Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಕ್ಕ ತಲೆ ಉಂಟಾಗದಿರಲು ಈ ರೀತಿ ಮಾಡಿ!

1. ಶ್ಯಾಂಪೂ: ಚಿಕ್ಕ ಕೂದಲಿರುವುದರಿಂದ ಪುರುಷರು ಪ್ರತಿದಿನ ತಲೆ ತೊಳೆಯುವುದು ಒಳ್ಳೆಯದು. ಆದರೆ ತಲೆ ತೊಳೆಯಲು ಮೃದು ಶಾಂಪೂ ಬಳಸಬೇಕು. ನಂತರ ತಲೆಯನ್ನು ಒರೆಸಿ ಚೆನ್ನಾಗಿ ಒಣಗಿದ ನಂತರ ತಲೆಬಾಚಬೇಕು. ಜೆಲ್ ಬಳಸುವುದನ್ನು ಕಮ್ಮಿ ಮಾಡುವುದು ಒಳ್ಳೆಯದು.
2. ನೈಸರ್ಗಿಕವಾಗಿ ಕೂದಲಿನ ಆರೈಕೆ: * ಅಧಿಕ ಪೋಷಕಾಂಶ ಹಾಗೂ ಖನಿಜಾಂಶಗಳಿರುವ ಆಹಾರ ಪದಾರ್ಥ ಸೇವಿಸಬೇಕು.
* ಎಮ್ಮೆಯ ಹಾಲಿನಲ್ಲಿ ತ್ರಿಫಳಾ ಚೂರ್ಣವನ್ನು ಕಲೆಸಿ ಲೇಪಿಸಿ ಕೊಳ್ಳುವುದರಿಂದ ಬಿಳಿ ಕೂದಲುಗಳು ಕಪ್ಪಗಾಗುತ್ತದೆ ಹಾಗೂ ಬಕ್ಕ ತಲೆಯ ಮೇಲೆ ಕೂದಲುಗಳು ಬರಲು ಪ್ರಾರಂಭವಾಗುವುದು
* ಬೆಳಗ್ಗೆ ಚವನಪ್ರಾಶ ಸೇವಿಸಿ ಹಾಗೂ ನೆಲ್ಲಿಕಾಯಿ ರಸವನ್ನು ತಲೆಯ ಮೇಲೆ ಹಚ್ಚಿಕೊಂಡು 15-20ನಿಮಿಷಗಳ ನಂತರ ಸ್ನಾನ ಮಾಡಿದರೆ ಕೂದಲು ಉದುರುವುದಿಲ್ಲ.
3. ಬಿಸಿಯಾದ ಎಣ್ಣೆ: ವಾರದಲ್ಲಿ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ, ಅದು ಹದ ಬಿಸಿಯಿರುವಾಗ ಅದರಿಂದ ತಲೆಗೆ ಮಸಾಜ್ ಮಾಡಬೇಕು. ಹೀಗೆ ಮಾಡಿದರೆ ಕೂದಲು ಚೆನ್ನಾಗಿ ಬರುತ್ತದೆ. ತಲೆಯಲ್ಲಿ ಹೊಟ್ಟಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ.
4. ತೆಂಗಿನ ಹಾಲು: ತೆಂಗಿನ ಕಾಯಿಯನ್ನು ತುರಿದು ಅದರ ಹಾಲನ್ನು ತೆಗೆದು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು. ಅಲ್ಲದೆ ಒಂದು ಚಮಚ ಸಾಸಿವೆಯನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣಿದ ಮೇಲೆ ಇದನ್ನು ಸೋಸಿ, ಕೇವಲ ನೀರನ್ನು ಮಾತ್ರ ಕುಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಹೆಚ್ಚಾಗಿ ಖನಿಜಾಂಸವಿರುವ ಪೋಷಕಾಂಶವನ್ನು ತಿನ್ನಬೇಕು. ದಿನಾ ನೆಲ್ಲಿ ಕಾಯಿ ತಿಂದರೆ ಕೊಲೆಸ್ಟ್ರಾಲ್ ಕಡಮೆಯಾಗುವುದರ ಜೊತೆಗೆ ಕೂದಲಿಗೂ ಒಳ್ಳೆಯದು. ಬಸಳೆ ಸೊಪ್ಪು , ಮೆಂತೆ ಸೊಪ್ಪು, ಮೀನು, ಪಾಲಾಕ್ ಸೊಪ್ಪು, ಬಾದಾಮಿ ಹೀಗೆ ಪೊಷಕಾಂಶವಿರುವ ಆಹಾರದ ಸೇವನೆ ಒಳ್ಳೆಯದು.



Click it and Unblock the Notifications
