Latest Updates
-
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ!
ಕೂದಲು ಉದುರುವಿಕೆಗೆ ಪ್ರಮುಖ 10 ಕಾರಣಗಳು
ನೀವು ತಲೆ ಬಾಚಿಕೊಂಡಾಗ ನಿಮ್ಮ ಬಾಚಣಿಕೆಯಲ್ಲಿ ದಟ್ಟವಾದ ಕೂದಲು ಸಿಕ್ಕಕೊಂಡಿರುತ್ತದಾ? ಕೂದಲೆಲ್ಲಾ ಉದುರಿ ನಿಮ್ಮ ತಲೆ ಬೋಳಾಗಬಹುದೇ ಎಂಬ ಚಿಂತೆ ಕಾಡುತ್ತಿದೆಯೇ? ಏಕೆ ಹೀಗೆ ಕೂದಲು ಉದುರುತ್ತಿದೆ ಎಂದು ನಿರ್ದಿಷ್ಟವಾಗಿ ಹೇಳಲು ಆಗುತ್ತಿಲ್ಲವೆ? ನಿಮ್ಮ ತಲೆ ಕೂದಲು ಉದುರಿ ನೀವು ಬಾಲ್ಡ್ ಆಗುತ್ತಿರಲು 10 ಕಾರಣಗಳು ಇಲ್ಲಿವೆ ಓದಿಕೊಳ್ಳಿ.
ಪರಿಸರ ಮಾಲಿನ್ಯ, ಆಹಾರಕ್ರಮ, ಒತ್ತಡ, ಕೂದಲಿನ ಆರೈಕೆ ಮಾಡದಿರುವುದು ಇವೆಲ್ಲಾ ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ. ಕೂದಲು ಉದುರಲು ಪ್ರಾರಂಭಿಸಿದರೆ ದುಬಾರಿ ಪಾರ್ಲರ್ ಗೆ ಹೋಗುವ ಬದಲು ಅದರ ಬಗ್ಗೆ ನಾವೇ ಸ್ವಲ್ಪ ಗಮನ ಹರಿಸಿದರೆ ಸಾಕು ಕೂದಲು ಉದುರುವುದನ್ನು ತಡೆಗಟ್ಟಬಹುದು. ಕೂದಲು ಉದುರುವುದನ್ನು ತಡೆಯಲು ಚಿಕಿತ್ಸೆ ಮಾಡುವ ಮುನ್ನ ಯಾವ ಕಾರಣದಿಂದ ಉದುರುತ್ತಿದೆ ಎಂದು ತಿಳಿದುಕೊಂಡರೆ, ಕೂದಲು ಉದುರುವುದನ್ನು ಸಾಕಷ್ಟು ತಡೆಗಟ್ಟಬಹುದು. ಕೂದಲು ಉದುರುವ ಸಮಸ್ಯೆ ಪ್ರಮುಖವಾಗಿ ಈ ಕೆಳಗಿನ ಕಾರಣಗಳಿಂದ ಕಂಡು ಬರುವುದು:

1. ಒತ್ತಡ
ಆಧುನಿಕ ಜಗತ್ತಿನ ಒತ್ತಡದ ಬದುಕು ಶರೀರದಲ್ಲಿರುವ ಶಕ್ತಿಯನ್ನು ಹೆಚ್ಚಾಗಿ ಬಳಸಿಕೊಳ್ಳುವುದರಿಂದ ಒತ್ತಡ ಹೆಚ್ಚಾಗುತ್ತದೆ.ಬಹಳಷ್ಟು ಮಂದಿ ಒತ್ತಡಕ್ಕೆ ಒಳಗಾಗುತ್ತಿರುವುದರಿಂದ ಅವರ ತಲೆಯ ಕೂದಲು ಉದುರುತ್ತಿದೆ, ಆದರೆ ಕೂದಲು ಉದುರುವಿಕೆಗೆ ಒತ್ತಡ ಒಂದೇ ಕಾರಣ ಎಂಬುದಾಗಿ ಹೇಳಲು ಆಗದು.

2.ಕೌಟುಂಬಿಕ ಹಿನ್ನೆಲೆ
ಕೌಟುಂಬಿಕ ಹಿನ್ನೆಲೆಯನ್ನು ತೆಗೆದುಕೊಳ್ಳುವುದಾದರೆ, ನೀವು ಹೆಚ್ಚಾಗಿ ಏನೂ ಹೇಳ ಬೇಕಾಗಿಲ್ಲ.ಕ್ರಮವಾದ ಆಹಾರ ಸೇವನೆ ಹಾಗೂ ಬದಲಾದ ಜೀವನ ಶೈಲಿಯಿಂದಾಗಿ ಕೂದಲು ಉದುರುವುದನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು ಹಾಗೂ ಕೂದಲು ಉದುರುವುದನ್ನು ತಡೆಗಟ್ಟುವ ಪ್ರಯತ್ನ ಮಾಡಬಹುದು.

3.ಕೇಶ ವಿನ್ಯಾಸದ ಪರಿಕರಗಳು
ತಲೆಗೆ ಸ್ನಾನ ಮಾಡಿದ ನಂತರ ಡ್ರೈಯರನ್ನು ಬಳಸುವುದು ಒಳ್ಳೆ ಅಭ್ಯಾಸ ಖಂಡಿತ ಅಲ್ಲ.ಆದರೆ ಹೇರ್ ಡ್ರೈಯರ್ ಬಳಸುವುದು ಒಳ್ಳೆಯದಲ್ಲ ಅದರಿಂದ ಕೂದಲು ಹೆಚ್ಚಾಗಿ ಉದುರುತ್ತದೆ ಎಂದು ವಿವಿಧ ರೀತಿಯಲ್ಲಿ ಶಿಕ್ಷಣ ನೀಡಿದರೂ ಪ್ರಯೋಜನವಾಗುತ್ತಿಲ್ಲ.

4.ಹಾರ್ಮೋನ್ ಗಳಲ್ಲಿ ಬದಲಾವಣೆ
ಶರೀರದ ಹಾರ್ಮೋನ್ ಗಳ ಪ್ರಮಾಣ ಏರುಪೇರಾಗುತ್ತಲೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಗರ್ಭಿಣಿ ಹಾಗೂ ಬಾಣಂತಿ ಆಗಿದ್ದಾಗ ಕೂದಲು ಹೆಚ್ಚಾಗಿ ಉದುರುತ್ತದೆ. ಥೈರಾಯಿಡ್ ಏರುಪೇರಾದಾಗ, ಮುಟ್ಟಾದಾಗ ಹಾಗೂ ಇತರ ಹಾರ್ಮೋನ್ ಬದಲಾವಣೆಗೆ ಸಂಬಂಧಿಸಿದಂತೆ ಕೂದಲು ಉದುರುವಿಕೆಗೆ ಕಾರಣಗಳು ಇರಬಹುದು.

5. ಪದೇ ಪದೇ ರಾಸಾಯನಿಕ ಪ್ರಸಾದನಗಳನ್ನು ಬಳಸುವುದರಿಂದ
ಶಾಂಪೂ, ಕಂಡೀಷನರ್ ಹಾಗೂ ತಲೆಗೆ ಬಳಸುವ ಕೂದಲೆಣ್ಣೆಗಳೂ ಕೂಡ ಇಂದು ರಾಸಾಯನ ಮಿಶ್ರಣಗಳಿಂದ ಕೂಡಿದ್ದು ನಿಮ್ಮ ಕೂದಲು ಉದುರುವುದಕ್ಕೆ ಕಾರಣವಾಗಬಹುದು. ಕೆಲವೊಂದು ಸೌಂದರ್ಯವರ್ಧಕಗಳೂ ಹಾನಿಕಾರಕ ರಾಸಾಯನಗಳಿಂದ ಕೂಡಿದ್ದಾಗಿದ್ದು ಅದು ಕೂದಲಿನ ಬುಡವನ್ನು ಸಡಿಲಗೊಳಿಸುವುದು, ತುದಿ ಭಾಗ ಕವಲೊಡೆಯುವುದು, ಕೂದಲು ಉದುರುವುದು ಹಾಗೂ ಕೂದಲಿಗೆ ಸಂಬಂಧಿಸಿದ ಇನ್ನೂ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.

6.ಜಂಕ್ ಫುಡ್
ಸದಾ ಜಂಕ್ ಫುಡ್ ಅನ್ನೇ ಸೇವಿಸುವುದರಿಂದ ಶರೀರದಲ್ಲಿ ಪೌಷ್ಠಿಕಾಂಶದ ಕೊರತೆಯುಂಟಾಗಿ ತಲೆ ಕೂದಲು ಉದುರುವಿಕೆಗೆ ಕಾರಣವಾಗಬಹುದು.ಇಂದು ಜನರು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದೂ ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗಿದೆ.

7. ಕೆಟ್ಟ ಹವಾಮಾನ
ನಿಮ್ಮ ಮನೆ ಹಾಗೂ ಕಛೇರಿಯಲ್ಲಿ ನಿಮಗೆ ಹೊಂದಿಕೆಯಾಗುವ ಹವಾಮಾನವೇ ಇರಬಹುದು ಆದರೆ ಅದು ನಿಮ್ಮ ಕೂದಲಿಗೂ ಹೊಂದಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.ಪ್ರತೀ ಬದಲಾದ ಹವಾಮಾನಕ್ಕೆ ಕೂದಲು ಪ್ರತಿಕ್ರಿಯೆ ನೀಡುತ್ತದೆ ಹಾಗೂ ಅದರ ಕಂಡೀಷನ್ ಕೂಡ ಬದಲಾಗುತ್ತದೆ. ಹಾಗಾಗಿ ನಿಮ್ಮ ಕೂದಲು ಉದುರದಂತೆ ಉತ್ತಮ ಹಮಾನಾದ ಕಡೆಗೂ ಗಮನ ಹರಿಸಬೇಕಾಗುತ್ತದೆ.

8. ಲಿಂಗ
ಕೂದಲು ಉದುರುವ ಸಮಸ್ಯೆ ಮಹಿಳೆ ಹಾಗೂ ಪುರುಷರಿಬ್ಬರಲ್ಲೂ ಕಂಡುಬರುತ್ತದೆ.ಅದರಲ್ಲೂ ಮಹಿಳೆಯರಿಗೆ ಕೂದಲು ನಿರಂತರವಾಗಿ ವರ್ಷದ ಎಲ್ಲಾ ಕಾಲದಲ್ಲೂ ಉದುರುತ್ತಲೇ ಇರಬಹುದು-ಆದರೆ ಪುರುಷರಿಗೆ ಯಾವುದೋ ಕೆಲ ಸಮಯಗಳಲ್ಲಿ ಮಾತ್ರ ಉದುರುವುದನ್ನು ಕಾಣುತ್ತೇವೆ. ಪುರುಷರು ಕೂದಲ ಕಡೆಗೆ ಹೆಚ್ಚು ಆಸಕ್ತಿ ತೋರದೇ ಇರುವುದೂ ಒಂದು ಕಾರಣವಾಗಿದೆ.

9.ನಿದ್ರೆ ಕಡಿಮೆ ಮಾಡುವುದರಿಂದ
ನೀವು ಸರಿಯಾಗಿ ನಿದ್ರಿಸುತ್ತಿಲ್ಲ ಎನ್ನುವುದನ್ನು ನಿಮ್ಮ ಕಣ್ಣಿನ ಕೆಳಗಿರುವ ಕಪ್ಪು ವೃತ್ತ ಹಾಗೂ ಉದುರುತ್ತಿರುವ ಕೂದಲು ತೋರಿಸುತ್ತದೆ. ಇನ್ಸೋಮ್ನಿಯಾ, ನಾರ್ಕೋಲಿಪ್ಸಿ ಮುಂತಾದ ನಿದ್ರಾಹೀನ ವ್ಯತ್ಯಾಸಗಳು ನಿಮ್ಮ ಆರೋಗ್ಯಕರ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ, ಕ್ರಮೇಣ ಇದರಿಂದ ಬಾಲ್ಡ್ ಹೆಡ್ ಆಗುವ ಸಾಧ್ಯತೆಗಳೇ ಹೆಚ್ಚು.

10.ಔಷಧಿ ಸೇವನೆ ಹಾಗೂ ಚಿಕಿತ್ಸೆ
ಜೀವನದಲ್ಲಾಗುವ ಬಾರೀ ಬದಲಾವಣೆ ಅಂದರೆ ಒಂದು ಅಪಘಾತವು ಮಾನಸಿಕ ನೋವು ಹಾಗೂ ಬಾರೀ ಒತ್ತಡವನ್ನು ತರುತ್ತದೆ.ಇದಕ್ಕೆ ಹೊಂದಿಕೊಂಡಂತೆ ಚಿಕಿತ್ಸೆ ಹಾಗೂ ಔಷಧಿಯ ಸೇವನೆಯೂ ಆರಂಭವಾಗುತ್ತದೆ ಇದರ ಹಿಂದೆಯೇ ಕೂದಲ ಆರೋಗ್ಯ ಕೆಡುತ್ತದೆ. ಔಷಧಿಗಳನ್ನು ಹೆಚ್ಚಾಗಿ ಬಳಸುವುದಿರಂದ ಅಥವಾ ಕೀಮೋ ಥೆರಪಿಯಂಥಹ ಚಿಕಿತ್ಸೆ ಮುಂತಾದವು ಕೂದಲು ಉದುರುವಿಕೆಗೆ ಕಾರಣವಾಗಿದ್ದು ಇದರಿಂದ ಬೊಕ್ಕ ತಲೆ ಸಮಸ್ಯೆ ಕಂಡು ಬರುವುದು.



Click it and Unblock the Notifications