ಬಿಳಿ ಕೂದಲ ಬಗೆಗಿನ ಕಟ್ಟು ಕಥೆಗಳು ನಂಬಲರ್ಹವೇ?

By Super

ಬಿಳಿ ಕೂದಲ ಬಗ್ಗೆ ಇರುವ ನಾನಾ ರೀತಿಯ ಕಟ್ಟು ಕಥೆಗಳು ಮತ್ತು ಅವುಗಳ ಹಿಂದಿರುವ ಸತ್ಯಗಳ ಬಗ್ಗೆ ನೀವು ಗೊಂದಲಗೊಂಡಿದ್ದೀರಾ? ಈ ಕೆಳಗೆ ಕೊಟ್ಟಿರುವ ಲೇಖನವನ್ನು ಓದಿ ಸತ್ಯವನ್ನು ತಿಳಿದುಕೊಳ್ಳಿ ಮತ್ತು ಬಿಳಿ ಕೂದಲು ಕಡಿಮೆ ಮಾಡಿಕೊಳ್ಳಲು ಕೆಲವು ಟಿಪ್ಸ್ ಪಡೆಯಿರಿ.

ಸುಂದರವಾದ ಕೂದಲು ನಿಮ್ಮದಾಗಿದ್ದರೆ ಅದೊಂದು ನೈಸರ್ಗಿಕವಾದ ಆಭರಣವಿದ್ದಂತೆ, ಜೊತೆಗೆ ಕೂದಲು ಯಾವಾಗಲೂ ಹೊಳೆಯುವಂತೆ ಮತ್ತು ಕಪ್ಪಾಗಿ ಇರಬೇಕು ಎಂಬುದು ಪ್ರತಿಯೊಬ್ಬರ ಆಸೆ. ಆದರೆ ಅಸಮತೋಲನ ಆಹಾರ ಪದ್ಧತಿ, ರಾಸಾಯನಿಕ ವಸ್ತುಗಳ ಬಳಕೆ, ಒತ್ತಡ ಮತ್ತು ಇತರ ಕಾರಣಗಳಿಂದ ವಯಸ್ಸಾಗುವ ಮೊದಲೇ ಕೂದಲು ಬೆಳ್ಳಗಾಗಲು ಪ್ರಾರಂಭವಾಗುತ್ತದೆ.

ಆದ್ದರಿಂದ ಬಾಯಿಯಿಂದ ಬಾಯಿಗೆ ಪೀಳಿಗೆಯಿಂದ ಪೀಳಿಗೆಗೆ ಬಿಳಿ ಕೂದಲು ಆಗುವ ಬಗ್ಗೆ ಸಾಕಷ್ಟು ಕಟ್ಟು ಕಥೆಗಳು ಹರಿಯುತ್ತಾ ಬಂದಿವೆ. ಹೌದು ಅದರಲ್ಲಿ ಕೆಲವು ಸತ್ಯವಿರಬಹುದು ಆದರೆ ಎಲ್ಲವೂ ನಿಜವಲ್ಲ.ಆದ್ದರಿಂದ ಈ ಕೆಳಗೆ ನೀಡಿರುವ ಸತ್ಯಾಂಶಗಳನ್ನು ತಿಳಿದುಕೊಂಡು ನಿಮ್ಮ ಕೂದಲು ಬಿಳಿಯಾಗುವುದನ್ನು ತಡೆಯಿರಿ. ಬಿಳಿ ಕೂದಲ ಬಗ್ಗೆ ನಂಬಿಕೆಗಳು ಮತ್ತು ಸತ್ಯಾಂಶಗಳು

ಬಿಳಿ ಕೂದಲನ್ನು ಕಿತ್ತುಬಿಟ್ಟರೆ ಸಾಕಷ್ಟು ಬಿಳಿ ಕೂದಲುಗಳು ಹುಟ್ಟಿಕೊಳ್ಳುತ್ತವೆ

ಬಿಳಿ ಕೂದಲನ್ನು ಕಿತ್ತುಬಿಟ್ಟರೆ ಸಾಕಷ್ಟು ಬಿಳಿ ಕೂದಲುಗಳು ಹುಟ್ಟಿಕೊಳ್ಳುತ್ತವೆ

ಸತ್ಯಾಂಶ- ಇದು ಸಂಪೂರ್ಣ ತಪ್ಪು ಕಲ್ಪನೆ. ಕೂದಲನ್ನು ಕೀಳುವುದರಿಂದ ಬೋಳು ತಲೆಯಾಗಬಹುದು ಆದರೆ ಬಿಳಿ ಕೂದಲ ಸಂಖ್ಯೆ ಅಧಿಕವಾಗುತ್ತದೆ ಎಂಬುದು ಸುಳ್ಳು. ಕೂದಲ ಕುಳಿಯಲ್ಲಿ ಕೇವಲ ಒಂದು ಕೂದಲು ಬೆಳೆಯುತ್ತದೆ ಆದ್ದರಿಂದ ಒಂದು ಬಿಳಿ ಕೂದಲನ್ನು ಕಿತ್ತರೆ ಅದೇ ಜಾಗದಲ್ಲಿ ಹೆಚ್ಚು ಬಿಳಿ ಕೂದಲು ಬೆಳೆಯಲು ಸಾಧ್ಯವಿಲ್ಲ.

ಬಣ್ಣ ಬಳಸುವುದರಿಂದ ಶಾಶ್ವತವಾಗಿ ಬಿಳಿ ಕೂದಲನ್ನು ಮರೆಮಾಚಬಹುದು

ಬಣ್ಣ ಬಳಸುವುದರಿಂದ ಶಾಶ್ವತವಾಗಿ ಬಿಳಿ ಕೂದಲನ್ನು ಮರೆಮಾಚಬಹುದು

ಸತ್ಯಾಂಶ- ಇದು ಸತ್ಯವಲ್ಲ. ಬಿಳಿ ಕೂದಲನ್ನು ಹೇಗೆ ಮರೆಮಾಚುತ್ತೀರಿ ಎಂಬುದು ನಿಮಗೆ ಎಷ್ಟು ಬಿಳಿ ಕೂದಲಾಗಿದೆ ಎಂಬುದರ ಮೇಲೆ ಅವಲಂಬಿಸಿದೆ. ಸಣ್ಣ ಪ್ರಮಾಣದಲ್ಲಿ ಬಿಳಿ ಕೂದಲಾಗಿದ್ದರೆ ಕಡಿಮೆ ರಾಸಾಯನಿಕ ಅಂಶ ಬಳಕೆಯ ಬಣ್ಣ ಬಳಸುವುದರಿಂದ ಮರೆಮಾಚಬಹುದು.

ಧೂಮಪಾನದಿಂದ ಕೂದಲು ಬಿಳಿಯಾಗುತ್ತದೆ

ಧೂಮಪಾನದಿಂದ ಕೂದಲು ಬಿಳಿಯಾಗುತ್ತದೆ

ಸತ್ಯಾಂಶ- ಹೌದು ಧೂಮಪಾನ ನಿಮ್ಮ ಕೂದಲನ್ನು ಬಿಳಿಯಾಗಿಸುತ್ತದೆ ಎಂದು ತಜ್ಞರು ಖಚಿತಪಡಿಸಿದ್ದಾರೆ. ಅಲ್ಲದೆ ಧೂಮಪಾನದಿಂದ ಕೂದಲು ಬಿಳಿಯಾಗುವುದರ ಜೊತೆಗೆ ಹೆಚ್ಚು ಉದುರುತ್ತದೆ ಎನ್ನುತ್ತಾರೆ. ಆದ್ದರಿಂದ ಧೂಮಪಾನವನ್ನು ಬಿಟ್ಟುಬಿಡಿ ಮತ್ತು ಕೂದಲ ಆರೋಗ್ಯ ಕಾಪಾಡಿಕೊಳ್ಳಿ.

ಬಿಳಿ ಕೂದಲಾಗುವುದನ್ನು ತಡೆಯಬಹುದು

ಬಿಳಿ ಕೂದಲಾಗುವುದನ್ನು ತಡೆಯಬಹುದು

ಸತ್ಯಾಂಶ- ಹೌದು ಕೆಲವು ವಿಧಾನಗಳಿಂದ ಬಿಳಿ ಕೂದಲು ಆಗುವುದನ್ನು ಕಡಿಮೆ ಮಾಡಬಹುದು ಮತ್ತು ತಡೆಯಬಹುದು. ತಜ್ಞರಿಂದ ಇನ್ನೂ ಸಾಬೀತಾಗದಿದ್ದರೂ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಬಿಳಿ ಕೂದಲನ್ನು ತಡೆಯಬಹುದು ಎಂದು ಸಾಕಷ್ಟು ಜನರು ಪ್ರಯೋಗಿಸಿ ಹೇಳಿದ್ದಾರೆ.

ಯಾವುದಾದರೂ ಭಯಾನಕ ಕಾಯಿಲೆಯ ನಂತರ ಕೂದಲು ಬೇಗ ಬಿಳಿಯಾಗುತ್ತದೆ

ಯಾವುದಾದರೂ ಭಯಾನಕ ಕಾಯಿಲೆಯ ನಂತರ ಕೂದಲು ಬೇಗ ಬಿಳಿಯಾಗುತ್ತದೆ

ಸತ್ಯಾಂಶ- ಇದು ಸಂಪೂರ್ಣ ಕಟ್ಟು ಕಥೆ. ಇದು ನಿಜ ಎಂಬುದಕ್ಕೆ ಯಾವುದೇ ಪ್ರಯೋಗಗಳು ನಡೆದಿಲ್ಲ. ನಿಮ್ಮ ಕೂದಲು ಬಿಳಿಯಾಗಲು ಯಾವುದೇ ರೀತಿಯ ಕಾಯಿಲೆ ಅಥವಾ ಆಘಾತಕ್ಕೆ ಒಳಗಾಗಬೇಕು ಎಂಬುದಿಲ್ಲ.

ಹೇರ್ ಜೆಲ್ ಅನ್ನು ದೀರ್ಘ ಕಾಲ ಬಳಸುವುದರಿಂದ

ಹೇರ್ ಜೆಲ್ ಅನ್ನು ದೀರ್ಘ ಕಾಲ ಬಳಸುವುದರಿಂದ

ಸತ್ಯಾಂಶ - ಇದು ನಂಬಿಕೆಯಷ್ಟೆ. ಪ್ರತಿದಿನ ಸಾಕಷ್ಟು ಜನ ಸ್ಟೈಲಿಶ್ ಆಗಿ ಕಾಣಿಸಲು ಹೇರ್ ಜೆಲ್ ಬಳಸುತ್ತಾರೆ. ಇದರಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ, ಆದರೆ ನೀವು ಬ್ರಾಂಡೆಡ್ ಜೆಲ್ ಗಳನ್ನು ಬಳಸಿ. ಇದರಿಂದ ಕೂದಲು ಉದುರುವಿಕೆಯನ್ನು ತಡೆಯಬಹುದು.

ಸೂರ್ಯನ ಬಿಸಿಲಿಗೆ ಹೆಚ್ಚು ಹೋದರೆ ಕೂದಲು ಬಿಳಿಯಾಗುತ್ತದೆ

ಸೂರ್ಯನ ಬಿಸಿಲಿಗೆ ಹೆಚ್ಚು ಹೋದರೆ ಕೂದಲು ಬಿಳಿಯಾಗುತ್ತದೆ

ಸತ್ಯಾಂಶ - ಇದು ಸ್ವಲ್ಪ ಮಟ್ಟಿಗೆ ಹೌದು ಎನ್ನಬಹುದು.ಸೂರ್ಯನ ಕಿರಣಗಳು ಕಂದು ಮತ್ತು ಕೆಂಪು ಬಣ್ಣದ ಕೂದಲ ಹೊಳಪನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಆದರೆ ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಬೆಂಬಲ ದೊರೆತಿಲ್ಲ.ಕೂದಲಿನ ಹೊಳಪು ಹೋಗದಂತೆ ತಡೆಯಲು ಬಿಸಿಲಿಗೆ ಹೋಗುವಾಗ ಕೂದಲನ್ನು ವಿನೆಗರ್ ನಿಂದ ತೊಳೆದು ಹ್ಯಾಟ್ ಬಳಸಿ ಹೋಗಬಹುದು.

ಬಿಳಿ ಕೂದಲನ್ನು ಕಾಪಾಡಿಕೊಳ್ಳುವುದು ಕಷ್ಟ

ಬಿಳಿ ಕೂದಲನ್ನು ಕಾಪಾಡಿಕೊಳ್ಳುವುದು ಕಷ್ಟ

ಸತ್ಯಾಂಶ- ಇದು ಸುಳ್ಳು. ಕಪ್ಪು ಮತ್ತು ಬಿಳಿ ಕೂದಲು ಎರಡೂ ಒಂದೇ ರೀತಿಯದಾಗಿರುತ್ತದೆ. ಆದ್ದರಿಂದ ಬಿಳಿ ಕೂದಲನ್ನು ನಿರ್ವಹಿಸುವುದು ಕಷ್ಟ ಎಂಬುದು ನಿಜವಲ್ಲ. ಆದ್ದರಿಂದ ಇದನ್ನು ನಂಬಬೇಡಿ.

ನಂಬಿಕೆ -ಹೇರ್ ಕಲರ್ ಬಳಸುವುದರಿಂದ ಬಿಳಿ ಕೂದಲು ಮಂದವಾಗುತ್ತದೆ.

ನಂಬಿಕೆ -ಹೇರ್ ಕಲರ್ ಬಳಸುವುದರಿಂದ ಬಿಳಿ ಕೂದಲು ಮಂದವಾಗುತ್ತದೆ.

ಸತ್ಯಾಂಶ-ಇಲ್ಲ ಇದು ಸತ್ಯವಲ್ಲ.ಸಾಕಷ್ಟು ಹೇರ್ ಕಲರ್ ಗಳು ಕೂದಲಿನ ತೇವಾಂಶವನ್ನು ಕಾಪಾಡಿ ಹೊಳಪನ್ನು ಹೆಚ್ಚಿಸುತ್ತದೆ.ಜೊತೆಗೆ ಕೂದಲು ಆರೋಗ್ಯಯುತವಾಗಿ ಕಾಣುವಂತೆ ಮಾಡುತ್ತದೆ.

ತಾರುಣ್ಯದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ. ಓದಿ ನೋಡಿ.

ತಾರುಣ್ಯದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ. ಓದಿ ನೋಡಿ.

ನೆಲ್ಲಿಕಾಯಿ ಮತ್ತು ಮದರಂಗಿ ಬಳಸಿ ಹೇರ್ ಪ್ಯಾಕ್ ತಯಾರಿಸಿಕೊಳ್ಳಿ. ಇದರಿಂದ ನಿಮ್ಮ ಬಿಳಿ ಕೂದಲನ್ನು ಮರೆಮಾಚಿ ಕಪ್ಪಾಗಿ ಕಾಣುವಂತೆ ಮಾಡಬಹುದು.

ಒಂದು ಬೌಲ್ ಕುಡಿಯುವ ನೀರಿಗೆ ಒಂದು ಚಮಚ ಟೀ ಸೇರಿಸಿ, ನೀರು ತಣಿದ ನಂತರ ಕೂದಲಿಗೆ ಇದನ್ನು ಹಚ್ಚಿ. ನಂತರ ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.

ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ ಬಳಸಿ ಎಣ್ಣೆ ತಯಾರಿಸಿಕೊಳ್ಳಿ.ಇದನ್ನು ಕುಡಿಸಿ ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಿ ಇದರಿಂದ ಕೂದಲು ಹೊಳೆಯುತ್ತದೆ.

ತಾರುಣ್ಯದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ. ಓದಿ ನೋಡಿ.

ತಾರುಣ್ಯದಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ. ಓದಿ ನೋಡಿ.

ನಿಮ್ಮ ಆಹಾರದಲ್ಲಿ ಕರಿಬೇವನ್ನು ಬಳಸಿ ಅಥವಾ ಕರಿಬೇವಿನ ಸೊಪ್ಪಿನ ಚಟ್ನಿ ಮಾಡಿ ತಿನ್ನಿ. ಇದು ಬಿಳಿ ಕೂದಲಾಗುವುದನ್ನು ನೈಸರ್ಗಿಕವಾಗಿ ತಡೆಯುತ್ತದೆ.

ಭಾರತದಲ್ಲಿ ದೊರೆಯುವ ಬನ ಪುಷ್ಪ ಎಂಬ ಮೂಲಿಕೆ ಬಳಸಿ ಹೇರ್ ಪ್ಯಾಕ್ ತಯಾರಿಸಿಕೊಳ್ಳಿ ಇದರಿಂದ ಕೂದಲು ಬಿಳಿಯಾಗುವುದು ತಡೆಯಬಹುದು.

ಭಾರತೀಯ ನೆಲ್ಲಿಕಾಯಿಯ ಜೊತೆ ಬಾದಾಮಿ ಎಣ್ಣೆ ಮಿಶ್ರ ಮಾಡಿ ಎಣ್ಣೆ ತಯಾರಿಸಿಕೊಂಡು ಹಚ್ಚುವುದರಿಂದ ಕೂಡ ಕೂದಲು ನೆರೆಯುವುದನ್ನು ತಡೆಯಬಹುದು.

Story first published: Thursday, October 30, 2014, 17:29 [IST]
X
Desktop Bottom Promotion