Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರಲ್ಲಿ ಕೂದಲುದುರುವ ಸಮಸ್ಯೆಗೆ ಇಲ್ಲಿದೆ ಪರಿಹಾರ
ತಲೆ ಕೂದಲು ಉದುರುವುದು ಇಂದು ವಿಶ್ವವನ್ನೆ ಕಾಡುತ್ತಿರುವ ಸಮಸ್ಯೆಯಾಗಿದೆ. ಇದಕ್ಕೆ ಆಹಾರ ಪದ್ಧತಿ, ಖನಿಜಾಂಶದ ಕೊರತೆ, ಔಷಧಿಗಳ ಅಡ್ಡ ಪರಿಣಾಮ, ಒತ್ತಡ, ಮಾಲಿನ್ಯ ಮತ್ತು ವಂಶವಾಹಿಗಳು ಕಾರಣವಾಗಿರುತ್ತವೆ. ಗಂಡಸರು ತಲೆಗೆ ಟೋಪಿ, ಹೆಲ್ಮೆಟ್ ಮತ್ತು ಹ್ಯಾಟ್‍ಗಳನ್ನು ಧರಿಸುವುದರಿಂದ ಸಹ ಕೂದಲು ಉದುರುತ್ತದೆ.
ಇದನ್ನು ನಿವಾರಿಸಲು ನಾವು ನಿಮಗಾಗಿ 20 ಪರಿಹಾರಗಳನ್ನು ಸೂಚಿಸುತ್ತಿದ್ದೇವೆ ತೆಗೆದುಕೊಳ್ಳಿ.

ಪ್ರತಿನಿತ್ಯ ತಲೆಸ್ನಾನ ಮಾಡಿ
ಪ್ರತಿನಿತ್ಯ ನಿಮ್ಮ ಕೂದಲನ್ನು ಮೆದುವಾದ ಶಾಂಪೂ ಬಳಸಿ ತೊಳೆಯುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಇದರಿಂದ ಕೂದಲು ಒಡೆಯುವುದು ಸಹ ನಿವಾರಣೆಯಾಗುತ್ತದೆ. ಹೀಗೆ ಮಾಡುವುದರಿಂದ ತಲೆ ಹೊಟ್ಟು ಮತ್ತು ಇನ್‍ಫೆಕ್ಷನ್ ಸಮಸ್ಯೆ ಕಡಿಮೆಯಾಗುತ್ತದೆ. ತಲೆ ಹೊಟ್ಟು ಕೂದಲು ಉದುರುವುದಕ್ಕೆ ಮತ್ತು ಒಡೆಯುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮರೆಯಬೇಡಿ. ಅಲ್ಲದೆ ಸ್ವಚ್ಛವಾದ ಕೂದಲು ನಿಮ್ಮ ಒಟ್ಟಾರೆ ಅಂದಕ್ಕೆ ಮೆರಗು ನೀಡುತ್ತದೆ.

ಕೂದಲಿನ ಆರೋಗ್ಯಕ್ಕೆ ವಿಟಮಿನ್ ತೆಗೆದುಕೊಳ್ಳಿ
ವಿಟಮಿನ್‍ಗಳು ಕೂದಲಿಗಷ್ಟೇ ಅಲ್ಲದೆ ಆರೋಗ್ಯಕ್ಕು ಸಹ ಒಳ್ಳೆಯದು. ವಿಟಮಿನ್ ಎ ಕೂದಲಿನ ಬುಡದಲ್ಲಿರುವ ಸೆಬಮ್‍ನ್ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ವಿಟಮಿನ್ ಇಯು ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇವು ಹೆಚ್ಚು ಕೂದಲು ಬೆಳೆಯುವುದಕ್ಕೆ ಸಹ ನೆರವಾಗುತ್ತದೆ. ವಿಟಮಿನ್ ಬಿ ಕೂದಲಿನ ಬಣ್ಣದ ಯಥಾಸ್ಥಿತಿಯನ್ನು ಕಾಪಾಡುತ್ತದೆ.

ನಿಮ್ಮ ಆಹಾರದಲ್ಲಿ ಪ್ರೋಟಿನ್ ಅಂಶವನ್ನು ಹೆಚ್ಚಾಗಿ ಸೇವಿಸಿ
ಮಾಂಸ, ಮೀನು, ಸೋಯಾ ಅಥವಾ ಪ್ರೋಟಿನ್ ಅಂಶಗಳನ್ನು ಸೇವಿಸುವುದರಿಂದ ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.

ಕೂದಲಿನ ಬುಡವನ್ನು ಅಗತ್ಯವಾದ ಎಣ್ಣೆಗಳಿಂದ ಮಸಾಜ್ ಮಾಡಿ
ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಕೂದಲಿನ ಬುಡಕ್ಕೆ ಎಣ್ಣೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಕೂದಲಿನ ಬೇರು ಆರೋಗ್ಯವಾಗಿರುತ್ತದೆ. ಇದಕ್ಕಾಗಿ ನೀವು ಬಾದಾಮಿ ಅಥವಾ ಎಳ್ಳು ಎಣ್ಣೆಯನ್ನು ಬಳಸಬಹುದು.

ಒದ್ದೆ ಕೂದಲನ್ನು ಬ್ರಷ್ ಮಾಡಬೇಡಿ
ಕೂದಲು ಒದ್ದೆಯಾಗಿರುವಾಗ ಅದನ್ನು ಬ್ರಷ್ ಮಾಡಬೇಡಿ. ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ. ಆದರೆ ನೀವು ಕೂದಲನ್ನು ದೊಡ್ಡ ಹೆಣಿಗೆ ಇರುವ ಬಾಚಾಣಿಗೆಯಿಂದ ತಲೆ ಬಾಚಿಕೊಳ್ಳಿ. ನಿಯಮಿತವಾಗಿ ಬ್ರಷ್ ಮಾಡುವುದನ್ನು ನಿಲ್ಲಿಸಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗಿ, ಕೂದಲು ಉದುರುವುದು ಅಧಿಕವಾಗುತ್ತದೆ. ಸಿಕ್ಕನ್ನು ಬಿಡಿಸಲು ಬಾಚಣಿಗೆ ಅಥವಾ ಬ್ರಷ್ ಬದಲು, ನಿಮ್ಮ ಬೆರಳುಗಳನ್ನು ಬಳಸಿ.

ಬೆಳ್ಳುಳ್ಳಿ ರಸ, ಈರುಳ್ಳಿ ರಸ ಅಥವಾ ಶುಂಠಿ ರಸದ ಚಿಕಿತ್ಸೆ
ಈ ಮೇಲಿನ ಯಾವುದಾದರು ರಸವನ್ನು ನಿಮ್ಮ ಕೂದಲಿಗೆ ಹಚ್ಚಿ ರಾತ್ರಿಯಿಡೀ ಬಿಡಿ. ಹೀಗೆ ನಿಯಮಿತವಾಗಿ ಒಂದು ವಾರ ಮಾಡಿ. ನಂತರ ಅದರ ಫಲಿತಾಂಶವನ್ನು ನೀವೆ ನೋಡಿ.

ನಿಮ್ಮ ದೇಹದಲ್ಲಿ ನೀರಿನ ಪ್ರಮಾಣವನ್ನು ಸಮಸ್ಥಿತಿಯಲ್ಲಿಡಿ
ಕೂದಲಿನ ಬುಡಗಳು ನಮ್ಮ ದೇಹದಲ್ಲಿರುವ ನಾಲ್ಕನೇ ಒಂದು ಭಾಗ ನೀರನ್ನು ಎಳೆದುಕೊಳ್ಳುತ್ತವೆ. ಹಾಗಾಗಿ ದಿನಕ್ಕೆ ಎಂಟು ಕಪ್ ನೀರನ್ನು ಕುಡಿಯಿರಿ. ಇದರಿಂದ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ.

ನಿಮ್ಮ ಕೂದಲಿಗೆ ಗ್ರೀನ್ ಟೀಯನ್ನು ಲೇಪಿಸಿ
ಅಧ್ಯಯನಗಳ ಪ್ರಕಾರ ನಿಮ್ಮ ಕೂದಲಿಗೆ ಗ್ರೀನ ಟೀಯನ್ನು ಲೇಪಿಸುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ, ಎರಡು ಟೀ ಬ್ಯಾಗ್‍ಗಳನ್ನು ತೆಗೆದುಕೊಂಡು, ಅದನ್ನು ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ತಣ್ಣಗಾದ ಬ್ಯಾಗ್‍ಗಳನ್ನು ಕೂದಲಿಗೆ ಲೇಪಿಸಿ. ಒಂದು ಗಂಟೆಯ ನಂತರ ಸ್ನಾನಮಾಡಿ. ಇದರ ಫಲಿತಾಂಶವನ್ನು ನೋಡಲು ಒಂದು ವಾರ ಹೀಗೆ ಮಾಡಿ. ಹತ್ತು ದಿನಗಳಲ್ಲಿ ನೀವು ಬದಲಾವಣೆಯನ್ನು ಗಮನಿಸುವಿರಿ.

ನಿಮ್ಮ ಕೂದಲಿಗೆ ಆಗದ ವಿಚಾರಗಳನ್ನು ಗಮನಿಸಿ
ನಿಮ್ಮ ಕೂದಲು ಆರೋಗ್ಯವಾಗಿರಬೇಕಾದರೆ ಅದಕ್ಕೆ ಸರಿಹೋಗದ ವಿಚಾರಗಳನ್ನು ಗಮನಿಸಿ. ಅದರ ಆರೋಗ್ಯದ ಮೇಲೆ ಸದಾ ನಿಗಾ ಇಡಿ. ಅದಕ್ಕಾಗಿ ಒದ್ದೆ ಕೂದಲನ್ನು ಟವೆಲ್‍ನಿಂದ ಉಜ್ಜುವುದನ್ನು ನಿಲ್ಲಿಸಿ. ಅದು ತಾನಾಗೇ ಒಣಗಲು ಬಿಡಿ.

ಆಲ್ಕೋಹಾಲ್ ದೂರವಿಡಿ
ನಿಮಗೆ ಕೂದಲು ಉದುರುತ್ತಿದ್ದರೆ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಆಲ್ಕೋಹಾಲ್ ಕೂದಲು ಬೆಳೆಯುವುದನ್ನು ತಡೆಗಟ್ಟುತ್ತದೆ. ಹಾಗಾಗಿ ಆಲ್ಕೋಹಾಲ್ ಅಂಶಗಳನ್ನು ಸೇವಿಸುವುದನ್ನು ಬಿಡಿ.

ಧೂಮಪಾನ ಕಮ್ಮಿ ಮಾಡುತ್ತಾ ಬನ್ನಿ
ಧೂಮಪಾನದಿಂದ ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯಾಗುವುದನ್ನು ಕಡಿಮೆಯಾಗುವುದು. ಇದರಿಂದಾಗಿ ಕೂದಲ ಬುಡ ಸಡಿಲವಾಗಿ ಕೂದಲ ಬೆಳವಣಿಗೆ ಕುಂಠಿತವಾಗುತ್ತದೆ.

ವ್ಯಾಯಾಮ
ನಿಮ್ಮ ದೇಹಕ್ಕೆ ಅಗತ್ಯವಾದ ನಡಿಗೆ, ಈಜು, ಸೈಕ್ಲಿಂಗ್‍ನಂತಹ ಚಟುವಟಿಕೆಗಳಿಗೆ ಪ್ರತಿದಿನವು 30 ನಿಮಿಷಗಳಷ್ಟು ಸಮಯವನ್ನು ಮೀಸಲಿಡಿ. ಇದರಿಂದ ಹಾರ್ಮೋನುಗಳ ಮಟ್ಟವು ಸಮತೋಲನದಲ್ಲಿರುತ್ತದೆ. ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಸಹ ಕೂದಲು ಉದುರುವುದನ್ನು ತಡೆಯಬಹುದು.

ಒತ್ತಡವನ್ನು ಹೊರದಬ್ಬಿ
ಒತ್ತಡವನ್ನು ನಿವಾರಿಸಿಕೊಳ್ಳುವುದರಿಂದ ಕೂದಲು ಉದುರುವುದನ್ನು ತಡೆಯಬಹುದು ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಆಗಾಗಿ ನಿಮ್ಮನ್ನು ನೀವು ಧ್ಯಾನ, ಯೋಗ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಒತ್ತಡದಿಂದ ಹೊರಬನ್ನಿ.

ಕೂದಲನ್ನು ಒಣಗಲು ಬಿಡಬೇಡಿ
ಹೀಗೆ ಮಾಡುವುದರಿಂದ ನಿಮ್ಮ ಕೂದಲು ದುರ್ಬಲವಾಗಿ ಅದು ಒಡೆಯುವ ಸಾಧ್ಯತೆಯಿರುತ್ತದೆ. ಇದರಿಂದ ಕೂದಲು ಉದುರುತ್ತದೆ. ಹಾಗಾಗಿ ಕೂದಲನ್ನು ನಿರಂತರವಾಗಿ ಬಿಸಿಯಾಗಲು ಅಥವಾ ಒಣಗಲು ಬಿಡಬೇಡಿ.

ನಿಮ್ಮ ತಲೆ ಬೆವರು ಮುಕ್ತವಾಗಿರಲಿ
ಎಣ್ಣೆಗೂದಲು ಇರುವ ಗಂಡಸರಲ್ಲಿ ತಲೆ ಹೊಟ್ಟು ಮತ್ತು ತಲೆಗೂದಲು ಉದುರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕಾಗಿ ಲೋಳೆ ಮತ್ತು ಬೇವಿನ ಶಾಂಪೂವನ್ನು ಬಳಸಿ ಇದನ್ನು ನಿಯಂತ್ರಿಸಬಹುದು.

ಕೂದಲನ್ನು ಕತ್ತರಿಸುವ ಶೈಲಿ ಬದಲಾಯಿಸಿ
ನಿಮ್ಮ ಕೂದಲು ನಿಧಾನವಾಗಿ ಉದುರುತ್ತಿದ್ದರೆ, ನೀವು ಕೂದಲನ್ನು ಉದ್ದ ಬಿಡುವುದು ಒಳ್ಳೆಯದು. ಏಕೆಂದರೆ ಸಣ್ಣ ಮಟ್ಟದಲ್ಲಿ ಕೂದಲು ಕತ್ತರಿಸುತ್ತಿದ್ದರೆ ಕಾಲಾನುಕ್ರಮದಲ್ಲಿ ಬೊಕ್ಕ ತಲೆಯುಂಟಾಗುವ ಸಾಧ್ಯತೆಗಳು ಇವೆ. ಹಾಗಾಗಿ ಉದ್ದ ಕೂದಲು ಬಿಡಿ.

ನಿಮ್ಮ ಆರೋಗ್ಯದ ಕಡೆಗೆ ಗಮನಕೊಡಿ
ಆರೋಗ್ಯ ಸರಿಯಿಲ್ಲವಾದರೆ ನಿಮ್ಮ ಕೂದಲು ಸಹ ಆರೋಗ್ಯಕರವಾಗಿರುವುದಿಲ್ಲ. ಆಗಾಗಿ ತೀವ್ರತರದ ಕಾಯಿಲೆ, ಜ್ವರ ಮತ್ತು ಇನ್‍ಫೆಕ್ಷನ್‍ಗಳ ಬಗ್ಗೆ ತಾತ್ಸಾರ ಮನೋಭಾವ ತೋರದಿರಿ.

ಔಷಧಗಳ ಬಗ್ಗೆ ಎಚ್ಚರಿಕೆಯಿಂದಿರಿ
ಕೆಲವು ಔಷಧಗಳು ನಿಮ್ಮ ಕೂದಲಿನ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡುತ್ತದೆ. ಅಲ್ಲದೆ ಕೆಲವು ಕೂದಲು ಉದುರುವುದನ್ನು ಸಹ ಪ್ರಚೋದಿಸುತ್ತವೆ. ಹಾಗಾಗಿ ಈ ಕುರಿತು ನಿಮ್ಮ ವೈದ್ಯರ ಬಳಿ ಮಾತನಾಡಿ.

ರಾಸಾಯನಿಕಗಳಿಂದ ದೂರವಿರಿ
ರಾಸಾಯಾನಿಕಗಳು ಕೂದಲು ಉದುರುವಂತೆ ಮಾಡುತ್ತವೆ. ಹಾಗಾಗಿ ಅದಷ್ಟು ಅವುಗಳಿಂದ ದೂರವಿರಿ. ಹಾಗಾಗಿ ಕೂದಲಿಗೆ ಬಣ್ಣವನ್ನು ಸಹ ಹಚ್ಚಬೇಡಿ.

ಹೆಲ್ಮೆಟ್
ಹೆಲ್ಮೆಟ್ ಧರಿಸುವವರಲ್ಲಿ ಕೂದಲು ಉದುರುವುದು ಬೇಸಿಗೆಯಲ್ಲಿ ಸಾಮಾನ್ಯವಾಗಿರುತ್ತದೆ. ಏಕೆಂದರೆ ಬೆವರು ಹೆಚ್ಚಾದಂತೆಲ್ಲ ಕೂದಲಿನ ಬುಡ ಹಾನಿಗೊಂಡು ಕೂದಲು ಉದುರುತ್ತದೆ. ಹಾಗಾಗಿ ತಲೆಗೆ ಸ್ಕಾರ್ಫ್ ಧರಿಸಿ ಕೂದಲನ್ನು ರಕ್ಷಿಸಿಕೊಳ್ಳಬಹುದು.



Click it and Unblock the Notifications