Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ 7 ವಿಧಾನ
ತಲೆಯಲ್ಲಿ ಹೊಟ್ಟು ಉಂಟಾಗಿ ತಲೆ ತುರಿಸಿದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ತಲೆಯನ್ನು ತುರಿಸದೆ ಇರಲು ಸಾಧ್ಯವಿಲ್ಲ, ಒಂದು ವೇಳೆ ತಲೆ ತುರಿಸಿದರೆ ಈ ವ್ಯಕ್ತಿಯ ತಲೆ ತುಂಬಾ ಹೇನು ಇರಬಹುದೆಂದು ಮತ್ತೊಬ್ಬರು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
ಅದಲ್ಲದೆ ಕೂದಲಿನ ಮೇಲೆ ಹೊಟ್ಟು ಕಾಣಲಾರಂಭಿಸುತ್ತದೆ, ತಲೆಯಲ್ಲಿ ಹೊಟ್ಟು ಇದ್ದರೆ ಹಣೆಯಲ್ಲಿ ಮೊಡವೆಯಾಗುವುದು ಹೀಗೆ ಹತ್ತಾರು ಕಿರಿಕಿರಿ. ತಲೆ ಹೊಟ್ಟನ್ನು ಕಡಿಮೆ ಮಾಡಲು ಅನೇಕ ರಾಸಾಯಿಕ ಇರುವ ಉತ್ಪನ್ನಗಳನ್ನು ಬಳಸುವ ಬದಲು ಸಾಧ್ಯವಾದಷ್ಟು ನೈಸರ್ಗಿಕವಾದ ವಿಧಾನಗಳನ್ನು ಬಳಸಿ ಹೋಗಲಾಡಿಸುವುದು ಒಳ್ಳೆಯದು.
ಇಲ್ಲಿ ನಾವು ತಲೆ ಹೊಟ್ಟು ಬರುವುದನ್ನು ತಡೆದು, ತಲೆ ಬುಡವನ್ನು ಸ್ವಚ್ಛವಾಗಿಡುವ ಕೆಲ ಟಿಪ್ಸ್ ನೀಡಿದ್ದೇವೆ ನೋಡಿ:

ಅಡುಗೆ ಸೋಡಾ
1 ಚಮಚ ಅಡುಗೆ ಸೋಡಾವನ್ನು ನೀರಿನಲ್ಲಿ ಕಲೆಸಿ ತಲೆಗೆ ಹಚ್ಚಿ 5 ನಿಮಿಷ ಬಿಟ್ಟು ತೆಳು ಬಿಸಿ ನೀರಿನಿಂದ ತಲೆ ತೊಳೆದು, ನಂತರ ಮಾಮೂಲಿ ಬಳಸುವ ಶ್ಯಾಂಪೂ ಹಾಕಿ ತಲೆ ತೊಳೆದರೆ ತಲೆ ಶುದ್ಧವಾಗುವುದು, ತಲೆ ಹೊಟ್ಟು ಕಡಿಮೆಯಾಗುವುದು, ಕೂದಲು ಕೂಡ ನುಣಪಾಗಿರುತ್ತದೆ.

ತೆಂಗಿನೆಣ್ಣೆ
ಎಣ್ಣೆ ಸರಿಯಾಗಿ ಹಚ್ಚದಿದ್ದರೆ ತಲೆ ಬುಡ ಒಣಗಿ ತಲೆ ಹೊಟ್ಟು ಆಗುವುದು, ಈ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನೆಣ್ಣೆಯನ್ನು ಬಿಸಿ ಮಾಡಿ ತಲೆಗೆ ಚೆನ್ನಾಗಿ ಮಸಾಜ್ ಮಾಡಿ, ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೂ ಸಾಕು ತಲೆ ಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.

ನಿಂಬೆ ರಸ
ನಿಂಬೆ ರಸ ತಲೆಬುಡವನ್ನು ಸ್ವಚ್ಛ ಮಾಡಿ, ತಲೆ ಹೊಟ್ಟು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿ.

ಆಪಲ್ ಸೈಡರ್ ವಿನೆಗರ್
ಅರ್ಧ ಬಕೆಟ್ ನೀರಿಗೆ ಕಾಲು ಗ್ಲಾಸ್ ಆಪಲ್ ಸೈಡರ್ ವಿನೆಗರ್ ಹಾಕಿ ಮಿಕ್ಸ್ ಮಾಡಿ, ತಲೆಯನ್ನು ಶ್ಯಾಂಪೂ ಹಾಕಿ ತೊಳೆದ ಬಳಿಕ, ವಿನೆಗರ್ ಹಾಕಿದ ನೀರನ್ನು ತಲೆಗೆ ಸುರಿದು, ನಂತರ ಕೂದಲನ್ನು ಒಣಗಿಸಿ, ಈ ರೀತಿ ಮಾಡುವುದರಿಂದಲೂ ತಲೆ ಹೊಟ್ಟು ಹೋಗಲಾಡಿಸಬಹುದು.

ತೆಂಗಿನ ಹಾಲು
ಕೂದಲು ತುಂಬಾ ಡ್ರೈಯಾಗುವುದು, ಜೊತೆಗೆ ತಲೆ ಹೊಟ್ಟು ಈ ರೀತಿಯ ಸಮಸ್ಯೆ ಇರುವವರು ತೆಂಗಿನ ಹಾಲನ್ನು ತಲೆಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಹದ ಬಿಸಿ ನೀರಿನಲ್ಲಿ ಶ್ಯಾಂಪೂ ಹಚ್ಚಿ ತಲೆ ತೊಳೆಯಬೇಕು.

ಲೋಳೆಸರ
ಲೋಳೆಸರ ತಲೆಹೊಟ್ಟಿನ ಸಮಸ್ಯೆ ಹೋಗಲಾಡಿಸುವುದು ಮಾತ್ರವಲ್ಲ ಕೂದಲು ಸೊಂಪಾಗಿ ಬೆಳೆಯುವಂತೆಯೂ ಮಾಡುವುದು.

ಆಲೀವ್ ಎಣ್ಣೆ
ಆಲೀವ್ ಎಣ್ಣೆ ಕೂಡ ಕೂದಲಿಗೆ ತುಂಬಾ ಒಳ್ಳೆಯದು. ಇದು ತಲೆ ಹೊಟ್ಟಿನ ಸಮಸ್ಯೆ ಹೋಗಲಾಡಿಸುತ್ತದೆ, ಕೂದಲನ್ನು ಮೃದುವಾಗಿಸುತ್ತದೆ.



Click it and Unblock the Notifications
