Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹುರ್ರೇ...ಮಹಿಳೆಯರಿಗೂ ಬಂತು ಬಾಲ್ಡ್ ಹೆಡ್ ಫ್ಯಾಷನ್
ಕೆಲ ಹೆಣ್ಣು ಮಕ್ಕಳಿಗೆ ಮಿತಿ ಮೀರಿ ಕೂದಲು ಉದುರುತ್ತಿರುವುದು ಅತೀ ದೊಡ್ಡ ಸಮಸ್ಯೆಯಾಗಿದೆ. ಸ್ವಲ್ಪ ಕೂದಲು ಉದುರಿದರೆ ಪರ್ವಾಗಿಲ್ಲ, ಪ್ರತೀ ಬಾರಿ ಬಾಚಿದಾಗ 200-300 ಕೂದಲು ಉದುರಿದರೆ ಟೆನ್ಷನ್ ಆಗದೆ ಇರುವುದಾದರೂ ಹೇಗೆ? ಪುರುಷರಿಗೆ ಆದರೆ ಕೂದಲು ಉದುರಿದರೆ ಬಾಲ್ಡ್ ಹೆಡ್ ಮಾಡಿಸಿ, ನಂತರ ಕೂದಲಿನ ಆರೈಕೆ ಮಾಡಬಹುದು.
ಆದರೆ ಸ್ತ್ರೀಯರು ಬಾಲ್ಡ್ ಹೆಡ್ ಮಾಡಿಸಲು ಹಿಂಜರಿಯುತ್ತಾರೆ, ಕೂದಲು ಉದುರುವುದನ್ನು ನೋಡಿ ಮಾನಸಿಕ ವೇದನೆ ಪಡುತ್ತಾ ಸುಮ್ಮೆನೆ ಕೂರುತ್ತಾರೆ. ಕೂದಲು ತುಂಬಾ ಉದುರುತ್ತಿದ್ದಾಗ, ಸಂಪೂರ್ಣವಾಗಿ ಕೂದಲನ್ನು ಬೋಳಿಸಿ, ಆರೈಕೆ ಮಾಡಿದರೆ ಹೊಸ ಕೂದಲು ಹುಟ್ಟಿ ಸೊಂಪಾದ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಆದರೆ ಕೂದಲನ್ನು ಬೋಳಿಸಿದರೆ ವಿಚಿತ್ರವಾಗಿ ಕಾಣುತ್ತೇನೆ, ನನ್ನ ಸೌಂದರ್ಯವೂ ಕಡಿಮೆಯಾಗುವುದು ಎಂಬುವುದು ಅನೇಕ ಮಹಿಳೆಯರ ಮನಸ್ಸಿನ ತುಯ್ದಾಟವಾಗಿದೆ.
ಇಂತವರ ಅದೃಷ್ಟವೆಂಬಂತೆ ಬಾಲ್ಡ್ ಹೆಡ್ ಸ್ಟೈಲ್ ಈಗೀನ ಫ್ಯಾಷನ್ ಆಗಿದ್ದು, ಕೆಲ ಸೆಲೆಬ್ರಿಟಿಗಳು ತಮ್ಮ ಕೂದಲನ್ನು ಬಾಲ್ಡ್ ಮಾಡಿ ಮಿಂಚುತ್ತಿರುವುದನ್ನು ನೋಡಬಹುದು. ಕೂದಲನ್ನು ಬೋಳಿಸಿ, ಚೆನ್ನಾಗಿ ಆರೈಕೆ ಮಾಡಿದರೆ ಮತ್ತೆ ಆರೋಗ್ಯವಂತ ಕೂದಲನ್ನು ನಿಮ್ಮದಾಗಿಸಿಕೊಳ್ಳಬಹುದು. ಅಲ್ಲದೆ ಬಾಲ್ಡ್ ಹೆಡ್ ಈಗ ಫ್ಯಾಷನ್ ಆಗಿರುವುದರಿಂದ ಜನ ನಿಮ್ಮನ್ನು ಫ್ಯಾಷನ್ ಪ್ರಿಯರು ಎಂದೇ ಗುರುತಿಸುತ್ತಾರೆ. ಐಡಿಯಾ ಸೂಪರ್ ಆಗಿದೆ ಅಲ್ವಾ?
ಬಾಲ್ಡ್ ಹೆಡ್ ಮಾಡಿಸಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ಸ್ಲೈಡ್ ನಲ್ಲಿ ನೀಡಿದ್ದೇವೆ ನೋಡಿ:

ಕೂದಲು ಸಂಪೂರ್ಣ ಹಾಳಾಗಿದ್ದರೆ
ಕೂದಲು ಸಂಪೂರ್ಣ ಹಾಳಾಗಿ, ತುಂಬಾ ಡ್ರೈಯಾಗಿದ್ದು, ಎಷ್ಟೇ ಆರೈಕೆ ಮಾಡಿದರೂ ಸರಿಯಾಗಿರದಿದ್ದರೆ ಬಾಲ್ಡ್ ಹೆಡ್ ಮಾಡಿಸಿದರೆ, ಮತ್ತೆ ಹುಟ್ಟಿ ಬರುವ ಕೂದಲು ಸೊಗಸಾಗಿರುತ್ತದೆ.

ಕೂದಲಿನ ಆರೈಕೆಗೆ ಸಹಾಯ ಮಾಡುವುದು
ತುಂಬಾ ಕೂದಲು ಉದುರುತ್ತಿದ್ದರೆ ಬಾಲ್ಡ್ ಮಾಡಿ ಕೂದಲಿನ ಆರೈಕೆ ಮಾಡಿದರೆ ಹೆಚ್ಚಿನ ಪರಿಣಾಮಕಾರಿ.

ಫ್ಯಾಷನಬಲ್ ಲುಕ್
ಸೆಲೆಬ್ರಿಟಿಗಳು ಬಾಲ್ಡ್ ಹೆಡ್ ನಲ್ಲಿ ಮಿಂಚುತ್ತಿರುವುದರಿಂದ ನೀವು ಮಾಡಿಸಿದರೆ ನೀವೂ ಅವರ ಅಭಿಮಾನಿಯಾಗಿದ್ದು, ಅವರನ್ನು ಅನುಸರಿಸುತ್ತಿದ್ದೀರಿ ಅಂದುಕೊಳ್ಳುತ್ತಾರೆ. ಆದ್ದರಿಂದ ಬಾಲ್ಡ್ ಹೆಡ್ ನಲ್ಲಿ ವಿಚಿತ್ರವಾಗಿ ಕಾಣುತ್ತೇನೆ ಎಂಬ ಭಯ ಬೇಡ, ಚೆನ್ನಾಗಿಯೇ ಕಾಣುವಿರಿ.

ವಿಗ್ ಹೇರ್ ಸ್ಟೈಲ್
ಕೂದಲನ್ನು ಬಾಲ್ಡ್ ಮಾಡಿಸಿ, ಬೇಕೆನಿಸಿದಾಗ ವಿಗ್ ಹಾಕಿ, ಸ್ವಲ್ಪ ದಿನಗಳವರೆಗೆ ನ್ಯೂ ಹೇರ್ ಸ್ಟೈಲ್ ಮತ್ತು ಲುಕ್ ನಿಂದ ಮಿಂಚಬಹುದು.

ಸ್ಟೈಲಿಷ್ ಡ್ರೆಸ್
ಬಾಲ್ಡ್ ಹೆಡ್ ಮಾಡಿಸಿದಾಗ ನಿಮ್ಮ ಧಿರಿಸು ಸ್ಟೈಲಿಷ್ ಆಗಿರಲಿ. ಆಗ ಮಾತ್ರ ಫ್ಯಾಷನಬಲ್ ಲುಕ್ ನಿಮ್ಮದಾಗುವುದು.

ಆತ್ಮವಿಶ್ವಾಸ ಮೂಡುವುದು
ಕೂದಲು ಉದುರುತ್ತಿದ್ದರೆ ಮಾನಸಿಕವಾಗಿ ಕುಗ್ಗುವವರನ್ನು ನೋಡಿದ್ದೇನೆ. ಮಾನಸಿಕ ಖಿನ್ನತೆಯಿಂದ ಹೊರಬರಲು ಈ ಬಾಲ್ಡ್ ಹೆಡ್ ಲುಕ್ ಸಹಾಯ ಮಾಡುವುದು. ಇದು ಈಗೀನ ಟ್ರೆಂಡ್ ಆಗಿರುವುದರಿಂದ ನಿಮ್ಮಲ್ಲಿ ಖಿನ್ನತೆ ಬದಲು, ಆತ್ಮವಿಶ್ವಾಸವನ್ನು ಮೂಡಿಸುತ್ತದೆ.

ಇತರರಿಗಿಂತ ಭಿನ್ನ
ನಾವ್ಯಾಕೆ ಯಾವಾಗಲೂ ಇತರರಂತೆ ಇರಬೇಕು, ಇತರರಿಗಿಂತ ಭಿನ್ನವಾಗಿರುವುದರಲ್ಲಿ ತಪ್ಪೇನು?



Click it and Unblock the Notifications
