Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಚಳಿಗಾಲದಲ್ಲಿ ಕೂದಲನ್ನು ತೊಳೆಯಲು ಕೆಲ ಟಿಪ್ಸ್
ಚಳಿಗಾಲದಲ್ಲಿ ಮಹಿಳೆಯರು ಎದುರಿಸಬೇಕಾಗಿರುವ ಸಮಸ್ಯೆಗಳಲ್ಲಿ ಕೂದಲ ಸಮಸ್ಯೆ ಕೂಡ ಒಂದು. ಪರಿಣಿತರ ಪ್ರಕಾರ ಚಳಿಗಾಲದಲ್ಲಿ ಹೆಚ್ಚಾಗಿ ತಲೆಗೆ ಸ್ನಾನ ಮಾಡುವುದರಿಂದ ಹೊಟ್ಟಿನ ಸಮಸ್ಯೆ ಮತ್ತು ತಲೆಯ ಬುಡಗಳಲ್ಲಿ ಜಿಡ್ಡಿನಂಶ ನಿಲ್ಲುವ ಸಮಸ್ಯೆಯನ್ನು ಎದುರಿಸಬಹುದು.
ಚಳಿಗಾಲದಲ್ಲಿ ತಲೆಗೂದಲನ್ನು ತೊಳೆಯಲು ಕೆಲವು ಟಿಪ್ಸ್ ಗಳನ್ನು ನೀವು ಪಾಲಿಸಬೇಕು. ಇವುಗಳನ್ನು ನೀವು ಪಾಲಿಸುವುದರಿಂದ ಸಮಸ್ಯೆಯಿಂದ ಮುಕ್ತರಾಗುವಿರಿ.

ನಿಮ್ಮ ಕೂದಲನ್ನು ಈ ಕೆಳಗಿನ ಟಿಪ್ಸ್ ಪಾಲಿಸಿ ಆರೈಕೆ ಮಾಡಿ. ಇದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿಯೇ ಉಳಿಯುತ್ತದೆ.
1. ಮೊದಲಿಗೆ ನೀವು ಮಾಡಬೇಕಾದದ್ದು ಸಾಧ್ಯವಾದಷ್ಟು ಮೈಲ್ಡ್ ಆಗಿರುವ ಶಾಂಪೂ ಬಳಸಬೇಕು. ಇದು ಕೂದಲಲ್ಲಿರುವ ಹೆಚ್ಚಿನ ಎಣ್ಣೆಯನ್ನು ತೆಗೆದುಹಾಕಿ ಕೂದಲಿನ ಪೋಷಣೆಗೆ ಎಷ್ಟು ಬೇಕೋ ಅಷ್ಟು ಎಣ್ಣೆಯನ್ನು ಮಾತ್ರ ಉಳಿಸುತ್ತದೆ.
2. ಚಳಿಗಾಲದಲ್ಲಿ ವಾರಕ್ಕೆರಡು ಬಾರಿ ತಲೆಗೂದಲನ್ನು ಸ್ವಚ್ಛ ಮಾಡಬೇಕು. ಕೂದಲನ್ನು ಬಿಸಿ ನೀರಿನಿಂದ ತೊಳೆಯಬೇಕು. ಇದರಿಂದ ಕೂದಲುದುರುವಿಕೆ ಕಡಿಮೆಯಾಗುತ್ತದೆ.
3. ಕೂದಲಿಗೆ ನ್ಯಾಚುರಲ್ ಕಂಡೀಷನರ್ ಗಳನ್ನು ಬಳಸಿ. ನೀರಿನಿಂದ ಸ್ವಚ್ಛಗೊಳಿಸುವ ಮೊದಲು 5 ಸೆಕೆಂಡುಗಳ ಕಾಲ ಕಂಡೀಷನರ್ ಹಚ್ಚಿ ಬಿಡಿ. ಕಂಡೀಷನರ್ ಹಚ್ಚಿ ತೊಳೆಯುವಾಗ ಕೂಡ ಬಿಸಿನೀರನ್ನೇ ಬಳಸಿ. ಆದರಿದು ಹೆಚ್ಚು ಬಿಸಿಯಾಗಿರಬಾರದು. ಹೆಚ್ಚು ಬಿಸಿಯಾಗಿರುವ ನೀರಾದರೆ ತಲೆಹೊಟ್ಟು ಬರುವ ಸಾಧ್ಯತೆಯಿರುತ್ತದೆ.
4. ಹಲವು ಹೆಂಗಸರು ಎಲ್ಲ ಋತುಗಳಲ್ಲೂ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳಲು ಇಷ್ಟಪಡುತ್ತಾರೆ. ಪರಿಣತರು ಚಳಿಗಾಲದಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಾರೆ. ತಲೆಗೆ ಸ್ನಾನ ಮಾಡುವಾಗ ಕೂದಲ ಬುಡಗಳನ್ನು ಉಜ್ಜಿ ಎಣ್ಣೆ ಹೋಗುವಂತೆ ಸ್ನಾನ ಮಾಡುವುದು ಅತ್ಯಗತ್ಯ.
5. ಮತ್ತೊಂದು ನೆನಪಿಡಬೇಕಾದ ಟಿಪ್ ಎಂದರೆ ಹೇರ್ ಪ್ಯಾಕ್ ಗಳನ್ನು ಬಳಸುವುದು. ಈ ಋತುವಿನಲ್ಲಿ ವಾತಾವರಣದಲ್ಲಿನ ತೇವಾಂಶದಿಂದಾಗಿ ಕೂದಲಿನಲ್ಲಿ ಎಣ್ಣೆಯ ಅಂಶ ಸಹಜವಾಗಿಯೇ ಹೆಚ್ಚಿರುತ್ತದೆ. ಆದ್ದರಿಂದ ಈ ಸಮಯದಲ್ಲಿ ಹೇರ್ ಪ್ಯಾಕ್ ಗಳನ್ನು ಬಳಸುವುದು ಒಳ್ಳೆಯದು.



Click it and Unblock the Notifications