Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಕೂದಲಿಗೆ ಹಾನಿಯುಂಟು ಮಾಡುವ 6 ಬಗೆಯ ನೀರು
ನೀರು ಬದಲಾದರೆ ಕೂದಲು ಉದುರುವುದನ್ನು ನೀವು ಗಮನಿಸಿರಬಹುದು. ನೀರಿಗೂ ಕೂದಲು ಉದುರುವುದಕ್ಕೂ ನಿಕಟ ಸಂಬಂಧವಿದೆ. ಬಾವಿ ಅಥವಾ ಹೊಳೆ ನೀರಿನಲ್ಲಿ ಸ್ನಾನ ಮಾಡಿದರೆ ಕೂದಲು ಉದುರುವುದಿಲ್ಲ, ಅದೇ ಬೋರ್ ವೆಲ್ ನೀರಿನಲ್ಲಿ ತಲೆ ಸ್ನಾನ ಮಾಡಿದರೆ ಕೂದಲು ಉದುರುಲಾರಂಭಿಸುತ್ತದೆ. ಏಕೆ ಹೀಗಾಗುತ್ತದೆ?
ಏಕೆಂದರೆ ಎಲ್ಲಾ ನೀರು ಒಂದೇ ಗುಣಮಟ್ಟದಲ್ಲಿರುವುದಿಲ್ಲ. ಮೆದು ನೀರು, ಗಡಸು ನೀರು, ಕ್ಲೋರಿನ್ ನೀರು ಹೀಗೆ ನೀರಿನಲ್ಲಿ ಅನೇಕ ಬಗೆಗಳಿವೆ. ಇವುಗಳಲ್ಲಿ ಎಲ್ಲಾ ನೀರು ತಲೆ ಸ್ನಾನಕ್ಕೆ ಸೂಕ್ತವಲ್ಲ. ಈ ಕೆಳಗಿನ ನೀರಿನಲ್ಲಿ ತಲೆಸ್ನಾನ ಮಾಡಿದರೆ ನಿಮ್ಮ ಕೂದಲು ಉದುರುವುದನ್ನು ತಡೆಯಲು ಯಾವ ಔಷಧಿಯಿಂದಲೂ ಸಾಧ್ಯವಿಲ್ಲ.

1. ಕ್ಲೋರೀನ್ ನೀರು
ಕ್ಲೋರೀನ್ ಹಾಕಿದ ನೀರಿನಿಂದ ಪ್ರತಿದಿನ ತಲೆಸ್ನಾನ ಮಾಡಿದರೆ ಕೂದಲು ಒರಟಾಗುತ್ತದೆ. ಅದರಲ್ಲೂ ಈಜು ಕೊಳದಲ್ಲಿ ಕ್ಲೋರೀನ್ ಬಳಸಿರುವುದರಿಂದ ಆ ನೀರು ತಲೆ ಕೂದಲಿಗೆ ತಾಗಿ ಕೂದಲು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ.
2. ಗಡಸು ನೀರು
ಗಡಸು ನೀರಿನಲ್ಲಿ ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಸಿಲಿಕಾ ಮತ್ತು ಅಧಿಕ ಖನಿಜಾಂಶಗಳು ಇರುವುದರಿಂದ ಕೂದಲು ಡ್ರೈಯಾಗುವುದು, ಕೂದಲು ಕವಲೊಡೆಯುವುದು ಕಂಡು ಬರುತ್ತದೆ. ಇದು ಕೂದಲನ್ನು ತುಂಬಾ ತೆಳ್ಳಗಾಗಿಸುತ್ತದೆ.
3. ಉಪ್ಪು ನೀರು
ಉಪ್ಪು ನೀರು ಕೂದಲಿನಲ್ಲಿರುವ ಮಾಯಿಶ್ಚರೈಸರ್ ಅನ್ನು ತೆಗೆದು ಕೂದಲನ್ನು ಒರಟಾಗಿಸುತ್ತದೆ. ಇದರಿಂದ ಕೂದಲು ಉದುರಲಾರಂಭಿಸುತ್ತದೆ. ಇದರಲ್ಲಿ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ಶಾಶ್ವತ ಸಮಸ್ಯೆಯಾಗಿರುತ್ತದೆ.
4. ಉಪ್ಪಿನಂಶವನ್ನು ಬೇರ್ಪಡಿಸಿದ ಸಮುದ್ರ ನೀರು
ಕೆಲವೊಂದು ಕಡೆ ಸಮುದ್ರ ನೀರಿನಲ್ಲಿರುವ ಉಪ್ಪಿನಂಶವನ್ನು ಬೇರ್ಪಡಿಸಿ ಅದನ್ನು ಕುಡಿಯಲು ಬಳಸಲಾಗುತ್ತಿದೆ. ಆದರೆ ಈ ನೀರು ತಲೆ ತೊಳೆಯಲು ಯೋಗ್ಯವಲ್ಲ. ಇದು ಕೂದಲನ್ನು ಒರಟಾಗಿಸುತ್ತದೆ.
5. ಮಳೆ ನೀರು
ಮಳೆ ನೀರು ಅತ್ಯಂತ ಶುದ್ಧವಾದ ನೀರಾಗಿದ್ದರೂ ಅದು ವಾತಾವರಣದಲ್ಲಿರುವ ಮಾಲಿನ್ಯದ ಸೇರಿ ತನ್ನ ಪರಿಶುದ್ಧತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಈ ನೀರನ್ನು ತಲೆ ತೊಳೆಯಲು ಬಳಸುವುದು ಒಳ್ಳೆಯದಲ್ಲ.
6. ತಳದ ನೀರು
ನದಿ ಅಥವಾ ಕೊಳದ ತಳಭಾಗದ ನೀರಿನಲ್ಲಿ ರಾಸಾಯನಿಕ ಅಂಶಗಳು ಶೇಖರವಾಗಿರುವುದರಿಂದ ಆ ನೀರು ಕೂಡ ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಬೋರ್ ವೆಲ್ ನೀರು ಕೂದಲಿಗೆ ಅಷ್ಟು ಒಳ್ಳೆಯದಲ್ಲ.
ಮೃದು ನೀರು ತಲೆ ತೊಳೆಯಲು ಸೂಕ್ತವಾದ ನೀರಾಗಿದೆ. ಒಂದು ವೇಳೆ ನಿಮಗೆ ದೊರೆಯುತ್ತಿರುವ ನೀರು ಕ್ಲೋರೀನ್ ನೀರಾಗಿದ್ದರೆ ಪ್ರತಿದಿನ ತಲೆ ತೊಳೆಯಬೇಡಿ.



Click it and Unblock the Notifications
