Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಪುರುಷರ ಕೂದಲಿನ ಸುರಕ್ಷತೆಗೆ 20 ಮನೆಮದ್ದುಗಳು
ಎಲ್ಲರಿಗೂ ಅವರವರ ಸೌಂದರ್ಯವನ್ನು ಹೆಚ್ಚಿಸುವುದು ಅವರ ತಲೆ ಕೂದಲು. ಹುಡುಗಿಯರಿರಲಿ ಅಥವಾ ಹುಡುಗರೇ ಇರಲಿ, ಅವರ ಸುಂದರವಾದ ಕೂದಲೇ ಅವರನ್ನು ಆಕರ್ಷಿಸುತ್ತದೆ. ಇಂತಹ ಆಕರ್ಷಣೀಯವಾದ ಕೂದಲನ್ನು ಪಡೆಯಲು ಹುಡುಗಿಯರಂತೂ ಅದೆಷ್ಟೋ ಕೂದಲಿನ ಆರೈಕೆಯನ್ನು ಮಾಡುತ್ತಿರುತ್ತಾರೆ. ವಿಧ ವಿಧದ ಶ್ಯಾಂಪೂವಿನಿಂದ ಹಿಡಿದು ಮನೆಯಲ್ಲಿಯೇ ತಯಾರಿಸಬಹುದಾದ ಮದ್ದುಗಳನ್ನೂ ಪ್ರಯೋಗಿಸುತ್ತಾರೆ.
ಹಾಗಂದ ಮಾತ್ರಕ್ಕೆ ಹುಡುಗರಿಗೇನು ಕೂದಲಿನ ಸಮಸ್ಯೆಗಳಿಲ್ಲವೆಂದಲ್ಲ. ಹುಡುಗರ ಕೂದಲು ಚಿಕ್ಕದಾಗಿದ್ದರೂ ಅವರು ಕೂದಲು ಉದುರುವುದು, ತಲೆ ಹೊಟ್ಟು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ಚಿಂತೆ ಬೇಡ! ನಿಮಗಾಗಿ ಸಾಕಷ್ಟು ಪರಿಹಾರಗಳು ಇಲ್ಲಿವೆ.
ಫ್ರೀಜಿ ಕೂದಲು, ಕೂದಲುದುರುವಿಕೆ, ಕೆಟ್ಟ ಕೂದಲುಗಳ ಬೆಳವಣಿಗೆ ಮತ್ತು ಎಣ್ಣೆಯುಕ್ತ ಕೂದಲುಗಳು ಸಾಮಾನ್ಯವಾಗಿ ಹುಡುಗರಲ್ಲಿ ಕಂಡುಬರುವ ಸಮಸ್ಯೆಗಳು. ಹುಡುಗಿಯರಂತೆ ಹುಡುಗರ ಕೂದಲನ್ನೂ ರಕ್ಷಿಸುವುದು ಅತ್ಯಂತ ಮುಖ್ಯವಾದ ವಿಷಯ. ಹಲವಾರು ಮನೆಮದ್ದುಗಳು ಹುಡುಗರ ಕೂದಲಿನ ಸಮಸ್ಯೆಗಳನ್ನು ಕಡಿಮೆಗೊಳಿಸುವುದರಲ್ಲಿ ಸಹಾಯವಾಗಬಲ್ಲದು.

ಎಣ್ಣೆ ಮಸಾಜ್
ಎಣ್ಣೆಯನ್ನು ಹಾಕಿ ಕೂದಲನ್ನು ಮಸಾಜ್ ಮಾಡುವುದು ಕೂದಲಿಗೆ ಕೊಡುವ ಅತ್ಯಂತ ಉತ್ತಮ ಚಿಕಿತ್ಸೆ. ಇದು ಕೂದಲಿನ ತುಂಡಾಗುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ. ಬಾದಾಮಿ, ಆಲೀವ್, ತೆಂಗಿನಕಾಯಿಯಿಂದ ತಯಾರಿಸಲಾದ ಎಣ್ಣೆಯಿಂದ ತಲೆ ಮಸಾಜ್ ಮಾಡಿದರೆ ಕೂದಲಿನ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಪರಿಣಾಮಕಾರಿ. ಆದ್ದರಿಂದ ವಾರದಲ್ಲಿ ಕನಿಷ್ಠ ಎರಡು ಬಾರಿ ಎಣ್ಣೆ ಮಸಾಜ್ ತಪ್ಪದೇ ಮಾಡಿ.

ತೆಂಗಿನ ಹಾಲು
ಹೊಸ ಕೂದಲು ಹುಟ್ಟುವುದಕ್ಕೆ ಹಾಗೂ ಕೂದಲು ಬೆಳೆಯುವುದಕ್ಕೆ ಅತ್ಯಂತ ಪರಿಣಾಮಕಾರಿ ಮನೆಮದ್ದು ತೆಂಗಿನ ಹಾಲು! ಇದು ಕೂದಲು ಹೆಚ್ಚು ಮೃದುವಾಗಲೂ ಸಹ ಸಹಾಯಮಾಡುತ್ತದೆ.

ಅಲೋವೆರಾ (ಲೋಳೆಸರ)
ನಿಮಗೆ ನಿಮ್ಮ ಕೂದಲನ್ನು ಇನ್ನಷ್ಟು ಬಲಪಡಿಸಬೇಕಾದರೆ ನೆತ್ತಿಗೆ ತಪ್ಪದೇ ಅಲೋ ಜೆಲ್ ಹಾಕಿ ಮಸಾಜ್ ಮಾಡಿ. ವಾರದಲ್ಲಿ ಎರಡು ಬಾರಿ ಅಲೋ ವೆರಾ ಹಾಕಿ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗಿ ಒಣ ಕೂದಲನ್ನೂ ಉತ್ತಮಗೊಳಿಸುತ್ತದೆ.

ನೀಮ್ /ಬೇವಿನ ಪೇಸ್ಟ್
ಚಿಕಿತ್ಸಕ ಬೇವಿನ ಪೇಸ್ಟ್, ಕೂದಲಿನ ಕ್ಷಾರೀಯ ಸಮತೋಲನವನ್ನು ಉಳಿಸಿ, ಕೂದಲು ಉದುರುವುದನ್ನು ತಡೆಯುತ್ತದೆ. ಈ ಬೇವಿನ ಪೇಸ್ಟ್ ನ್ನು ಇನ್ನಷ್ಟು ಉತ್ತಮಗೊಳಿಸಲು ಜೇನುತುಪ್ಪ ಮತ್ತು ಆಲೀವ್ ಎಣ್ಣೆಯನ್ನು ಸೇರಿಸಿ.

ಮೊಟ್ಟೆ
ಕೂದಲಿನ ಆರೋಗ್ಯಕ್ಕೆ ಪ್ರಾಥಮಿಕವಾಗಿ ಬೇಕಾಗಿರುವುದು ಪ್ರೊಟೀನ್ ಚಿಕಿತ್ಸೆ. ನಿಮಗೆ ದಪ್ಪವಾದ, ಬಲವಾದ ಕೂದಲು ಬೇಕಾದಲ್ಲಿ ವಾರದಲ್ಲಿ ನಾಲ್ಕು ಬಾರಿ ಪ್ರೋಟೀನ್ ಚಿಕಿತ್ಸೆಯನ್ನು ಆರಂಭಿಸಿ. ಹಸಿ ಮೊಟ್ಟೆಯನ್ನು ಸುಲಿದು ಅದನ್ನು ಒದ್ದೆಯಾದ ಕೂದಲಿಗೆ ಹಚ್ಚಿ. ಹದಿನೈದು ನಿಮಿಷಗಳ ನಂತರ ಉರುಗುಬೆಚ್ಚಗಿನ /ತುಸು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ಕೂದಲನ್ನು ತೊಳೆಯಿರಿ.

ಮೆಂತ್ಯದ ಬೀಜಗಳು
ಎರಡು ಅಥವಾ ಮೂರು ದೊಡ್ಡ ಚಮಚಗಳಷ್ಟು ಮೆಂತ್ಯದ ಬೀಜಗಳನ್ನು 8 -10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು ಚೆನ್ನಾಗಿ ಅರೆದು ಪೇಸ್ಟ್ ತಯಾರಿಸಿ ನಿಮ್ಮ ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಉದುರುವುದನ್ನು ತಡೆಗಟ್ಟುವುದು ಮಾತ್ರವಲ್ಲ ಕೂದಲು ಬೆಳೆಯಲು ಹಾಗೂ ತಲೆ ಹೊಟ್ಟು ನಿವಾರಣೆ ಕೂಡ ಸಾಧ್ಯ.

ಬೆಣ್ಣೆ ಹಣ್ಣು
ಬೆಣ್ಣೆ ಹಣ್ಣು ಮತ್ತು ಬಾಳೆಹಣ್ಣನ್ನು ಹಿಸುಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ಕಾಲ ಹಾಗೆಯೇ ಬಿಡಿ. ಆನಂತರ ತುಸು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆಯಿರಿ. ತತ್ ಕ್ಷಣದಲ್ಲಿ ಆರೋಗ್ಯಕರವಾದ ಕೂದಲು ನಿಮ್ಮದಾಗುತ್ತದೆ!

ಕಿತ್ತಳೆ ರಸ
ನೀವು ಎಣ್ಣೆಯುಕ್ತ ಕೂದಲು ಹಾಗೂ ತಲೆ ಹೊಟ್ಟು ಸಮಸ್ಯೆಯಿಂದ ಬಳಲುತ್ತಿದ್ದರೆ ಇಲ್ಲಿದೆ ಪರಿಹಾರ! ಕಿತ್ತಳೆ ಸಿಪ್ಪೆಯನ್ನು ತೆಗೆದು ಹಣ್ಣಿನ ರಸವನ್ನು ತೆಗೆಯಿರಿ. ಹಣ್ಣಿನ ರಸ ಹಾಗೂ ತಿರುಳಿನ ಮಿಶ್ರಣವನ್ನು ಪ್ಯಾಕ್ ನಂತೆ ತಲೆಗೆ ಹಚ್ಚಿ. (ವಾರದಲ್ಲಿ ಒಂದು ದಿನ)

ಗೋರಂಟಿ ಎಲೆಗಳು
ನಿಮಗೆ ದಪ್ಪವಾದ ಕೂದಲು ಬೇಕಾದಲ್ಲಿ ಕೂದಲಿಗೆ ಗೋರಂಟಿ ಪೇಸ್ಟ್ ಹಚ್ಚಿ (ಗೋರಂಟಿ ಎಲೆಗಳನ್ನು ರುಬ್ಬಿ ತಯಾರಿಸಬೇಕು) ಇದನ್ನು ಮೂರು ಗಂಟೆಗಳ ಕಾಲ ತಲೆಗೆ ಹಚ್ಚಿ ನಂತರ ತೊಳೆಯಿರಿ.

ಅಗಸೆ ಬೀಜ
ಐದು ದಿನಗಳ ಕಾಲ 2-3 ಚಮಚ ಅಗಸೆ ಬೀಜಗಳನ್ನು ನೀರಿನಲ್ಲಿ ನೆನೆ ಹಾಕಿ. ನಂತರ ಇದನ್ನು ಕಾಟನ್/ಹತ್ತಿ ಬಳಸಿ ಅಥವಾ ಕೈಯಿಂದ ಕೂದಲಿಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಚೆನ್ನಾಗಿ ಕೂದಲನ್ನು ತೊಳೆಯಿರಿ.

ನಿಂಬೆ ರಸ
ನಿಂಬೆರಸ ಹಾಗೂ ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಯಮಿತವಾಗಿ ನಿಮ್ಮ ಕೂದಲಿನ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಅಥವಾ ರಾತ್ರಿ ಮಲಗುವಾಗ ಕೂಡ ಹಚ್ಚಿ ಮಲಗಬಹುದು. ಈ ಮಿಶ್ರಣವನ್ನು ಹಚ್ಚಿ ಕನಿಷ್ಠ 3-4 ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರವಷ್ಟೇ ಕೂದಲು ತೊಳೆಯಬೇಕು. ತಣ್ಣನೆಯ ನೀರಿನಲ್ಲಿ ಕೂದಲು ತೊಳೆದರೆ ಒಳ್ಳೆಯದು.

ಜೊಜೊಬೊ
ಈ ಎಣ್ಣೆ ಕೂದಲು ಬೆಳೆಯುವುದಕ್ಕೆ ಮಾತ್ರವಲ್ಲದೆ ಕೂದಲಿನ ಮೃದುತ್ವವನ್ನು ಕಾಪಾಡುತ್ತದೆ. ಕೂದಲಿನ ಆರ್ದ್ರತೆಯನ್ನು ಕಡಿಮೆಗೊಳಿಸುತ್ತದೆ.

ಮಯೋನೈಸ್
ಕೂದಲು ತುಂಡಾಗುವಿಕೆಯನ್ನು ತಪ್ಪಿಸಲು ನಿಮ್ಮ ಒಣ ಕೂದಲಿಗೆ ಮಯೋನೈಸ್ ಬಳಸಿ. ಒದಮ್ಮು ಕೂದಲಿಗೆ ಹಚ್ಚಿ ತಲೆಯನ್ನು ಪ್ಲಾಸ್ಟಿಕ್ ಕವರ್ ನ್ನು ತಲೆಯ ಸುತ್ತ ಸುತ್ತಿ. ಇದನ್ನು ಕೂದಲು ತೊಳೆಯುವುದಕ್ಕಿಂತ ಅರ್ಧ ಗಂಟೆ ಮೊದಲು ಹಚ್ಚಿ.

ಮೊಟ್ಟೆ ಮತ್ತು ಮಯೋನೈಸ್
ಕೂದಲು ಮೃದುವಾಗಲು ಹಾಗೂ ಕೂದಲಿಗೆ ಹೊಳಪು ಬರಲು ಈ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ. ಮೊಟ್ಟೆ ಮತ್ತು ಮಯೋನೈಸ್ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆ ಹಾಗೆಯೇ ಬಿಡಿ. ನಂತರ ಶ್ಯಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಜೇನು
ಹೊಳಪಿನ ಹಾಗೂ ಉತ್ತಮವಾದ ಕೂದಲು ನಿಮ್ಮದಾಗಬೇಕಿದ್ದರೆ ನೀವು ಜೇನಿನ ಮದ್ದನ್ನು ಉಪಯೋಗಿಸಲೇಬೇಕು. ಜೇನು ಮತ್ತು ಆಲೀವ್ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ ಅರ್ಧ ಗಂಟೆಗಳ ನಂತರ ಸ್ನಾನ ಮಾಡಿ.

ತೆಂಗಿನ ಕಾಯಿ + ದಾಸವಾಳ + ಬೇವಿನ ಎಲೆಗಳು
ನಿಮ್ಮ ಸದೃಢ ಕೂದಲಿಗಾಗಿ ತೆಂಗಿನೆಣ್ಣೆ ಯನ್ನು ದಾಸವಾಳ ಹಾಗೂ ಬೇವಿನ ಎಲೆಗಳ ರುಬ್ಬಿದ ಮಿಶ್ರಣದೊಂದಿಗೆ ಸೇರಿಸಿ. ಇದನ್ನು ಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೆಯೇ ಬಿಡಿ. ಬೆಳಿಗ್ಗೆ ಎದ್ದು ಕೂದಲನ್ನು ಚೆನ್ನಾಗಿ ತೊಳೆಯಿರಿ.

ನೆಲ್ಲಿಕಾಯಿ, ರಾಯತ, ಸಿಗೇಕಾಯಿ ಮತ್ತು ಬೃಂಘರಾಜ
ನೆಲ್ಲಿಕಾಯಿ, ರಾಯತ, ಸಿಗೇಕಾಯಿ ಮತ್ತು ಬೃಂಘರಾಜ ಪುಡಿಗಳನ್ನು ಮೊಸರು ಮತ್ತು ನಿಂಬೆಯ ಜೊತೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿದರೆ ಅತ್ಯಂತ ಆರೋಗ್ಯಕರ ಹಾಗೂ ಹೊಳಪಿನ ಕೂದಲಿನ ವಾರಸುದಾರರು ನೀವಾಗುವಿರಿ!

ಮೊಸರು ಮತ್ತು ಕರಿ ಮೆಣಸು
ಈ ಚಿಕಿತ್ಸೆ ನಿಮ್ಮ ಕೂದಲಿನ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿತ್ತದೆ. ಎರಡು ಚಮಚ ಕರಿ ಮೆಣಸಿನ ಪುಡಿ ಮತ್ತು ಮೂರು ಚಮಚ ಮೊಸರನ್ನು ಮಿಶ್ರಣ ಮಾಡಿ. ಇದನ್ನು ಮಿಶ್ರಣ ಮಾಡಿದ ನಂತರ ಚೆನ್ನಾಗಿ ಕೂದಲಿಗೆ ಹಚ್ಚಿ. ಒಂದು ಗಂಟೆಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆದರೆ ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.

ವಿನೇಗರ್
ವಿನೆಗರ್, ಪೊಟ್ಯಾಶಿಯಂ ಮತ್ತು ಕಿಣ್ವಗಳನ್ನು ಹೊಂದಿದೆ. ಇದು ತಲೆಯಲ್ಲಿ ಉಂಟಾಗುವ ನವೆ ಹಾಗೂ ತಲೆ ಹೊಟ್ಟನ್ನು ಕಡಿಮೆ ಮಾಡುತ್ತದೆ. ಆಪಲ್/ ಸೇಬು ಸೀಡರ್ ವಿನೆಗರ್ ನ್ನು ಕೂದಲಿಗೆ ಹಚ್ಚಿ 5 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದು ತಲೆ ಹೊಟ್ಟು ಹಾಗೂ ನವೆಗೆ ಕಾರಣವಾದಂತಹ ಡೆಡ್ ಸ್ಕಿನ್ ( ಮೃತ ಚರ್ಮ) ಕೋಶಗಳಿಂದ ಪರಿಹಾರ ಒದಗಿಸುತ್ತದೆ.

ಅಡುಗೆ ಸೋಡ/ಸೋಡಾ
ಅಡುಗೆ ಸೋಡಾ ತಲೆಹೊಟ್ಟು ನಿವಾರಕ ಔಷಧಿ. ನೀವು ಯಾವಾಗಲೂ ಬಳಸುವ ಶಾಂಪೂವಿನೊಂದಿಗೆ ಒಂದು ಚಮಚ ಅಡುಗೆ ಸೋಡಾವನ್ನು ಮಿಶ್ರಣವನ್ನು ಹಾಕಿ ಕೂದಲು ತೊಳೆಯಿರಿ. ಇದರಿಂದ ತಲೆ ಹೊಟ್ಟು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ.
ಹುಡುಗರೆ, ಇಂತಹ ಉತ್ತಮ ಮನೆಮದ್ದುಗಳಿರಬೇಕಾದರೆ ನಿಮ್ಮ ಕೂದಲಿನ ಸಮಸ್ಯೆ ಇನ್ನೆಲ್ಲಿ?



Click it and Unblock the Notifications