಆಗ ತಲೆಹೊಟ್ಟು ಸಮಸ್ಯೆ ಹೋಗಲಾಡಿಬಹುದು.

ಆಲಿವ್ ಎಣ್ಣೆಯ ಚಿಕಿತ್ಸೆ
ಸಣ್ಣ ಚಮಚದಲ್ಲಿ ನಾಲ್ಕು ಸಲ ಆಲಿವ್ ಎಣ್ಣೆ ಕೂದಲಿಗೆ ಹಾಕಿ. ಎಣ್ಣೆಯನ್ನು ತಲೆ ಬುರುಡೆ ಮತ್ತು ಕೂದಲಿಗೆ ಮಸಾಜ್ ಮಾಡಿ. 30 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಆಲಿವ್ ಎಣ್ಣೆಯನ್ನು ರಾತ್ರಿಯಿಡಿ ಹಾಗೆ ಬಿಡಬೇಕು. ಆಲಿವ್ ಎಣ್ಣೆ ಕೂದಲನ್ನು ಬಲಗೊಳಿಸಿ ಉದುರುವುದನ್ನು ತಡೆಯುತ್ತದೆ.

ಆಮ್ಲಾ ಪುಡಿ ಮತ್ತು ನಿಂಬೆ ರಸದ ಮಿಶ್ರಣ
ಅಮ್ಲಾ ಹುಡಿ ಮತ್ತು ನಿಂಬೆರಸ ಕೂದಲಿಗೆ ಹಚ್ಚಿದರೆ ಅದರಿಂದ ಕೂದಲು ಬಲಿಷ್ಠವಾಗುತ್ತದೆ. ಒಂದು ಸಣ್ಣಚಮಚ ಆಮ್ಲಾ ಹುಡಿ ಮತ್ತು ಒಂದು ನಿಂಬೆಹಣ್ಣಿನ ರಸವನ್ನು ಸಣ್ಣ ಬೌಲ್ ನಲ್ಲಿ ಹಾಕಿ ಮಿಶ್ರಣ ಮಾಡಿ. ರಸದಲ್ಲಿ ಹುಡಿ ಸರಿಯಾಗಿ ಮಿಶ್ರಣವಾಗಲಿ. ಈ ಮಿಶ್ರಣವನ್ನು ಕೂದಲಿನ ಬುಡ ಮತ್ತು ಬುರುಡೆಗೆ ಸರಿಯಾಗಿ ಮಸಾಜ್ ಮಾಡಿ 20 ನಿಮಿಷ ಬಿಟ್ಟು ಕೂದಲು ತೊಳೆದು ಶಾಂಪೂ ಹಾಕಿ.

ಸುವಾಸನೆಯ ಕೂದಲಿಗೆ ಸ್ಟ್ರಾಬೆರಿ
ಎಂಟು ಸ್ಟ್ರಾಬೆರಿ ಹಣ್ಣುಗಳನ್ನು ಒಂದು ಸಣ್ಣ ಚಮಚ ಮೇಯನೇಸ್ ನೊಂದಿಗೆ ಮಿಶ್ರ ಮಾಡಿ. ತೊಳೆದ ಕೂದಲಿಗೆ ಇದನ್ನು ಮಸಾಜ್ ಮಾಡಿ. ಶಾವರ್ ಕ್ಯಾಪ್ ಹಾಕಿ ಮುಚ್ಚಿ. ಇದರ ಬಳಿಕ ಒಣ ಬಟ್ಟೆಯಿಂದ. ಶಾಂಪೂ ಮತ್ತು ಕಂಡೀಷನರ್ ನ ಮಿಶ್ರಣದಿಂದ ಕೂದಲು ತೊಳೆಯಿರಿ. ಈ ಸುವಾಸನೆಯ ಮಿಶ್ರಣದಲ್ಲಿ ಸ್ಟ್ರಾಬೆರಿ ಸಮೃದ್ಧವಾಗಿದ್ದು, ಇದು ಕೂದಲನ್ನು ಕಂಡೀಷನರ್ ಮಾಡಿ ಕಾಂತಿ ನೀಡುತ್ತದೆ.



Click it and Unblock the Notifications