Latest Updates
-
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್!
ಮನೆಯಲ್ಲೇ ತಯಾರಿಸಬಹುದಾದ ಕೂದಲಿನ ಮಾಸ್ಕ್
ಮುಂದಿನ ಸಲ ನಿಮ್ಮ ಕೂದಲಿಗೆ ಒಳ್ಳೆಯ ಆರೈಕೆ ನೀಡಲು ಬಸುವುದಾದರೆ ಆಗ ನೈಸರ್ಗಿಕವಾಗಿರುವ ಹೇರ್ ಮಾಸ್ಕ್ ನ್ನು ಪ್ರಯತ್ನಿಸಿ. ತುಂಬಾ ಆಳವಾಗಿ ನಿಮ್ಮ ಕೂದಲನ್ನು ಆರೈಕೆ ಮಾಡಬೇಕಾದರೆ, ಕೆಲವು ವಾರಗಳವರೆಗೆ ಪೌಷ್ಠಿಕಾಂಶಗಳನ್ನು ಒಳಗೊಂಡ ಮಾಸ್ಕ್ ನ್ನು ಬಳಸಿದರೆ ಹೆಚ್ಚಿನ ಬದಲಾವಣೆಗಳನ್ನು ಕಾಣಬಹುದು.
ಮಹಿಳೆಯರು ಶತಮಾನಗಳಿಂದಲೂ ತಮ್ಮ ಸೌಂದರ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾ ಬರುತ್ತಿದ್ದಾರೆ. ಇಂದಿನ ದಿನಗಳಲ್ಲಿ ಹಲವಾರು ರೀತಿಯ ಜನಪ್ರಿಯ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದೆ. ಅವರು ಬಳಸುವುದೆಲ್ಲವರೂ ಅದ್ಭುತ ಕಾಂತಿ ಮತ್ತು ನಯವಾದ ಕೂದಲನ್ನು ನೀಡುತ್ತದೆಯಾ?
ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ನೀವು ಕೂದಲಿನ ಆರೈಕೆ ಮಾಡಬಹುದು. ಇದರಲ್ಲಿ ಒಂದು ಅಚ್ಚರಿಯ ಆಯ್ಕೆಯೆಂದರೆ ಅದು ಬಾಳೆಹಣ್ಣು. ಇದರಲ್ಲಿ ಉನ್ನತ ಮಟ್ಟದ ಪೊಟಾಶಿಯಂ, ವಿಟಮಿನ್ ಎ, ಸಿ ಮತ್ತು ಇ ಒಳಗೊಂಡಿದೆ.

ಇದನ್ನು ಮಿಕ್ಸ್ ಗೆ ಹಾಕಿ ಹದವಾದ ಪೇಸ್ಟ್ ಮಾಡಿ. ಆದರೆ ಇದರಲ್ಲಿ ಬಾಳೆಹಣ್ಣಿನ ತುಂಡು ಉಳಿಯದಂತೆ ನೋಡಿಕೊಳ್ಳಿ. ಯಾಕೆಂದರೆ ಸಣ್ಣ ತುಂಡು ಉಳಿದುಕೊಂಡರೂ ಅದನ್ನು ಕೂದಲಿನಿಂದ ತೆಗೆಯಲು ತುಂಬಾ ಕಷ್ಟವಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗುಂಗುರು ಕೂದಲಿನ ಆರೈಕೆಗೆ ಬರಿಯ ಐದು ನಿಮಿಷಗಳು
ಒಮ್ಮೆ ಪೇಸ್ಟ್ ಮಾಡಿದ ಬಳಿಕ ಅದನ್ನು ಕೂದಲಿಗೆ ಹಚ್ಚಿ ಮತ್ತು ಸ್ನಾನ ಮಾಡುವಾಗ ಬಳಸುವ ಕ್ಯಾಪ್ ಅಥವಾ ಪ್ಲಾಸ್ಟಿಕ್ ಬ್ಯಾಗ್ ನ್ನು ಹಾಕಿದರೆ ಅದು ಕೆಳಗೆ ಹರಿಯುವುದು ತಪ್ಪುತ್ತದೆ. ಕೂದಲಿನ ಬುಡವು ಹೆಚ್ಚಿನ ಪೋಷಕಾಂಶಗಳನ್ನು ಹೀರಿಕೊಳ್ಳಬೇಕೆಂದು ನೀವು ಬಯಸಿದರೆ ಆಗ ಪೇಸ್ಟ್ ಹಚ್ಚಿದ 20 ನಿಮಿಷಗಳ ಬಳಿಕ ಹೇರ್ ಡ್ರೈಯರ್ ಬಳಸಿ ಮತ್ತು ಬಾಳೆಹಣ್ಣು ಪೇಸ್ಟ್ ಸರಿಯಾಗಿ ಸೆಟ್ ಆಗುವಂತೆ ಮಾಡಿ.
ಇದರ ಬಳಿಕ ಈ ಪೇಸ್ಟ್ ನ್ನು ತೆಗೆಯಲು ಒಳ್ಳೆಯ ಬಾಚಣಿಗೆ ಬಳಸಿ, ಅಗತ್ಯಬಿದ್ದರೆ ನಿಯಮಿತವಾಗಿ ಬಳಸುವ ಶಾಂಪೂ ಬಳಸಿ. ಒಣ ಕೂದಲು ನಿಮ್ಮ ಸಮಸ್ಯೆಯಾಗಿದ್ದರೆ ಆಗ ನೀವು ಮುಂದಿನ ಆಯ್ಕೆಯನ್ನು ಪರಿಗಣಿಸುವುದು ಒಳ್ಳೆಯದು.
ಮೇಯನೇಸ್
ಮೇಯನೇಸ್ ತುಂಬಾ ಹಗ್ಗ ಮತ್ತು ಒಣಗಿದ ಕೂದಲಿಗೆ ಸುಲಭವಾಗಿ ಖರೀದಿಸಬಹುದಾದ ಸೌಂದರ್ಯದ ಮದ್ದು. ಈ ಬಿಳಿ ಮಿಶ್ರಣವು ಸಂಪೂರ್ಣವಾಗಿ ಎಣ್ಣೆಯುಕ್ತವಾಗಿದ್ದು, ಇದು ನಿಮ್ಮ ಕೂದಲಿಗೆ ಹೆಚ್ಚಿನ ಹೊಳಪು ಹಾಗೂ ತೇವಾಂಶವನ್ನು ನೀಡುವುದು ಗ್ಯಾರಂಟಿ. ನೀವು ಮಾರುಕಟ್ಟೆಗೆ ಹೋಗಿ ಒಂದು ಹೊಸ ಜಾರ್ ಖರೀದಿಸಬೇಕೆಂದಿಲ್ಲ. ಸ್ವಲ್ಪ ಪ್ರಮಾಣದಲ್ಲಿದ್ದರೆ ಅದನ್ನು ಕೆಲವು ಕಾಲ ಬಳಸಬಹುದು.
ಸ್ವಲ್ಪ ಪ್ರಮಾಣದ ಮೇಯನೇಸ್‌ನ್ನು ನಿಮ್ಮ ಅಂಗೈಗೆ ಹಾಕಿಕೊಳ್ಳಿ ಮತ್ತು ಇದನ್ನು ಕೂದಲಿನ ಬುಡದಿಂದ ಹಿಡಿದು ತುದಿಯ ತನಕ ಚೆನ್ನಾಗಿ ಹಚ್ಚಿಕೊಳ್ಳಿ. ಇದರಲ್ಲಿ ಮೊಟ್ಟೆಯ ವಾಸನೆ ತುಂಬಾ ಹೆಚ್ಚಾಗಿದ್ದರೆ ಆಗ ಒಂದು ಹನಿ ಸುವಾಸನೆಯ ಎಣ್ಣೆ ಹಾಕಿ ಬಳಿಕ ಹಚ್ಚಿ. ಇದನ್ನು ಒಂದು ಗಂಟೆ ತನಕ ಬಿಟ್ಟರೆ ಆಗ ಕೂದಲು ಎಣ್ಣೆಯನ್ನು ಸರಿಯಾಗಿ ಹೀರಿಕೊಳ್ಳುತ್ತದೆ. ಇದರ ಬಳಿಕ ಅದನ್ನು ತೊಳೆದು ಶಾಂಪೂ ಹಾಕಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೂದಲು ಡ್ರೈಯಾಗಲು 5 ಪ್ರಮುಖ ಕಾರಣಗಳು
ಗತಕಾಲದ ಎಲ್ಲಾ ಹೇರ್ ಮಾಸ್ಕ್ ಗಳನ್ನು ಕೊಚ್ಚೆಯಾದ ಜವುಗಾದ ಪದಾರ್ಥಗಳಿಂದ ಮಾಡಿರುವುದಿಲ್ಲ. ತಲೆಹೊಟ್ಟಿನ ನಿವಾರಣೆಗೆ ಪ್ರಮುಖ ಸಲಹೆಯೆಂದರೆ ನಿಂಬೆ ಮತ್ತು ಆಲಿವ್ ಆಯಿಲ್. ನಿಮ್ಮ ಎಣ್ಣೆ ಸಾಮಾನ್ಯವಾಗಿರಲಿ. ಸುವಾಸನೆಯ ಎಣ್ಣೆಗಳು ಸುವಾಸನೆ ಬಿಡುವುದಿಲ್ಲ.
ನೀವು ಎರಡು ಟೇಬಲ್ ಸ್ಪೂನ್ ನಷ್ಟು ತಾಜಾ ನಿಂಬೆರಸವನ್ನು ಒಂದು ಸಣ್ಣ ಬೌಲ್ ಗೆ ಹಾಕಿ, ಇಷ್ಟೇ ಪ್ರಮಾಣದ ಆಲಿವ್ ಎಣ್ಣೆ ಮತ್ತು ನೀರನ್ನು ಅದಕ್ಕೆ ಸೇರಿಸಿ. ಇದನ್ನು ಸರಿಯಾಗಿ ಮಿಶ್ರ ಮಾಡಿ ಮತ್ತು ಈ ಮಿಶ್ರಣವನ್ನು ಕೂದಲಿಗೆ ಸರಿಯಾಗಿ ಉಜ್ಜಿ. ಇದರ ಬಳಿಕ ಬೆಚ್ಚಗಿನ ಟವೆಲ್ ಒಂದನ್ನು ಕೂದಲಿಗೆ ಸುತ್ತಿ. ಇದರಿಂದ ಎಣ್ಣೆ ಕೆಳಗೆ ಹರಿಯುವುದಿಲ್ಲ. ಇದನ್ನು ತಯಾರಿಸಲು ತುಂಬಾ ಸುಲಭವಾಗಿರುವ ಕಾರಣ ವಾರದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಕೂದಲಿಗೆ ಹಚ್ಚಿ. ಈ ವಿಧಾನ ಬಳಸಿದರೆ ಬಾಳೆಹಣ್ಣು ಅಥವಾ ಮೇಯನೇಸ್ ನ ಪೇಸ್ಟ್ ನಿಮ್ಮ ಕೈಗಳಿಗೆ ಅಂಟಿಕೊಳ್ಳುವುದಿಲ್ಲ.



Click it and Unblock the Notifications