Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಬಿಗಿಯಾಗಿ ಜುಟ್ಟು ಕಟ್ಟುವ ಅಭ್ಯಾಸ ಇಂದೇ ಬಿಡಿ
ಕುದುರೆ ಜುಟ್ಟು ಅಂದರೆ ಎತ್ತಿ ಕಟ್ಟಿದ ಜುಟ್ಟು ನೋಡಲು ಆಕರ್ಷಕವಾಗಿ ಕಾಣುವುದೇನೋ ನಿಜ, ಆದರೆ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟುವುದು ಕೂದಲಿನ ಬುಡಕ್ಕೆ ಒಳ್ಳೆಯದಲ್ಲ. ನೀವು ಗಮನಿಸಿರಬಹುದು, ಕೂದಲನ್ನು ಬಿಗಿಯಾಗಿ ಕಟ್ಟಿದಾಗ ತಲೆನೋವು ಉಂಟಾಗುವುದು. ಇದಕ್ಕೆ ಕಾರಣ ಕೂದಲನ್ನು ಎಳೆದು ಕಟ್ಟಿದಾಗ ತಲೆ ಬುಡದ ಮೇಲೆ ಹೆಚ್ಚು ಒತ್ತಡ ಬಿದ್ದು ತಲೆನೋವು ಬರುವುದು, ಅಲ್ಲದೆ ಹೀಗೆ ಕಟ್ಟುವುದರಿಂದ ಕೂದಲಿನ ಆರೋಗ್ಯ ಕೂಡ ಹಾಳಾಗುವುದು.
ಬಿಗಿಯಾಗಿ ಜುಟ್ಟು ಕಟ್ಟಿದರೆ ಕೂದಲಿನ ಮೇಲೆ ಈ ಕೆಳಗಿನ ಕೆಟ್ಟ ಪರಿಣಾಮ ಬೀರುವುದು:

* ಕೂದಲನ್ನು ಬಿಗಿಯಾಗಿ ಕಟ್ಟಿದರೆ ಕೂದಲಿನ ಬುಡದ ಮೇಲೆ ಒತ್ತಡ ಬೀಳುವುದು, ಅಲ್ಲದೆ ಕೂದಲಿನ ಬುಡಕ್ಕೆ ಉಸಿರಾಡಲು ತೊಂದರೆ ಉಂಟಾಗುವುದು. ಇದರಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುವುದು.
* ಜುಟ್ಟು ಕಟ್ಟಲು ಸಾಮಾನ್ಯವಾಗಿ ನಾವು ರಬ್ಬರ್ ಬ್ಯಾಂಡ್ ಬಳಸುತ್ತೇವೆ. ರಬ್ಬರ್ ಬ್ಯಾಂಡ್ ನಿಂದ ಬಿಗಿಯಾಗಿ ಕೂದಲು ಕಟ್ಟಿದರೆ ಅದು ಕೂದಲನ್ನು ತುಂಡರಿಸುತ್ತದೆ. ಇದರಿಂದ ಕೂಡ ಕೂದಲು ಹಾಳಾಗುವುದು. ಆದ್ದರಿಂದ ಕೂದಲನ್ನು ತುಂಬಾ ಬಿಗಿಯಾಗಿ ಕಟ್ಟಬೇಡಿ.
* ಡ್ರೈ ಕೂದಲು ಇರುವವರು ಜುಟ್ಟು ಕಟ್ಟದಿರುವುದು ಒಳ್ಳೆಯದು. ಕೂದಲಿಗೆ ವಾರಕ್ಕೊಮ್ಮೆ ಮೊಸರು ಹಾಕಿ ಮಸಾಜ್ ಮಾಡಿದರೆ ಕೂದಲು ಮೃದುವಾಗುವುದು.
* ಒಂದು ವೇಳೆ ಜುಟ್ಟು ಕಟ್ಟಿ ತಲೆನೋವು ಕಾಣಿಸಿಕೊಂಡರೆ ಕೂದಲನ್ನು ಬಿಚ್ಚಿ ಸಡಿಲವಾಗಿ ಬಿಟ್ಟು ಎಣ್ಣೆ ಮಸಾಜ್ ಮಾಡಿದರೆ ತಲೆನೋವು ಕಡಿಮೆಯಾಗುವುದು.



Click it and Unblock the Notifications
