Latest Updates
-
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು!
ತಲೆಕೂದಲ ಬೆಳವಣಿಗೆಗಾಗಿ ಅಡ್ವಾನ್ಸ್ ಫ್ಯಾಬ್ರಿನ್ ಮ್ಯಾಟ್ರಿಕ್ಸ್ ಚಿಕಿತ್ಸೆ
ಹೇರ್‍ಲೈನ್ ಇಂಟರ್‌ನ್ಯಾಶನಲ್ ಸ್ಕಿನ್ ಆಂಡ್ ಹೇರ್ ಕ್ಲಿನಿಕ್ ಭಾರತಕ್ಕೆ ಮೊದಲ ಬಾರಿಗೆ ತರುತ್ತಿದೆ, ತಲೆಕೂದಲು ಉದುರುವಿಕೆಗಾಗಿ ಅತ್ಯಾಧುನಿಕ ಚಿಕಿತ್ಸಾ ವಿಧಾನ- ಅಡ್ವಾನ್ಸ್ ಫ್ಯಾಬ್ರಿನ್ ಮ್ಯಾಟ್ರಿಕ್ಸ್. ಅಡ್ವಾನ್ಸ್ ಫ್ಯಾಬ್ರಿನ್ ಮ್ಯಾಟ್ರಿಕ್ಸ್‍ನ ಫಲಿತಾಂಶ ಕಾಣಲು ಬೇಕಾಗುವುದು ಕೇವಲ 20 ನಿಮಿಷಗಳ 4 ಸೆಶನ್‍ಗಳು ಮಾತ್ರ.
ತಲೆಕೂದಲ ಕಸಿ ವಿಧಾನದೊಂದಿಗೆ ಇದನ್ನು ಬಳಸಿದರೆ ಇದರ ಪರಿಣಾಮವು ಹೆಚ್ಚುತ್ತದೆ. ಹೊಸ ರಕ್ತನಾಳಗಳ ಅಭಿವೃದ್ಧಿ ಹಾಗೂ ಗಾಯಗಳ ಮಾಸುವಿಕೆಯನ್ನು ಇದು ಉತ್ತೇಜಿಸುತ್ತದೆ, ಇದರಿಂದಾಗಿ ಕಸಿ ಮಾಡಿದ ಅಂಶದ ಉತ್ತಮ ಬಾಳ್ವಿಕೆಗೆ ನೆರವಾಗುತ್ತದೆ. ಜೀವಕೋಶಗಳ ಪ್ರಸರಣವನ್ನು ಉತ್ತೇಜಿಸುವ ಮೂಲಕ ತೆಳುವಾಗಿರುವ ಕೂದಲ ಸಾಂದ್ರತೆಯನ್ನೂ ಇದು ಹೆಚ್ಚಿಸುತ್ತದೆ.

ಆಗ ಫ್ಯಾಬ್ರಿನ್‍ಮ್ಯಾಟ್ರಿಕ್ಸ್‍ನಲ್ಲಿ ಕಣಗಳ ಸಾಂದ್ರತೆ ಅಥವಾ ಸಂಖ್ಯೆ ಹೆಚ್ಚುತ್ತದೆ. ಈ ಮ್ಯಾಟ್ರಿಕ್ಸ್ ಅನ್ನು ಬಳಿಕ ರೋಗಿಯ ಚರ್ಮದೊಳಗೆ ಅಥವಾ ನೆತ್ತಿಯ ಚರ್ಮದ ಮೂಲಕ ಇಂಜೆಕ್ಟ್ ಮಾಡಲಾಗುತ್ತದೆ. ತಲೆಕೂದಲ ಬೆಳವಣಿಗೆ ಉತ್ತೇಜನಕ್ಕೊಳಗಾಗುತ್ತದೆ ಮತ್ತು ಸುಪ್ತ ತಲೆಕೂದಲ ಕೋಶಗಳಿಗೆ ಬೆಳೆಯಲು ಪ್ರೋತ್ಸಾಹ ಸಿಗುತ್ತದೆ.
ತಲೆಕೂದಲ ಉದುರುವಿಕೆಗೆ ಪ್ರಸ್ತುತ ಶಿಫಾರಸು ಮಾಡುವ ಚಿಕಿತ್ಸಾ ವಿಧಾನಕ್ಕಿಂತ ಈ ವಿಧಾನವು ಹೇಗೆ ಉತ್ತಮ ಎಂದು ವಿವರಿಸಿದ ಹೇರ್‍ಲೈನ್ ಇಂಟರ್‌ನ್ಯಾಶನಲ್‌ನ ಡರ್ಮೆಟೋಸರ್ಜನ್ ಡಾ.ದಿನೇಶ್ ಜಿ ಗೌಡ ಅವರು, ನೆತ್ತಿಯ ಚರ್ಮದ ಮೂಲಕ ಒಮ್ಮೆ ಇಂಜೆಕ್ಟ್ ಮಾಡಿದರೆ, ಅಡ್ವಾನ್ಸ್ ಫ್ಯಾಬ್ರಿನ್ ಮ್ಯಾಟ್ರಿಕ್ಸ್, ಸುಸ್ಥಿರ ಕಾರ್ಯತಂತ್ರದ ಮೂಲಕ ಬೆಳವಣಿಗೆಯ ಅಂಶಗಳನ್ನು ಬಿಡುಗಡೆಗೊಳಿಸುತ್ತದೆ.
ಈ ಬೆಳವಣಿಗೆ ಅಂಶಗಳು ಇಂಜೆಕ್ಟ್ ಮಾಡಿದ ವಾರದ ತನಕ ಬಿಡುಗಡೆಗೊಳ್ಳುತ್ತವೆ ಎಂದು ಅನೇಕ ಇನ್-ವಿಟ್ರೋ ಅಧ್ಯಯನಗಳು ಸಾಬೀತುಪಡಿಸಿವೆ. ಕೇವಲ 3 ವಾರಗಳಲ್ಲಿ ತಲೆಕೂದಲ ಬೆಳವಣಿಗೆಗೆ ಉತ್ತೇಜನ ಸಿಗುತ್ತದೆ ಹಾಗೂ ಫಲಿತಾಂಶ ಕಾಣುತ್ತದೆ'' ಎಂದು ಹೇಳಿದ್ದಾರೆ.
ಪ್ಲೇಟ್‍ಲೆಟ್ ರಿಚ್ ಪ್ಲಾಸ್ಮಾ (ಪಿಆರ್‍ಪಿ)ಈ ತನಕ ದೀರ್ಘಕಾಲದಿಂದಲೂ ತಲೆಕೂದಲ ಉದುರುವಿಕೆಗೆ ಜನಪ್ರಿಯವಾಗಿದ್ದ ಚಿಕಿತ್ಸೆಯಾಗಿದೆ. ಎಎಫ್‍ಎಂ ಜಗತ್ತಿನಾದ್ಯಂತ ತಾಂತ್ರಿಕವಾಗಿ ಉನ್ನತ ಮಟ್ಟದ್ದು ಎಂದು ಸಾಬೀತಾಗಿದೆ. ಒಂದು ಎಎಫ್‍ಎಂ ವಿಧಾನವು ಪ್ರತಿಯೊಂದು ಸೆಶನ್‍ಗೆ ಕೇವಲ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ 4 ಸತತ ಸೆಶನ್‍ಗಳು ಸಾಕು. ಈ ವಿಧಾನವಾದ ಬಳಿಕ ಒಂದು ವಾರದ ತನಕ ಸೆಲ್ ಆಂಜಿಯೋಜೆನಿಸಿಸ್ ಹಾಗೂ ನೆತ್ತಿಯಲ್ಲಿ ತಲೆಕೂಲದ ಮರು ಬೆಳವಣಿಗೆಗೆ ಬೇಕಾದ ಸುಸ್ಥಿರವಾದ ಬಿಡುಗಡೆಯ ಲಕ್ಷಣವನ್ನು ಇದು ಹೊಂದಿದೆ. 6 ತಿಂಗಳಲ್ಲಿಲ ತಲೆಕೂದಲ ಸಾಂದ್ರತೆ ಹೆಚ್ಚುತ್ತದೆ ಮತ್ತು ದಪ್ಪ ದುಪ್ಪಟ್ಟಾಗುತ್ತದೆ.
ಈ ತಂತ್ರಜ್ಞಾನವನ್ನು ಪರಿಚಯಿಸಿ ಮಾತನಾಡಿದ ಹೇರ್‍ಲೈನ್ ಇಂಟರ್‌ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್‍ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬಾನಿ ಆನಂದ್ ಅವರು, ಹೇರ್‍ಲೈನ್ ಇಂಟರ್‌ನ್ಯಾಶನಲ್ ಯಾವಾಗಲೂ ಕೂದಲು ಹಾಗೂ ಚರ್ಮದ ಚಿಕಿತ್ಸೆಯಲ್ಲಿ ಜಾಗತಿಕವಾಗಿ ನಡೆಯುವ ಅತ್ಯಾಧುನಿಕ ತಾಂತ್ರಿಕ ಬೆಳವಣಿಗೆಯನ್ನು ಅಳಚಡಿಸಿಕೊಳ್ಳುತಿದೆ.
ನಮ್ಮ ರೋಗಿಗಳು ಹಾಗೂ ಅವರ ಅಗತ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಪುರುಷರು ಹಾಗೂ ಮಹಿಳೆಯರಲ್ಲಿ ತಲೆಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆಯಾಗಿದೆ ಮತ್ತು ಈ ವಿಧದ ಚಿಕಿತ್ಸೆಯು ಕ್ಷಿಪ್ರವಾಗಿ ಆಗುತ್ತದೆ ಹಾಗೂ ಖಂಡಿತವಾಗಿಯೂ ಉತ್ತಮ ಪರಿಹಾರ ನೀಡುವಷ್ಟು ಪರಿಣಾಮಕಾರಿಯೂ ಆಗಿದೆ'' ಎಂದು ಹೇಳಿದರು.



Click it and Unblock the Notifications
