Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಪರ್ಮನೆಂಟ್ ಹೇರ್ ಕಲರ್ ತೆಗೆಯಲು ಟಿಪ್ಸ್
ಬ್ಯೂಟಿ ಪಾರ್ಲರ್ ಗೆ ಹೋಗಿ ಐಬ್ರೋ ಮಾಡಿಸುವಾಗ, ಕೂದಲು ಕತ್ತರಿಸುವಾಗ, ಹೇರ್ ಕಲರ್ ಮಾಡಿಸಿಕೊಳ್ಳುವಾಗ ತುಂಬಾ ಕೇರ್ ಫುಲ್ ಆಗಿರಬೇಕು. ಯಾವ ರೀತಿಯ ಮಾಡಿದರೆ ನನ್ನ ಮೈ ಬಣ್ಣಕ್ಕೆ, ನನ್ನ ಮುಖಕ್ಕೆ ಹೊಂದಿಕೊಳ್ಳುತ್ತದೆ ಎಂಬ ತಿಳುವಳಿಕೆ ಬೇಕು. ಇಲ್ಲದಿದ್ದರೆ ಸ್ಟೈಲ್ ಮಾಡಲು ಹೋಗಿ ವಿಚಿತ್ರವಾಗಿ ಕಂಡು ಬಿಡುತ್ತೇವೆ. ಐಬ್ರೋ ತೆಳ್ಳಗೆ ಬೇಕಾ? ಸ್ವಲ್ಪ ದಪ್ಪ ಬೇಕಾ? ಬಿಲ್ಲನಂತೆ ಬೇಕಾ?ನ್ಯಾಚುರಲ್ ಆಗಿರಬೇಕಾ? ಕೂದಲು ಅಷ್ಟೇ ಯಾವ ಕಟ್ ಮುಖಕ್ಕೆ ಹೊಂದುತ್ತದೆ ಎಂದು ತಿಳಿದುಕೊಂಡು ಬ್ಯೂಟಿ ಪಾರ್ಲರ್ ರವರಿಗೆ ಆ ರೀತಿ ಮಾಡಿ ಕೊಡಲು ಹೇಳಬೇಕು.
ಹೇರ್ ಕಲರ್ ಅಷ್ಟೇ ನಿಮ್ಮ ಫ್ರೆಂಡ್ ಮಾಡಿದ್ದಾಳೆ/ದ್ದಾನೆ ಎಂದು ನೀವು ಮಾಡಲು ಹೋದರೆ ಕೆಟ್ಟದಾಗಿ ಕಾಣಬಹುದು. ಪರ್ಮನೆಂಟ್ ಹೇರ್ ಕಲರ್ ಮಾಡಿಸಿದರೆ ಕಡಿಮೆಯಂದರೂ 8-10 ತಿಂಗಳಿರುತ್ತದೆ. ಒಂದು ವೇಳೆ ಹೇರ್ ಕಲರ್ ಮಾಡಿಸಿದ ನಂತರ ನಿಮ್ಮ ನೈಜ ಕೂದಲಿನ ಬಣ್ಣ ಬೇಕೆಂದರೆ ಈ ಕೆಳಗಿನ ಟಿಪ್ಸ್ ಪಾಲಿಸಬಹುದು.

ಹೇರ್ ಕಲರ್ ರಕ್ಷಣೆ ಮಾಡುವ ಶ್ಯಾಂಪೂ ಬಳಸಬೇಡಿ:ಹೇರ್ ಕಲರ್ ಬೇಡ ಎಂದೆನಿಸಿದಾಗ ಹೇರ್ ಕಲರ್ ಹೋಗದಂತೆ ತಡೆಯುವ ಶ್ಯಾಂಪನ್ನು ಬಳಸಬಾರದು. ಮಾಮೂಲಿ ಶ್ಯಾಂಪೂ ಬಳಸಿ. ಇದರಿಂದ ಕೂದಲಿನಲ್ಲಿರುವ ಬಣ್ಣ ಸ್ವಲ್ಪ ಹೋಗುತ್ತದೆ.
ಹೊಟ್ಟು ನಿವಾರಕ ಶ್ಯಾಂಪೂ ಬಳಸಿ: ಹೇರ್ ಕಲರ್ ಮಾಡಿದರೆ ಕೂದಲು ಒರಟಾಗುತ್ತದೆ. ತಲೆ ಹೊಟ್ಟು ನಿವಾರಕ ಶ್ಯಾಂಪೂ ಬಳಸಿ. ಇದರಿಂದ ಕೂದಲು ಮೃದುವಾಗುತ್ತದೆ, ಕೂದಲಿನಲ್ಲಿರುವ ಬಣ್ಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು.
ವಿಟಮಿನ್ ಇ ಮಾತ್ರೆ: ತುಂಬಾ ಬೆಲೆ ಕಡಿಮೆ ಇರುವ ವಿಟಮಿನ್ ಇ ಇರುವ ಮಾತ್ರೆಯನ್ನು ಕೊಂಡು ಅದನ್ನು ಪುಡಿ ಮಾಡಿ ನೀರಿನಲ್ಲಿ ಮಿಶ್ರ ಮಾಡಿ ಗಟ್ಟಿಯಾದ ಪೇಸ್ಟ್ ರೀತಿ ಮಾಡಬೇಕು. ನಂತರ ಇದರಿಂದ ತಲೆಯನ್ನು ಮಸಾಜ್ ಮಾಡಬೇಕು. ರೀತಿ ಮಸಾಜ್ ಮಾಡಿ ಅರ್ಧ ಗಂಟೆ ಬಿಡಬೇಕು. ನಂತರ ಶ್ಯಾಂಪೂ ಹಾಕಿ ತಲೆಯನ್ನು ತೊಳೆದರೆ ಕೂದಲಿನ ಬಣ್ಣ ತುಂಬಾ ಹೋಗಿರುತ್ತದೆ. ಈ ರೀತಿ 2 ಬಾರಿ ಮಾಡಿದರೆ ಕೂದಲಿನಲ್ಲಿರುವ ಕೃತಕ ಬಣ್ಣವನ್ನು ಹೋಗಲಾಡಿಸಬಹುದು.
ಬಿಸಿ ಎಣ್ಣೆ ಚಿಕಿತ್ಸೆ: ಹದ ಬಿಸಿ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿದರೆ ಒಳ್ಳೆಯದು. ಈ ರೀತಿ ಮಾಡಿ ಕೂದಲಿನ ಬಣ್ಣ ಹೋಗಲಾಡಿಸಲು ಸಾಧ್ಯವಿಲ್ಲ. ಅದರ ಬದಲು ಕೂದಲಿಗೆ ಹಚ್ಚಿದ ಬಣ್ಣದಿಂದ ಕೂದಲಿಗೆ ಯಾವುದೇ ಹಾನಿಯಾಗದಂತೆ ತಡೆಯಬಹುದು. ಆದರೆ ಈ ರೀತಿ ಹದ ಬಿಸಿ ಎಣ್ಣೆಯಿಂದ ಮಸಾಜ್ ವಾರಕ್ಕೊಮ್ಮೆ ಮಾತ್ರ ಮಾಡಬೇಕು. ಹೆಚ್ಚಿನ ಬಾರಿ ಮಾಡಿದರೆ ಅದರಿಂದ ಕೂಡ ಹಾಳಾಗುವುದು.
ಹೇರ್ ಕಲರ್ ರಿಮೂವರ್: ಸೌಂದರ್ಯವರ್ಧಕ ಸಾಧನಗಳು ದೊರೆಯುವ ಅಂಗಡಿಗಳಲ್ಲಿ ಹೇರ್ ಕಲರ್ ರಿಮೂವರ್ ದೊರೆಯುತ್ತದೆ ಅದನ್ನು ಬೇಕಾದರೂ ಬಳಸಬಹುದು. ಆದರೆ ಈ ರೀತಿಯ ಹೇರ್ ಕಲರ್ ರಿಮೂವರ್ ಕೊಳ್ಳುವಾಗ ಬ್ರಾಂಡ್ಡ್ ನೋಡಿ ಕೊಳ್ಳಬೇಕು.



Click it and Unblock the Notifications
