Latest Updates
-
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್!
ಕಿತ್ತಳೆ ಹಣ್ಣಿನಿಂದ ಕೇಶ ಸೌಂದರ್ಯ
ಇದು ಕಿತ್ತಳೆ ಹಣ್ಣಿನ ಸೀಸನ್ ಆಗಿದೆ. ಇದು ಆರೋಗ್ಯವನ್ನು ಕಾಪಾಡುವುದಲ್ಲದೆ ಅದರ ರಸದಲ್ಲಿರುವ ಸಿಟ್ರಸ್ ಆಮ್ಲವನ್ನು ಸೌಂದರ್ಯಕಾರಕವನ್ನಾಗಿ ಕೂಡ ಬಳಸಬಹುದು. ಕಿತ್ತಳೆ ಹಣ್ಣು ಮತ್ತು ಅದರ ಸಿಪ್ಪೆಯನ್ನು ಹೆಚ್ಚಿನ ಫೇಸ್ ಪ್ಯಾಕ್‌ಗಳನ್ನು ಮಾಡಲು ಬಳಸಲಾಗುತ್ತದೆ.
ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ ಕೂದಲಿಗೂ ಇದರ ಪ್ರಯೋಜನಗಳನ್ನು ಬಳಸಿಕೊಳ್ಳಿ. ಹಣ್ಣು, ರಸ ಅಥವಾ ಸಿಪ್ಪೆಯನ್ನು ಇದಕ್ಕಾಗಿ ಬಳಸಬಹುದು. ಇದರ ಸಿಪ್ಪೆಯನ್ನು ಬಿಸಿಲಲ್ಲಿ ಒಣಗಿಸಿ ತದನಂತರ ಹುಡಿ ಮಾಡಿಟ್ಟುಕೊಳ್ಳಬಹುದು.
ಸಿಟ್ರಸ್ ಆಮ್ಲವನ್ನು ಯಥೇಚ್ಛವಾಗಿ ತನ್ನೊಳಗೆ ಹುದುಗಿಸಿಕೊಂಡಿರುವ ಕಿತ್ತಳೆ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ಕೂಡ ಹೊಂದಿದೆ. ಇದು ಕೂದಲನ್ನು ಬಲಪಡಿಸುವುದರೊಂದಿಗೆ ಆರೋಗ್ಯಪೂರ್ಣವಾಗಿಸುತ್ತದೆ. ಕಿತ್ತಳೆಯಿಂದ ಕೂದಲಿಗೆ ಹಲವಾರು ಪ್ರಯೋಜನಗಳಿವೆ. ಅದನ್ನು ಹಾಗೆಯೇ ತಿನ್ನುವುದು ಅಥವಾ ಹಚ್ಚಿಕೊಳ್ಳುವುದು ಸಂಪೂರ್ಣ ದೇಹಕ್ಕೆ ಒಳಿತನ್ನು ಉಂಟು ಮಾಡುತ್ತದೆ.
ಕೂದಲಿನ ವಿಷಯಕ್ಕೆ ಬಂದಾಗ ಕಿತ್ತಳೆಯು ನೈಸರ್ಗಿಕ ಕಂಡೀಷನರ್‌ನಂತೆ ವರ್ತಿಸುತ್ತದೆ. ಕಿತ್ತಳೆ ರಸವನ್ನು ಕೂದಲಿಗೆ ಹಚ್ಚಿಕೊಳ್ಳುವುದು ಅದನ್ನು ಹೊಳೆಯುವಂತೆ ಮೃದು ಮತ್ತು ಬಲಪಡಿಸುತ್ತದೆ. ಕೂದಲಿನ ಪ್ರಮುಖ ಸಮಸ್ಯೆಯೆಂದರೆ ಕೂದಲು ಉದುರುವಿಕೆಯಾಗಿದೆ. ಕಿತ್ತಳೆ ರಸವನ್ನು ಕೂದಲಿಗೆ ಹಚ್ಚಿಕೊಳ್ಳುವುದು ಉದುರುವಿಕೆಯನ್ನು ಸಂಪೂರ್ಣ ನಿಯಂತ್ರಿಸುತ್ತದೆ.
ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಲು ಕಿತ್ತಳೆ ರಸವನ್ನು ಬಳಸಬಹುದು. ಸೌಂದರ್ಯಕ್ಕಾಗಿ ಸಿಟ್ರಸ್ ಹಣ್ಣಾದ ಕಿತ್ತಳೆಯ ಹಲವಾರು ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.

1.ಕೂದಲು ಉದುರುವಿಕೆ
ಕಿತ್ತಳೆಯು ವಿಟಮಿನ್ ಸಿ ಮತ್ತು ಬಯೋಫ್ಲೋವಿನೋಡ್ಸ್ ಅನ್ನು ಯಥೇಚ್ಛವಾಗಿ ಹೊಂದಿದ್ದು ಕೂದಲಿನ ಬುಡದ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕಿತ್ತಳೆಯಲ್ಲಿರುವ ಫೋಲಿಕ್ ಆಸಿಡ್ ಕೂದಲಿನ ಬೆಳವಣಿಗೆಯನ್ನು ಅಧಿಕಗೊಳಿಸುತ್ತದೆ.

2.ಹೇರ್ ಕಂಡೀಷನರ್
ಜೇನಿನೊಂದಿಗೆ ಕಿತ್ತಳೆ ರಸ ಮತ್ತು ನೀರನ್ನು ಮಿಶ್ರಮಾಡಿಕೊಳ್ಳಿ. ಶ್ಯಾಂಫೂ ಮಾಡಿದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿಕೊಂಡು 10-15 ನಿಮಿಷಗಳವರೆಗೆ ಹಾಗೆಯೇ ಬಿಡಿ. ನೀರಿನಿಂದ ತೊಳೆದುಕೊಳ್ಳಿ.

3.ಕೂದಲನ್ನು ಬಲಪಡಿಸುತ್ತದೆ
ನಿಮ್ಮ ಕೂದಲಿನ ಬೇರುಗಳು ಬಲಯುತವಾಗಿಲ್ಲದಿದ್ದರೆ ಕೂದಲು ಉದುರುತ್ತದೆ. ಸಿಟ್ರಸ್ ಹಣ್ಣಾದ ಕಿತ್ತಳೆಯನ್ನು ಈ ಸಮಸ್ಯೆಗೆ ಪರಿಹಾರವಾಗಿಸಿ.

4.ಹೊಳೆಯುವ ಕೂದಲು
ದಪ್ಪನಾದ, ಬಲವಾದ ಹೊಳೆಯುವ ಕೂದಲು ನಿಮ್ಮದಾಗಬೇಕಿದ್ದರೆ, ಸಿಟ್ರಸ್ ಹಣ್ಣು ಕಿತ್ತಳೆಯನ್ನು ಬಳಸಿ. ಕಿತ್ತಳೆ ರಸವನ್ನು ಜೇನು ಅಥವಾ ಹಾಲಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. 2-25 ನಿಮಿಷಗಳವರೆಗೆ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ. ಕಂಡೀಷನರ್‌ನೊಂದಿಗೆ ಅನುಸರಿಸಿ.

5.ತಲೆಹೊಟ್ಟನ್ನು ತೊಲಗಿಸುತ್ತದೆ
ಕಿತ್ತಳೆ ಸಿಪ್ಪೆಯು ತಲೆಹೊಟ್ಟಿನ ನಿವಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಿತ್ತಳೆ ಸಿಪ್ಪೆ ಮತ್ತು ನಿಂಬೆ ರಸದ ಪೇಸ್ಟ್ ಮಾಡಿಕೊಂಡು ತಲೆಬುರುಡೆಗೆ ಹಚ್ಚಿಕೊಳ್ಳಿ. ಶ್ಯಾಂಪೂ ಹಾಕುವ 25 ನಿಮಿಷಕ್ಕಿಂತ ಮುಂಚೆ ಈ ವಿಧಾನವನ್ನು ಅನುಸರಿಸಿ.

6. ಕೂದಲನ್ನು ಸ್ವಚ್ಛಗೊಳಿಸುತ್ತದೆ
ಕಿತ್ತಳೆ ಸಿಪ್ಪೆಯು ಕೂದಲನ್ನು ಮತ್ತು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಕಿತ್ತಳೆ ಸಿಪ್ಪೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ಇದನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿಕೊಳ್ಳಿ. 30 ನಿಮಿಷಗಳವರೆಗೆ ಹಾಗೆಯೇ ಬಿಟ್ಟು ನಂತರ ತೊಳೆದುಕೊಳ್ಳಿ.

7.ಕೂದಲಿಗೆ ಪರಿಮಳ
ನಿಮ್ಮ ನೆತ್ತಿ ಎಣ್ಣೆಯುಕ್ತವಾಗಿದ್ದು ಅದನ್ನು ಪರಿಮಳ ಬರುವಂತೆ ಮಾಡಲು ಕಿತ್ತಳೆ ರಸವನ್ನು ಅಥವಾ ಅದರ ಅದರ ಒಣಗಿದ ಸಿಪ್ಪೆಯನ್ನು ಬಳಸಿ. ಕೂದಲಲ್ಲಿ ಇದರ ಪರಿಮಳವು ಹಾಗೆಯೇ ಇರುವಂತೆ ಮಾಡುತ್ತದೆ.



Click it and Unblock the Notifications