Latest Updates
-
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಮುಂಜಾನೆಯೇ ವ್ಯಾಯಾಮ: ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ -
ಬೇಸಿಗೆ ಮದುವೆ ಸಂಭ್ರಮ: ಬಿಸಿಲ ಬೇಗೆಯಿಂದ ಅತಿಥಿಗಳನ್ನು ರಕ್ಷಿಸಲು ಇಲ್ಲಿದೆ ಮಾಸ್ಟರ್ ಪ್ಲಾನ್ -
ಮೇ 2-3ರ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಭಾರತದಲ್ಲಿ ಸುಡುವ ಬಿಸಿಲು: ಹೀಟ್ ವೇವ್ನಿಂದ ಪಾರಾಗಲು ಇಲ್ಲಿವೆ ಬೆಸ್ಟ್ ಡಯಟ್ ಮತ್ತು ಹೈಡ್ರೇಶನ್ ಟಿಪ್ಸ್! -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಕರಣ್ ಜೋಹರ್ ಅಬ್ಬರ, ಭಾರತೀಯ ಫ್ಯಾಷನ್ ಲೋಕದ ಹೊಸ ಸಂಚಲನ! -
ಮೇ ತಿಂಗಳ ಬಿಸಿಲ ಧಗೆ: ನಿಮ್ಮ ಬೆಳಗಿನ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳದಿದ್ದರೆ ಕಷ್ಟ! -
ಎವೆಲಿನ್ ಶರ್ಮಾ ವಿಚ್ಛೇದನ: ಮಕ್ಕಳ ಭವಿಷ್ಯಕ್ಕಾಗಿ ಈ ಜೋಡಿ ಆರಿಸಿದ ಹೊಸ ದಾರಿ ಯಾವುದು?
ಕೂದಲಿಗೆ ಅತ್ಯುತ್ತಮವಾದ 5 ನ್ಯಾಚುರಲ್ ಕಂಡೀಷನರ್
ಬೆಣ್ಣೆಹಣ್ಣು ಬಾಳೆಹಣ್ಣು, ಜೇನು ತುಪ್ಪ ಮತ್ತು ತೆಂಗಿನಕಾಯಿ ಇವೆಲ್ಲವು ನಿಮ್ಮ ಅಚ್ಚುಮೆಚ್ಚಿನ ಆಹಾರಕ್ಕೆ ಬೇಕಾಗಿರುವ ಪದಾರ್ಥಗಳೆಂದು ನಿಮಗೂ ಗೊತ್ತು. ಇವುಗಳು ಕೇವಲ ಅದಕ್ಕೆ ಮಾತ್ರವಲ್ಲದೆ ಪ್ರಾಕೃತಿಕ ಹೇರ್ ಕಂಡೀಷನರುಗಳಾಗಿ ಸಹ ಕೆಲಸಕ್ಕೆ ಬರುತ್ತವೆ. ನಮ್ಮ ಕೂದಲಿಗೆ ಶಾಂಪೂ ಹಾಕಿದ ನಂತರ ಅದನ್ನು ಕಂಡೀಷನ್ ಮಾಡುವ ಅಗತ್ಯವಿದೆ ಎಂಬುದನ್ನು ಮರೆಯಬೇಡಿ. ಈ ಕಂಡೀಷನರುಗಳು ನಮ್ಮ ಕೂದಲಿನ ಮೃದುತ್ವವನ್ನು ಹೆಚ್ಚು ಮಾಡಿ ಅವುಗಳು ಒರಟಾಗದಂತೆ, ತಲೆ ಹೊಟ್ಟು ಬರದಂತೆ ಮತ್ತು ಸದೃಢವಾಗಿರಲು ನೆರವಾಗುತ್ತವೆ.
ಹೌದಾ ಹಾಗಾದರೆ ಕಂಡೀಷನರ್ ತರಬೇಕು ಎಂದು ಅಂಗಡಿಗೆ ಹೋಗಬೇಡಿ! ನಿಮ್ಮ ಮನೆಯಲ್ಲಿಯೇ ದೊರೆಯುವ ಪ್ರಾಕೃತಿಕ ಕಂಡೀಷನರುಗಳನ್ನು ಬಳಸಿಕೊಳ್ಳಿ. ಇದರಿಂದ ನಿಮ್ಮ ಕೂದಲು ಮತ್ತು ತ್ವಚೆ ಎರಡು ಆರೋಗ್ಯವಂತವಾಗುತ್ತವೆ. ಜೊತೆಗೆ ಇದು ಪರಿಸರ ಸ್ನೇಹಿ, ಅಲರ್ಜಿಯಿಂದ ಮುಕ್ತವಾಗಿರುತ್ತದೆ.
ಯಾವುದಪ್ಪ ಅಂತಹ ಕಂಡೀಷನರುಗಳು? ಮನೆಯಲ್ಲಿಯೇ ದೊರೆಯುವಂತಹದು? ಎಂದು ಯೋಚಿಸುತ್ತಿದ್ದಿರಾ, ಇಲ್ಲಿದೆ ನೋಡಿ ಆ ಪ್ರಾಕೃತಿಕ ಕಂಡೀಷನರುಗಳು ಮತ್ತು ಅವುಗಳ ಉಪಯೋಗ ಹಾಗು ಬಳಕೆಯ ಸವಿವರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿ.

1. ಬಾಳೆಹಣ್ಣು
ಬಾಳೆಹಣ್ಣು ಒಂದು ಅದ್ಭುತವಾದ ಹೇರ್ ಕಂಡೀಷನರ್, ಈ ಹಣ್ಣು ನಿಮ್ಮ ಕೂದಲನ್ನು ಮತ್ತಷ್ಟು ಮೃದುಗೊಳಿಸಿ, ಗಟ್ಟಿಮುಟ್ಟುಗೊಳಿಸುತ್ತದೆ. ಬಾಳೆ ಹಣ್ಣಿಗೆ ಸ್ವಲ್ಪ ಜೇನು ತುಪ್ಪ, ಗ್ಲಿಸರಿನ್ ಮತ್ತು ಆಲೀವ್ ಎಣ್ಣೆಯನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲಿಗೆ ಮೊಯಿಶ್ಚರೈಸರಿನಂತೆ ಕೆಲಸ ಮಾಡುತ್ತದೆ. ಬಾಳೆ ಹಣ್ಣಿನ ಮಾಸ್ಕ್ ನಿಮ್ಮ ಕೂದಲನ್ನು ಮತ್ತಷ್ಟು ಮೃದುಗೊಳಿಸುತ್ತದೆ. ಇದಕ್ಕಾಗಿ ಬಾಳೆಹಣ್ಣನ್ನು ಚೆನ್ನಾಗಿ ಜಜ್ಜಿ ಲೇಹ್ಯದ ರೀತಿ ತಯಾರು ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, 30-45 ನಿಮಿಷ ಬಿಡಿ, ನಂತರ ಇದನ್ನು ತೆಳುವಾದ ಶಾಂಪೂನಿಂದ ಸ್ವಚ್ಛಗೊಳಿಸಿ. ನಿಮ್ಮ ಕೂದಲು ಕಂಡೀಷನ್ ಆಗಿದೆ ಎಂದು ಅನಿಸಿದಾಗ ತೊಳೆಯುವುದನ್ನು ನಿಲ್ಲಿಸಿ.

2.ಜೇನು ತುಪ್ಪ
ಜೇನು ಒಂದು ಉತ್ತಮ ಕಂಡೀಷನರ್, ಇದರಲ್ಲಿರುವ ಮೃದುತ್ವವು ಇದಕ್ಕೆ ಈ ಗುಣವನ್ನು ತಂದುಕೊಟ್ಟಿದೆ. ಇದು ನೀರಿನಂಶವನ್ನು ಹೊರಹಾಕುತ್ತದೆ ಹಾಗಾಗಿ ಕೂದಲು ಕಂಡೀಷನ್ ಆಗುತ್ತದೆ ಹಾಗು ಹೊಳಪು ಸಹ ಪಡೆಯುತ್ತದೆ. ಜೇನಿನಲ್ಲಿ ವಿಟಮಿನ್‍ಗಳು ಮತ್ತು ಮಿನರಲ್‍ಗಳು ಸಮೃದ್ಧವಾಗಿದೆ. ನೀವು ಯಾವಾಗಲು ಬಳಸುವ ಕಂಡೀಷನರಿನ ಕಾಲುಭಾಗದಷ್ಟು ಜೇನು ತುಪ್ಪವನ್ನು ತೆಗೆದುಕೊಂಡು ಎರಡನ್ನು ಬೆರೆಸಿ. ಇದನ್ನು ಕೂದಲಿಗೆ ಲೇಪಿಸಿ. ಕೂದಲಿನ ಬುಡದವರೆಗು ತಲುಪುವಂತೆ ಚೆನ್ನಾಗಿ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಕೂದಲನ್ನು ಚೆನ್ನಾಗಿ ತೊಳೆಯಿರಿ.

3. ಬೆಣ್ಣೆಹಣ್ಣು
ನಮ್ಮ ಕೂದಲಿಗೆ ತೆಂಗಿನಕಾಯಿ ಎಣ್ಣೆಯ ನಂತರ ಹೆಚ್ಚು ಹೊಂದಿಕೊಳ್ಳುವುದು ಬೆಣ್ಣೆಹಣ್ಣು. ಒಂದು ಬೆಣ್ಣೆಹಣ್ಣುವನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ, ಅದನ್ನು ತೆಂಗಿನ ಕಾಯಿ ಎಣ್ಣೆ ಮತ್ತು ಆಲಿವ್ ಎಣ್ಣೆಯ ಜೊತೆಗೆ ಬೆರೆಸಿ ನಿಮ್ಮ ಕೂದಲ ಆರೋಗ್ಯ ಹೆಚ್ಚಿಸುವ ಕಂಡೀಷನರ್ ಸಿದ್ಧವಾಗುತ್ತದೆ. ಇದು ಸ್ವಲ್ಪ ದಪ್ಪಗಿನ ಫೇಸ್ಟ್ ರೀತಿ ಇರುತ್ತದೆ. ಆದರೂ ಇದನ್ನು ಕೂದಲಿಗೆ ಹಚ್ಚಿ, ಒಳ್ಳೆ ಕಂಡೀಷನಿಂಗ್ ಸಿಗುತ್ತದೆ. ಈ ಮಿಶ್ರಣವನ್ನು ನೀವು ಗಾಜಿನ ಬಾಟಲಿಯಲ್ಲಿ ಹಾಕಿಟ್ಟು ಕೊಂಡು ಫ್ರಿಡ್ಜಿನಲ್ಲಿಟ್ಟು, ಬೇಕೆನಿಸಿದಾಗ ಬಳಸಬಹುದು.

4. ತೆಂಗಿನಎಣ್ಣೆ
ಈ ಎಣ್ಣೆಯು ಅತ್ಯಂತ ಜನ ಮೆಚ್ಚುಗೆ ಪಡೆದ ಕಂಡೀಷನರ್ ಆಗಿದೆ. ಇದು ಕೂದಲನ್ನು ಗಟ್ಟಿ ಮತ್ತು ಆರೋಗ್ಯವಂತಗೊಳಿಸುತ್ತದೆ. ಈ ಎಣ್ಣೆಯು ಕೂದಲಿಲ್ಲಿ ಕೆರಟಿನ್ ಕೊರತೆ ಬರದಂತೆ ಸಂರಕ್ಷಿಸುತ್ತದೆ. ಇದರ ಜೊತೆಗೆ ಜೇನು ತುಪ್ಪ ಬೆರೆಸಿದರೆ ಕೂದಲಿಗೆ ಮಾಯಿಶ್ಚರೈಸ್‍ನಂತೆ ಸಹಕರಿಸುತ್ತದೆ. ಇದಕ್ಕಾಗಿ ಒಂದು ಬಟ್ಟಲು ಬಿಸಿನೀರನ್ನು ತೆಗೆದುಕೊಳ್ಳಿ. ಅದಕ್ಕೆ ಕೊಬ್ಬರಿ ಎಣ್ಣೆ ಮತ್ತು ಜೇನು ತುಪ್ಪ ಸೇರಿಸಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, 20 ನಿಮಿಷ ಬಿಡಿ. ನಂತರ ಇದನ್ನು ಚೆನ್ನಾಗಿ ತೊಳೆಯಿರಿ. ನಂತರ ನೀರು ಉಳಿಯದಂತೆ ಚೆನ್ನಾಗಿ ಟವೆಲಿನಿಂದ ಒರೆಸಿ.

5. ವಿನಿಗರಿನಲ್ಲಿ ತೊಳೆಯಿರಿ
ವಿನಿಗರ್ ಎಂಬುದು ಆದಷ್ಟು ಅಪ್ಪಲ್ ಸಿಡೆರ್ ಆಗಿರುತ್ತದೆ. ಇದು ಕೂದಲಿನಲ್ಲಿ pH ಪ್ರಮಾಣವನ್ನು ಕಾಪಾಡುತ್ತದೆ ಹಾಗು ಕೂದಲಿನ ಬುಡವನ್ನು ಸ್ವಚ್ಛಗೊಳಿಸುತ್ತದೆ. ಎರಡು ಬಟ್ಟಲು ನೀರಿಗೆ ಸ್ವಲ್ಪ ವಿನಿಗರ್ ಸೇರಿಸಿ, ಇದನ್ನು ಕೂದಲಿಗೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ ನಂತರ 20-30 ನಿಮಿಷ ಹಾಗೆಯೇ ಬಿಡಿ. ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ. ಈ ಕಂಡೀಷನರ್ ಕೂದಲಿನಲ್ಲಿರುವ ರಾಸಾಯನಿಕಗಳನ್ನು, ಶಾಂಪೂಗಳನ್ನು ಅಥವಾ ಕಂಡೀಷನರನ್ನು ತೆಗೆದುಹಾಕುತ್ತದೆ. ಇದರ ಜೊತೆಗೆ ವಿನಿಗರ್ ನಿಮ್ಮ ಕೂದಲಿಗೆ ಅತ್ಯುತ್ತಮ ಕಂಡೀಷನಿಂಗ್ ಅನ್ನು ಒದಗಿಸುತ್ತದೆ.

6. ಪುದಿನಾ ಕಂಡೀಷನರ್
ಸಾಮಗ್ರಿಗಳು ; ಮೂರು ಲೋಟ ನೀರು, ಒಂದು ಬಟ್ಟಲು ಪುದಿನಾ ಎಲೆಗಳು
ತಯಾರಿಸುವ ವಿಧಾನ ; ಸ್ವಲ್ಪ ಪುದಿನಾವನ್ನು 2-3 ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಇದನ್ನು ಚೆನ್ನಾಗಿ ಕಲೆಸಿ, ತಣ್ಣಗಾಗಲು ಬಿಡಿ. ಶಾಂಪೂವನ್ನು ಹಾಕಿದ ನಂತರ ಈ ಮಿಶ್ರಣವನ್ನು ಬಳಸಿ ನಿಮ್ಮ ಕೂದಲಿಗೆ ಕಂಡೀಷನ್ ಮಾಡಬಹುದು.

ಮನೆಯಲ್ಲ ತಯಾರಿಸಿದ ಕಂಡೀಷನರಿಗೆ ಮತ್ತಷ್ಟು ಮೆರಗು ನೀಡಲು
ನಿಮ್ಮ ಕಂಡೀಷನರಿಗೆ ಕೆಲವು ಗಿಡ ಮೂಲಿಕೆ ಅಥವಾ ಎಣ್ಣೆಗಳನ್ನು ಬೆರೆಸಿ ಸುವಾಸನೆಯನ್ನು ನೀಡಬಹುದು.

ಎಣ್ಣೆ ಹಚ್ಚಿ
ಎಣ್ಣೆ ಅಥವಾ ಜಿಡ್ಡಿನಂಶವಿರುವ ಕೂದಲಿಗೆ 6-8 ಹನಿ ಎಣ್ಣೆಯನ್ನು ಹಚ್ಚಿ. ಅದು ಲ್ಯಾವೆಂಡರ್, ನಿಂಬೆ, ರೋಸ್ ಮೆರಿ, ಗಂಧದ ಎಣ್ಣೆ, ಟೀ ಟ್ರೀ ಅಥವಾ ಯ್ಲಾಂಗ್ ಯ್ಲಾಂಗ್‍ನಂತಹ ಎಣ್ಣೆಗಳಾಗಿರಬಹುದು.
ರೋಸ್ ಮೇರಿಯು ಒಂದು ಅಪೂರ್ವವಾದ ಗಿಡಮೂಲಿಕೆಯಾಗಿದ್ದು, ಎಲ್ಲಾ ಬಗೆಯ ಕೂದಲಿಗೆ ಹೊಂದಿಕೊಳ್ಳುತ್ತದೆ. ಈ ರೋಸ್ ಮೇರಿಯನ್ನು ವಿನಿಗರಿನಲ್ಲಿ ಬೆರೆಸಿ 1-2 ವಾರ ಹಾಗೆಯೇ ಬಿಡಿ. ನಂತರ ಇದನ್ನು ಸೋಸಿ, ವಿನಿಗರನ್ನು ಮಾತ್ರ ನಿಮ್ಮ ಕಂಡೀಷನರಾಗಿ ಬಳಸಬಹುದು. ಉಳಿದ ವಿನಿಗರನ್ನು ಮುಂದೆ ಬೇಕೆಂದಾಗ ಬಳಸಬಹುದು. ರೋಸ್ ಮೇರಿಯು ಒಂದು ಅದ್ಭುತವಾದ ಸುವಾಸನೆಯನ್ನು ಬೀರುವ ಗಿಡಮೂಲಿಕೆಯಾಗಿದೆ. ಅದರಲ್ಲೂ ನಿಮ್ಮ ಬಳಿ ರೋಸ್ ಮೇರಿ ಎಸ್ಸೆನ್ಶಿಯಲ್ ಆಯಿಲ್ ಇದ್ದಲ್ಲಿ ಒಂದೆರಡು ವಾರ ಕಾಯುವ ಅಗತ್ಯವಿಲ್ಲ. ಬದಲಿಗೆ ಅದನ್ನೆ 6-8 ತೊಟ್ಟು ನಿಮ್ಮ ಕಂಡೀಷನರಾಗಿ ನೀವು ಬಳಸಬಹುದು. ಅದು ಆ ಕ್ಷಣದಲ್ಲಿಯೇ!

ಡ್ರೈ ಕೂದಲಿಗೆ
ಒಣಗಿದ ಮತ್ತು ಒಡೆದ ಕೂದಲಿಗೆ ಟೀ ಟ್ರೀ, ಪುದಿನಾ, ನೀಲಗಿರಿ, ನಿಂಬೆ, ಸೇಜ್ ಅಥವಾ ರೋಸ್ ಮೇರಿಯಂತಹ ಎಣ್ಣೆಯನ್ನು ಒಂದು 6-8 ತೊಟ್ಟು ಹಚ್ಚಿ.

ರೋಸ್ ಮೆರಿ ಎಣ್ಣೆ
ರೋಸ್ ಮೇರಿಯು ಒಂದು ಅಪೂರ್ವವಾದ ಗಿಡಮೂಲಿಕೆಯಾಗಿದ್ದು, ಎಲ್ಲಾ ಬಗೆಯ ಕೂದಲಿಗೆ ಹೊಂದಿಕೊಳ್ಳುತ್ತದೆ. ಈ ರೋಸ್ ಮೇರಿಯನ್ನು ವಿನಿಗರಿನಲ್ಲಿ ಬೆರೆಸಿ 1-2 ವಾರ ಹಾಗೆಯೇ ಬಿಡಿ. ನಂತರ ಇದನ್ನು ಸೋಸಿ, ವಿನಿಗರನ್ನು ಮಾತ್ರ ನಿಮ್ಮ ಕಂಡೀಷನರಾಗಿ ಬಳಸಬಹುದು. ಉಳಿದ ವಿನಿಗರನ್ನು ಮುಂದೆ ಬೇಕೆಂದಾಗ ಬಳಸಬಹುದು. ರೋಸ್ ಮೇರಿಯು ಒಂದು ಅದ್ಭುತವಾದ ಸುವಾಸನೆಯನ್ನು ಬೀರುವ ಗಿಡಮೂಲಿಕೆಯಾಗಿದೆ. ಅದರಲ್ಲೂ ನಿಮ್ಮ ಬಳಿ ರೋಸ್ ಮೇರಿ ಎಸ್ಸೆನ್ಶಿಯಲ್ ಆಯಿಲ್ ಇದ್ದಲ್ಲಿ ಒಂದೆರಡು ವಾರ ಕಾಯುವ ಅಗತ್ಯವಿಲ್ಲ. ಬದಲಿಗೆ ಅದನ್ನೆ 6-8 ತೊಟ್ಟು ನಿಮ್ಮ ಕಂಡೀಷನರಾಗಿ ನೀವು ಬಳಸಬಹುದು. ಅದು ಆ ಕ್ಷಣದಲ್ಲಿಯೇ!



Click it and Unblock the Notifications