Latest Updates
-
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ! -
ಚೆನ್ನೈನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ, ಸಂಚಾರ ಅಸ್ತವ್ಯಸ್ತ; ಹೊರಡುವ ಮುನ್ನ ಈ ಮಾಹಿತಿ ತಪ್ಪದೇ ಓದಿ! -
ದೆಹಲಿ ಮಾಲಿನ್ಯದ ನಡುವೆ ವಾಕಿಂಗ್ ಹೋಗ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ -
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ!
ಸಾಂಪ್ರಾಯಿಕ ಧಿರಿಸಿಗೆ ಅತ್ಯುತ್ತಮ ಕೇಶವಿನ್ಯಾಸ
ನೀವು ಸಾಂಪ್ರದಾಯಿಕ ಧಿರಿಸನ್ನು ತೊಟ್ಟಾಗ ಅದಕ್ಕೆ ತಕ್ಕಂತೆ ಅಲಂಕಾರ ಮಾಡಿಕೊಳ್ಳುವುದು ಸಹಜ. ಸಾಂಪ್ರದಾಯಿಕ ಉಡುಗೆಗಳಲ್ಲಿ ಇನ್ನಷ್ಟು ಸುಂದರಿಯಾಗಿ ಕಾಣಲು ನೀವು ಪ್ರಯತ್ನಪಡುತ್ತೀರಿ ಉಡುಗೆಗೆ ಹೊಂದಿಕೆಯಾಗುವ ಬಳೆಗಳು ಅಥವಾ ಬ್ರಾಸ್ಲೆಟ್ ಅಥವಾ ತಕ್ಕುದಾದ ಚಪ್ಪಲಿಯನ್ನು ಆಯ್ಕೆಮಾಡಿಕೊಳ್ಳುವುದು ಹೀಗೆ ನಿಮ್ಮ ಸಾಂಪ್ರದಾಯಿಕ ಉಡುಗೆಗೆ ಚೆನ್ನಾಗಿ ಹೊಂದಿಕೆಯಾಗುವ ಆಭರಣಗಳನ್ನೇ ನೀವು ಆರಿಸಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗುಂಗುರು ಕೂದಲಿನ ಆರೈಕೆಗೆ ಬರಿಯ ಐದು ನಿಮಿಷಗಳು
ಭಾರತದಲ್ಲಿ ಸಾಂಪ್ರದಾಯಿಕ ಉಡುಗೆಗಳೆಂದರೆ ಸೀರೆ, ಸಲ್ವಾರ್ ಮತ್ತು ಲೆಹಂಗಾ ಆಗಿವೆ. ಯಾವುದೇ ಸಾಂಪ್ರದಾಯಿಕ ಉಡುಗೆಗಳಲ್ಲಿರುವ ವಿವಿಧ ವಿನ್ಯಾಸ ಮಾದರಿ ಅವನ್ನು ತೊಡುವಂತೆ ನಮ್ಮ ಮನಸನ್ನು ಪುಸಲಾಯಿಸುತ್ತದೆ. ಅನಾರ್ಕಲಿ ಸೂಟ್ ಈಗ ಮತ್ತೆ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಉಡುಗೆಯಾಗಿದೆ.
ಉದ್ದವಾದ ಅನಾರ್ಕಲಿ ಟಾಪ್ ಅದಕ್ಕೆ ತಕ್ಕಂತೆ ಬಿಗಿಯಾದ ಪ್ಯಾಂಟ್ಗಳು ಲೇಟೆಸ್ಟ್ ಟ್ರೆಂಟ್ ಆಗಿದೆ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಸಮಾರಂಭಗಳಲ್ಲಿ ಈ ಉಡುಗೆಯಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ನೀವು ಏನನ್ನೂ ಧರಿಸಿದರೂ, ಅದಕ್ಕೆ ಸೂಕ್ತವಾದ ಕೇಶವಿನ್ಯಾಸವನ್ನು ನೀವು ಮಾಡಬೇಕು. ಕೇಶವಿನ್ಯಾಸ ನಿಮ್ಮ ಎಲ್ಲಾ ನೋಟವನ್ನು ಸಂಪೂರ್ಣಗೊಳಿಸುತ್ತದೆ ಮಾತ್ರವಲ್ಲ ನಿಮ್ಮನ್ನು ಅದ್ಭುತರನ್ನಾಗಿಸುತ್ತದೆ.
ಸುಂದರವಾದ ಕೇಶವಿನ್ಯಾಸದೊಂದಿಗೆ ಸಾಂಪ್ರದಾಯಿಕ ಉಡುಗೆಯನ್ನು ವಿಶೇಷವಾಗಿಸಿ. ಸಾಂಪ್ರದಾಯಿಕ ಭಾರತೀಯ ಜಡೆಯನ್ನು ಹಾಕಿಕೊಳ್ಳಬಹುದು ಇಲ್ಲವೇ ತುರುಬು ಹಾಕಿ ನಿಮ್ಮ ಸಾಂಪ್ರದಾಯಿಕ ನೋಟವನ್ನು ಸುಂದರಗೊಳಿಸಬಹುದು. ಸಾಂಪ್ರದಾಯಿಕ ಉಡುಗೆಗೆ ತಕ್ಕಂತಹ ಕೆಲವೊಂದು ಕೇಶವಿನ್ಯಾಸಗಳನ್ನು ನಾವು ನಿಮಗಾಗಿ ನೀಡುತ್ತಿದ್ದು ಇದನ್ನು ನೀವೂ ಪ್ರಯತ್ನಿಸಿ ಸುಂದರಗೊಳ್ಳಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮನೆಯಲ್ಲೇ ತಯಾರಿಸಬಹುದಾದ ಕೂದಲಿನ ಮಾಸ್ಕ್

1.ವೇವ್ಸ್
ಸಾಂಪ್ರದಾಯಿಕ ಧಿರಿಸಿನೊಂದಿಗೆ ಈ ವೇವ್ ಕೇಶವಿನ್ಯಾಸವನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮ ಕೂದಲಿಗೆ ಸೇರಮ್ ಅನ್ನು ಹಚ್ಚಿಕೊಂಡು ಅದನ್ನು ಬೌನ್ಸಿಯನ್ನಾಗಿಸಿಕೊಳ್ಳಿ.

2.ನೇರ ಕೂದಲು
ಕೂದಲನ್ನು ಇನ್ನಷ್ಟು ಸರಳಗೊಳಿಸಬೇಕೆಂಬ ಬಯಕೆ ನಿಮ್ಮದಾಗಿದ್ದರೆ, ನಿಮ್ಮ ನೇರ ಕೂದಲನ್ನು ಬ್ರಶ್ ಮಾಡಿಕೊಂಡು ಹಾಗೆಯೇ ಬಿಡಿ.

3.ಪೋನಿಟೈಲ್
ಪೋನಿಟೇಲ್ ನಿಮ್ಮನ್ನು ಇನ್ನಷ್ಟು ಸ್ಟೈಲಿಶ್ ಆಗಿ ಮಾಡುತ್ತದೆ. ಈ ಎತ್ತರದ ಪೋನಿಟೇಲ್ ಸೀರೆ ಅಥವಾ ಸಲ್ವಾರ್ಗೆ ಉತ್ತಮ ಕಾಂಬಿನೇಷನ್.

4.ಪಿನ್ ಮಾಡಿದ ಕೂದಲು
ಸ್ವಲ್ಪ ಕೂದಲನ್ನು ಹಾಗೆಯೇ ಗಾಳಿಗೆ ಹಾರಲು ಬಿಡುವುದು ಸಾಂಪ್ರದಾಯಿಕ ಕೇಶವಿನ್ಯಾಸವಾಗಿದೆ ಯಾವುದೇ ಸಾಂಪ್ರದಾಯಿಕ ಉಡುಗೆಗೆ ಹೇಳಿಮಾಡಿಸಿದಂತಿರುತ್ತದೆ. ನೀವು ಕೂದಲಿಗೆ ಪಿನ್ ಹಾಕಿ ಸಣ್ಣ ಪಫ್ನಂತ ಹೇರ್ಸ್ಟೈಲ್ ಕೂಡ ಮಾಡಬಹುದು.

5.ಹೇರ್ ಬನ್
ಸಾಂಪ್ರದಾಯಿಕ ಉಡುಗೆಗೆ ಈ ಕೇಶ ವಿನ್ಯಾಸ ಸುಂದರವಾಗಿರುತ್ತದೆ. ನೀವು ಭಾರೀ ಸೀರೆ ಅಥವಾ ಲೆಹಂಗಾವನ್ನು ಧರಿಸಿದ್ದರೆ, ಹೇರ್ ಬನ್ ಮಾಡಿಕೊಳ್ಳಿ. ಹೇರ್ ಪಿನ್ ಅಥವಾ ಕ್ಲಿಪ್ಗಳನ್ನು ಅಲಂಕಾರಿಕವಾಗಿ ಬನ್ಗೆ ಬಳಸಿಕೊಳ್ಳಬಹುದು.

6.ಸೈಡ್ ಹೇರ್
ಸಾಂಪ್ರದಾಯಿಕ ಔಟ್ಫಿಟ್ನಲ್ಲಿ ಕ್ಲಾಸಿಕ್ ಮತ್ತು ಸ್ಟೈಲಿಶ್ ಆಗಿ ಕಾಣಬೇಕೆಂಬ ಬಯಕೆ ನಿಮ್ಮದಾಗಿದ್ದರೆ, ಈ ಹೇರ್ಸ್ಟೈಲ್ ಅನ್ನು ಅನುಸರಿಸಿ. ಸೈಡ್ ಹೇರ್ಸ್ಟೈಲ್ ಈಗ ಟ್ರೆಂಡಿ ಮತ್ತು ನಿಮ್ಮನ್ನು ಸುಂದರಿಯನ್ನಾಗಿಸುತ್ತದೆ.

7.ರಫ್ ಹೇರ್
ಶೆರ್ಲಿನ್ ಚೋಪ್ರಾನಂತೆ ಈ ರಫ್ ಹೇರ್ಸ್ಟೈಲ್ನಲ್ಲಿ ಫ್ಯಾಶನೇಬಲ್ ಆಗಿ ಕಾಣಬೇಕೆಂದು ಬಯಸುತ್ತೀರಾ? ನೀವು ಸರಳ ಮತ್ತು ತಿಳಿ ಶಿಫಾನ್ ಸೀರೆಯನ್ನು ಉಟ್ಟಿದ್ದರೆ, ನಿಮ್ಮ ಕೂದಲನ್ನು ಗಾಳಿಗೆ ಹಾರಲು ಬಿಡಿ

8.ಗಾಮಿನ್ ಹೇರ್
ಕೆಲವು ಮಹಿಳೆಯರು ಮಾತ್ರ ಶಾರ್ಟ್ ಹೇರ್ ಅನ್ನು ಇಟ್ಟುಕೊಳ್ಳುತ್ತಾರೆ. ಈ ಹೇರ್ ಸ್ಟೈಲ್ ನಿಮ್ಮ ಸಾಂಪ್ರದಾಯಿಕ ಉಡುಗೆಗೆ ಮೆಚ್ಚುಗೆಯಾಗುತ್ತಿಲ್ಲ ಎಂದಾದಲ್ಲಿ ಬೇರೆ ಪ್ರಯತ್ನಿಸಿ!

9.ರಫ್ ಬನ್
ನಿಮ್ಮ ಕೂದಲನ್ನು ಬನ್ ರೀತಿಯಲ್ಲಿ ಕಟ್ಟುವುದು ಸಾಂಪ್ರದಾಯಿಕ ಕೇಶವಿನ್ಯಾಸಕ್ಕೆ ಚೆನ್ನಾಗಿರುತ್ತದೆ. ನಿಮಗೆ ಬಿಗಿಯಾದ ತುರುಬು ಇಷ್ಟವಾಗದಿದ್ದರೆ, ರಫ್ ಬನ್ ಅನ್ನು ಅನುಸರಿಸಿ.

10.ಸೈಡ್ ಸ್ವೆಪ್ಟ್ ಹೇರ್
ಸಾಮಾನ್ಯ ಸಾಂಪ್ರದಾಯಿಕ ಧಿರಿಸಾದ ಸಲ್ವಾರ್ ಅಥವಾ ಕುರ್ತಾಗೆ ಸೈಡ್ ಸ್ವೆಪ್ಟ್ ಹೇರ್ ಅನ್ನು ಅನುಸರಿಸಿ.



Click it and Unblock the Notifications
