ಮಳೆಗಾಲದಲ್ಲಿ ನಿಮ್ಮ ಕೂದಲನ್ನು ಸುಲಭವಾಗಿ ಆಕರ್ಷಕಗೊಳಿಸುವುದು ಹೇಗೆ?

By Deepak M

ಮಳೆಗಾಲ ಮತ್ತೆ ಬಂದಿತು. ಮಳೆಗಾಲ ಬಂದರೆ ನಮಗೆ ಅಂತಹ ಸಂತೋಷವೇನು ಆಗದು. ಏಕೆಂದರೆ ಸುಡುವ ಬೇಸಿಗೆಯನ್ನು ತಣಿಸುವ ಮಳೆಗಾಲವು ಹಲವರ ತ್ವಚೆ ಮತ್ತು ಕೂದಲಿಗೆ ಶುಭ ಸುದ್ದಿಯನ್ನೇನು ತರದು. ಕೆಲವರ ಕೂದಲಂತು ಈ ಮಳೆಗಾಲದ ದಿನಗಳಲ್ಲಿ ನಿಂತಲ್ಲಿ ನಿಲ್ಲದೆ, ವಿಚಿತ್ರವಾಗಿ ಕಾಣಲು ಆರಂಭಿಸುತ್ತದೆ. ಅವರವರ ಕೂದಲು ಹೇಗೆ ಕಾಣುತ್ತದೆ ಎಂದು ಸ್ವತಃ ಅವರಿಗೆ ತಿಳಿಯಲು ಆಗುವುದಿಲ್ಲ. ಈ ಸಮಸ್ಯೆ ನಿಮಗೂ ಇದೆಯೇ ಹಾಗಾದರೆ ನಾವು ನಿಮಗಾಗಿ ಈ ಮಳೆಗಾಲಕ್ಕಾಗಿ ಕೆಲವೊಂದು ಹೇರ್‌ ಸ್ಟೈಲ್‍ಗಳನ್ನು ನೀಡಿದ್ದೇವೆ ಓದಿ ತಿಳಿದುಕೊಂಡು ಪ್ರಯತ್ನಿಸಿ.

ಬನ್ ಹೇರ್ ಸ್ಟೈಲ್:
ಬನ್ ಸರಳವಾದ ಮತ್ತು ಸಿಕ್ಕು ರಹಿತವಾದ ಹೇರ್ ಸ್ಟೈಲ್ ಆಗಿದೆ. ಇದು ಸಾಧಾರಣವಾದ ಹೇರ್ ಸ್ಟೈಲ್ ನೋಡಲು ಸುಂದರವಾಗಿರುತ್ತದೆ. ಸಾಮಾನ್ಯವಾಗಿ ಹೆಂಗಸರು ಇದನ್ನು ಕೊಂಡೆ, ಗಂಟು ಎಂದು ಸಹ ಕರೆಯುತ್ತಾರೆ. ಇದಕ್ಕೆ ನೀವು ಮಾಡಬೇಕಾದುದು ಇಷ್ಟೇ. ಎಲ್ಲಾ ಕೂದಲನ್ನು ಒಟ್ಟಿಗೆ ತೆಗೆದುಕೊಂಡು, ಸಡಿಲವಾದರು ಸರಿ ಅಥವಾ ಬಿಗಿಯಾಗಿಯಾದರು ಸರಿ, ನಿಮಗೆ ಇಷ್ಟ ಬಂದಂತೆ ಕೂದಲನ್ನು ಸುತ್ತಿ ಪಿನ್ ಸಹಾಯದಿಂದ ಗಂಟು ಹಾಕಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಬನ್‍ ಅನ್ನು ಕ್ಯಾಶುವಲ್ ಆಗಿ ಅಥವಾ ಫಾರ್ಮಲ್ ಆಗಿ ಹೇಗೆ ಬೇಕಾದರು ಬಳಸಬಹುದು. " ಈ ಬನ್‍ಗಳಲ್ಲಿ ನಿಮಗೆ ಬೇಕಾದ ವಿನ್ಯಾಸವನ್ನು ನೀವು ಮಾಡಬಹುದು, ಇದರಲ್ಲಿ ನೀವು ಕೂದಲನ್ನು ಹಾಗೆಯೇ ಸುತ್ತಿ ಬಿಟ್ಟು ಬಿಡಬಹುದು, ಕೊಂಡೆಯಂತೆ ಕೂದಲಿನಿಂದಲೇ ಈ ಬನ್ ಅನ್ನು ಬಂಧಿಸಬಹುದು,

Easy to do hairstyles for rainy days

ಅಕ್ಕ ಪಕ್ಕದಲ್ಲಿ ಸ್ವಲ್ಪ ಊದಿಕೊಂಡ ರೀತಿ ಕೂದಲನ್ನು ಬಿಡಬಹುದು, ಕೂದಲಿನ ತುದಿಯನ್ನು ಹೊರಗೆ ಕಾಣುವಂತೆ ಬೇಕಾದರು ಬಿಡಬಹುದು, ಇದಕ್ಕೆ ಅಲಂಕಾರಿಕವಾಗಿ ಹೂವು, ಮಣಿ ಮುಂತಾದವುಗಳನ್ನು ಬೇಕಾದರು ಇಟ್ಟುಕೊಳ್ಳಬಹುದು" ಎಂದು ಹೇರ್ ಎಕ್ಸ್‌ಪರ್ಟ್ ಮಿಥಿಲಾ ದೇಸಾಯಿಯವರು ಹೇಳುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಬನ್ ನಿಮ್ಮ ಕೂದಲನ್ನು ಸಿಕ್ಕು ಸಿಕ್ಕಾಗಿ ಅಸಹ್ಯವಾಗಿ ಕಾಣದಂತೆ ಕಾಪಾಡುತ್ತದೆ. ಜೊತೆಗೆ ನಿಮ್ಮ ಕೂದಲು ಒಂದು ಕಡೆ ನೆಲೆ ನಿಲ್ಲಲು ಸಹ ಸಹಾಯ ಮಾಡುತ್ತದೆ.

ಮಳೆಗಾಲದಲ್ಲಿ ಕೂದಲಿನ ದುರ್ವಾಸನೆಯನ್ನು ತಡೆಗಟ್ಟುವುದು ಹೇಗೆ?

ಫಿಶ್‍ಟೇಲ್:
ನಾವು ಸಾಮಾನ್ಯವಾಗಿ ಕರೆಯುವ ಜಡೆಯಂತೆಯೇ ಈ ಶೈಲಿಯಿರುತ್ತದೆ. ಇದು ಹೆಂಗಸರು ಅತ್ಯಂತ ಸುಲಭವಾಗಿ ತಮ್ಮನ್ನು ತಾವು ಅಲಂಕರಿಸಿಕೊಳ್ಳಲು ಬಳಸುತ್ತಾರೆ. ಈ ಜಡೆಯ ವಿಧಾನದಲ್ಲಿಯೇ ಸ್ವಲ್ಪ ಸೃಜನಶೀಲತೆಯನ್ನು ಬಳಸಿ ಹಲವಾರು ಬಗೆಯ ವಿನ್ಯಾಸಗಳನ್ನು ನಾವು ಮಾಡಿಕೊಳಬಹುದು. ಅದು ಫ್ರೆಂದ್ ಶೈಲಿಯಾಗಿರಬಹುದು ಅಥವಾ ಮೀನಿನ ಬಾಲದಂತಹ ವಿನ್ಯಾಸವಾಗಿರಬಹುದು. ಇದು ನೋಡಲು ಸೊಗಸು ಮತ್ತು ಸದಾ ಟ್ರೆಂಡಿಯಾಗಿರುವಂತಹ ವಿನ್ಯಾಸವಾಗಿರುವುದರಿಂದ ಹೆಂಗಸರು ಇದನ್ನು ಬಹಳ ಇಷ್ಟ ಪಡುತ್ತಾರೆ.

ಹೈ ಪೋನಿಟೇಲ್:
ಕನ್ನಡದಲ್ಲಿ ಸಣ್ಣ ಕುದುರೆ ಜುಟ್ಟು ಎಂದು ಕರೆಯಬಹುದು. ಹೌದು ಇದು ನೋಡಲು ಕುದುರೆ ಬಾಲದಂತೆಯೇ ಕಾಣುತ್ತದೆ. ಆದರೆ ಕೇಶ ವಿನ್ಯಾಸಗಳಲ್ಲಿಯೇ ಅತ್ಯಂತ ಸುಲಭವಾದ ಮತ್ತು ಜನಪ್ರಿಯವಾದ ಕೇಶ ವಿನ್ಯಾಸ ಇದಾಗಿದೆ. " ನಿಮಗೆ ಸಮಯದ ಕೊರತೆ ಇದ್ದರೆ, ಸುಮ್ಮನೆ ನಿಮ್ಮ ಕೂದಲನ್ನು ಮೇಲಕ್ಕೆ ಎತ್ತಿ ಗಟ್ಟಿಯಾಗಿ ಬಂಧಿಸಿ, ಇದೇ ಹೈ ಪೋನಿಟೇಲ್ ಶೈಲಿ. "ಅಧಿಕವಾದ ಗಾಳಿ ಮತ್ತು ಮಳೆಯಿದ್ದ ದಿನ ನಿಮ್ಮ ಕೂದಲನ್ನು ಕಾಪಾಡಲು ಮತ್ತು ಸಿಕ್ಕಾಗುವುದನ್ನು ತಡೆಯಲು ಹೈ ಪೋನಿಟೇಲ್ ಶೈಲಿಯನ್ನು ಬಳಸಿಕೊಳ್ಳಿ" ಎಂದು ಖ್ಯಾತ ಕೇಶ ವಿನ್ಯಾಸಗಾರ್ತಿಯಾದ ರಿಯಾ ಸೋನ್ಸ್‌ರವರು ಅಭಿಪ್ರಾಯವನ್ನು ಪಡುತ್ತಾರೆ. ಇದರ ಜೊತೆಗೆ ರೆಡ್ ಕಾರ್ಪೆಟ್ ಮೇಲೆ ಮಿಂಚುವ ಕೆಲವು ಸೆಲೆಬ್ರಿಟಿಗಳು ಸಹ ಇದೇ ವಿನ್ಯಾಸದಲ್ಲಿ ಬಂದು ನಮ್ಮನ್ನು ಅಚ್ಚರಿಗೊಳಿಸುತ್ತಾರೆ.

ಲೂಸ್ ವೇವ್ಸ್:
ಒಂದು ವೇಳೆ ನಿಮಗೆ ಗುಂಗುರು ಕೂದಲು ಅಥವಾ ಉದ್ದನೆಯ ಕೂದಲು ಇದ್ದಲ್ಲಿ, ಅದನ್ನು ನಿಮ್ಮ ಕಿವಿಯ ಹಿಂದೆ ಗಂಟು ಹಾಕುವ ಆಸೆ ಸಹ ನಿಮಗಿದ್ದಲ್ಲಿ ಅದನ್ನು ಈ ಋತುವಿನಲ್ಲಿ ಬಿಟ್ಟು ಬಿಡಿ. ಸುಮ್ಮನೆ ನಿಮ್ಮ ಕೂದಲು ಗಾಳಿಯೊಂದಿಗೆ ಆಟವಾಡಲು ಬಿಡಿ. ಅದನ್ನು ನೆಟ್ಟಗೆ ಅಥವಾ ಸುರುಳಿಯಾಗಿಸುವ ಪ್ರಯತ್ನ ಮಾಡಬೇಡಿ. ಈ ಋತುವಿನಲ್ಲಲ್ಲದೆ ಇನ್ಯಾವ ಋತುವಿನಲ್ಲಿ ನಿಮ್ಮ ಕೂದಲು ತನ್ನ ನೈಜ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯ. ಅದು ಸಹ ಗಾಳಿಯನ್ನು ಸೇವಿಸಬೇಕು ಎಂಬ ವಿಚಾರವನ್ನು ಮರೆಯಬೇಡಿ.

ನೀಟಾದ ಶೇವಿಂಗ್ ನ ಹತ್ತು ಹಂತಗಳು

ಸೈಡ್ ಸ್ವೀಪ್:
ಸೈಡ್ ಸ್ವೀಪ್ ಎಂಬುದು ಕೂದಲನ್ನು ಎತ್ತಿ ನಿಮ್ಮ ಮುಖಕ್ಕೆ ತಾಗುವಂತೆ ಮುಂದೆ ಅಂದರೆ ಎದೆಯ ಮೇಲೆ ಬಿಟ್ಟುಕೊಳ್ಳುವ ಶೈಲಿ ಎಂದರ್ಥ. ಇದು ನೋಡಲು ತುಂಬಾ ಸೊಗಸಾಗಿರುತ್ತದೆ, ಹಳೆಯ ಕಾಲದ ಹೆಂಗಸರಂತೆ ಇದು ನಿಮ್ಮನ್ನು ಸಹ ಆಕರ್ಷಕಗೊಳಿಸುತ್ತದೆ. ನಿಮ್ಮ ಎಲ್ಲಾ ಕೂದಲನ್ನು ಪಕ್ಕಕ್ಕೆ ವಾಲಿಸಿ ಅಥವಾ ಸ್ವಲ್ಪ ಕೂದಲನ್ನು ಸಡಿಲ ಬಿಡಿ. ಇದರಲ್ಲಿಯೇ ಟೆಕ್ಶ್‌ಚರ್ಡ್ ಸೈಡ್-ಸ್ವೆಪ್ಟ್ ಬ್ರೇಡ್ ಎಂಬ ಬಗೆಯು ಇದೆ. ಅಂದರೆ ಅರ್ಧ ಜಡೆ ಮತ್ತು ಅರ್ಧ ಕೂದಲನ್ನು ಹಾಗೆಯೇ ಪಕ್ಕಕ್ಕೆ ವಾಲಿಸುವುದು. ಸ್ವಲ್ಪ ಕೂದಲನ್ನು ಅದರ ಸ್ವ -ಸ್ಥಾನದಿಂದ ಪಕ್ಕಕ್ಕೆ ವಾಲಿಸುವುದು ಒಳ್ಳೆಯ ಆಲೋಚನೆ ಮತ್ತು ಉತ್ತಮ ಆಯ್ಕೆ ಸಹ ಹೌದು. ನಿಮ್ಮ ಕೂದಲಿಗೆ ಉತ್ತಮ ವಿನ್ಯಾಸ ಮತ್ತು ಸ್ವಾಭಾವಿಕ ಲುಕ್ ನೀಡಲು ನಿಮ್ಮ ಬೆರಳುಗಳಿಂದ ಕೂದಲನ್ನು ಹೆಣೆಯಿರಿ.

X
Desktop Bottom Promotion