Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಕೂದಲಿನ ಆರೋಗ್ಯ ನಿಮ್ಮ ಆರೋಗ್ಯ ಸೂಚಕ
ನಿಮ್ಮ ದೇಹ ತನಗೇನಾಗುತ್ತಿದೆ ಎಂದು ಮಾತಲ್ಲಿ ಹೇಳುವುದಿಲ್ಲ. ಕೂದಲನ್ನೂ ಸೇರಿದಂತೆ ನಿಮ್ಮ ದೇಹದ ಕೆಲವು ಭಾಗಗಳಲ್ಲಿ ಕಂಡುಬರುವ ಅಸಾಮಾನ್ಯ ಗುಣಲಕ್ಷಣಗಳು ನಿಮ್ಮ ದೇಹದ ಯಾವುದೋ ಭಾಗದಲ್ಲಿ ಏನೋ ಏರುಪೇರಾಗಿದೆ ಎಂದು ಹೇಳುತ್ತದೆ. ಹಾಳಾದ ಕೂದಲು ನಿಮ್ಮ ಹದಗೆಟ್ಟ ಆರೋಗ್ಯಕ್ಕೆ ಸೂಚನೆಯಾಗಿದೆ.
ಕೂದಲಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಗಳಾದ ತಲೆಹೊಟ್ಟು, ಕೂದಲು ಉದುರುವಿಕೆ ಅಥವಾ ಕೂದಲು ಬಿಳಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಕೂದಲಿನ ಸಮಸ್ಯೆಗಳು ಬರಿಯ ಕೂದಲಿನಲ್ಲಿರುವ ಅನಾರೋಗ್ಯದ ಬಗ್ಗೆಯಷ್ಟೆ ಸೂಚಿಸುವುದಿಲ್ಲ. ಇದು ನಿಮ್ಮ ದೇಹದಲ್ಲಿ ಇರುವ ಅನಾರೋಗ್ಯದ ಒಂದು ಗುರುತಾಗಿದೆ. ಇಲ್ಲಿ ನಿಮ್ಮ ಕೂದಲಿನ ಆರೋಗ್ಯದ ಮೇಲೆ ನಿಮ್ಮ ದೇಹದ ಆರೋಗ್ಯವನ್ನು ಅಂದಾಜಿಸಲು ಕೆಲವು ಸಲಹೆಗಳನ್ನು ನೀಡಲಾಗಿದೆ.

1. ಕೂದಲು ಉದುರುವಿಕೆ
ಚರ್ಮಶಾಸ್ತ್ರಜ್ಞರು ಆರೋಗ್ಯವಂತ ಮಾನವನ ಶರೀರದಲ್ಲಿ ಪ್ರತಿ ದಿನಕ್ಕೆ 90 -100 ಕೂದಲು ಉದುರುತ್ತದೆ ಎಂದು ಹೇಳುತ್ತದೆ. ಚಿಂತೆ ಮಾಡಬೇಡಿ, ಇವುಗಳಲ್ಲಿ 90 ಶೇಕಡಾ ಕಿರುಚೀಲಗಳು ಪ್ರತಿದಿನ ಬೆಳೆಯುತ್ತಾ ಹೀಗುತ್ತವೆ ಹಾಗೂ ಉಳಿದ 10 ಶೇಕಡಾ ಕಿರುಚೀಲಗಳು ಸ್ಲೀಪ್ ಮೋಡ್ (ಟೆಲೊಗೆನ್ ಫೇಸ್) ನಲ್ಲಿರುತ್ತವೆ. ಇವುಗಳ ಕೂದಲುಗಳು ಪ್ರತಿ ಎರಡು ಮೂರು ತಿಂಗಳುಗಳಿಗೊಮ್ಮೆ ಬೀಳುತ್ತವೆ ಹಾಗೂ ಇಲ್ಲಿ ಹೊಸ ಕೂದಲುಗಳು ಹುಟ್ಟಿಕೊಳ್ಳುತ್ತವೆ. ಇದು ಒಂದು ನಿರಂತರ ಚಕ್ರವಾಗಿದೆ.
ಕೂದಲು ಉದುರುವಿಕೆ ನಿಮ್ಮ ಆಹಾರ ಕ್ರಮ ಸರಿಯಾಗದೇ ಇರುವ ಸೂಚನೆಯಾಗಬಹುದು. ಕೂದಲು ಪ್ರೊಟೀನ್, ಕಬ್ಬಿಣದ ಅಂಶ, ಸತು, ವಿಟಮಿನ್ ಎ ಮತ್ತು ಒಮೆಗಾ 3 ಕೊಬ್ಬಿನಂಶ ಬೇಕಾಗಿರುತ್ತದೆ. ಇವು ನಿಮ್ಮ ಆಹಾರ ಕ್ರಮ ಸರಿಯಾಗಿರದಿದ್ದರೆ ನಿಮ್ಮ ಕೂದಲುಗಳಿಗೆ ಸಿಗುವುದಿಲ್ಲ. ನೀವು ಆಹಾರ ಸೇವನೆಗೆ ಸಂಬಂಧಿಸಿದ ಯಾವುದೇ ಅನಾರೋಗ್ಯ ಹೊಂದಿದ್ದರೆ ಇದರ ಪ್ರಭಾವ ಕೂದಲಿನ ಮೇಲಾಗುತ್ತದೆ ಹಾಗೂ ಉದುರಲು ಆರಂಭವಾಗುತ್ತದೆ.
2. ತಲೆಹೊಟ್ಟು
ತಲೆಹೊಟ್ಟಿನ ಸಮಸ್ಯೆ ನಿಮ್ಮ ತಲೆಬುರುಡೆ ಬಹಳ ಶುಷ್ಕ ಅಥವಾ ಬಹಳ ಎಣ್ಣೆಯಂಶದಿಂದ ಕೂಡಿದ್ದರೆ ಆಗುತ್ತದೆ. ಶ್ಯಾಂಪೂ ನಿರಂತರವಾಗಿ ಅಥವಾ ಬಹಳ ಅಂತರ ನೀಡಿ ಬಳಸಿದರೆ ತಲೆಗಹೊಟ್ಟಿನ ಸಮಸ್ಯೆ ಬರಲು ಸಾಧ್ಯವಿದೆ. ಚರ್ಮಶಾಸ್ತ್ರಜ್ಞರು ಶಿಲಿಂದ್ರಗಳ ಬೆಳವಣಿಗೆಯ ಕಾರಣದಿಂದ ಆಗುತ್ತದೆ ಎಂದು ಹೇಳುತ್ತಾರೆ. ಕೇವಲ ತಲೆಹೊಟ್ಟು ಉದುರುತ್ತಿದ್ದರೆ ಆರೋಗ್ಯದ ಸಮಸ್ಯೆಯಲ್ಲ ಆದರೆ ಹಳದಿ ಬಣ್ಣದ ತಲೆಹೊಟ್ಟು ಉದುರುತ್ತಿದ್ದರೆ ಮಾತ್ರ ಆರೋಗ್ಯದ ಸಮಸ್ಯೆ ಎಂದು ಹೇಳಬಹುದು. ಹೀಗಾದಲ್ಲಿ ಇದು ಸೆಬೋರೆಕ್ ಡರ್ಮಿಟೈಟಿಸ್, ಚರ್ಮದ ಉರಿಯೂತ ಮತ್ತು ಚರ್ಮಕ್ಕೆ ಸಂಬಧಿಸಿದ ಹಾರ್ಮೋನ್, ಶಿಲಿಂದ್ರ ಅಥವಾ ನರವೈಜ್ಞಾನಿಕ ಸಮಸ್ಯೆ ಆಗಿರುವ ಸಾಧ್ಯತೆಗಳಿವೆ.
3. ಸಮಯಕ್ಕೆ ಮೊದಲೇ ಕೂದಲು ಬಿಳಿಯಾಗುವುದು
ಕೂದಲು ಬಿಳುಯಾಗುವುದು ಎಲ್ಲಾ ಸಂದರ್ಭಗಳಲ್ಲಿ ನಿಮಗೆ ವಯಸ್ಸಾಗಿರುವುದನ್ನು ಹೇಳುವುದಿಲ್ಲ. ಕೂದಲು ಬಿಳಿಯಾಗುವುದು ಅನುವಂಶಿಕ ಕಾರಣದಿಂದಲೂ ಆಗಿರಲು ಸಾಧ್ಯವಿದೆ. ಬಿಳಿ ಕೂದಲು ಆರೋಗ್ಯದ ಜೊತೆ ನಿಗದಿತ ನಂಟು ಹೊಂದಿಲ್ಲ. ಆದರೆ ಅನೀಮಿಯಾ, ಥೈರಾಯ್ಡ್ ಸಮಸ್ಯೆಗಳು, ವಿಟಮಿನ್ ಬಿ 12 ಕೊರತೆ ಮತ್ತು ವಿಟಿಲ್ಲಿಗೋ (ಚರ್ಮದ ಕಂದು ಬಣ್ಣದ ಅಂಶ ಉದುರುವಿಕೆ) ಕಾರಣದಿಂದ ಕೂದಲು ಉದುರಬಹುದು.



Click it and Unblock the Notifications
