Latest Updates
-
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ -
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್!
ಕೂದಲಿನ ಆರೈಕೆಗೆ ಅಡುಗೆ ಎಣ್ಣೆಗಳು
ಕೂದಲು ಉದುರುವ ಸಮಸ್ಯೆ ಈಗ ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಹಲವಾರು ಮಾತ್ರೆಗಳು, ಎಣ್ಣೆಗಳು, ಔಷಧಿಗಳು ಮತ್ತು ಚಿಕಿತ್ಸೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳೆಲ್ಲದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನು ಅವರು ನೀಡುವುದಿಲ್ಲ. ಜೊತೆಗೆ ಅವುಗಳೆಲ್ಲವೂ ನಿಮಗೆ ಹೊಂದಿಕೊಳ್ಳುತ್ತವೆ ಎಂಬ ಭರವಸೆಯನ್ನು ಸಹ ನೀಡಲಾಗುವುದಿಲ್ಲ. ಆದರೂ ಅವುಗಳು ನಿಮ್ಮನ್ನು ಆಕರ್ಷಿಸುತ್ತವೆ ಎಂಬುದು ಸುಳ್ಳಲ್ಲ.
ಹಾಗಾಗಿ ಬೋಲ್ಡ್ ಸ್ಕೈ ಇಂದು ಕೆಲವೊಂದು ಕೇಶರಾಶಿಯ ಆರೈಕೆಯ ಉಪಾಯಗಳನ್ನು ಸೂಚಿಸಿದ್ದು ಇವು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡದೇ ತ್ವರಿತ ಪರಿಣಾಮಗಳನ್ನು ನೀಡಬಲ್ಲವು. ಅಲ್ಲದೇ, ಬ್ಯೂಟಿ ಪಾರ್ಲರ್‌ನಲ್ಲಿ ನೀವು ವ್ಯಯಿಸಬೇಕಾದಷ್ಟು ಸಮಯವನ್ನಾಗಲಿ ಅಥವಾ ಹಣವನ್ನಾಗಲಿ ಈ ವಿಧಾನಗಳು ಬಯಸುವುದಿಲ್ಲ. ಕೇಶಸಂರಕ್ಷಣೆಯ ಈ ಕೆಳಗಿನ ವಿಧಾನಗಳನ್ನು ಕಲಿಯಿರಿ ಮತ್ತು ಹೇಗೆ ಅವು ನಿಮ್ಮ ಕೇಶರಾಶಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುತ್ತವೆ ಎಂಬುದನ್ನು ಸ್ವತಃ ನೀವೇ ಕಂಡುಕೊಳ್ಳಿರಿ.

ತೆಂಗಿನ ಎಣ್ಣೆ
ಕೂದಲು ಹಾಗೂ ತ್ವಚೆಯ ಆರೈಕೆಗೆ ಬಳಸುವಂತಹ ಸಾಮಾನ್ಯ ಅಡುಗೆ ಎಣ್ಣೆಯೆಂದರೆ ಅದು ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಒಳ್ಳೆಯ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲನ್ನು ಕಂಡೀಷನರ್ ಮಾಡುವುದಲ್ಲದೆ ಅದು ದಪ್ಪವಾಗಿ ಬೆಳೆಯಲು ನೆರವಾಗುತ್ತದೆ. ತೆಂಗಿನಎಣ್ಣೆಯಲ್ಲಿ ಸೋಂಕು ನಿವಾರಕ ಗುಣಗಳಿರುವ ಕಾರಣ ಇದು ತಲೆ ಬುರುಡೆಗೆ ಸೋಂಕು ಬರದಂತೆ ತಡೆಯುತ್ತದೆ.

ಎಳ್ಳೆಣ್ಣೆ
ಕೂದಲಿನ ಆರೈಕೆಗೆ ಅಡುಗೆ ಎಣ್ಣೆಯನ್ನು ಪರಿಗಣಿಸುವುದಾದರೆ ಎಳ್ಳೆಣ್ಣೆ ಹೊರತು ಈ ಪಟ್ಟಿ ಪೂರ್ಣಗೊಳ್ಳದು. ಕೂದಲಿನ ಆರೈಕೆಗೆ ಎಳ್ಳೆಣ್ಣೆ ಉತ್ತಮ ಆಯ್ಕೆ. ತಲೆಬುರುಡೆಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಅದು ರಕ್ತ ಸಂಚಲನಕ್ಕೆ ನೆರವಾಗಿ ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಆಲಿವ್ ಎಣ್ಣೆ
ಕೂದಲಿನ ಆರೈಕೆಗೆ ಅತ್ಯುತ್ತಮ ಅಡುಗೆ ಎಣ್ಣೆ ಹುಡುಕುತ್ತಿದ್ದರೆ ಆಲಿವ್ ಎಣ್ಣೆ ಒಳ್ಳೆಯ ಆಯ್ಕೆ. ನೀವು ಶಾಂಪೂ ಬಳಸುತ್ತಿದ್ದರೆ ಆಗ ಕೂದಲು ತೊಳೆದ ಬಳಿಕ ನೀವು ಸಂಪೂರ್ಣ ಕೂದಲಿಗೆ ಆಲಿವ್ ಎಣ್ಣೆ ಹಚ್ಚಿ. ಇದರಿಂದ ನಿಮ್ಮ ಕೂದಲನ್ನು ಕಂಡೀಷನರ್ ಮಾಡಲು ನೆರವಾಗುತ್ತದೆ.

ಸಾಸಿವೆ ಎಣ್ಣೆ
ಕೂದಲಿನ ಆರೈಕೆಗೆ ಅಡುಗೆ ಎಣ್ಣೆಯಲ್ಲಿ ಸಾಸಿವೆ ಎಣ್ಣೆ ತುಂಬಾ ಜನಪ್ರಿಯ. ದಪ್ಪ ಹಾಗೂ ಆರೋಗ್ಯಕರ ಕೂದಲಿಗೆ ಸಾಸಿವೆ ಎಣ್ಣೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಸೆಲೆನಿಯಂ ಮತ್ತು ಜಿಂಕ್ ನಂತಹ ಅಂಶಗಳು ಸಮೃದ್ಧವಾಗಿದೆ. ಈ ಎಣ್ಣೆಯಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಇದೆ.

ಕೆನೊಲಾ ಎಣ್ಣೆ
ನಿಮ್ಮದು ಒಣ ಕೂದಲಾಗಿದ್ದರೆ ಆಗ ನೀವು ಕೆನೊಲಾ ಎಣ್ಣೆಯನ್ನು ಕೂದಲಿನ ಆರೈಕೆಗೆ ಬಳಸಬೇಕು. ಕೆನೊಲಾ ಒಣಗಿದ ಕೂದಲಿನ ಬುಡ ಮತ್ತು ಗಡಸು ಭಾಗಕ್ಕೆ ಚಿಕಿತ್ಸೆ ನೀಡಿ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡಲಿದೆ. ಕೂದಲಿನ ಒಡೆದ ಬುಡವನ್ನು ಮೃದು ಮಾಡಲಿದೆ. ಕೆನೊಲಾ ಎಣ್ಣೆಯು ಸುರಕ್ಷಿತ ತಡೆ ನಿರ್ಮಿಸಿ ಹೆಚ್ಚಿನ ಹಾನಿಯಾಗದಂತೆ ತಡೆಯುತ್ತದೆ.



Click it and Unblock the Notifications
