Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಹೇರ್‍ಲೈನ್ ವತಿಯಿಂದ ಬಿಳಿ ಕೂದಲು ತಡೆಗೆ ಆ್ಯಂಟಿ ಗ್ರೇ- ಹರ್ಬಲ್ ಕ್ಯಾಪ್ಸೂಲ್
ಬೆಂಗಳೂರು ಮೂಲದ ಹೇರ್‍ಲೈನ್ ಇಂಟರ್‌ನ್ಯಾಷನಲ್ ಸಂಶೋಧನೆ ಮತ್ತು ಚಿಕಿತ್ಸಾ ಕೇಂದ್ರ ಆ್ಯಂಟಿ ಗ್ರೇ ಎಂಬ ಹರ್ಬಲ್ ಮಾತ್ರೆಯನ್ನು ಹೆಮ್ಮೆಯಿಂದ ಬಿಡುಗಡೆ ಮಾಡಿದೆ.
ಈ ಮಾತ್ರೆ ಹರ್ಬಲ್ ಪೌಷ್ಠಿಕಾಂಶ ಅಂಶವನ್ನು ಒಳಗೊಂಡಿದ್ದು ತರುಣಾವಸ್ಥೆಯಲ್ಲಿರುವಾಗಲೇ ಕೂದಲು ಬಿಳಿಯಾಗುವುದನ್ನು ತಡೆಗಟ್ಟುತ್ತದೆ. ಹೇರ್‍ಲೈನ್ ಸಂಸ್ಥೆ ಸತತ ಸಂಶೋಧನೆ ನಡೆಸಿ ಈ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದು, ಸಿರಿ 4 ಲೈಫ್ ಫಾರ್ಮಸಿಟಿಕಲ್ ಕಂಪನಿ ಮಾತ್ರೆಯನ್ನು ತಯಾರಿಸುತ್ತಿದೆ.
ಕ್ಯಾಪ್ಸೂಲ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೇರ್‍ಲೈನ್ ಇಂಟರ್‌ನ್ಯಾಷನಲ್ ಸಂಸ್ಥೆಯ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಬಾನಿ ಆನಂದ್, ಹೇರ್‍ಲೈನ್ ಇಂಟರ್‌ನ್ಯಾಷನಲ್ ಸಂಸ್ಥೆ ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸಾ ವಿಧಾನಗಳಲ್ಲಿ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವುದರಲ್ಲಿ ಮುಂಚೂಣಿಯಲ್ಲಿರುತ್ತದೆ.

ಬೆಂಗಳೂರು, ಮುಂಬೈ ಮತ್ತು ದೆಹಲಿ ಮಹಾನಗರಗಳಲ್ಲಿ ಕಳೆದ ಒಂದು ವರ್ಷದಿಂದ ನಿರಂತರ ಸಂಶೋಧನೆ ನಡೆಸಿ ಆ್ಯಂಟಿ ಗ್ರೇ ಮಾತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ, ಕಳೆದ ವರ್ಷದ ಅಕ್ಟೋಬರ್‌ನಿಂದ ಸತತ 8 ತಿಂಗಳ ಕಾಲ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಔಷಧಿಯನ್ನು ಎಲ್ಲಾ ವಯೋಮಾನದವರಿಗೂ ಅನ್ವಯವಾಗುವಂತೆ ಮತ್ತು ಅನುಕೂಲ ಆಗವಂತೆ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಆ್ಯಂಟಿ ಗ್ರೇ ಸಂಶೋಧನೆ ನಡೆದು ಬಂದ ಬಗೆ
ತರುಣಾವಸ್ಥೆಯಲ್ಲೇ ಕೂದಲು ಬೆಳ್ಳಗಾಗುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸಮುದಾಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಾ ಬರುತ್ತಿವೆ. ಇದರ ಪರಿಣಾಮ ಹರಯದಲ್ಲೇ ಮುಪ್ಪು ಬಂತೇ? ಎಂಬಂತಹ ಮನೋಭಾವನೆ ಮೂಡುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ.
ಸಂಶೋಧನೆ ಬಗ್ಗೆ ಮಾಹಿತಿ ನೀಡಿದ ಹೇರ್‍ಲೈನ್ ಇಂಟರ್‌ನ್ಯಾಷನಲ್‌ನಲ್ಲಿ ಡೆರ್ಮಟೊಲಾಜಿಸ್ಟ್ ಆಗಿರುವ ಡಾ. ಸ್ವಾಗತ ಚಕ್ರವರ್ತಿ, ಹೇರ್‍ಲೈನ್ ಇಂಟರ್‌ನ್ಯಾಷನಲ್ ಸಂಸ್ಥೆಯ ಕೇಶ ಮತ್ತು ಚಿಕಿತ್ಸಾ ಕೇಂದ್ರ ಸುದೀರ್ಘ ಅಧ್ಯಯನದ ನಂತರವಷ್ಟೇ ಈ ಆ್ಯಂಟಿ ಗ್ರೇ ಕ್ಯಾಪ್ಸೂಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
2013 ರ ಜನವರಿ 1 ರಿಂದ 2013 ರ ಡಿಸೆಂಬರ್ 31 ರವರೆಗೆ ಬೆಂಗಳೂರು, ಮುಂಬೈ ಮತ್ತು ದೆಹಲಿ ಮಹಾನಗರಗಳಲ್ಲಿ ನಿರಂತರ ಸಂಶೋಧನೆ ನಡೆಸಿ ಆ್ಯಂಟಿ ಗ್ರೇ ಮಾತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ನಗರಗಳಲ್ಲಿ ತಲೆ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದ ವಿವಿಧ ವಯೋಮಾನದ 2000 ರೋಗಿಗಳನ್ನು ಪರೀಕ್ಷಿಸಲಾಯಿತು. ಅಲ್ಲದೇ ಅವರ ದೈನಂದಿನ ಜೀವನದ ಬಗ್ಗೆಯೂ ಅಧ್ಯಯನ ನಡೆಸಲಾಯಿತು. ಇನ್ನೊಂದು ಪ್ರಮುಖ ಅಂಶವೆಂದರೆ ಈ ಎಲ್ಲಾ 2000 ಜನರ ವಯಸ್ಸು ತಲಾ ಸರಾಸರಿ 25 ಕ್ಕಿಂತ ಕಡಿಮೆಯದ್ದಾಗಿತ್ತು ಎಂದು ವಿವರ ನೀಡಿದರು.
ಅಧ್ಯಯನದ ವೇಳೆ ಗಮನಿಸಿದ ಪ್ರಮುಖ ಅಂಶಗಳು
2000 ಜನರಲ್ಲಿ ಶೇ. 34 ರಷ್ಟು ಮಹಿಳೆಯರು, ಶೇ. 66 ರಷ್ಟು ಪುರುಷರು.
5 ರಿಂದ 25 ವರ್ಷದೊಳಗಿನ ಶೇ. 99 ಮಂದಿಯ ತಲೆಕೂದಲು ಬಿಳಿಯ ಬಣ್ಣಕ್ಕೆ ತಿರುಗಿತ್ತು. ಈ ಪೈಕಿ 10 ಮಂದಿ 15 ವರ್ಷದೊಳಗಿನವರು, ಇಬ್ಬರು 7 ವರ್ಷ ಮತ್ತು ಒಬ್ಬರು 9 ವರ್ಷದವರು. ಆದರೆ, ಇವರನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳಲಿಲ್ಲ. ಶೇ. 98.1 ರಷ್ಟು ಮಂದಿ ವಿಟಮಿನ್ ಡಿ ಕೊರತೆಯನ್ನು ಎದುರಿಸುತ್ತಿದ್ದರು. ಶೇ. 85.4 ರಷ್ಟು ಜನರಲ್ಲಿ ಕಬ್ಬಿಣದ ಅಂಶದ ಕೊರತೆ ಎದ್ದು ಕಾಣುತ್ತಿತ್ತು.



Click it and Unblock the Notifications

