Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲನ್ನು ಯಾವಾಗ ಕತ್ತರಿಸಬೇಕು?
ಕೂದಲು ಉದ್ದವಾಗಿ ಬೆಳೆಯ ಬೇಕೆಂದರೆ ಕೂದಲನ್ನು ಕತ್ತರಿಸಬಾರದು ಎಂಬುವುದು ತಪ್ಪು ಕಲ್ಪನೆ, ಕೂದಲು ಉದ್ದವಾಗಿ ಆಕರ್ಷಕವಾಗಿ ಬೆಳೆಯಬೇಕೆಂದರೆ ಕೂದಲನ್ನು ಆಗಾಗ ಕತ್ತರಿಸುತ್ತಿರಬೇಕು! ಕೂದಲನ್ನು ಯಾವ ಸಮಯದಲ್ಲಿ ಕತ್ತರಿಸಬೇಕು? ಅದರ ಆರೈಕೆ ಹೇಗೆ ಮಾಡಬೇಕು ಎಂದು ತಿಳಿದರೆ ಮಾತ್ರ ಆಕರ್ಷಕ ಕೂದಲನ್ನು ಪಡೆಯಲು ಸಾಧ್ಯ. ಅದರಲ್ಲೂ ಈ ಕೆಳಗಿನ ಸಂದರ್ಭದಲ್ಲಿ ಕೂದಲನ್ನು ಕತ್ತರಿಸಿದರೆ ಮಾತ್ರ ಆರೋಗ್ಯಕರ ಕೂದಲನ್ನು ಪಡೆಯಲು ಸಾಧ್ಯ.

ಕೂದಲಿನ ಆರೈಕೆ:
1. ಕೂದಲಿನ ಬುಡ ಕವಲೊಡೆಯುವುದು: ಕೂದಲಿನ ಬುಡದಲ್ಲಿ ಕೂದಲು ಎರಡು ಭಾಗಗಳಾಗಿ ಸೀಳಿದ್ದರೆ ಅಂತಹ ಕೂದಲನ್ನು ಕೂಡಲೇ ಕತ್ತರಿಸಬೇಕು. ಇಲ್ಲದಿದ್ದರೆ ಕೂದಲು ತನ್ನ ಆರೋಗ್ಯವನ್ನು ಕಳೆದು ಕೊಳ್ಳುತ್ತದೆ.ಕವಲೊಡೆದ ಕೂದಲನ್ನು ಸರಿಪಡಿಸಲು ಯಾವುದೇ ಶ್ಯಾಂಪೂ ಅಥವಾ ಜೆಲ್ ನಿಂದ ಸಾಧ್ಯವಿಲ್ಲ, ಈ ಸಮಸ್ಯೆಯನ್ನು ಪರಿಹರಿಸಲು ಕೂದಲನ್ನು ಕತ್ತರಿಸುವು ಒಂದೇ ಮಾರ್ಗ. ನಂತರ ಚೆನ್ನಾಗಿ ಎಣ್ಣೆ ಹಚ್ಚಿ ಆರೈಕೆ ಮಾಡಬೇಕು.
2. ಕೂದಲು ತುಂಬಾ ತೆಳುವಾಗುವುದು: ಕೂದಲು ಉದುರುವುದು ಈಗ ಹೆಚ್ಚಿನವರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಈ ರೀತಿ ಕೂದಲು ಉದುರಿದರೆ ಕೂದಲು ತುಂಬಾ ತೆಳ್ಳಗಾಗುವುದು. ಕೂದಲು ಉದುರುವುದನ್ನು ತಡೆಗಟ್ಟವ ಚಿಕಿತ್ಸೆ ಪಡೆಯುವ ಮೊದಲು ಕೂದಲನ್ನು ಸ್ವಲ್ಪ ಕತ್ತರಿಸಿ ನಂತರ ಕೂದಲು ಉದುರವ ಸಮಸ್ಯೆಗೆ ಚಿಕಿತ್ಸೆಯನ್ನು ಮಾಡಿ. ಈ ರೀತಿ ಮಾಡಿದರೆ ಮಾತ್ರ ಕೂದಲು ಆರೋಗ್ಯಕರವಾಗಿ ಬೆಳೆಯುವುದು.
3. ಕೂದಲಿನ ಶೇಪ್ ಹಾಳಾಗುವುದು: ಕೂದಲು ಗಿಡ್ಡವಿರಲಿ ಅಥವಾ ಉದ್ದವಿರಲಿ ಅದಕ್ಕೊಂದು ಶೇಪ್ ಕೊಟ್ಟರೆ ಮಾತ್ರ ನೋಡಲು ಆಕರ್ಷಕವಾಗಿ ಕಾಣುವುದು. ಕೂದಲು ಶೇಪ್ ಕೊಟ್ಟ ಕೆಲವೇ ತಿಂಗಳಿನಲ್ಲಿ ಬೆಳೆದು ಬಿಡುತ್ತವೆ. ಆದ್ದರಿಂದ ಶೇಪ್ ಹಾಳಾಗುತ್ತಿದ್ದಂತೆ ಕೂದಲನ್ನು ಕತ್ತರಿಸಬೇಕು. ಇದರಿಂದ ಕೂದಲು ಆಕರ್ಷಕವಾಗಿ ಕಾಣುವುದು ಮತ್ತು ಆರೋಗ್ಯವಾಗಿ ಬೆಳೆಯುವುದು.
4. ಕೂದಲು ಕತ್ತರಿಸಿದ ವಿನ್ಯಾಸ: ನಿಮ್ಮ ಕೂದಲನ್ನು ಯಾವ ಸಮಯಕ್ಕೆ ಕತ್ತರಿಸಬೇಕು ಅನ್ನುವುದು ನಿಮ್ಮ ಕೂದಲಿನ ಶೇಪ್ ಮೇಲೆ ಅವಲಂಭಿಸಿದೆ. ಕೂದಲನ್ನು ಸಮವಾಗಿ ಕತ್ತರಿಸಿದರೆ 6 ತಿಂಗಳವರೆಗೆ ಕತ್ತರಿಸಬೇಕಾಗಿಲ್ಲ, ಆದರೆ ಯೂ ಅಥವಾ ವಿ ಅಥವಾ ಫೆದರ್ ಹೀಗೆ ಬೇರೆ-ಬೇರೆ ರೀತಿಯಲ್ಲಿ ಕೂದಲು ಕತ್ತರಿಸಿದ್ದರೆ ಅದರ ಶೇಪ್ 3 ತಿಂಗಳವರೆಗೆ ಮಾತ್ರ ಇರುತ್ತದೆ. ಕೂದಲಿನ ಶೇಪ್ ಹಾಳಾಗುವ ಮುನ್ನ ಶೇಪ್ ಕೊಟ್ಟರೆ ಮಾತ್ರ ಕೂದಲು ನೋಡಲು ಆಕರ್ಷಕವಾಗಿರುತ್ತದೆ.
5. ಬಕ್ಕ ತಲೆ ಉಂಟಾಗುತ್ತಿದ್ದರೆ: ಬಕ್ಕ ತಲೆ ಉಂಟಾಗುತ್ತಿದ್ದರೆ 45 ದಿನಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಿಸಬೇಕು ಮತ್ತು ಕೂಡಲೇ ಬಕ್ಕ ತಲೆಯನ್ನು ತಡೆಗಟ್ಟಲು ಚಿಕಿತ್ಸೆ ಮಾಡಬೇಕು. ಈ ರೀತಿ ಮಾಡಿದರೆ ಕೂದಲಿನ ಆರೋಗ್ಯ ಕಾಪಾಡಿ ಆಕರ್ಷಕವಾದ ಕೂದಲನ್ನು ಪಡೆಯಬಹುದು.



Click it and Unblock the Notifications
