Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮಸಾಲೆ ಬಳಸಿ ಕೂದಲು ಬೆಳೆಸಿ
ಮಸಾಲೆಗಳು ನಿಮ್ಮ ಆಹಾರದ ರುಚಿ ಮತ್ತು ಸುವಾಸನೆ ಹೆಚ್ಚಿಸುತ್ತದೆ. ಪ್ರತಿಯೊಂದು ಮಸಾಲೆಗೂ ತನ್ನದೆ ಆದ ಅನನ್ಯ ಸುವಾಸನೆಯಿರುತ್ತದೆ. ಅದರ ಸುವಾಸನೆಗೆ ಅನುಗುಣವಾಗಿ ಅದನ್ನು ಬಳಸಲಾಗುತ್ತದೆ. ಕೆಲವೊಂದು ಕಡಿಮೆ ಸುವಾಸನೆ ಹೊಂದಿದ್ದರೆ ಮತ್ತೆ ಕೆಲವು ಗಾಢ ಸುವಾಸನೆ ಹೊಂದಿರುತ್ತದೆ. ಭಾರತದಲ್ಲಿ ಅಡುಗೆಗೆ ಮಸಾಲೆಗಳು ಅತ್ಯಗತ್ಯ. ಭಾರತದಲ್ಲಿ ಅಡುಗೆ ರುಚಿ ಅದಕ್ಕೆ ಹಾಕುವ ಮಸಾಲೆಗಳ ಮೇಲೆ ಅವಲಂಬಿತವಾಗಿದೆ. ಭಾರತದಲ್ಲಿ ಬೆಳೆಯಲಾಗುವ ಮಸಾಲೆ ಪದಾರ್ಥಗಳು ಮತ್ತು ಅದನ್ನು ವಿಭಿನ್ನವಾಗಿ ಬಳಸುವುದನ್ನು ಭಾರತವನ್ನು ಮಸಾಲೆಯ ನಾಡು' ಎಂದು ಕರೆಯಲಾಗುತ್ತದೆ.
ಮಸಾಲೆಗಳು ಕೇವಲ ಅಡುಗೆಗೆ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಕೆಲವೊಂದು ಮಸಾಲೆಗಳಲ್ಲಿ ಸೌಂದರ್ಯದ ರಹಸ್ಯ ಕೂಡ ಅಡಗಿದೆ. ಉದಾಹರಣೆಗೆ ಅರಶಿನ ತ್ವಚೆಯನ್ನು ಶುಚಿಗೊಳಿಸಿ ಅದರ ಬಣ್ಣವನ್ನು ಸುಧಾರಿಸಬಹುದು. ಅದರಂತೆ ಕೆಲವೊಂದು ಮಸಾಲೆಗಳು ಕೂದಲಿಗೆ ಒಳ್ಳೆಯದು. ಇದು ಕೂದಲಿನ ಬುಡವನ್ನು ಬಲಪಡಿಸುತ್ತದೆ ಮತ್ತು ಅದರ ಬೆಳವಣಿಗೆಗೆ ನೆರವಾಗುತ್ತದೆ. ಕೆಲವು ಮಸಾಲೆಗಳನ್ನು ಕೂದಲು ಉದುರುವಿಕೆ ಮತ್ತು ಇತರ ಸಮಸ್ಯೆಗಳಾದ ಒರಟು ಕೂದಲು, ನಿರ್ಜೀವ ಕೂದಲು ಮುಂತಾದವುಗಳಿಗೆ ಔಷಧಿಯನ್ನಾಗಿ ಬಳಸಲಾಗುತ್ತದೆ.
ಕೂದಲು ಉದುರುವಿಕೆ ತಡೆದು ಅದರ ಬೆಳವಣಿಗೆಗೆ ಕಾರಣವಾಗುವ ಕೆಲವೊಂದು ಮಸಾಲೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಕರಿಬೇವು
ಭಾರತದ ಮಹಿಳೆಯರ ಉದ್ದ ಕೂದಲಿನ ಹಿಂದಿನ ರಹಸ್ಯ ಕರಿಬೇವು. ಅಡುಗೆ ವಿಶೇಷವಾದ ರುಚಿಯನ್ನು ತರುವ ಕರಿಬೇವು ಕೂದಲನ್ನು ಉದ್ದ ಮತ್ತು ದಪ್ಪವಾಗಿಸುತ್ತದೆ. ಕರಿಬೇವನ್ನು ಉಪಯೋಗಿಸಬೇಕಾದರೆ ಅದನ್ನು ತೆಂಗಿನ ಎಣ್ಣೆಯೊಂದಿಗೆ ಬಿಸಿ ಮಾಡಿ. ಎಣ್ಣೆ ಕಪ್ಪಾಗುವ ತನಕ ಬಿಸಿ ಮಾಡಿ. ಇದನ್ನು ತಣ್ಣಗೆ ಮಾಡಿದ ಬಳಿಕ ನಿಮ್ಮ ಕೂದಲಿಗೆ ಹಚ್ಚಿ. ರಾತ್ರಿ ಹಚ್ಚಿ ಮಲಗಬಹುದು ಅಥವಾ 2-3 ಗಂಟೆ ಬಿಟ್ಟು ಸ್ನಾನ ಮಾಡಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಬೆಳೆಯುತ್ತದೆ.

ಕಪ್ಪು ಜೀರಿಗೆ
ಆಹಾರಕ್ಕೆ ರುಚಿಯನ್ನುಂಟು ಮಾಡುವ ಮಸಾಲೆಯು ಕೂದಲು, ತ್ವಚೆ ಮತ್ತು ಆರೋಗ್ಯಕ್ಕೆ ತುಂಬಾ ಉಪಯೋಗಿ. ಕಪ್ಪು ಜೀರಿಗೆ ಕೂದಲನ್ನು ಬಲಪಡಿಸುವ ಮತ್ತು ಅದರ ಬೆಳವಣಿಗೆಗೆ ನೆರವಾಗುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಕಪ್ಪು ಜೀರಿಗೆ ಕೂದಲು ಉದುರುವಿಕೆಗೆ ತಡೆಯುತ್ತದೆ. ಕಪ್ಪು ಜೀರಿಗೆ ಕೂದಲಿನ ಬೆಳವಣಿಗೆಗೆ ಒಳ್ಳೆಯ ಮಸಾಲೆ.

ಅರಶಿನ
ಅರಶಿನ ಹಲವಾರು ಗುಣಗಳನ್ನು ಹೊಂದಿರುವ ಮ್ಯಾಜಿಕ್ ಮಸಾಲೆ. ಅರಶಿನವನ್ನು ಗಾಯಗಳಿಗೆ ನಂಜುನಿರೋಧಕ, ತ್ವಚೆ ಶುಚಿಗೊಳಿಸಲು ಮತ್ತು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬಹುಉಪಯೋಗಿ ಮಸಾಲೆಯಿಂದ ಕೂದಲಿಗೂ ಹಲವಾರು ಲಾಭಗಳಿವೆ. ಅರಶಿನ ನೆತ್ತಿಯನ್ನು ಪುನರ್ಯೌವನಗೊಳಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಇದು ತಲೆಹೊಟ್ಟು ಸಮಸ್ಯೆ ನಿವಾರಿಸುತ್ತದೆ. ಇದರಿಂದ ತಲೆಹೊಟ್ಟಿನಿಂದ ಕೂದಲು ಉದುರುವುದು ತಪ್ಪುತ್ತದೆ. ಅರಶಿನವನ್ನು ನೇರವಾಗಿ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಬಹುದು ಅಥವಾ ಎಣ್ಣೆಯೊಂದಿಗೆ ಹಚ್ಚಬಹುದು. 20-30 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಬೇಕು. ಒಳ್ಳೆಯ ಫಲಿತಾಂಶಕ್ಕೆ ನಿಯಮಿತವಾಗಿ ಬಳಸಿ.

ಕಾಳುಮೆಣಸು
ಕಪ್ಪು ಮತ್ತು ಕೆಂಪು ಕಾಳುಮೆಣಸು ಆಹಾರಕ್ಕೆ ಹೆಚ್ಚಿನ ಖಾರ ಮತ್ತು ಮಸಾಲೆಭರಿತ ಸ್ವಾದ ನೀಡುತ್ತದೆ. ಇದು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಇದರಲ್ಲಿ ನೈಸರ್ಗಿಕ ಟಾಕ್ಸಿನ್ ಗಳಿದ್ದು, ಇದು ಕೂದಲು ಕಿರುಚೀಲಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಆರೋಗ್ಯಕರ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಇದು ನೆತ್ತಿಯಲ್ಲಿ ರಕ್ತದ ಸಂಚಾರವನ್ನು ಉತ್ತಮಪಡಿಸುತ್ತದೆ. ಇದರಿಂದ ಕೂದಲಿನ ಬೆಳವಣಿಗೆಯಾಗುತ್ತದೆ. ಕೂದಲಿನ ಬೆಳವಣಿಗೆಗೆ ಕಾಳು ಮೆಣಸು ಒಂದು ಮಸಾಲೆ.

ರೋಸ್ಮರಿ
ಇದು ಸೂಫ್ ಮತ್ತು ಪದಾರ್ಥಗಳಿಗೆ ಮೃದು ಸುವಾಸನೆ ನೀಡಲು ಬಳಸಲಾಗುತ್ತದೆ. ಇದನ್ನು ಕೂದಲಿಗೆ ಬಳಸಿದರೆ ಹೆಚ್ಚಿನ ಲಾಭವಿದೆ. ರೋಸ್ಮರಿಯಿಂದ ಕೂದಲು ಬೆಳೆಯುತ್ತದೆ ಮತ್ತು ಅದು ಕೂದಲಿಗೆ ಪೋಷಕಾಂಶ ಒದಗಿಸುತ್ತದೆ. ಇದು ಕೂದಲ ಕಿರುಚೀಲಗಳ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಕೂದಲು ಉದುರುವಿಕೆ ತಡೆಯುತ್ತದೆ. ಒಣ ನೆತ್ತಿ ಮತ್ತು ತಲೆಹೊಟ್ಟಿಗೆ ರೋಸ್ಮರಿಯನ್ನು ಔಷಧಿಯನ್ನಾಗಿ ಬಳಸಬಹುದು.

ಕೂದಲಿನ ಬೆಳವಣಿಗೆ
ಇದು ಕೆಲವೊಂದು ಮಸಾಲೆಗಳು. ಈ ಎಲ್ಲಾ ಮಸಾಲೆಗಳನ್ನು ಎಣ್ಣೆ, ಹೇರ್ ಮಾಸ್ಕ್ ಮತ್ತು ಹೇರ್ ಪ್ಯಾಕ್ ಗಳಲ್ಲಿ ಬಳಸಬಹುದು. ನಿಯಮಿತವಾಗಿ ಬಳಸುವುದರಿಂದ ಅದು ನಿಮ್ಮ ಕೂದಲಿನ ಬೆಳವಣಿಗೆಗೆ ನೆರವಾಗಬಹುದು. ರಾಸಾಯನಿಕಯಕ್ತ ಉತ್ಪನ್ನಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾಗಿ ಇಂತಹ ಮಸಾಲೆಗಳನ್ನು ಬಳಸುವುದು ಚರ್ಮ ಮತ್ತು ದೇಹಕ್ಕೆ ಒಳ್ಳೆಯದು.



Click it and Unblock the Notifications











