Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೇಶವಿನ್ಯಾಸ ತಪ್ಪಾಗಿದ್ದಲ್ಲಿ ಬಾಲ್ಡ್ ಆಗುವುದು ಖಚಿತ!
ಕೂದಲಿಗೆ ಸಂಬಂಧಿಸಿದ ಹಲವಾರು ಜಾಹೀರಾತುಗಳನ್ನು ನೋಡಿ ನಮಗೂ ಅಂತಹ ಕೇಶವಿನ್ಯಾಸಗಳನ್ನು ಮಾಡಿಕೊಳ್ಳಬೇಕೆಂಬ ಬಯಕೆ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಆದರೆ ಸರಿಯಾದ ಕೇಶವಿನ್ಯಾಸ ಮಾಡಲಾಗದೇ ಅಥವಾ ಕೇಶವಿನ್ಯಾಸಕ್ಕೆ ಬಳಸುವ ವಸ್ತುಗಳೇ ಸರಿಯಿಲ್ಲದಿದ್ದರೆ ಕೂದಲಿನ ಗತಿಯೇನು!?
ಹೌದು ಕೇಶವಿನ್ಯಾಸವನ್ನು ಸರಿಯಾಗಿ ಮಾಡದಿದ್ದರೆ ಹಾಗೂ ಕೇಶ ವಿನ್ಯಾಸಕ್ಕಾಗಿ ಬಳಸುವ ವಿನ್ಯಾಸದ ವಸ್ತುಗಳೂ ಸರಿಯಾಗಿ ಇಲ್ಲದಿದ್ದರೆ ಕೂದಲಿಗೆ ಹಾನಿಯಾಗುವುದು ಖಂಡಿತ! ಇಂತಹ ಹಾನಿಯಿಂದ ನಿಮ್ಮ ಕೂದಲು ನೀರಸವಾಗಿ ಕಾಣಬಹುದು ಅಥವಾ ಸಂಪೂರ್ಣವಾಗಿ ಉದುರಲೂಬಹುದು. ಆದರೆ ಈ ಕೆಳಗಿನ ಸಲಹೆಗಳಿಂದ ನೀವು ಕೂದಲಿನ ಹಾನಿ ಸಮಸ್ಯೆಯಿಂದ ರಕ್ಷಣೆ ಪಡೆಯಬಹುದು.
ಪ್ರತಿದಿನ ನಿಮ್ಮ ಕೂದಲನ್ನು ಅತ್ಯಂತ ಬಲವಾಗಿ ತಿಕ್ಕಿ ಉಜ್ಜುವುದರಿಂದ ಕೂದಲು ತುಂಡಾಗುವಿಕೆ ಆರಂಭವಾಗಬಹುದು. ಆದ್ದರಿಂದ ಆರೋಗ್ಯಕರವಾದ ಕೂದಲನ್ನು ಪಡೆಯಲು ಕೇಶ ವಿನ್ಯಾಸಕ್ಕಿಂತ ಮೊದಲು ಮತ್ತು ನಂತರ ಕೂದಲಿನ ಆಕೈಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಜಾಗ್ರತೆವಹಿಸಬೇಕು.
ಕೂದಲಿಗೆ ಹಾನಿಯಾಗುವುದು ಮತ್ತು ಕೂದಲುದುರುವುದನ್ನು ತಪ್ಪಿಸಲು ಈ ಸಲಹೆಗಳನ್ನು ಪಾಲಿಸಿ:

ಸ್ನಾನದ ಬಳಿಕ ಕೂದಲನ್ನು ಗಾಳಿಯಲ್ಲಿ ಒಣಗಿಸಿ
1. ಸ್ನಾನದ ಬಳಿಕ ನಿಮ್ಮ ಕೂದಲನ್ನು ಟವೆಲ್ ನಲ್ಲಿ ಸುತ್ತಿ ಒಣಗಿಸಿ ಅಥವಾ ಹಾಗೆಯೇ ಗಾಳಿಗೆ ಬಿಟ್ಟು ಸಹಜವಾಗಿ ಒಣಗಲು ಬಿಡಿ.

ತೇವವಾದ ಕೂದಲನ್ನು ಬಾಚಬೇಡಿ
2. ಕೂದಲು ತೇವಯುತವಾಗಿದ್ದರೆ ಅದನ್ನು ತಕ್ಷಣವೇ ಬಾಚಿದರೆ ಕೂದಲು ಉದುರುವಿಕೆ ಅಧಿಕ. ಹಾಗೆಯೇ ಕೂದಲು ಒದ್ದೆಯಾಗಿದ್ದು ಅದನ್ನು ಅತ್ಯಂತ ಬಿಗಿಯಾಗಿ ಹೆಣೆದರೆ ಕೂದಲು ತುಂಡಾಗುವುದರಲ್ಲಿ ಸಂಶಯವೇ ಇಲ್ಲ.

ಕೂದಲನ್ನು ಮೆಲ್ಲನೆ ತಿಕ್ಕಿ ತೊಳೆಯಬೇಕು
3. ಕಡಿಮೆ ಒತ್ತಡವನ್ನು ಹಾಕಿ ಕೂದಲನ್ನು ತೊಳೆಯಿರಿ. ಪ್ರತಿದಿನ ಹಲವು ಬಾರಿ ಒತ್ತಡ ಹಾಕಿ ಉಜ್ಜಿದರೆ (ಸ್ಟ್ರೋಕ್) ಕೂದಲು ತುಂಡಾಗುವಿಕೆ ಸಂಭವಿಸುತ್ತದೆ.

ಹೇರ್ ಪ್ರಾಡಕ್ಟ್ ಬಗ್ಗೆ ಎಚ್ಚರ
4. ದೀರ್ಘಕಾಲ ಇರುವಂತಹ ಕೂದಲಿನ ಶೈಲಿ ಉತ್ಪನ್ನಗಳನ್ನು ಬಳಸದಿರುವುದು ಉತ್ತಮ. ಕೂದಲಿಗೆ ಯಾವುದಾದರೂ ಉತ್ಪನ್ನಗಳನ್ನು ಬಳಸಿದ ನಂತರ ಕೂದಲಿಗೆ ಮಾಡುವ ವಿವಿಧ ಶೈಲಿಗಳಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು.

ಹೇರ್ ಸ್ಟೈಲ್
5. ಕೇಶವಿನ್ಯಾಸವನ್ನು ಮಾಡುವಾಗ ಅಥವಾ ಬಾಚುವಾಗ ಕೂದಲನ್ನು ಮೊದಲು ಚೆನ್ನಾಗಿ ಒಣಗಲು ಬಿಡಿ. ಹೀಗೆ ಮಾಡುವುದರಿಂದ ಕೂದಲು ಹಾನಿಗೊಳಗಾಗುವ ಸಮಸ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ.

ಕೂದಲಿನ ವಿನ್ಯಾಸ
6. ಒಣ ಕೂದಲಿಗೆ ಫ್ಲಾಟ್ ಐರನ್ ನ್ನು ಕಡಿ ಅಥವಾ ಮಧ್ಯಮ ಪ್ರಮಾಣದಲ್ಲಿ ಬಳಸಬಹುದು. ಕರ್ಲಿಂಗ್ ಐರನ್ ಬಳಸುವಾಗ ಸ್ವಲ್ಪ ಸಮಯ ಹಾಗೆಯೇ ಬಿಡಿ. ಆದರೆ ನಿಮ್ಮ ಕೂದಲಿನ ವಿಧ ಯಾವುದೇ ಆಗಿರಲಿ, ಅತೀಯಾದ ಉಷ್ಣವನ್ನು ಬಳಸಬೇಡಿ. ಇದು ಕೂದಲಿನ ಹಾನಿಗೆ ಕಾರಣವಾಗಬಹುದು.

ಜುಟ್ಟು ಕಟ್ಟುವುದು
7. ಕೂದಲಿಗೆ ಬಿಗಿಯಾಗಿ ಪೋನಿ, ಕೋರ್ನ್ ರೋವ್ಸ್ ಮೊದಲಾದ ಕೇಶವಿನ್ಯಾಸಗಳನ್ನು ಪ್ರತೀದಿನ ಮಾಡುವುದರಿಂದ ಕೂದಲುದುರುವ ಸಾಧ್ಯತೆಗಳು ಅಧಿಕ.

ಕೂದಲಿಗೆ ಹಾನಿ ಮಾಡುವ ಕೇಶ ವಿನ್ಯಾಸ ಬೇಡ
8. ಅಲ್ಲದೇ ಈ ವಿನ್ಯಾಸಗಳು, ಕೂದಲನ್ನು ಎಳೆಯುತ್ತವೆ ಮತ್ತು ಇದರಿಂದ ಕೂದಲಿಗೆ ಹಾನಿಯಾಗುತ್ತದೆ. ಈ ಒತ್ತಡದಿಂದ ಕೂದಲು ಸಂಪೂನವಾಗಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಕೇಶ ವಿನ್ಯಾಸವನ್ನು ಮಾಡುವಾಗ ಎಚ್ಚರಿಕೆಯನ್ನು ವಹಿಸಿ.



Click it and Unblock the Notifications
